ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 5 ಕ್ಯಾಮರಾ ದಲ್ಲಿನ 10 ರಹಸ್ಯಮಯ ಗುಣಗಳು [ ಸ್ಯಾಂಪಲ್ ಶೊಟ್ಸ್ ನೊಂದಿಗೆ]

By Prateeksha
|

2015 ರಲ್ಲಿನ ಉತ್ತಮ ಫೋನ್‍ಗಳಲ್ಲಿ ಸ್ಯಾಮ್ಸಂಗ್ ಗೆಲಾಕ್ಸಿ ನೋಟ್ 5 ಕೂಡ ಒಂದು ಎಂದು ಖಂಡಿತವಾಗಿ ಹೇಳಬಹುದು. ಭಾರತದಲ್ಲಿ ಇದು ಲಭ್ಯವಿದೆ 46,496 ರೂ. (32 ಜಿಬಿ) 55,900 ರೂ. (64ಜಿಬಿ) ಗೆ ಲಭ್ಯವಿದೆ.

ಓದಿರಿ: ಮ್ಯಾಕ್ ಬುಕ್ ಕೀಬೋರ್ಡಿನ ಬ್ಯಾಕ್ ಲೈಟ್ ಕೆಲಸ ಮಾಡದಿದ್ದರೆ ಹೀಗೆ ಮಾಡಿ.

ಇದು ಔಟ್‍ಸ್ಟ್ಯಾಂಡಿಂಗ್ ಡಿಸ್ಪ್ಲೆ, ಟೆರಿಫಿಕ್ ಬ್ಯಾಟರಿ ಲೈಫ್ ಮತ್ತು ಮಲ್ಟಿ ಫಂಕ್ಷನಲ್ ಸ್ಟೈಲಸ್ ನೊಂದಿಗೆ ಬರುತ್ತದೆ. ಈ ಫೋನ್ ಅತ್ತ್ಯುತ್ತಮ ಕ್ಯಾಮೆರಾ ಹೊಂದಿದ್ದು ಹೊರಗಡೆ ಒಳ್ಳೆಯ ಚಿತ್ರಗಳನ್ನು ತೆಗೆಯುತ್ತದೆ ಬಿಸಿಲಿರಲಿ ಇಲ್ಲವೆ ನೆರಳಿರಲಿ.

ಗಿಜ್‍ಬೊಟ್ ಗೆ ಈ ಫೋನ್ ನೊಂದಿಗೆ ಅನುಭವ ಪಡೆಯುವ ಅವಕಾಶ ಸಿಕ್ಕಿತು ಸ್ವಲ್ಪ ಸಮಯಕ್ಕೆ ಮತ್ತು ಅದು ನಮಗೆ ನಿರಾಶೆ ಮಾಡಲಿಲ್ಲಾ. ಸ್ಯಾಮ್ಸಂಗ್ ಗೆಲಾಕ್ಸಿ ಎಸ್6 ನಂತಹ ಕ್ಯಾಮೆರಾ ವನ್ನೇ ಹೊಂದಿದೆ. ಒಐಎಸ್( ಒಪ್ಟಿಕಲ್ ಇಮೇಜ್ ಸ್ಟೆಬಿಲೈಜೇಷನ್) ನೊಂದಿಗಿನ 16 ಎಮ್‍ಪಿ ರೇರ್ ಕ್ಯಾಮೆರಾ ಉತ್ತಮ ಚಿತ್ರಗಳನ್ನು ತೆಗೆಯುತ್ತದೆ ಮತ್ತು 5 ಎಮ್‍ಪಿ ಫ್ರಂಟ್-ಫೇಸಿಂಗ್ ಕ್ಯಾಮೆರಾ ಉತ್ತಮ ಸೆಲ್ಫಿಸ್ ತೆಗೆಯಲು ಯೋಗ್ಯವಾಗಿದೆ. ಕೊಕ್‍ಟೇಲ್ ಗೆ ಇನ್ನೊಂದು ಸೇರಿಸಲು ಗೆಲಾಕ್ಸಿ ನೋಟ್ 5 ನಲ್ಲಿ ಇನ್ನೂ ಹೆಚ್ಚಿನ ಎಡಿಟಿಂಗ್ ಮತ್ತು ಶೂಟಿಂಗ್ ಮೋಡ್ಸ್ ಮತ್ತು ಗೈಡ್ಸ್ ಇವೆ. ಇದು ಚಿಕ್ಕ ವಿಷಯ ಎನಿಸಿದರೂ ಕೂಡ ಇದನ್ನೆಲ್ಲಾ ಸಂಶೊಧನೆ ಮಾಡುವುದು ಆನಂದದಾಯಕವಾಗಿದೆ.

ಓದಿರಿ: ವಿಶ್ವದ ಹೆಚ್ಚು ಸುಭದ್ರ ಡಿವೈಸ್‌ಗಳು

ಹೀಗಾಗಿ, ನಿಮ್ಮ ನೋಟ್ 5 ಕ್ಯಾಮೆರಾ ದಿಂದ ಹೆಚ್ಚಿನದು ಪಡೆಯಬೇಕೆಂದಿದ್ದರೆ ಇಲ್ಲಿವೆ ಕೆಲ ಅಪರೂಪದ ತಂತ್ರಗಳು ಮತ್ತು ಉಪಾಯಗಳು, ಅವುಗಳಿಂದ ನೀವು ಅದ್ಭುತವಾದ ಚಿತ್ರಗಳು ಮತ್ತು ವೀಡಿಯೊಗಳನ್ನು ನಿಮ್ಮ ಫೋನ್‍ನಿಂದ ತೆಗೆಯಬಹುದು.

ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 5 ಕ್ಯಾಮರಾ ದಲ್ಲಿನ 10 ರಹಸ್ಯಮಯ ಗುಣಗಳು

1. ಲೊಂಚ್ ಮಾಡಲು ಹೋಮ್ ಬಟನ್ ಅನ್ನು ಡಬಲ್- ಪ್ರೆಸ್ ಮಾಡಿ

ಗೆಲಾಕ್ಸಿ ನೋಟ್ 5 ಯಲ್ಲಿ ತ್ವರಿತವಾಗಿ ಲೊಂಚ್ ಆಗುವ ಗುಣ ಹೊಂದಿದೆ, ಫೋನಿನ ಹೋಮ್ ಬಟನ್ ಅನ್ನು ಎರಡು ಬಾರಿ ಒತ್ತಿದರೆ ಸಾಕು ಕ್ಯಾಮೆರಾ ಲೊಂಚ್ ಆಗುತ್ತದೆ ಮತ್ತು ನೀವು ಫೋಟೊ ತೆಗೆಯಲು ಆರಂಭಿಸಬಹುದು.

ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 5 ಕ್ಯಾಮರಾ ದಲ್ಲಿನ 10 ರಹಸ್ಯಮಯ ಗುಣಗಳು

2. ಪ್ರೊ ಮೋಡ್

ಪ್ರೊಫೆಷನಲ್ ಅಂತೆ ನಿಮಗೆ ಚಿತ್ರಗಳನ್ನು ತೆಗೆಯಬೇಕೆಂದಿದ್ದರೆ ಈ ಆಯ್ಕೆ ನಿಮಗಾಗಿ. ಮೊಡ್ ಟ್ಯಾಪ್ ಮಾಡಿ ಮತ್ತು ಪ್ರೊ ಆಯ್ಕೆ ಮಾಡಿ. ನೀವು ಫೋಕಸ್ ಮತ್ತು ಎಕ್ಸ್‍ಪೊಜರ್ ಕಂಟ್ರೊಲ್ ಮಾಡಬಹುದು ವಸ್ತು ಮತ್ತು ಬೆಳಕಿಗೆ ಅನುಗುಣವಾಗಿ. ಈ ಆಯ್ಕೆಯಲ್ಲಿ ನಿಮಗೆ ರೊ ಫೈಲ್ ಆಗಿ ಸೇವ್ ಮಾಡುವ ಆಯ್ಕೆ ಕೂಡ ಇದೆ, ಫೊಟೊಗ್ರಾಫರ್ಸ್ ಗೆ ಹೆಚ್ಚಿನ ಪೋಸ್ಟ್ ಪ್ರೊಸೆಸಿಂಗ್ ಕಂಟ್ರೊಲ್ ಗಾಗಿ ಕೊಡುಗೆ ನೀಡಿದೆ.

ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 5 ಕ್ಯಾಮರಾ ದಲ್ಲಿನ 10 ರಹಸ್ಯಮಯ ಗುಣಗಳು

3. 4ಕೆ ವೀಡಿಯೊ ಸೆಟ್ಟಿಂಗ್

ನಮ್ಮ ಅನುಭವದ ಪ್ರಕಾರ ಈ ಫೋನ್ ಉತ್ತಮವಾದ 4ಕೆ ವೀಡಿಯೊ ಕ್ಯಾಪ್ಚರ್ ಮಾಡಬಹುದಾಗಿದೆ. 4ಕೆ ಸೆಲೆಕ್ಟ್ ಮಾಡಲು ಕ್ಯಾಮೆರಾ ಐಕೊನ್ ಟ್ಯಾಪ್ ಮಾಡಿ ಸೆಟ್ಟಿಂಗ್ಸ್ ಗೆ ಹೋಗಿ , ವೀಡಿಯೊ ಸೈಡ್ ಸೆಲೆಕ್ಟ್ ಮಾಡಿ ಮತ್ತು ಎಫ್‍ಎಚ್‍ಡಿ ಯನ್ನು ಅಲ್ಲಿ ಆಯ್ಕೆ ಮಾಡಬಹುದು.

ಅದೇನಿದ್ದರೂ, 4ಕೆ ಆಯ್ಕೆ ಮಾಡಿದರೆ ಕೆಲ ಫೀಚರ್ ಗಳಾದಂತಹ ಎಚ್‍ಡಿಆರ್ ವೀಡಿಯೊ, ವೀಡಿಯೊ ಎಫೆಕ್ಟ್ಸ್, ವೀಡಿಯೊ ಸ್ಟೆಬಿಲೈಜೇಷನ್, ವೀಡಿಯೊ ತೆಗೆಯುವಾಗ ಪಿಕ್ಚರ್ಸ್ ತೆಗೆಯುವುದು ಮತ್ತು ಆಟೊ ಫೋಕಸ್( ಫೋನ್ ಪ್ರೊಸೆಸರ್ ನಿಂದ ಹಿಡಿದಿಡಲ್ಪಡುತ್ತದೆ ಆದರೂ 4ಕೆ ವೀಡಿಯೊ ಕ್ವಾಲಿಟಿ ಯನ್ನು ಹ್ಯಾಂಡಲ್ ಮಾಡಲಾಗುವುದಿಲ್ಲಾ) ಹೋಗುತ್ತವೆ.

ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 5 ಕ್ಯಾಮರಾ ದಲ್ಲಿನ 10 ರಹಸ್ಯಮಯ ಗುಣಗಳು

4. ರೆಕೊರ್ಡ್ ವೀಡಿಯೊ ಕೊಲ್ಯಾಜ್

ಈ ಮೋಡ್ ನಲ್ಲಿ, ನೀವು 6 ಸೆಕೆಂಡ್ ನ 4 ವೀಡಿಯೊ ಶೊಟ್ಸ್ ತೆಗೆದು ಕೊಲ್ಯಾಜ್ ಮಾಡಬಹುದು. ಇದು ಫ್ರಂಟ್ ಮತ್ತು ರೇರ್ ಕ್ಯಾಮೆರಾ ಎರಡರಲ್ಲೂ ಕೆಲಸ ಮಾಡುತ್ತದೆ. ಇದರೊಂದಿಗೆ ನೀವು ಬ್ಯಾಕ್‍ಗ್ರೌಂಡ್ ಮ್ಯುಸಿಕ್ ಹಾಕಬಹುದು ಮತ್ತು ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಹುದು.

ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 5 ಕ್ಯಾಮರಾ ದಲ್ಲಿನ 10 ರಹಸ್ಯಮಯ ಗುಣಗಳು

5. ಆಕ್ಷನ್-ಪ್ಯಾಕ್ಡ್ ಎನಿಮೆಟೆಡ್ ಜಿಐಎಫ್

ಫೊಟೊ ಎಡಿಟರ್ ಸೆಕ್ಷನ್ ನಲ್ಲಿ ಈ ಫೀಚರ್ ಕಾಣಬಹುದು. ಹೌದು,ಈಗ ನೀವು ಆನಿಮೇಟೆಡ್ ಜಿಐಎಫ್ ಅನ್ನು ನಿಮ್ಮ ಫೋನಿನಲ್ಲಿ ತಯಾರಿಸಬಹುದು ಸೀರಿಜ್ ಆಫ್ ಶೊಟ್ಸ್ ಸೆಲೆಕ್ಟ್ ಮಾಡಿ ಮತ್ತು ಅದನ್ನು ಆಕ್ಷನ್ ಸೀಕ್ವೆನ್ಸ್ ಆಗಿ ಕನ್ವರ್ಟ್ ಮಾಡಿ.

ಓದಿರಿ: ತಿಂಗಳಿಗೆ 500 ದಶಲಕ್ಷ ಕರೆಗಳನ್ನು ದಾಟಿದ 'ಟ್ರೂಕಾಲರ್' ಆಪ್‌

6. ಸ್ಲೋ ಮೊಷನ್ ವೀಡಿಯೊಸ್ ಆನಂದಿಸಿ

ಉತ್ತಮವಾದ ಸ್ಲೊ ಮೊಷನ್ ವೀಡಿಯೊಸ್ ಕೂಡ ನೀವು ತೆಗೆಯಬಹುದು ಸುಲಭವಾಗಿ. ನೀವು ಮಾಡಬೇಕಾಗಿರುವುದಿಷ್ಟೆ ಕ್ಯಾಮೆರಾ ಒಪನ್ ಮಾಡಿ, ಮೋಡ್ ಬಟನ್ ಟ್ಯಾಪ್ ಮಾಡಿ ಮತ್ತು ಸ್ಲೊ ಮೊ ಮೊಡ್ ಗೆ ಹೋಗಿ ಮತ್ತು ರೆಕೊರ್ಡ್ ಮಾಡಲು ಶುರುಮಾಡಿ. ರೆಕೊರ್ಡ್ ಆದ ಮೇಲೆ ಎಡಿಟಿಂಗ್ ಮೋಡ್ ಉಪಯೋಗಿಸಿ ಅದನ್ನು ಬದಲಿಸಬಹುದು ಸುಲಭವಾಗಿ. ಸ್ವಾಭಾವಿಕವಾಗಿ ವೀಡಿಯೊ ಕೆಲ ಸೆಕೆಂಡುಗಳ ವರೆಗೆ ಪ್ಲೇ ಆಗುತ್ತದೆ ಸಾಮಾನ್ಯ ವೇಗದಲ್ಲಿ ನಂತರ ನಿಧಾನವಾಗುತ್ತದೆ ಮತ್ತು ಕೊನೆಯಲ್ಲಿ ಸಾಮಾನ್ಯ ವೇಗದಲ್ಲಿ ಪ್ಲೇ ಆಗುತ್ತದೆ. ಹಳದಿ ಸ್ಲೈಡರ್ ಅನ್ನು ಚಲಾಯಿಸುವ ಮೂಲಕ ಚಿಕ್ಕದು ಇಲ್ಲಾ ಉದ್ದ ವಾಗಿ ಮಾಡಬಹುದು ನಿಮಗೆ ಸ್ಲೊ ಮೊಷನ್ ನಲ್ಲಿ ಬೇಕೆÀನಿಸುವ ಭಾಗ. ಅದೇ ಸಮಯದಲ್ಲಿ ನೀವು ಸ್ಲೊ ಮೊಷನ್ ನ ವೇಗವನ್ನು ಕೂಡ ನಿರ್ಧರಿಸಬಹುದು 1/2, ¼ ಅಥವಾ 1/8 ವೇಗದಲ್ಲಿ.

ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 5 ಕ್ಯಾಮರಾ ದಲ್ಲಿನ 10 ರಹಸ್ಯಮಯ ಗುಣಗಳು

7. ಟೈಮ್ ಲ್ಯಾಪ್ಸ್

ಸ್ಲೊ ಮೊಷನ್ ವೀಡಿಯೊ ಹಾಗೆ ಟೈಮ್ ಲ್ಯಾಪ್ಸ್ ವೀಡಿಯೊಸ್ ಕೂಡ ತಯಾರಿಸಬಹುದು ಫಾಸ್ಟ್ ಮೊಷನ್ ಮೊಡ್ ಸಹಾಯದಿಂದ. ವಿಧಾನದಲ್ಲಿ ಯಾವುದೇ ಬದಲಾವಣೆ ಇಲ್ಲಾ ಕೇವಲ ಸ್ಲೊ- ಮೊ ಬದಲಿಗೆ ಟೈಮ್ ಲ್ಯಾಪ್ಸ್ ಅನ್ನು ಆಯ್ಕೆ ಮಾಡಬೇಕು. ಇದನ್ನು ಎಡಿಟ್ ಕೂಡ ಅದೇ ರೀತಿ ಮಾಡಬಹುದು.

ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 5 ಕ್ಯಾಮರಾ ದಲ್ಲಿನ 10 ರಹಸ್ಯಮಯ ಗುಣಗಳು

8. ವೈಡ್ ಸೆಲ್ಫೀಸ್ ಗಳನ್ನು ಸುಲಭವಾಗಿ ತೆಗೆಯಬಹುದು

ಕೇವಲ ಫ್ರಂಟ್ ಕ್ಯಾಮೆರಾ ಆಯ್ಕೆ ಮಾಡಿ, ಮೋಡ್ > ವೈಡ್ ಸೆಲ್ಫಿ ಮತ್ತು ಅದು ತಿಳಿಸಿದಂತೆ ಕ್ಯಾಮೆರಾ ಬಟನ್ ಟ್ಯಾಪ್ ಮಾಡಿ ಮತ್ತು ನಿಮ್ಮ ಫೋನನ್ನು ತಿರುಗಿಸಿ ಒಂದು ದಿಕ್ಕಿಗೆ ( ನಿಮಗೆ ಸೂಚನೆ ಬರುತ್ತದೆ ಮೇಲೆ ಬಲಗಡೆಗೆ ವ್ಯೂಫೈಂಡರ್ ನಲ್ಲಿ ). ಇದು ಚೆನ್ನಾಗಿ ಕೆಲಸ ಮಾಡುತ್ತದೆ , ಎಲ್ಲರೂ ಅಲುಗಾಡದಂತೆ ನೋಡಿಕೊಳ್ಳಿ ಕ್ಯಾಮೆರಾ ಸುಲಲಿತವಾಗಿ ಕೆಲಸ ಮಾಡುವುದು.

ಸ್ಯಾಮ್ಸಂಗ್ ಗ್ಯಾಲಾಕ್ಸಿ ನೋಟ್ 5 ಕ್ಯಾಮರಾ ದಲ್ಲಿನ 10 ರಹಸ್ಯಮಯ ಗುಣಗಳು

9. ಲೈವ್ ಬ್ರೊಡ್‍ಕಾಸ್ಟಿಂಗ್ ಎನ್ನುವ ಹೊಸ ಫೀಚರ್

ಹೊಚ್ಚ ಹೊಸ ಫೀಚರ್ ಆದಂತಹ ಬ್ರೊಡ್‍ಕಾಸ್ಟಿಂಗ್ ನಿಮಗೆ ಯೂಟ್ಯೂಬ್ ನಲ್ಲಿ ರೆಕೊರ್ಡ್ ಮಾಡಲು ಅವಕಾಶಮಾಡಿಕೊಡುತ್ತದೆ. ಸ್ಯಾಮ್ಸಂಗ್ ಮತ್ತು ಯುಟ್ಯೂಬ್ ಟ್ವಿಟರ್ ನ ಪೆರಿಸ್ಕೊಪ್ ಟೂಲ್ ಉಪಯೋಗಿಸುತ್ತದೆ. ಅದನ್ನು ಅನುಭವಿಸಲು , ನಿಮಗೆ ಕೆಲ ಕ್ಲಿಷ್ಟಕರವಾದ ಸೈನ್-ಇನ್ ಪ್ರೊಸೆಸ್ ಸೆಟ್ ಅಪ್ ಮಾಡಬೇಕಾಗುತ್ತದೆ ನಿಮ್ಮ ಗೂಗಲ್ ಅಕೌಂಟ್ ವೆರಿಫೈ ಮಾಡಲು ಸ್ಟ್ರೀಮ್ ಲೈವ್ ಗಾಗಿ. ಪ್ರೊಸೆಸ್ ಸಂಪೂರ್ಣ ಆದ ಮೇಲೆ ನಿಮಗೆ ನಿಮ್ಮ ವೀಡಿಯೋಸ್ ಬಫರ್ ಮಾಡಲು ಸಾಧ್ಯವಾಗುತ್ತದೆ ನಿಮ್ಮ ಯುಟ್ಯೂಬ್ ಪೇಜ್ ನಲ್ಲಿ.

10. ವರ್ಚುವಲ್ ಸೆಲ್ಫಿ

ವರ್ಚುವಲ್ ಸೆಲ್ಫಿ ಯನ್ನು ಸ್ಯಾಮ್ಸಂಗ್ ಹೆಸರಿಸಿದೆ , ಒಂದು ವಸ್ತುವಿನ ಸುಂದರವಾದ ಹಲವಾರು ದಿಕ್ಕುಗಳಲ್ಲಿ ನೋಡಬಹುದಾದ 360 ಡಿಗ್ರಿ ತನಕದ ಫೋಟೊಸ್ ತಯಾರಿಸಬಹುದಾಗಿದೆ. ಸರಳವಾಗಿ ಹೇಳುವುದಾದರೆ ಈ ಮೋಡ್ ನಿಮಗೆ ಚಲಿಸುವಾಗ ಸುತ್ತಲು ತಿರುಗುವಾಗ ಸೀರಿಜ್ ಆಫ್ ಶೊಟ್ಸ್ ತೆಗೆಯಲು ಅವಕಾಶ ನೀಡುತ್ತದೆ. ಕೊನೆಯಲ್ಲಿ ಸಿಗುವ ಫಲಿತಾಂಶದಲ್ಲಿ ನಿಮಗೆ 3ಡಿ ಇಮೇಜ್ ಸಿಗುತ್ತದೆ ಮತ್ತು ಅದು ಇಂಟರ್ಯಾಕ್ಟಿವ್ ಕೂಡ ಆಗಿರುತ್ತದೆ ಏಕೆಂದರೆ ಇದು ಫೋನ್ ನನ್ನು ಎಡದಿಂದ ಬಲ ಮತ್ತು ಬಲದಿಂದ ಎಡಕ್ಕೆ ತಿರುಗಿಸಿದಾಗ ಫೋಟೊ ಕೂಡ ಸುತ್ತಲೂ ತಿರುಗುತ್ತದೆ.

Best Mobiles in India

English summary
Samsung Galaxy Note 5 is definitely one of the better phones for the year 2015, which is available in India at a price of Rs. 46,496 (32GB) Rs. 55,900 (64GB).

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X