ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7 ಅಧಿಕೃತ ಲಾಂಚ್

By Shwetha
|

ಸ್ಯಾಮ್‌ಸಂಗ್‌ನ ಫ್ಲ್ಯಾಗ್‌ಶಿಪ್ ಫ್ಯಾಬ್ಲೆಟ್ ಗ್ಯಾಲಕ್ಸಿ ನೋಟ್ ಇಲ್ಲಿದೆ. ಕಂಪೆನಿಯು ಗ್ಯಾಲಕ್ಸಿ ನೋಟ್ 5 ಫ್ಯಾಬ್ಲೆಟ್ ನಂತರ ಕಂಪೆನಿ ಲಾಂಚ್ ಮಾಡಿರುವ ಗ್ಯಾಲಕ್ಸಿ ನೋಟ್ 7 ಜಲ ಪ್ರತಿರೋಧಕ ಶಕ್ತಿಯನ್ನು ಪಡೆದುಕೊಂಡು ಐಪಿ68 ಪ್ರಮಾಣಪತ್ರವನ್ನು ಸ್ವೀಕರಿಸಿದೆ. ಗೇರ್ ವಿಆರ್ ಚಾಲಿತ ಒಕೊಲಸ್ ಮತ್ತು ಅನ್ನು ಫ್ಯಾಬ್ಲೆಟ್ ಹೊಂದಿದ್ದು 60 ಡಿಗ್ರಿ ಆಂಗಲ್‌ನಲ್ಲಿ ಸರಳ ವೀಕ್ಷಣೆಯನ್ನು ಒದಗಿಸಿದೆ ಈ ಕೆಳಗಿನ ಸ್ಲೈಡರ್‌ಗಳಲ್ಲಿ ಫ್ಯಾಬ್ಲೆಟ್ ಕುರಿತ ಮತ್ತಷ್ಟು ಮಾಹಿತಿಯನ್ನು ಅರಿತುಕೊಳ್ಳೋಣ.

ಓದಿರಿ: ಸ್ಮಾರ್ಟ್‌ಫೋನ್‌ನಲ್ಲಿ ಫೋಟೋ ಸ್ಕ್ಯಾನ್ ಮಾಡುವುದು ಹೇಗೆ?

ಡ್ಯುಯಲ್ ಎಡ್ಜ್ ಕರ್ವ್ ಡಿಸ್‌ಪ್ಲೇ

ಡ್ಯುಯಲ್ ಎಡ್ಜ್ ಕರ್ವ್ ಡಿಸ್‌ಪ್ಲೇ

ಗ್ಯಾಲಕ್ಸಿ ನೋಟ್ 7, 5.7 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದ್ದು ರೆಸಲ್ಯೂಶನ್ 2560x1440 ಪಿಕ್ಸೆಲ್‌ಗಳನ್ನು ಒಳಗೊಂಡಿದೆ. ಸ್ಕ್ರೀನ್ ಡ್ಯುಯಲ್ ಎಡ್ಜ್ ಕರ್ವ್ ಅನ್ನು ಪಡೆದುಕೊಂಡಿದ್ದು ಗೇರ್ ವಿಆರ್ ಅನ್ನು ಹೊಂದಿ ಇನ್ನಷ್ಟು ಅದ್ಭುತ ಅನುಭವವನ್ನು ನಮಗೆ ನೀಡಲಿದೆ. ಗೋರಿಲ್ಲಾ ಗ್ಲಾಸ್ 5 ಭದ್ರತೆನ್ನು ಡಿವೈಸ್ ಹೊಂದಿದೆ.

ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 820 ಸಿಪಿಯು

ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 820 ಸಿಪಿಯು

ಹಾರ್ಡ್‌ವೇರ್ ಅಂಶವನ್ನು ಪರಿಗಣಿಸುವಾಗ ಇದು ಎರಡು ಆವೃತ್ತಿಗಳಲ್ಲಿ ಬಂದಿದೆ. ಓಕ್ಟಾ ಕೋರ್ 64 ಬಿಟ್ ಎಕ್ಸೋನಸ್ 8890 ಅಥವಾ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 820 ಪ್ರೊಸೆಸರ್ ಅನ್ನು ಡಿವೈಸ್ ಪಡೆದುಕೊಂಡಿದೆ. ಫೋನ್‌ನ RAM ಸಾಮರ್ಥ್ಯ 4ಜಿಬಿಯಾಗಿದೆ.

64 ಜಿಬಿ ಆಂತರಿಕ ಸಂಗ್ರಹ

64 ಜಿಬಿ ಆಂತರಿಕ ಸಂಗ್ರಹ

ಗ್ಯಾಲಕ್ಸಿ ನೋಟ್ 7, 64 ಜಿಬಿ ಆಂತರಿಕ ಸಂಗ್ರಹವನ್ನು ಪಡೆದುಕೊಂಡಿದ್ದು, ಇದನ್ನು 256 ಜಿಬಿಗೆ ವಿಸ್ತರಿಸಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಸಂಗ್ರಹಣೆಯನ್ನು ವಿಸ್ತರಿಸಲು ಯಾವುದೇ ಮಿತಿಗಳು ಇರುವುದಿಲ್ಲ.

ಕ್ಯಾಮೆರಾ

ಕ್ಯಾಮೆರಾ

ಡಿವೈಸ್ ಕ್ಯಾಮೆರಾ ವಿಶೇಷತೆಗಳನ್ನು ನೋಡಿದಾಗ ರಿಯರ್ ಕ್ಯಾಮೆರಾ 12 ಎಮ್‌ಪಿಯಾಗಿದ್ದು ಮುಂಭಾಗದಲ್ಲಿ 5 ಎಮ್‌ಪಿ ಕ್ಯಾಮೆರಾವನ್ನು ಹೊಂದಿದೆ.

ಸಾಫ್ಟ್‌ವೇರ್

ಸಾಫ್ಟ್‌ವೇರ್

ಗ್ಯಾಲಕ್ಸಿ ನೋಟ್ 7 ನಲ್ಲಿ ಆಂಡ್ರಾಯ್ಡ್ ಮಾರ್ಶ್‌ಮಲ್ಲೊ ಇದ್ದು ಟಚ್ ವಿಜ್ ಯುಐ ಅನ್ನು ಇದು ಹೊಂದಿದೆ. ಆಂಡ್ರಾಯ್ಡ್ 7.0 ಅಪ್‌ಡೇಟ್ ಕೂಡ ಡಿವೈಸ್‌ನಲ್ಲಿದೆ.

ಐರಿಶ್ ಸ್ಕ್ಯಾನರ್

ಐರಿಶ್ ಸ್ಕ್ಯಾನರ್

ಡಿವೈಸ್ ಐರಿಸ್ ಸ್ಕ್ಯಾನರ್‌ನೊಂದಿಗೆ ಬಂದಿದ್ದು ಹೆಚ್ಚು ಭದ್ರತೆ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್ ವಿಶೇಷತೆಯನ್ನು ಡಿವೈಸ್‌ಗೆ ನೀಡಿದೆ. ಸ್ಯಾಮ್‌ಸಂಗ್ ಪೇ ಮತ್ತು ಇತರ ಅಪ್ಲಿಕೇಶನ್‌ಗಳಲ್ಲಿ ಸುಭದ್ರ ಖರೀದಿಗೆ ಸಹಾಯಕವಾಗಿದೆ.

ಸಂಪರ್ಕ

ಸಂಪರ್ಕ

ಸಾಮಾನ್ಯ ಸಂಪರ್ಕ ಅಂಶಗಳನ್ನು ಹೊರತುಪಡಿಸಿ, ಸ್ಯಾಮ್‌ಸಂಗ್ ಹೊಸ ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಗ್ಯಾಲಕ್ಸಿ 7 ನಲ್ಲಿ ಕಂಪೆನಿ ಪ್ರಾಯೋಜಿಸಿದೆ. ಇದು ಫಾಸ್ಟ್ ಚಾರ್ಜಿಂಗ್ ಮತ್ತು ಫೈಲ್ ಟ್ರಾನ್ಸ್‌ಫರ್‌ಗೆ ಸಹಾಯಕವಾಗಿದೆ.

ಬ್ಯಾಟರಿ

ಬ್ಯಾಟರಿ

ಡಿವೈಸ್ 3,500 mAh ಬ್ಯಾಟರಿಯನ್ನು ಒಳಗೊಂಡಿದ್ದು ಈಸಿ ಪವರ್ ಮ್ಯಾನೇಜ್‌ಮೆಂಟ್ ಯುಎಕ್ಸ್‌ನೊಂದಿಗೆ ಬಂದಿದೆ. ವೈರ್‌ಲೆಸ್ ಚಾರ್ಜಿಂಗ್ ಮತ್ತು ವೇಗವಾದ ಚಾರ್ಜಿಂಗ್‌ಗೂ ಇದು ಅನುಕೂಲವನ್ನುಂಟು ಮಾಡಲಿದೆ.

ಎಸ್ ಪೆನ್

ಎಸ್ ಪೆನ್

ಹೊಸ ಸ್ಟೈಲಸ್ ಅನ್ನು ನೋಟ್ 7 ಹೊಂದಿದ್ದು ನೀರಿದ್ದಾಗಲೂ ಇದನ್ನು ಬಳಸಿ ಫ್ಯಾಬ್ಲೆಟ್‌ನಲ್ಲಿ ಬರೆಯಬಹುದಾಗಿದೆ. ಇದು ಜಲ ಮತ್ತು ಧೂಳು ಪ್ರತಿರೋಧಕ ಎಂದೆನಿಸಿದೆ

15 ಜಿಬಿ ಕ್ಲೌಡ್ ಸ್ಟೋರೇಜ್

15 ಜಿಬಿ ಕ್ಲೌಡ್ ಸ್ಟೋರೇಜ್

ಗ್ಯಾಲಕ್ಸಿ ನೋಟ್ 7 ಒಂದು IP68 ಪ್ರಮಾಣಿತ ಧೂಳು ಮತ್ತು ಜಲ ಪ್ರತಿರೋಧಕ ಡಿವೈಸ್ ಎಂದೆನಿಸಿದೆ. ಇದು ಉಚಿತ 15 ಜಿಬಿ ಸ್ಯಾಮ್‌ಸಂಗ್ ಕ್ಲೌಡ್ ಸ್ಟೋರೇಜ್ ವಿಶೇಷತೆಯೊಂದಿಗೆ ಬಂದಿದೆ.

Best Mobiles in India

English summary
Take a look at the specs, features and other aspects of the Note 7 in detail, in the sliders below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X