ಎಚ್ಚರ: ಸ್ಮಾರ್ಟ್ ಫೋನ್ ಬಳಕೆ ನಿಮ್ಮ ಚರ್ಮದ ವಯಸ್ಸು ಹೆಚ್ಚಿಸುತ್ತಿದೆ.

|

ಈಗಂತೂ ನಾವು ಸ್ಮಾರ್ಟ್ ಫೋನುಗಳನ್ನು ಉಪಯೋಗಿಸುತ್ತಿಲ್ಲ, ಬದಲಿಗೆ ಅವುಗಳಿಗೆ ಅಂಟಿಕೊಂಡುಬಿಟ್ಟಿದ್ದೀವಿ ಅಥವಾ ಅವುಗಳ ಮೇಲೆ ಅವಲಂಬಿತರಾಗಿದ್ದೀವಿ. ಆದರೆ, ನಮ್ಮ ನಿಜ ವಯಸ್ಸಿಗಿಂತ ಹೆಚ್ಚು ವಯಸ್ಸಾದವರಂತೆ ಕಾಣಲು ಮೊಬೈಲುಗಳು ಕಾರಣವಾಗಿರಬಹುದು ಎಂಬಂಶವನ್ನು ಮರೆತುಬಿಟ್ಟಿದ್ದೀವಿ.

ಎಚ್ಚರ: ಸ್ಮಾರ್ಟ್ ಫೋನ್ ಬಳಕೆ ನಿಮ್ಮ ಚರ್ಮದ ವಯಸ್ಸು ಹೆಚ್ಚಿಸುತ್ತಿದೆ.

ಮೊಬೈಲ್ ಫೋನುಗಳು ಜೀವನವನ್ನು ಸುಲಭವಾಗಿಸಿವೆ, ಸತ್ಯ, ಆದರೆ ವಿಪರೀತವಾಗಿ ಉಪಯೋಗಿಸುವುದು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ, ಅದರಲ್ಲೂ ರೂಪದ ವಿಷಯದಲ್ಲಿ.

ಓದಿರಿ: 1TB ಎಸ್‌ಡಿ ಕಾರ್ಡ್‌ ಖರೀದಿಯಿಂದ ಆಗುವ 5 ಬೆನಿಫಿಟ್‌ಗಳು ಏನು ಗೊತ್ತೇ?

ನಾವು ಮೊಬೈಲಿನ ಹೆಚ್ಚು ಅವಲಂಬಿತರಾಗುವುದು ಒತ್ತಡದಿಂದ ಎನ್ನುವುದು ಇದಕ್ಕೆ ಕಾರಣ.

ಬೆಳಿಗ್ಗೆ ಎದ್ದಾಗಿರಬಹುದು ಅಥವಾ ರಾತ್ರಿ ಮಲಗುವ ಮೊದಲಿರಬಹುದು, ಮೊಬೈಲ್ ನಮ್ಮ ಸಂಗಾತಿ. ಸ್ಮಾರ್ಟ್ ಫೋನ್ ನಮ್ಮ ಚರ್ಮದ ಮೇಲುಂಟುಮಾಡುವ ಪರಿಣಾಮಗಳು ಮಾತ್ರ ಭಯ ಹುಟ್ಟಿಸುವಂತಿವೆ.

ಎಚ್ಚರ: ಸ್ಮಾರ್ಟ್ ಫೋನ್ ಬಳಕೆ ನಿಮ್ಮ ಚರ್ಮದ ವಯಸ್ಸು ಹೆಚ್ಚಿಸುತ್ತಿದೆ.

ಟೆಕ್ ನೆಕ್ ಪೊಸಿಷನ್ ಅನ್ನು ತಡೆಯಿರಿ.

ಕತ್ತಿನ ಬಳಿಯಿರುವ ಚರ್ಮ ಮತ್ತು ಗದ್ದದ ಕೆಳಗಿನ ಚರ್ಮವು ವಿಪರೀತ ಮೊಬೈಲ್ ಬಳಕೆಯ ಕಾರಣದಿಂದಾಗುವ ಪರಿಣಾಮಗಳನ್ನು ಮೊದಲು ತೋರಿಸುತ್ತದೆ.

ಟೆಕ್ ನೆಕ್ ಪೊಸಿಷನ್ ನಲ್ಲಿ, ವ್ಯಕ್ತಿಯು ತಲೆಯನ್ನು ಬಗ್ಗಿಯಿಸಿಯೇ ಇಟ್ಟಿರುತ್ತಾನೆ, ಇದರಿಂದ ಚರ್ಮದಲ್ಲಿ ಸುಕ್ಕುಗಳೆದ್ದು ವಯಸ್ಸಾದಂತೆ ಕಾಣಿಸುತ್ತದೆ.

ಓದಿರಿ: ಟಿಪ್ಸ್: ಜಿಯೋ4ಜಿವಾಯ್ಸ್ ಬಳಸಿ ಕರೆಮಾಡುವುದು ಹೇಗೆ?

ಪರಿಹಾರ: ಮೊಬೈಲ್ ಉಪಯೋಗಿಸುವಾಗ ಕತ್ತು ನೆಲಕ್ಕೆ ಸಮನಾಂತರವಾಗಿ ಸಹಜ ಸ್ಥಾನದಲ್ಲಿರುವಂತೆ ಗಮನ ಹರಿಸಬೇಕು. ಮೊಬೈಲನ್ನು ಮೇಲೆತ್ತಿ, ಕತ್ತನ್ನು ಕೆಳಗೆ ಮಾಡಬೇಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಚ್ಚರ: ಸ್ಮಾರ್ಟ್ ಫೋನ್ ಬಳಕೆ ನಿಮ್ಮ ಚರ್ಮದ ವಯಸ್ಸು ಹೆಚ್ಚಿಸುತ್ತಿದೆ.

ನೇರವಾಗಿ ಶಾಖಕ್ಕೆ ಒಡ್ಡಿಕೊಳ್ಳಬೇಡಿ.

ಘಂಟೆಗಟ್ಟಲೇ ಮಾತನಾಡುವಾಗ, ನಿಮ್ಮ ಸ್ಮಾರ್ಟ್ ಫೋನ್ ವಿಪರೀತವಾಗಿ ಬಿಸಿಯಾಗಿಬಿಡುತ್ತದೆ. ಈ ಶಾಖವು ನಿಮ್ಮ ಆರೋಗ್ಯ ಮತ್ತು ಚರ್ಮದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ.

ಸತತವಾಗಿ ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ಆ ಭಾಗದ ಚರ್ಮದಲ್ಲಿ ಮೆಲನಿನ್ ಉತ್ಪಾದನೆ ಹೆಚ್ಚುತ್ತದೆ. ಇದರಿಂದಾಗಿ ನಿಮ್ಮ ಚರ್ಮದ ಮೇಲೆ ಚುಕ್ಕೆಗಳಾಗುತ್ತದೆ ಮತ್ತು ಚರ್ಮದ ಗುಣಮಟ್ಟದಲ್ಲಿ ವ್ಯತ್ಯಾಸವಾಗುತ್ತದೆ.

ಪರಿಹಾರ: ಘಂಟೆಗಟ್ಟಲೆ ಫೋನಿನಲ್ಲಿ ಮಾತನಾಡುವುದನ್ನು ತಡೆಯಲಾಗದಿದ್ದರೆ, ಕಡಿಮೆ ತೂಕದ ಹೆಡ್ ಫೋನುಗಳನ್ನು ಉಪಯೋಗಿಸಿ.

ಎಚ್ಚರ: ಸ್ಮಾರ್ಟ್ ಫೋನ್ ಬಳಕೆ ನಿಮ್ಮ ಚರ್ಮದ ವಯಸ್ಸು ಹೆಚ್ಚಿಸುತ್ತಿದೆ.

ಫೋನ್ ಮುಟ್ಟುವುದನ್ನು ಕಡಿಮೆ ಮಾಡಿ.

ನಿಮ್ಮ ಮೊಬೈಲ್ ಫೋನುಗಳು ತೇವಾಂಶದಿಂದ ಹಾನಿಗೊಳಗಾಗುತ್ತದೆ. ತೇವಾಂಶ ವಾತಾವರಣದಲ್ಲಿರುತ್ತದೆ.

ಫೋನಿನ ಮೇಲಿರುವ ಬ್ಯಾಕ್ಟೀರಿಯಾಗಳು ನಿಮ್ಮ ಮುಖದ ನಾಜೂಕು ಚರ್ಮಕ್ಕೆ ತಗುಲುತ್ತದೆ, ಫೋನಿನಲ್ಲಿ ಮಾತನಾಡುವಾಗ. ಇದರಿಂದಾಗಿ ನಿಮ್ಮ ಮುದ್ದು ಮುಖದ ಚರ್ಮದಲ್ಲಿ ಮೊಡವೆ ಮತ್ತು ಬ್ಲ್ಯಾಕ್ ಹೆಡ್ ಗಳು ಉಂಟಾಗುತ್ತವೆ.

ಪರಿಹಾರ: ಹೆಡ್ ಸೆಟ್ ಅಥವಾ ಹಿಯರ್ ಬಡ್ ಉಪಯೋಗಿಸುವುದಷ್ಟೇ ಇದಕ್ಕಿರುವ ಪರಿಹಾರ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಚ್ಚರ: ಸ್ಮಾರ್ಟ್ ಫೋನ್ ಬಳಕೆ ನಿಮ್ಮ ಚರ್ಮದ ವಯಸ್ಸು ಹೆಚ್ಚಿಸುತ್ತಿದೆ.

ಚಿಕ್ಕ ಅಕ್ಷರಗಳನ್ನು ಓದಬೇಡಿ.

ಸತತವಾಗಿ ಸಣ್ಣ ಅಕ್ಷರಗಳನ್ನು ಮೊಬೈಲಿನಲ್ಲಿ ಓದುವುದು ಅಥವಾ ಇಡೀ ದಿನ ಚಿಕ್ಕ ಪರದೆಯಲ್ಲಿ ಗೆಳೆಯರೊಡನೆ ಚಾಟ್ ಮಾಡುವುದು ಕಣ್ಣನ್ನು ಕಿರಿದಾಗಿಸುತ್ತದೆ ಮತ್ತು ಹುಬ್ಬುಗಳ ರೂಪನ್ನೂ ಬದಲಿಸುತ್ತದೆ.

ಈ ರೀತಿ, ನಮ್ಮ ದಿನನಿತ್ಯದ ಸಂಗಾತಿ ಮೊಬೈಲ್ ಫೋನಿನ ಸತತ ಬಳಕೆಯು ಹಣೆಯ ಮೇಲಿನ ಮತ್ತು ಕಣ್ಣ ಸುತ್ತಲ ಚರ್ಮವನ್ನು ಸುಕ್ಕಾಗಿಸುತ್ತದೆ.

ಪರಿಹಾರ: ನಿಮ್ಮ ಸ್ಮಾರ್ಟ್ ಫೋನಿನ ಅಕ್ಷರಗಳ ಗಾತ್ರವನ್ನು ಹೆಚ್ಚಿಸುವುದು ಇದಕ್ಕಿರುವ ಪರಿಹಾರ.

ಎಚ್ಚರ: ಸ್ಮಾರ್ಟ್ ಫೋನ್ ಬಳಕೆ ನಿಮ್ಮ ಚರ್ಮದ ವಯಸ್ಸು ಹೆಚ್ಚಿಸುತ್ತಿದೆ.

ಮೊಬೈಲಿನ ನೀಲಿ ಬೆಳಕನ್ನು ಸಾಧ್ಯವಾದಷ್ಟು ತಡೆಯಿರಿ.

ಮೊಬೈಲಿನಿಂದ ಹೊರಹೊಮ್ಮುವ ನೀಲಿ ಬೆಳಕು ಮನುಷ್ಯನ ದೇಹಕ್ಕೆ ಬಹಳ ಅಪಾಯಕಾರಿ. ಈ ನೀಲಿ ಬೆಳಕು ಯು.ವಿ ಬೆಳಕಿನ ಭಾಗ.

ಯು.ವಿ ಬೆಳಕು ಮನುಷ್ಯ ದೇಹದ ಮೇಲೆ ನಾನಾ ಪರಿಣಾಮಗಳನ್ನು ಬೀರುತ್ತದೆ. ಈ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಮೆಲಟೋನಿನ್ ಉತ್ಪಾದನೆ ಹೆಚ್ಚಾಗುತ್ತದೆ, ಮನುಷ್ಯನ ನಿದ್ರಾ ಚಕ್ರದ ಮೇಲೆ ಪರಿಣಾಮ ಬೀರುತ್ತದೆ.

ಪರಿಹಾರ: ನಿಮ್ಮ ಮುಖದ ಮೇಲೆ ಮೊಡವೆ, ಬ್ಲ್ಯಾಕ್ ಹೆಡ್ ಮೂಡದೆ ನಿಮ್ಮ ಚರ್ಮವು ಸುಕ್ಕುಗಟ್ಟದೆ ಇರಬೇಕಾದರೆ ನೀವು ಸರಿಯಾಗಿ ನಿದ್ರೆ ಮಾಡಬೇಕು. ಅಷ್ಟೇ!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here are some ways how mobile phones are affecting your skin causing aging. Take a look!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X