Subscribe to Gizbot

ಟಿಪ್ಸ್: ಜಿಯೋ4ಜಿವಾಯ್ಸ್ ಬಳಸಿ ಕರೆಮಾಡುವುದು ಹೇಗೆ?

Written By:

ರಿಲಾಯನ್ಸ್ ಜಿಯೋ ಭಾರತದಲ್ಲಿ ತನ್ನ ಮೋಡಿ ಮಾಡಿ ಹೆಚ್ಚು ಕಡಿಮೆ ಒಂದು ತಿಂಗಳೇ ಮುಗಿದಿದೆ. ಜಿಯೋದ ಅದ್ಭುತ ಆಫರ್‌ಗಳು ಇತರ ಟೆಲಿಕಾಮ್ ಸಂಸ್ಥೆಗಳ ಮೇಲೆ ಕೂಡ ಪ್ರಭಾವ ಬೀರಿ ಅವುಗಳೂ ಕೂಡ ಅತ್ಯಾಕರ್ಷಕ ಆಫರ್‌ಗಳನ್ನು ಬಳಕೆದಾರರಿಗೆ ನೀಡುವಂತೆ ಮಾಡಿದೆ. ಆದರೂ ಜಿಯೋವನ್ನು ತಗ್ಗಿಸಲು ಇವುಗಳಿಂದ ಸಾಧ್ಯವಾಗುತ್ತಿಲ್ಲ ಎಂಬುದು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯಾಗಿದೆ.

ಓದಿರಿ: ಜಿಯೋ ಕುರಿತ ಹತ್ತು ಸಂಗತಿಗಳು ನೀವು ತಿಳಿದಿದ್ದರೆ ಉತ್ತಮ

ಜಿಯೋ ಸಿಮ್ ಅನ್ನು ಬಳಸಲು ನಿಮ್ಮ ಸ್ಮಾರ್ಟ್‌ಫೋನ್ ಸಂಪೂರ್ಣವಾಗಿ 4ಜಿ ಯದ್ದಾಗಿರಬೇಕು ಇಲ್ಲವೇ ಜಿಯೋ ನೀಡುತ್ತಿರುವ ಎಲ್‌ವೈಎಫ್ ಸ್ಮಾರ್ಟ್‌ಫೋನ್ ಅನ್ನು ನೀವು ಬಳಸಬೇಕು. ನಿಮ್ಮ ಫೋನ್ 4ಜಿ ಗೆ ಬೆಂಬಲಿಸದೇ ಇದ್ದ ಸಂದರ್ಭದಲ್ಲಿ ಕೂಡ ಎರಡು ಆಯ್ಕೆಗಳನ್ನು ಅನುಸರಿಸಿ ಸಿಮ್ ಕಾರ್ಯನಿರ್ವಹಣೆಗೊಳ್ಳುವಂತೆ ಮಾಡಬಹುದಾಗಿದೆ ಅದು ಹೇಗೆ ಎಂಬುದನ್ನು ಕೆಳಗಿನ ವಿಧಾನದಿಂದ ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಜಿಯೋ4ಜಿ ಸರ್ವೀಸ್ ಅಪ್ಲಿಕೇಶನ್ ಅನ್ನು ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ. ನೀವು 3ಜಿಯನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ನಿಮ್ಮ ಜಿಯೋ ಫೈ ನೆಟ್‌ವರ್ಕ್‌ಗೆ ಸಂಪರ್ಕವನ್ನು ಪಡೆದುಕೊಳ್ಳುವಂತೆ ಅದು ನಿಮ್ಮನ್ನು ಕೇಳುತ್ತದೆ.

ಜಿಯೋ ಸಂಪರ್ಕ

ಜಿಯೋ ಸಂಪರ್ಕ

ನಿಮ್ಮದು 4ಜಿ ಫೋನ್ ಆಗಿದ್ದರೆ ಜಿಯೋಗೆ ಸಂಪರ್ಕವನ್ನು ಪಡೆದುಕೊಳ್ಳಲು ಅದು 4ಜಿ ಯನ್ನು ಉಪಯೋಗಿಸುತ್ತದೆ. ಅಪ್ಲಿಕೇಶನ್ ಸಂಪರ್ಕವನ್ನು ಪಡೆದುಕೊಂಡ ನಂತರ, ನಿಮ್ಮ ಜಿಯೋ ಸಂಪರ್ಕವನ್ನು ಇದು ಪರಿಶೀಲಿಸುತ್ತದೆ ನಂತರ ಗೆಟ್ ಸ್ಟಾರ್ಟೆಡ್ ಅನ್ನು ಟ್ಯಾಪ್ ಮಾಡಿ. ನಂತರ ಜಿಯೋವನ್ನು ನಿಮ್ಮ ಡೀಫಾಲ್ಟ್ ಎಸ್‌ಎಮ್‌ಎಸ್ ಅಪ್ಲಿಕೇಶನ್‌ನಂತೆ ಮಾಡಿ. ನಿಮಗೆ ಅಗತ್ಯವಿಲ್ಲ ಎಂದಾದಲ್ಲಿ ನೊವನ್ನು ಸ್ಪರ್ಶಿಸಬಹುದಾಗಿದೆ.

ಜಿಯೋ4ಜಿ ವಾಯ್ಸ್‌ ಅಪ್ಲಿಕೇಶನ್‌ನಲ್ಲಿ ಕರೆಮಾಡುವುದು ಹೇಗೆ?

ಜಿಯೋ4ಜಿ ವಾಯ್ಸ್‌ ಅಪ್ಲಿಕೇಶನ್‌ನಲ್ಲಿ ಕರೆಮಾಡುವುದು ಹೇಗೆ?

ಸಂಪರ್ಕವನ್ನು ಟ್ಯಾಪ್ ಮಾಡಿ. ನಿಮ್ಮ ಕಿವಿಯ ಸಮೀಪ ಫೋನ್ ಅನ್ನು ತೆಗೆದುಕೊಂಡು ಹೋಗಿ.
ಇನ್ನೊಬ್ಬ ಜಿಯೋ ಬಳಕೆದಾರರಿಗೆ ನೀವು ಕರೆಮಾಡುತ್ತಿದ್ದೀರಿ ಎಂದಾದಲ್ಲಿ, "ಪ್ರಿಪೇರ್" ಕಾಲ್ ಅನ್ನು ಮಾಡಬಹುದು.
ಕ್ಯಾಮೆರಾ ಐಕಾನ್ ಸ್ಪರ್ಶಿಸಿ ಫೋಟೋ ಕೂಡ ಕಳುಹಿಸಬಹುದಾಗಿದೆ, ಲೊಕೇಶನ್ ಐಕಾನ್ ನಿಮ್ಮ ಲೊಕೇಶನ್ ಕಳುಹಿಸಲು ಸಹಕಾರಿಯಾದುದು. ಅರ್ಜೆಂಟ್ ಐಕಾನ್ ತುರ್ತು ಕರೆಗಳಿಗೆ ಬಳಕೆ ಮಾಡಬಹುದು.
ವೀಡಿಯೊ ಕರೆ ಮಾಡಲು ವೀಡಿಯೊ ಐಕಾನ್ ತಟ್ಟಿರಿ
ಕೆಳಗಿನ ಬಲಭಾಗದಲ್ಲಿರುವ ಫೋನ್ ಐಕಾನ್ ಸ್ಪರ್ಶಿಸಿ ವಾಯ್ಸ್ ಕಾಲ್ ಅನ್ನು ಮಾಡಬಹುದಾಗಿದೆ.

ವೋಲ್ಟ್ ಫೋನ್ ಇದ್ದಲ್ಲಿ ಜಿಯೋ4ಜಿ ವಾಯ್ಸ್ ಅಪ್ಲಿಕೇಶನ್ ಬೇಕೇ?

ವೋಲ್ಟ್ ಫೋನ್ ಇದ್ದಲ್ಲಿ ಜಿಯೋ4ಜಿ ವಾಯ್ಸ್ ಅಪ್ಲಿಕೇಶನ್ ಬೇಕೇ?

ನಿಮ್ಮ ನಾರ್ಮಲ್ ಫೋನ್ ಡಯಲರ್ ಅನ್ನು ಬಳಸಿಕೊಂಡು ಕರೆಮಾಡಬಹುದಾಗಿದೆ. ಜಿಯೋ4ಜಿವಾಯ್ಸ್ ಕೆಲವೊಂದು ಹೆಚ್ಚುವರಿ ಫೀಚರ್‌ಗಳನ್ನು ಪಡೆದುಕೊಂಡಿದ್ದು, ನೀವು ಇದನ್ನು ತಿರಸ್ಕರಿಸಬಹುದಾಗಿದೆ.

ಫೋನ್ 4ಜಿ ಹೊಂದಿದೆ ಆದರೆ ವೋಲ್ಟ್ ಇಲ್ಲ

ಫೋನ್ 4ಜಿ ಹೊಂದಿದೆ ಆದರೆ ವೋಲ್ಟ್ ಇಲ್ಲ

ನಿಮ್ಮ ಫೋನ್ ವೋಲ್ಟ್ ಪ್ರಮಾಣಕ್ಕೆ ಬೆಂಬಲವನ್ನು ನೀಡುತ್ತಿಲ್ಲ ಎಂಬ ಸಂದರ್ಭದಲ್ಲಿ ಕೂಡ ಜಿಯೋ ನೆಟ್‌ವರ್ಕ್‌ನಲ್ಲಿ ಕರೆಗಳನ್ನು ಪ್ಲೇಸ್ ಮಾಡಲಾಗುವುದಿಲ್ಲ. ಹೆಚ್ಚಿನ ಸ್ನ್ಯಾಪ್‌ಡ್ರ್ಯಾಗನ್ ಹೊಂದಿರುವ 4ಜಿ ಫೋನ್‌ಗಳು ವೋಲ್ಟ್ ಅನ್ನು ಬೆಂಬಲಿಸುತ್ತವೆ.

3ಜಿ ಫೋನ್ ಇದ್ದು, ಜಿಯೋ4ಜಿವಾಯ್ಸ್ ಬಳಸಬಹುದೇ?

3ಜಿ ಫೋನ್ ಇದ್ದು, ಜಿಯೋ4ಜಿವಾಯ್ಸ್ ಬಳಸಬಹುದೇ?

ನಿಮ್ಮ ಬಳಿ 3ಜಿ ಫೋನ್ ಇದ್ದಲ್ಲಿ, ನಿಮ್ಮ ಹ್ಯಾಂಡ್‌ಸೆಟ್‌ನಲ್ಲಿ ನೇರವಾಗಿ ರಿಲಾಯನ್ಸ್ ಜಿಯೋವನ್ನು ಬಳಸಲಾಗುವುದಿಲ್ಲ. ಜಿಯೋ ವೈಫೈ ಹಾಟ್‌ಸ್ಪಾಟ್ ಅನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಫೋನ್ ಅನ್ನು ಇದಕ್ಕೆ ಸಂಪರ್ಕಪಡಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
you either have to have a Jio SIM in your phone, or be connected to a JioFi device. Here's how it works.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot