ಚ್ಯಾಂಪ್ ಒನ್ ಸಿ1 ಫೋನಿನ ಮೊದಲ ಫ್ಲಾಷ್ ಸೇಲ್ ತಡವಾಗಿದೆ.

|

ಕಳೆದ ಕೆಲವು ದಿನಗಳಿಂದ 501 ರುಪಾಯಿಯ ಫೋನೆಂದು ಸುದ್ದಿ ಮಾಡುತ್ತಿದ್ದ ಫೋನ್ ಚ್ಯಾಂಪ್ ಒನ್ ಸಿ1. ಅದರ ಅಧಿಕೃತ ವೆಬ್ ಪುಟದ ಪ್ರಕಾರ ಅದರ ಫ್ಲಾಷ್ ಸೇಲ್ ಸೆಪ್ಟೆಂಬರ್ ಎರಡರಂದೇ ನಡೆಯಬೇಕಿತ್ತು.

ಚ್ಯಾಂಪ್ ಒನ್ ಸಿ1 ಫೋನಿನ ಮೊದಲ ಫ್ಲಾಷ್ ಸೇಲ್ ತಡವಾಗಿದೆ.

ಆದರೆ, ನಿರೀಕ್ಷೆಯಂತೆಯೇ, ಚ್ಯಾಂಪ್ ಒನ್ ಸಿ1ನ ಮಾರಾಟವಾಗಲಿಲ್ಲ. "ಚ್ಯಾಂಪ್ ಒನ್ ಇಂಡಿಯಾದ ಬಗೆಗಿನ ನಿಮ್ಮ ಆಸಕ್ತಿ ಮತ್ತು ನಂಬುಗೆಯನ್ನು ನಾವು ಗೌರವಿಸುತ್ತೇವೆ, ಕೆಲವೊಂದು ತಾಂತ್ರಿಕ ಕಾರಣಗಳಿಂದ ಫ್ಲಾಷ್ ಸೇಲ್ ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡುತ್ತಿದ್ದೇವೆ. ಅತಿ ಶೀಘ್ರದಲ್ಲಿ ಮತ್ತೆ ಬರುತ್ತೇವೆ" ಎಂದು ಕಂಪನಿಯ ವೆಬ್ ಪುಟದಲ್ಲಿನ ಸಂದೇಶ ತಿಳಿಸುತ್ತದೆ.

ಓದಿರಿ: ಜಿಯೋ ಚಾಟ್ ಹಿಸ್ಟ್ರಿಯನ್ನು ಕ್ಲಿಯರ್ ಮಾಡುವುದು ಹೇಗೆ?

ಚ್ಯಾಂಪ್ ಒನ್ ಈ ಮುಂಚೆ ನೀಡಿದ್ದ ಮಾಹಿತಿಯ ಪ್ರಕಾರ, ಈ ಸ್ಮಾರ್ಟ್ ಫೋನಿನಲ್ಲಿ ಬೆರಳಚ್ಚು ಸಂವೇದಕ ಹಾಗೂ 4ಜಿ ಎಲ್.ಟಿ.ಇ ಇರಲಿದೆ. ಈ ಫೋನಿನ ನಿಜವಾದ ಬೆಲೆ 7,999 ರುಪಾಯಿಗಳು, ನೋಂದಾಯಿಸಿಕೊಂಡ ಗ್ರಾಹಕರಿಗೆ ಸೆಪ್ಟೆಂಬರ್ ಎರಡರಂದು ಮಾತ್ರ 501 ರುಪಾಯಿಗೆ ನೀಡುತ್ತೇವೆ ಎಂದು ಕಂಪನಿ ತಿಳಿಸಿತ್ತು.

ಓದಿರಿ: ಜಿಯೋ ಲಾಂಚ್ ಆಫರ್: ನಿಮಗೆ ಗೊತ್ತಿರದ ಬಹಳಷ್ಟು ಸೇವೆಗಳು ಇಲ್ಲಿವೆ

ಇನ್ನೂ ಅನೇಕರಿಗಿದ್ದಂತೆ ನಮಗೂ ಈ ಫ್ಲಾಷ್ ಸೇಲ್ ನಡೆಯುವ ಕುರಿತು ಅನುಮಾನಗಳಿದ್ದವು. ನಮಗೆ ಗೊತ್ತಿರುವ ಚ್ಯಾಂಪ್ ಒನ್ ಸಿ1 ಬಗ್ಗೆ ಒಂದಷ್ಟು ಮಾಹಿತಿ ಕೊಟ್ಟಿದ್ದೇವೆ. ಗಮನಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೋಂದಾವಣೆ ಶುರುವಾಗಿಲ್ಲ.

ನೋಂದಾವಣೆ ಶುರುವಾಗಿಲ್ಲ.

ಚ್ಯಾಂಪ್ ಒನ್ ನೋಂದಾಯಿಸಿದ ಗ್ರಾಹಕರಿಗೆ ಸೆಪ್ಟೆಂಬರ್ ಎರಡಕ್ಕೆ 501 ರುಪಾಯಿಗೆ ಫೋನ್ ನೀಡುವುದಾಗಿ ತಿಳಿಸಿತ್ತು. ನೋಂದಾವಣೆ 24 ಘಂಟೆಗಳಲ್ಲಿ ಪ್ರಾರಂಭವಾಗುತ್ತದೆ ಎಂದು ಕಂಪನಿ ತಿಳಿಸಿತ್ತಾದರೂ, ನಾಲ್ಕು ದಿನದಿಂದ ಯಾವ ಸೂಚನೆಯೂ ಇಲ್ಲ.

ಮತ್ತೆ ಯಾವಾಗ ಬರುತ್ತಾರೆ?

ಮತ್ತೆ ಯಾವಾಗ ಬರುತ್ತಾರೆ?

ಸ್ಮಾರ್ಟ್ ಫೋನ್ ಫ್ಲಾಷ್ ಸೇಲ್ ತಡವಾಗಿದೆ ಮತ್ತು ಆದಷ್ಟು ಶೀಘ್ರ ಬರುತ್ತೇವೆ ಎಂದು ಚ್ಯಾಂಪ್ ಒನ್ ಹೇಳಿದ್ದರೂ, ನಿಖರವಾಗಿ ಏನನ್ನೂ ಹೇಳಿಲ್ಲ ಎನ್ನುವುದನ್ನು ಗಮನಿಸಬೇಕು.

ಏನಿದು ಯೋಚನೆ?

ಏನಿದು ಯೋಚನೆ?

ಆನ್ ಲೈನ್ ಪೇಮೆಂಟ್ ಪಡೆಯದ ಕಂಪನಿಯು ಕ್ಯಾಷ್ ಆನ್ ಡೆಲಿವರಿ ಮೂಲಕ ಮಾತ್ರ ಮಾರಾಟ ಮಾಡುವುದಾಗಿ ತಿಳಿಸಿತ್ತು. ಈಗ ಫ್ಲಾಷ್ ಸೇಲ್ ಅನ್ನು ನಿಲ್ಲಿಸಿರುವುದ್ಯಾಕೆ? ನೋಂದಣಿಯನ್ನು ಬ್ಲಾಕ್ ಮಾಡಿರುವುದ್ಯಾಕೆ? ಜೊತೆಗೆ ಈ ಚ್ಯಾಂಪ್ ಒನ್ ಸಿ1 ಅನ್ನು ಪರಿಚಯಿಸಿದ ಹಿಂದಿನ ಯೋಚನೆ ಏನು? ಈ ಪ್ರಶ್ನೆಗಳಿಗ್ಯಾವುದಕ್ಕೂ ಉತ್ತರವಿಲ್ಲ.

ಟ್ಯಾಬ್ಲೆಟ್ ಹಾಗೂ ವಾಚ್ ವೆಬ್ ಪುಟದಲ್ಲಿ ಕಾಣಿಸುತ್ತಿಲ್ಲ.

ಟ್ಯಾಬ್ಲೆಟ್ ಹಾಗೂ ವಾಚ್ ವೆಬ್ ಪುಟದಲ್ಲಿ ಕಾಣಿಸುತ್ತಿಲ್ಲ.

ಚ್ಯಾಂಪ್ ಒನ್ ನ ವೆಬ್ ಪುಟದಲ್ಲಿ ಈ ಮುಂಚೆ ಟ್ಯಾಬ್ಲೆಟ್ ಮತ್ತು ವಾಚ್ ಇತ್ತು, ಅವುಗಳ ಗುಣಲಕ್ಷಣಗಳನ್ನೂ ಪಟ್ಟಿ ಮಾಡಿದ್ದರು. ಈಗ ವೆಬ್ ಪುಟದಲ್ಲಿ ಫ್ಲಾಷ್ ಸೇಲ್ ತಡವಾಗುತ್ತದೆ ಎನ್ನುವುದನ್ನು ಹೊರತುಪಡಿಸಿ ಮತ್ಯಾವ ಪುಟವೂ ಇಲ್ಲ.

Best Mobiles in India

English summary
ChampOne C1 smartphone priced at Rs 501 was creating a buzz in the Indian market. Now, the first flash sale of the smartphone has been delayed and there is no word on when it will be sold. Take a look!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X