Subscribe to Gizbot

ಸ್ಯಾಮ್‌ಸಂಗ್ ಗ್ಯಾಲಕ್ಸಿ 4 ಲಾಂಚ್ ದಿನಾಂಕ ರಟ್ಟು

Written By:

ಕಳೆದ ವಾರಾಂತ್ಯದಲ್ಲಿ ನಡೆದ ಐಫೋನ್ 6 ನ ಲಾಂಚ್ ಅಚ್ಚರಿಯ ಬೆರಗು ಕುಂದುವ ಮೊದಲೇ ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ನೋಟ್ 4 ಲಾಂಚ್‌ನ ದಿನಾಂಕವನ್ನು ಹೊರಬಿಟ್ಟಿದೆ. ದಕ್ಷಿಣ ಕೊರಿಯಾ ಮತ್ತು ಚೀನಾದಲ್ಲಿ ಮಾತ್ರವೇ ಗ್ಯಾಲಕ್ಸಿಯನ್ನು ಲಾಂಚ್ ಮಾಡುವ ಅಂದಾಜಿನಲ್ಲಿ ಸ್ಯಾಮ್‌ಸಂಗ್ ಇದೆ ಎಂಬುದು ಮಾಹಿತಿಗಳಿಂದ ದೊರಕಿದ ವಿವರವಾಗಿದೆ.

ಇದನ್ನೂ ಓದಿ: ಸಾಮಾಜಿಕ ತಾಣದಲ್ಲಿ ಪ್ರಸಿದ್ಧರಾಗಿರುವ ಖ್ಯಾತ ಮುಖಂಡರುಗಳು

ಹೆಚ್ಚಿನ ಮಾರುಕಟ್ಟೆಗಳು ಈ ತಿಂಗಳ ನಂತರವಷ್ಟೇ ಗ್ಯಾಲಕ್ಸಿ ನೋಟ್ 4 ಅನ್ನು ಸ್ವೀಕರಿಸುತ್ತಿದ್ದು ಸ್ಯಾಮ್‌ಸಂಗ್ ತನ್ನ ಫೇಸ್‌ಬುಕ್ ಪುಟದಲ್ಲಿ ಗ್ಯಾಲಕ್ಸಿ ನೋಟ್ 4 ಲಾಂಚ್ ಕುರಿತ ಮಾರುಕಟ್ಟೆಗೆ ಅದು ಕಾಲಿಡುವ ಸುಸಂದರ್ಭದ ಮಾಹಿತಿಯನ್ನು ನೀಡಿದೆ.

ಸ್ಯಾಮ್‌ಸಂಗ್‌ನಿಂದ ಗ್ಯಾಲಕ್ಸಿ 4 ಶೀಘ್ರ ಲಾಂಚ್

ಇದನ್ನೂ ಓದಿ: ನಿಟ್ರೋ ಖರೀದಿಯ ಟಾಪ್ ಹತ್ತು ಆನ್‌ಲೈನ್ ಡೀಲ್‌ಗಳು

ಈಗಾಗಲೇ ದೊರಕಿರುವ ಲಾಂಚ್ ದಿನಾಂಕವಿರುವ ಚಿತ್ರದ ಪ್ರಕಾರ, ಚೀನಾದಲ್ಲಿ ಫೋನ್ ಸಪ್ಟೆಂಬರ್ 29 ಕ್ಕೆ ಬಿಡುಗಡೆಯಾಗಲಿದೆ, ನಂತರ ಯುಕೆ, ಜರ್ಮನಿ ಮತ್ತು ಭಾರತವನ್ನು ಅಕ್ಟೋಬರ್ 10 ಕ್ಕೆ ಪ್ರವೇಶಿಸಲಿದೆ. ಇದರ ನಂತರ ಗ್ಯಾಲಕ್ಸಿ ನೋಟ್ 4 ಅಕ್ಟೋಬರ್ 17 ರಂದು ಕೆಲವೊಂದು ಮಾರುಕಟ್ಟೆಗಳಾದ ಯುರೋಪ್, ಉತ್ತರ ಅಮೇರಿಕಾ, ಮಧ್ಯ ಈಸ್ಟ್, ಆಸ್ಟ್ರೇಲಿಯಾ ಮತ್ತು ಏಷ್ಯಾವನ್ನು ಪ್ರವೇಶಿಸಲಿದೆ.

ಇದನ್ನೂ ಓದಿ: ಫೇಸ್‌ಬುಕ್ ಟ್ವಿಟ್ಟರ್‌ನಲ್ಲಿ ದಸರಾ ಸಂಭ್ರಮ

ಇನ್ನು ಅಂತಿಮವಾಗಿ ಕೆಲವೊಂದು ಪ್ರದೇಶಗಳು ಅಕ್ಟೋಬರ್ ಕೊನೆಗೆ ಇಲ್ಲವೇ ನವೆಂಬರ್ ಮೊದಲ ವಾರದಲ್ಲಿ ಫೋನ್ ಅನ್ನು ಸ್ವೀಕರಿಸಲಿವೆ. ಆ ಪ್ರಾಂತ್ಯಗಳು ಮಧ್ಯ ಅಮೇರಿಕಾ ಮತ್ತು ಈಜಿಪ್ಟ್‌ಗಳಾಗಿವೆ. ಬಣ್ಣದಿಂದ ಕೂಡಿರುವ ದಿನಾಂಕವನ್ನು ಸೂಚಿಸುತ್ತಿರುವ ನಕ್ಷೆಯನ್ನು ಸ್ಯಾಮ್‌ಸಂಗ್ ಒದಗಿಸಿದೆ. ಇನ್ನೂ ಕೂಡ ಕಂಪೆನಿಯು ಈ ಘೋಷಣೆಗಳ ಬಗ್ಗೆ ನಿರ್ದಿಷ್ಟ ತೀರ್ಮಾನಗಳನ್ನು ತೆಗೆದುಕೊಂಡಿಲ್ಲ ಎಂಬುದು ಇದುವರೆಗೆ ದೊರಕಿರುವ ಮಾಹಿತಿಯಾಗಿದೆ.

English summary
This article tells about New galaxy 4 smartphone launch and it is showing one map which revealing launch date and market details.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot