ಶಿಯೋಮಿ ಫೋನ್‌ಗಳ ಬೆಲೆಯಲ್ಲಿ ಮಾರುಕಟ್ಟೆಗೆ ಬರಲಿದೆ 'ಗೂಗಲ್ ಪಿಕ್ಸೆಲ್ 3' ಸ್ಮಾರ್ಟ್‌ಫೋನ್?

ಕೇವಲ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳನ್ನಷ್ಟೇ ಮಾರುಕಟ್ಟೆಗೆ ಬಿಡುಗಡೆ ಮಾಡುವ ಪ್ರಖ್ಯಾತ ಟೆಕ್ ದೈತ್ಯ ಗೂಗಲ್‌ ಈ ಬಾರಿ ಮಿಡ್‌ ರೇಂಜ್ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.

|

ಕೇವಲ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳನ್ನಷ್ಟೇ ಮಾರುಕಟ್ಟೆಗೆ ಬಿಡುಗಡೆ ಮಾಡುವ ಪ್ರಖ್ಯಾತ ಟೆಕ್ ದೈತ್ಯ ಗೂಗಲ್‌ ಈ ಬಾರಿ ಮಿಡ್‌ ರೇಂಜ್ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಗೂಗಲ್‌ನ ಮೊದಲೆರಡು ಪಿಕ್ಸೆಲ್ ಸ್ಮಾರ್ಟ್‌ಪೋನ್‌ಗಳಿಗಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ಗೂಗಲ್ ಪಿಕ್ಸೆಲ್ 3 ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಗೂಗಲ್ ಕಂಪೆನಿಯ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಾದ ಗೂಗಲ್ ಪಿಕ್ಸೆಲ್ 1 ಮತ್ತು ಗೂಗಲ್ ಪಿಕ್ಸೆಲ್ 2 ಉತ್ತಮ ದರ್ಜಿಯ ಸ್ಮಾರ್ಟ್‌ಫೋನ್‌ಗಳಾಗಿದ್ದರೂ ಕೂಡ ಮೊಬೈಲ್ ಮಾರುಕಟ್ಟೆಯಲ್ಲಿ ಎಡವಿದ್ದವೂ, ಇದಕ್ಕೆ ಕಾರಣವನ್ನು ಹುಡುಕಿದ ಗೂಗಲ್‌ಗೆ ಸ್ಮಾರ್ಟ್‌ಫೋನ್‌ಗಳ ಬೆಲೆ ಮೊಬೈಲ್ ಮಾರಾಟದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ ಎನ್ನಲಾಗಿದೆ.

ಶಿಯೋಮಿ ಫೋನ್‌ಗಳ ಬೆಲೆಯಲ್ಲಿ ಮಾರುಕಟ್ಟೆಗೆ ಬರಲಿದೆ 'ಗೂಗಲ್ ಪಿಕ್ಸೆಲ್ 3'?

ಹಾಗಾಗಿ, ಪ್ರಖ್ಯಾತ ಮೊಬೈಲ್ ಕಂಪೆನಿ ಎಚ್‌ಟಿಸಿಯನ್ನು ವಶಪಡಿಸಿಕೊಂಡಿರುವ ಗೂಗಲ್ ಕಂಪೆನಿ ಗೂಗಲ್ ಪಿಕ್ಸೆಲ್ ಬ್ರ್ಯಾಂಡ್ ಅಡಿಯಲ್ಲಿ ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ ಎಂದು ವರದಿಯೊಂದು ಹೇಳಿದೆ. ಭಾರತ ಮತ್ತು ಚೀನಾದಂತಹ ಆಂಡ್ರಾಯ್ಡ್ ಪ್ರಿಯ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಗೂಗಲ್ ಕೆಲಸ ಮಾಡುತ್ತಿದೆ ಎನ್ನಲಾಗಿದೆ.

ಚೀನೀಸ್ ಬ್ಲಾಗ್‌ನಲ್ಲಿ ಪ್ರಕಟವಾಗಿರುವ ಒಂದು ವರದಿಯ ಪ್ರಕಾರ, ಗೂಗಲ್‌ನ ಹೊಸ ಪಿಕ್ಸೆಲ್ ಡಿಸೈರ್ ಸಿರೀಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ವಾಲಕಾಮ್‌ನ ಸ್ನ್ಯಾಪ್‌ಡ್ರಾಗನ್‌ 600 ಮತ್ತು ಸ್ನ್ಯಾಪ್‌ಡ್ರಾಗನ್‌ 700 ಚಿಪ್‌ಸೆಟ್ ಇರಲಿವೆ ಎಂದು ತಿಳಿದುಬಂದಿದೆ. ಚಿಪ್‌ಸೆಟ್‌ಗಳಿಗಾಗಿ ಚೀನಾ ಕಂಪೆನಿಗೆ ಗೂಗಲ್ ಬೇಡಿಕೆಯನ್ನು ನೀಡಿದೆ ಎಂಬುದರ ಮೇಲೆ ಈ ಮಾಹಿತಿ ಲೀಕ್ ಆಗಿದೆ.

ಶಿಯೋಮಿ ಫೋನ್‌ಗಳ ಬೆಲೆಯಲ್ಲಿ ಮಾರುಕಟ್ಟೆಗೆ ಬರಲಿದೆ 'ಗೂಗಲ್ ಪಿಕ್ಸೆಲ್ 3'?

ಗೂಗಲ್ ಪಿಕ್ಸಲ್‌ಗಿಂತ ಮುಂಚೆ ಗೂಗಲ್‌ ನೆಕ್ಸಸ್ ಸಿರೀಸ್‌ನ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದ ಗೂಗಲ್ ಇದೀಗ ಎರಡನ್ನೂ ಸೇರಿಸಿ "ಪಿಕ್ಸೆಲ್ ಡಿಸೈರ್" ಆಂಡ್ರಾಯ್ಡ್ ತರುವುದು ಪಕ್ಕಾ ಆಗಿದೆ. ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ಅವರೂ ಕೂಡ ಬಜೆಟ್ ಬೆಲೆಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ತಯಾರಿಕೆ ಬಗ್ಗೆ ಒಲವು ತೋರಿದ್ದನ್ನು ನಾವಿಲ್ಲಿ ನೋಡಬಹುದು.!

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?

ಓದಿರಿ: ಇನ್ಮುಂದೆ ಬೆಂಗಳೂರಿನ ಎಲ್ಲಾ ಬಸ್‌ಸ್ಟಾಂಡ್‌ಗಳಲ್ಲಿಯೂ ಉಚಿತ ''ಮೊಬೈಲ್ ಚಾರ್ಜಿಂಗ್'' ವ್ಯವಸ್ಥೆ!!

Best Mobiles in India

English summary
Google is developing a new Pixel phone, but it isn't a premium device. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X