ರೆಡ್‌ಮಿ ನೋಟ್ 4 ಸೋಲ್ಡ್ ಔಟ್..! ಇಲ್ಲಿದೆ ನೋಡಿ ಬೇರೆ ಫೋನುಗಳು..!

Written By:

ರೆಡ್‌ಮಿ ಪೋನುಗಳು ಆನ್‌ಲೈನಿನಲ್ಲಿ ಮಾರಾಟಕ್ಕೆ ಇಟ್ಟ ಸಂದರ್ಭದಲ್ಲಿ ಬಿಸಿ ದೋಸೆಯಂತೆ ಖಾಲಿಯಾಗಲಿದ್ದು, ಇದೇ ಹಾದಿಯಲ್ಲಿ ಸಾಗಿದ ರೆಡ್‌ಮಿ ನೋಟ್ 4 ಫ್ಲಿಪ್‌ಕಾರ್ಟ್‌ ಸೇಲ್ ನಲ್ಲಿ ಆರಂಭವಾದ ಕೆಲವೇ ಕ್ಷಣಗಳಲ್ಲಿ ಸೋಲ್ಡ್ ಔಟ್ ಆಗಿದೆ, ಈ ಹಿನ್ನಲೆಯಲ್ಲಿ ನೋಟ್ 4 ವಿಶೇಷತೆಗೆ ಸರಿ ಹೊಂದುವ ಕೆಲವು ಪೋನುಗಳು ಇಲ್ಲಿದೆ.

ರೆಡ್‌ಮಿ ನೋಟ್ 4 ಸೋಲ್ಡ್ ಔಟ್..! ಇಲ್ಲಿದೆ ನೋಡಿ ಬೇರೆ ಫೋನುಗಳು..!

ಓದಿರಿ..: ಭೂಮಿಗೆ ಸ್ಯಾಟಿಲೆಟ್ ಹೊದಿಕೆ ಹೊದ್ದಿಸಿ, ಇಂಟರ್‌ನೆಟ್ ಸೇವೆ ನೀಡಲು ಮುಂದಾದ ಗೂಗಲ್ ...!

ಶ್ಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನ್ ಮೂರು ವಿಧದಲ್ಲಿ ಲಭ್ಯವಿದೆ, 2GB RAM/ 32GB ಮೆಮೊರಿ ಇರುವ ಪೋನಿನ ಬೆಲೆ ರೂ. 9,999, 3GB RAM/ 32GB ಮೊಮೊರಿಯ ಪೋನಿನ ಬೆಲೆ 10,999 ರೂಗಳಾಗಿದ್ದು, 4GB RAM/ 64GB ಮೆಮೋರಿ ಇರುವ ಪೋನಿನ ಬೆಲೆ ರೂ. 12,999 ಆಗಿದೆ. ಇದೇ ಮಾದರಿಯಲ್ಲಿ ಲಭ್ಯವಿರುವ ಬೇರೆ ಬೇರೆ ಪೋನುಗಳನ್ನು ನೋಡುವುದಾದರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
# Lenovo K6 Power: ಬೆಲೆ ರೂ. 9,999

# Lenovo K6 Power: ಬೆಲೆ ರೂ. 9,999

ಲಿನೊವೊ ಕಂಪನಿಯ ಕೆ6 ಪವರ್ ಪೋನು 5 ಇಂಚಿನ ಫುಲ್ HD ಡಿಸ್‌ಪ್ಲೇ ಹೊಂದಿದ್ದು, ಸ್ನಾಪ್‌ಡ್ರಾಗನ್ 430 ಆಕ್ಟಾ ಕೋರ್, 3GB RAM ಮತ್ತು 32GB ಇಂಟರ್ನಲ್ ಮೆಮೊರಿ ಹೊಂದಿದೆ. ಹಿಂಭಾಗದಲ್ಲಿ 13MP ಕ್ಯಾಮೆರಾ ಹೊಂದಿದ್ದು, 8MP ಕ್ಯಾಮೆರಾ ಸೆಲ್ಫಿಗಾಗಿದೆ. ಅಲ್ಲದೇ ಒಳ್ಳೆಯ ಬ್ಯಾಟರಿ ಬಾಳಿಕೆಗಾಗಿ 4,000mAh ಬ್ಯಾಟರಿಯನ್ನು ಹೊಂದಿದೆ. ಇದು ಸಹ 4G ಸಪೋರ್ಟ್ ಮಾಡಲಿದೆ.

# LeEco Le 2:ಬೆಲೆ ರೂ. 11,999

# LeEco Le 2:ಬೆಲೆ ರೂ. 11,999

ಲಿಇಕೋ ಕಂಪನಿಯ ಲಿಇಕೋ ಲಿ2 ಸ್ಮಾರ್ಟ್‌ಪೋನ್ 5.5 ಇಂಚಿನ FHD ಡಿಸ್‌ಪ್ಲೇ ಹೊಂದಿದ್ದು, ಸ್ನಾಪ್‌ಡ್ರಾಗನ್ 652 ಆಕ್ಟಾಕೋರ್ ಪ್ರೋಸರ್ ಈ ಪೋನಿನಲ್ಲಿದೆ. ಇದರೊಂದಿಗೆ 3GB RAM ಮತ್ತು 32GB ಇಂಟರ್ನಲ್ ಮೆಮೊರಿ ಸಹ ಇದೆ. ಈ ಪೋನಿನ ಹಿಂಭಾಗದಲ್ಲಿ 16MP, ಮುಂಭಾಗದಲ್ಲಿ 8MP ಕ್ಯಾಮೆರಾ ಇದೆ. ಅಲ್ಲದೇ 3,000mAh ಬ್ಯಾಟರಿ ಇದೆ. ಈ ಪೋನು ಸಹ 4G VoLTE ಸಪೋರ್ಟ್ ಮಾಡಲಿದೆ.

# Coolpad Cool 1: ಬೆಲೆ ರೂ. 13,999

# Coolpad Cool 1: ಬೆಲೆ ರೂ. 13,999

ಕೂಲ್ ಪ್ಯಾಡ್ ಕಂಪನಿ ಲಿಇಕೋ ಜೊತೆ ಸೇರಿ ಕೂಲ್ 1 ಸ್ಮಾರ್ಟ್‌ಪೋನನ್ನು ನಿರ್ಮಾಣ ಮಾಡಿದ್ದು, ಈ ಪೋನಿನ ಹಿಂಭಾಗದಲ್ಲಿ 13MP ಕ್ಯಾಮೆರಾ ಇದ್ದು, ಮುಂಭಾದಲ್ಲಿಯೂ 13 MP ಕ್ಯಾಮೆರಾವನ್ನು, 5.5 ಇಂಚಿನ FHD ಡಿಸ್‌ಪ್ಲೇ ಹೊಂದಿದ್ದು, ಸ್ನಾಪ್‌ಡ್ರಾಗನ್ 652 ಕ್ವಾಡ್ ಕೋರ್ ಪ್ರೋಸೆಸರ್, 4GB RAM ನೊಂದಿಗೆ 32GB ಇಂಟರ್ನಲ್ ಮೆಮೊರಿ ಈ ಪೋನಿನಲ್ಲಿದೆ. ಇದರೊಂದಿಗೆ 3,000mAh ಬ್ಯಾಟರಿ ಇದ್ದು, ಇದು ಸಹ 4G VoLTE ಸಪೋರ್ಟ್ ಮಾಡಲಿದೆ.

# Moto G4 Plus: ಬೆಲೆ ರೂ. 13,999

# Moto G4 Plus: ಬೆಲೆ ರೂ. 13,999

ಮೋಟೊರೋಲಾ ಕಂಪನಿಯ ಮೋಟೊ G ಸರಣಿಯ ಪೋನಿನಲ್ಲಿ G4 Plus ಉತ್ತಮ ಪೋನಾಗಿದ್ದು, ಮುಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೊಂದಿರುವ ಈ ಪೋನು ಎರಡು ಮಾದರಿಯಲ್ಲಿ ಲಭ್ಯವಿದೆ. 2GB RAM ಮತ್ತು 16GB ಪೋನಿನ ಬೆಲೆ ರೂ. 12,499, ಹಾಗೂ 3GB RAM ಮತ್ತು 32GB ಪೋನಿನ ಬೆಲೆ ರೂ. 13,999 ಗಳಾಗಿದೆ. ಇದರಲ್ಲೂ 5.5 ಇಂಚಿನ HD ಡಿಸ್‌ಪ್ಲೇ ಹೊಂದಿದ್ದು, ಹಿಂಭಾಗದಲ್ಲಿ 16MP ಕ್ಯಾಮೆರಾ ಇದ್ದು, ಹಿಂಭಾಗದಲ್ಲಿ 5MP ಕ್ಯಾಮೆರಾ ನೀಡಲಾಗಿದೆ. 3,000mAh ಬ್ಯಾಟರಿ ಸಹ ಇದರಲಿದ್ದು, ಇದು ಸಹ 4G VoLTE ಸಪೋರ್ಟ್ ಮಾಡಲಿದೆ.

# Coolpad Note 5: ಬೆಲೆ ರೂ. 10,999

# Coolpad Note 5: ಬೆಲೆ ರೂ. 10,999

ಕೂಲ್‌ಪ್ಯಾಡ್ ಕಂಪನಿಯ ನೋಟ್ 5 ಸ್ಮಾರ್ಟ್‌ಪೋನ್ ಫಿಂಗರ್‌ಪ್ರಿಂಪ್ ಸ್ಕ್ಯಾನರ್ ಮುಂಭಾಗದಲ್ಲಿದ್ದು, 5.5 ಇಂಚಿನ ಪರದೆಯನ್ನು ಹೊಂದಿದೆ. ಸ್ನಾಪ್‌ಡ್ರಾಗನ್ 617 ಆಕ್ಟಾ ಕೋರ್ ಪ್ರೊಸೆಸರ್, 4GB RAM ಮತ್ತು 32GB ಇಂಟರ್ನಲ್ ಮೊಮೊರಿಯನ್ನು ಹೊಂದಿದೆ. ಈ ಪೋನಿನ ಹಿಂಭಾಗದಲ್ಲಿ 13MP ಕ್ಯಾಮೆರಾ ಇದ್ದು, ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಹೊಂದಿದೆ. 4,000mAh ಬ್ಯಾಟರಿ ಇದರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Couldn’t get your hands on the Redmi Note 4 in the first flash sale? Well, here are six alternatives worth considering. to know more visit kananda.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot