'ನೋಕಿಯಾ ಡಿ1ಸಿ' ಆಂಡ್ರಾಯ್ಡ್ ನ್ಯೂಗಾ ಓಎಸ್‌ ಜೊತೆಗೆ, 3GB RAM

Written By:

ನೋಕಿಯಾ ಈ ವರ್ಷದ(2016) ಅಂತ್ಯದೊಳಗೆ 3 ಆಂಡ್ರಾಯ್ಡ್ ಡಿವೈಸ್‌ಗಳನ್ನು ಪ್ರಕಟಣೆ ಮಾಡಲಿದೆ ಎಂದು ಆಗಸ್ಟ್‌ನಲ್ಲಿ ನೋಕಿಯಾದ ಚೀನ ಅಧ್ಯಕ್ಷ 'ಮೈಕ್‌ ವಾಂಗ್‌'ರವರು ಹೇಳಿದ್ದರು. ಅಂತೆಯೇ ಈಗ 'ನೋಕಿಯಾ ಡಿ1ಸಿ (Nokia D1C)' ಸ್ಮಾರ್ಟ್‌ಫೋನ್‌ ಫೀಚರ್‌ಗಳ ಬಗ್ಗೆ ಮಾಹಿತಿ ಹರಿದಾಡುತ್ತಿದೆ.

ನೋಕಿಯಾ ಫೋನ್ಸ್‌: 'ಓಲ್ಡ್‌ ಈಸ್‌ ಗೋಲ್ಡ್‌ ' ಏಕೆ ಗೊತ್ತೇ?

'ನೋಕಿಯಾ ಡಿ1ಸಿ' ಆಂಡ್ರಾಯ್ಡ್ ನ್ಯೂಗಾ ಓಎಸ್‌ ಜೊತೆಗೆ, 3GB RAM

'ನೋಕಿಯಾ ಡಿ1ಸಿ (Nokia D1C)' ಸ್ಮಾರ್ಟ್‌ಫೋನ್‌ ಸಿಂಗಲ್‌ ಕೋರ್‌ ಟೆಸ್ಟ್‌ನಲ್ಲಿ 682 ಅತಿ ಹೆಚ್ಚಿನ ಸ್ಕೋರ್‌ ಅನ್ನು ಹಾಗು ಮಲ್ಟಿ ಟೆಸ್ಟ್‌ನಲ್ಲಿ 3299 ಸ್ಕೋರ್ ಪಡೆದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಲೇಟೆಸ್ಟ್‌ ಓಎಸ್‌ ಆದ 'ಆಂಡ್ರಾಯ್ಡ್ 7.0 ನ್ಯೂಗಾ' ಆಪರೇಟಿಂಗ್‌ ಸಿಸ್ಟಮ್‌ ಹೊಂದಿದೆ. ಫೋನ್‌ ಆಕ್ಟಾ ಕೋರ್‌ ಕ್ವಾಲ್ಕಂ ಪ್ರೊಸೆಸರ್‌ ಯೋಜಿತವಾಗಿದ್ದು, 1.4GHz ಚಾಲಿತವಾಗಿದೆ. 'ನೋಕಿಯಾ ಡಿ1ಸಿ (Nokia D1C)' ಸ್ಮಾರ್ಟ್‌ಫೋನ್‌ 3GB RAM ಹೊಂದಿದೆ.

ನೋಕಿಯಾ 1100; ಬ್ಯಾಕ್‌ ಟು ಸೇಲ್‌

'ನೋಕಿಯಾ ಡಿ1ಸಿ' ಆಂಡ್ರಾಯ್ಡ್ ನ್ಯೂಗಾ ಓಎಸ್‌ ಜೊತೆಗೆ, 3GB RAM

ಇತ್ತೀಚಿನ ವರದಿಗಳ ಪ್ರಕಾರ ನೋಕಿಯಾ ಎರಡು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಅಭಿವೃದ್ದಿ ಪಡಿಸುತ್ತಿದ್ದು, ನೋಕಿಯಾ 5320 ಮತ್ತು ನೋಕಿಯಾ ಆರ್‌ಎಂ-1490 ಎಂದು ಮಾಹಿತಿ ಹಬ್ಬಿತ್ತು. 'ನೋಕಿಯಾ 5320' ಫೋನ್‌ ಕ್ವಾಡ್‌ಕೋರ್‌ ಪ್ರೊಸೆಸರ್‌ ಜೊತೆಗೆ 2GB RAM ಹೊಂದಿದ್ದು, ನೋಕಿಯಾ ಆರ್‌ಎಂ-1490 ಫೋನ್‌ AMD A8-5545 ಪ್ರೊಸೆಸರ್‌ ಜೊತೆಗೆ 2GB RAM ಹೊಂದಿದೆ ಎಂದು ವರದಿ ಮಾಡಲಾಗಿತ್ತು. ಈ ಎರಡು ಫೋನ್‌ಗಳು ಸಹ ಆಂಡ್ರಾಯ್ಡ್ ಕಿಟ್‌ಕ್ಯಾಟ್‌ ಮತ್ತು ಆಂಡ್ರಾಯ್ಡ್ ಜೆಲ್ಲಿಬೀನ್ ಓಎಸ್‌ ಚಾಲಿತವಾಗಿವೆ ಎಂದು ವಧಂತಿಗಳು ಕೇಳಿಬಂದಿದ್ದವು.

 Read more about:
English summary
Nokia D1C with Android Nougat and 3GB RAM leaked on Geekbench. To know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot