Subscribe to Gizbot

ಗ್ರಾಹಕರು ಆನ್‌ಲೈನ್‌ಲ್ಲಿ ಹೆಚ್ಚು ಹುಡುಕಿರುವ ಸ್ಮಾರ್ಟ್‌ಫೋನ್‌/ಟ್ಯಾಬ್ಲೆಟ್‌ಗಳು

Posted By:

ಸ್ಯಾಮ್‌ಸಂಗ್‌ ಕಂಪೆನಿಯ ಅಭಿಮಾನಿಗಳಿಗೆ ಗುಡ್‌ನ್ಯೂಸ್‌. ಕಳೆದ ವರ್ಷ‌ದಂತೆ ಸ್ಯಾಮ್‌ಸಂಗ್‌‌ ಸ್ಮಾರ್ಟ್‌‌ಫೋನ್‌ಗೆ‌‌‌‌ ಮತ್ತೆ ಅಗ್ರಪಟ್ಟ ದೊರೆತಿದೆ. ಅತೀ ಹೆಚ್ಚು ಗ್ರಾಹಕರು ಇಂಟರ್‌ನೆಟ್‌ನಲ್ಲಿ ಸರ್ಚ್‌‌ ಮಾಡಿದ ಕಂಪೆನಿ ಎಂಬ ಖ್ಯಾತಿಯನ್ನು ಸ್ಯಾಮ್‌ಸಂಗ್‌ ತನ್ನಲ್ಲೇ ಉಳಿಸಿಕೊಂಡಿದೆ.

ಇಂಟರ್‌ನೆಟ್‌ನಲ್ಲಿ ಸರ್ಚ್‌ ಮಾಡಿರುವ ಪ್ರತಿಯೊಂದು ಕೀವರ್ಡ್‌‌ಗಳು ದಾಖಲಾಗುತ್ತದೆ ಎನ್ನುವುದನ್ನು ನೀವು ಓದಿರಬಹುದು. ಈ ಹಿನ್ನೆಲೆಯಲ್ಲಿ ಪುಣೆಯಲ್ಲಿ ಕೇಂದ್ರಸ್ಥಾನ ಹೊಂದಿರುವ ಡಿಜಿಟಲ್‌ ಜಾಹೀರಾತು ತಂತ್ರಜ್ಞಾನ ಕಂಪೆನಿ Inuxu, ಒನ್‌ ಇಂಡಿಯಾದ ಉತ್ಪನ್ನ goprobo.comನಲ್ಲಿ ಗ್ರಾಹಕರು ಅತೀ ಹೆಚ್ಚು ಸರ್ಚ್‌ ಮಾಡಿರುವ ಸ್ಮಾರ್ಟ್‌ಫೋನ್‌‌‌‌‌ ಮತ್ತು ಟ್ಯಾಬ್ಲೆಟ್‌‌‌‌ಗಳನ್ನು ಅಧ್ಯಯನ ಮಾಡಿ ತನ್ನ ವರದಿಯನ್ನು ಪ್ರಕಟಿಸಿದೆ.

ಈ ವರ್ಷ‌ದ ಮೇ ಮತ್ತು ಜೂನ್‌ ತಿಂಗಳ ನಡುವೆ ಗ್ರಾಹಕರು ಹುಡುಕಿದ ಸ್ಮಾರ್ಟ್‌‌‌ಫೋನ್‌‌‌‌‌,ಟ್ಯಾಬ್ಲೆಟ್‌‌ಗಳ ಮಾಹಿತಿಯನ್ನು RAMP(Real Time Audience Management Platform) ಆಧಾರದಲ್ಲಿ ಅಧ್ಯಯನ ನಡೆಸಿ ತನ್ನ ವರದಿಯನ್ನು Inuxu ನೀಡಿದೆ.ಗ್ರಾಹಕರು ಹುಡುಕಿದ ಟಾಪ್‌9 ಸ್ಮಾರ್ಟ್‌ಫೋನ್‌ ಕಂಪೆನಿಗಳಲ್ಲಿ ಸ್ಯಾಮ್‌ಸಂಗ್‌ ಪ್ರಥಮ ಸ್ಥಾನ ಗಳಿಸಿದ್ದರೆ, ಆಪಲ್‌ ದ್ವಿತೀಯ ಸ್ಥಾನಗಳಿಸಿದೆ. ದೇಶಿಯ ಕಂಪೆನಿಗಳಾದ ಮೈಕ್ರೋಮ್ಯಾಕ್ಸ್‌ ಮತ್ತು ಕಾರ್ಬ‌ನ್‌‌‌‌ ಟಾಪ್‌ ಪಟ್ಟಿಯಲ್ಲಿ ಸ್ಥಾನಗಳಿಸಿದ್ದು, ಮೈಕ್ರೋಮ್ಯಾಕ್ಸ್‌ ಐದನೇ ಸ್ಥಾನಗಳಿಸಿದ್ದರೆ,ಕಾರ್ಬ‌ನ್‌ ಎಂಟನೇ ಸ್ಥಾನಗಳಿಸಿದೆ.

ಇನ್ನು ಟ್ಯಾಬ್ಲೆಟ್‌ನಲ್ಲಿ ಆಪಲ್‌ ಐಪ್ಯಾಡ್‌ನ್ನು ಗ್ರಾಹಕರು ಅತೀ ಹೆಚ್ಚು ಸರ್ಚ್ ಮಾಡಿದ್ದಾರೆ.ರೇಸ್‌ನಲ್ಲಿ ಸ್ಯಾಮ್‌ಸಂಗ್‌ ಕಂಪೆನಿಯ ಟ್ಯಾಬ್ಲೆಟ್‌ ಹಿಂದೆ ಬಿದ್ದಿಲ್ಲ. ಟಾಪ್‌ ಪಟ್ಟಿಯಲ್ಲಿ ಸ್ಯಾಮ್‌ಸಂಗ್‌ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಮೈಕ್ರೋಮ್ಯಾಕ್ಸ್‌ ಟ್ಯಾಬ್ಲೆಟ್‌ನ್ನು ಗ್ರಾಹಕರು ಸರ್ಚ್‌ ಮಾಡಿದ್ದು, ಮೂರನೇ ಸ್ಥಾನ ಮೈಕ್ರೋಮ್ಯಾಕ್ಸ್‌ ಪಾಲಾಗಿದೆ.

ಹೀಗಾಗಿ ಗ್ರಾಹಕರು ಯಾವೆಲ್ಲ ಕಂಪೆನಿಯ ಸ್ಮಾರ್ಟ್‌‌ಫೋನ್‌‌ ಮತ್ತು ಟ್ಯಾಬ್ಲೆಟ್‌ನ್ನು ಹೆಚ್ಚಾಗಿ ಹುಡುಕಿದ್ದಾರೆ, ಯಾವ ಕಂಪೆನಿ ಎಷ್ಟನೇ ಸ್ಥಾನದಲ್ಲಿದೆ?ಟ್ಯಾಬ್ಲೆಟ್‌ ಮತ್ತು ಸ್ಮಾರ್ಟ್‌ಫೋನ್‌ನಲ್ಲಿ ಬೇಡಿಕೆ ಕುಸಿದ ಕಂಪೆನಿಗಳ ಮಾಹಿತಿ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್ 4ನಲ್ಲಿ ಅಂಥ ವಿಶೇಷತೆ ಏನಿದೆ?

Click Here For New Gadgets Gallery

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಫೋನ್‌ಲ್ಲಿ ಸ್ಯಾಮ್‌ಸಂಗ್‌ ಕಿಂಗ್‌

ಸ್ಮಾರ್ಟ್‌ಫೋನ್‌ಲ್ಲಿ ಸ್ಯಾಮ್‌ಸಂಗ್‌ ಕಿಂಗ್‌

ಸ್ಯಾಮ್‌ಸಂಗ್‌ ಕಂಪೆನಿಯ ಸ್ಮಾರ್ಟ್‌‌ಫೋನ್‌‌ ಗ್ರಾಹಕರು ಅತೀ ಹೆಚ್ಚಾಗಿ ಹುಡುಕಿದ್ದಾರೆ. ಎರಡನೇ ಸ್ಥಾನವನ್ನು ಆಪಲ್‌ ಐಫೋನ್‌‌, ಮೂರನೇ ಸ್ಥಾನವನ್ನು ನೋಕಿಯಾ ಕಂಪೆನಿ ಪಡೆದುಕೊಂಡಿದ್ದು, ಈ ಕಂಪೆನಿಯ ಸ್ಮಾರ್ಟ್‌‌ಫೋನ್‌‌ಗಳನ್ನು ಗ್ರಾಹಕರು ಸರ್ಚ್‌ ಮಾಡಿದ್ದಾರೆ.

ಟಾಪ್‌ ಐದು ಸ್ಮಾರ್ಟ್‌ಫೋನ್‌ಗಳು

ಟಾಪ್‌ ಐದು ಸ್ಮಾರ್ಟ್‌ಫೋನ್‌ಗಳು


ಒಂದೇ ಸ್ಮಾರ್ಟ್‌ಫೋನ್‌ ಹುಡುಕಿದ್ದರಲ್ಲಿ ನೋಕಿಯಾ ಲ್ಯೂಮಿಯಾ 920 ಪ್ರಥಮ ಸ್ಥಾನವನ್ನುಗಳಿಸಿದೆ. ಆಪಲ್‌ನ ಮೂರು ಐಫೋನ್‌ಗಳು ಟಾಪ್‌ ಐದರಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ಸ್ಯಾಮ್‌ಸಂಗ್‌ ಫೈಟ್‌ ನೀಡಲಿರುವ ಕಂಪೆನಿಗಳು

ಸ್ಯಾಮ್‌ಸಂಗ್‌ ಫೈಟ್‌ ನೀಡಲಿರುವ ಕಂಪೆನಿಗಳು


ಸ್ಯಾಮ್‌ಸಂಗ್‌ಗೆ ನೋಕಿಯಾ,ಸೋನಿ,ಎಚ್‌ಟಿಸಿ ಕಂಪೆನಿಗಳು ಮಾರುಕಟ್ಟೆಯಲ್ಲಿ ಪ್ರಭಲ ಸ್ಫರ್ಧೆ‌ಯನ್ನು ನೀಡುತ್ತಿದೆ ಎಂದು ಅಧ್ಯಯನ ತಿಳಿಸಿದೆ.

 ಬೇಡಿಕೆ ಕಳೆದುಕೊಂಡ ಕಂಪೆನಿಗಳು

ಬೇಡಿಕೆ ಕಳೆದುಕೊಂಡ ಕಂಪೆನಿಗಳು


ಸ್ಯಾಮ್‌ಸಂಗ್‌,ಆಪಲ್‌,ನೋಕಿಯಾ,ಮೈಕ್ರೋಮ್ಯಾಕ್ಸ್‌ ಕಂಪೆನಿಗಳ ಸ್ಮಾರ್ಟ್‌‌ಫೋನ್‌ಗಳ ಮಧ್ಯೆ ಬ್ಲ್ಯಾಕ್‌ಬೆರಿ, ಎಲ್‌ಜಿ,ಕಾರ್ಬ‌ನ್‌ ಕಂಪೆನಿ ಸ್ಮಾರ್ಟ್‌ಫೋನ್‌ಗಳ ಬೇಡಿಕೆ ಕುಸಿದಿದೆ ಎಂದು ಅಧ್ಯಯನ ವರದಿ ನೀಡಿದೆ.

ಟ್ಯಾಬ್ಲೆಟ್‌ನಲ್ಲಿ ಐಪ್ಯಾಡ್‌ ಕಿಂಗ್‌

ಟ್ಯಾಬ್ಲೆಟ್‌ನಲ್ಲಿ ಐಪ್ಯಾಡ್‌ ಕಿಂಗ್‌


ಟ್ಯಾಬ್ಲೆಟ್‌‌ನಲ್ಲಿ ಆಪಲ್‌ ಐಪ್ಯಾಡ್‌ನ್ನು ಗ್ರಾಹಕರು ಹೆಚ್ಚು ಹುಡುಕಿದ್ದಾರೆ. ಆದರೆ ಸ್ಯಾಮ್‌ಸಂಗ್‌ ಎರಡನೇ ಸ್ಥಾನವನ್ನು ಪಡೆದಿದ್ದರೂ ಆಪಲ್‌ ನೇರ ಸ್ಪರ್ಧೆ ನೀಡುತ್ತಿದೆ. ಆಪಲ್‌ ಐಪ್ಯಾಡ್‌ನ್ನು ಶೇ.34.79ರಷ್ಟು ಜನ ಹುಡುಕಿದ್ದರೆ ಶೇ.32.29ರಷ್ಟು ಜನ ಸ್ಯಾಮ್‌ಸಂಗ್‌ ಟ್ಯಾಬ್ಲೆಟ್‌ನ್ನು ಸರ್ಚ್ ಮಾಡಿದ್ದಾರೆ.

ಟಾಪ್‌ ಐದು ಟ್ಯಾಬ್ಲೆಟ್‌ಗಳು

ಟಾಪ್‌ ಐದು ಟ್ಯಾಬ್ಲೆಟ್‌ಗಳು


ಗ್ರಾಹಕರು ಸರ್ಚ್ ಮಾಡಿರುವ ಟಾಪ್‌ ಐದು ಟ್ಯಾಬ್ಲೆಟ್‌ನಲ್ಲಿ ಸ್ಯಾಮ್‌ಸಂಗ್‌ ಕಂಪೆನಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಸ್ಯಾಮ್‌ಸಂಗ್‌ನ ನಾಲ್ಕು ಟ್ಯಾಬ್ಲೆಟ್‌ಗಳನ್ನು ಗ್ರಾಹಕರು ಹೆಚ್ಚಾಗಿ ಸರ್ಚ್‌ ಮಾಡಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ಆಪಲ್‌ಗೆ ಫೈಟ್‌ ನೀಡಲಿರುವ ಕಂಪೆನಿಗಳು

ಆಪಲ್‌ಗೆ ಫೈಟ್‌ ನೀಡಲಿರುವ ಕಂಪೆನಿಗಳು


ಟ್ಯಾಬ್ಲೆಟ್‌ನಲ್ಲಿ ಆಪಲ್‌ ಪ್ರಥಮ ಸ್ಥಾನಗಳಿಸಿದೆಯಾದರೂ ಸ್ಯಾಮ್‌ಸಂಗ್‌ ಸೇರಿದಂತೆ ದೇಶಿಯ ಕಂಪೆನಿಗಳಾದ ಮೈಕ್ರೋಮ್ಯಾಕ್ಸ್‌ ಮತ್ತು ಕಾರ್ಬ‌ನ್‌ ಸ್ಪರ್ಧೆ‌ ನೀಡುತ್ತದೆ ಅಧ್ಯಯನ ತಿಳಿಸಿದೆ.

ಬೇಡಿಕೆ ಕಳೆದುಕೊಂಡ ಕಂಪೆನಿಗಳು

ಬೇಡಿಕೆ ಕಳೆದುಕೊಂಡ ಕಂಪೆನಿಗಳು


ಟ್ಯಾಬ್ಲೆಟ್‌ನಲ್ಲಿ ಆಪಲ್‌,ಸ್ಯಾಮ್‌ಸಂಗ್‌,ಮೈಕ್ರೋಮ್ಯಾಕ್ಸ್‌, ನಡುವೆ ಎಚ್‌ಸಿಎಲ್‌,zync,ಲೆನೆವೋ ಕಂಪೆನಿಯ ಟ್ಯಾಬ್ಲೆಟ್‌ಗಳ ಬೇಡಿಕೆ ಕುಸಿದಿದೆ ಎಂದು ಅಧ್ಯಯನ ತಿಳಿಸಿದೆ.

ಗ್ರಾಹಕರು ಹುಡುಕಿದ ಟಾಪ್‌ ಸ್ಮಾರ್ಟ್‌ಫೋನ್‌/ಟ್ಯಾಬ್ಲೆಟ್‌‌ಗಳು

ಗ್ರಾಹಕರು ಹುಡುಕಿದ ಟಾಪ್‌ ಸ್ಮಾರ್ಟ್‌ಫೋನ್‌/ಟ್ಯಾಬ್ಲೆಟ್‌‌ಗಳು


ಈ ವರ್ಷ‌ದ ಮೇ ಮತ್ತು ಜೂನ್‌ ತಿಂಗಳಲ್ಲಿ ಗ್ರಾಹಕರು goprobo.com ಹುಡುಕಿದ ಸ್ಮಾರ್ಟ್‌‌‌ಫೋನ್‌‌‌‌‌,ಟ್ಯಾಬ್ಲೆಟ್‌‌ಗಳ ಮಾಹಿತಿಯನ್ನು RAMP(Real Time Audience Management Platform) ಆಧಾರದಲ್ಲಿ ಅಧ್ಯಯನ ನಡೆಸಿ ತನ್ನ ವರದಿಯನ್ನು Inuxu ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Click Here For List of New Smartphones And Tablets Price & Specs

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot