5000mAh ಬ್ಯಾಟರಿಯ 'ಪ್ಯಾನಾಸಾನಿಕ್ ಪಿ75' ಫೋನ್‌ ಬೆಲೆ ರೂ 5,990

By Suneel
|

ಪ್ಯಾನಾಸಾನಿಕ್(panasonic) ಈದೀಗ ತಾನೆ 'ಪಿ' ಸೀರೀಸ್‌ನ ಮೊಬೈಲ್‌ ಅನಾವರಣ ಮಾಡಿದ್ದು, ಮೊಬೈಲ್‌ ಮಾರುಕಟ್ಟೆಯಲ್ಲಿ ಅತ್ಯುತ್ತಮ ಫೀಚರ್‌ ಒಳಗೊಂಡ ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ ಇದಾಗಿದೆ.

ಪ್ಯಾನಾಸಾನಿಕ್ ಬಿಡುಗಡೆ ಮಾಡಿರುವ 'ಪಿ' ಸೀರೀಸ್‌ನ ಸ್ಮಾರ್ಟ್‌ಫೋನ್‌ 'ಪ್ಯಾನಾಸಾನಿಕ್‌ ಪಿ75'. ಇದರ ಬೆಲೆ ಕೇವಲ ರೂ 5,990. ಹೊಳೆಯುವ ವಜ್ರದ ಬಣ್ಣ ಮತ್ತು ಮರಳು ಕಪ್ಪು ಬಣ್ಣದಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಲು ಲಭ್ಯವಿದೆ. 'ಪ್ಯಾನಾಸಾನಿಕ್‌ ಪಿ75' ಸ್ಮಾರ್ಟ್‌ಫೋನ್‌ ಖರೀದಿ ಜೊತೆಗೆ ಉಚಿತವಾಗಿ ಬೆಲೆ ರೂ 399 ರ ಸ್ಕ್ರೀನ್‌ ಗಾರ್ಡ್‌ ಸಹ ಬರುತ್ತದೆ. ಬೆಲೆ ಏನೋ ಓಕೆ? ಫೀಚರ್‌ಗಳು ಏನು? ಎಂದು ತಿಳಿಯಲು ಮುಂದೆ ಸ್ಲೈಡರ್‌ ಓದಿರಿ.

ಭಾರತದಲ್ಲಿ ಬಜೆಟ್ ಬೆಲೆ ರೂ.6,999 ಕ್ಕೆ 'ಲೆನೊವೊ ವೈಬ್ ಕೆ5' ಸ್ಮಾರ್ಟ್‌ಫೋನ್‌

1

1

ಕೇವಲ ಬೆಲೆ ರೂ 5,990 ಗೆ ಖರೀದಿಸಬಹುದಾದ ಸ್ಮಾರ್ಟ್‌ಫೋನ್‌ ನ ಅತ್ಯುತ್ತಮ ಪ್ರಮುಖ ಫೀಚರ್‌ ಎಂದರೆ ಇದರ ಬ್ಯಾಟರಿ ಸಾಮರ್ಥ್ಯ 5000mAh. ಇತ್ತೀಚೆಗೆ ಬಿಡುಗಡೆಯಾದ ಲೆನೊವೊ ಕಂಪನಿಯ 'ಲೆನೊವೊ ವೈಬ್ ಕೆ5' ಬೆಲೆ 6,999 ರೂ ಆದರೂ ಸಹ ಅದರ ಬ್ಯಾಟರಿ ಸಾಮರ್ಥ್ಯ ಕೇವಲ 2750mAh. ಅದಕ್ಕೆ ಹೋಲಿಸಿದರೆ ಬ್ಯಾಟರಿ ಸಾಮರ್ಥ್ಯದಲ್ಲಿ 'ಪ್ಯಾನಾಸಾನಿಕ್‌ ಪಿ75' ಸ್ಮಾರ್ಟ್‌ಫೋನ್‌ ಎರಡರಷ್ಟು ಹೆಚ್ಚು ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಇದೇ ವರ್ಷ ಬಿಡುಗಡೆ ಆದ 'ಆಸಸ್‌ ಜೆನ್‌ಫೋನ್‌ ಮ್ಯಾಕ್ಸ್‌' 5000mAh ಬ್ಯಾಟರಿ ಹೊಂದಿದ್ದರು, ಬೆಲೆ 9,999.

2

2

'ಪ್ಯಾನಾಸಾನಿಕ್‌ ಪಿ75' ಸೇಲ್ UI ಆಧಾರಿತ ಆಂಡ್ರಾಯ್ಡ್ 5.1 ಲಾಲಿಪಪ್ ಆಪರೇಟಿಂಗ್‌ ಸಿಸ್ಟಮ್‌ ಹೊಂದಿದೆ.

3

3

5 ಇಂಚಿನ HD IPS ಡಿಸ್‌ಪ್ಲೇ ಹೊಂದಿದ್ದು, 1.3GHz ಕ್ವಾಡ್‌ಕೋರ್‌ ಪ್ರೊಸೆಸರ್ಸ್‌ ಪ್ರಾಯೋಜಿತವಾಗಿದೆ. 1GB RAM ಹೊಂದಿದೆ.

4

4

8mp ಆಟೋಫೋಕಸ್‌ ಹಿಂಭಾಗ ಕ್ಯಾಮೆರಾ ಮತ್ತು 5mp ಮುಂಭಾಗ ಕ್ಯಾಮೆರಾ ಹೊಂದಿದೆ.

5

5

'ಪ್ಯಾನಾಸಾನಿಕ್‌ ಪಿ75' ಸ್ಮಾರ್ಟ್‌ಫೋನ್ 8GB ಇನ್‌ಬಿಲ್ಟ್‌ ಸ್ಟೋರೇಜ್‌ ಹೊಂದಿದ್ದು, ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 32GB ವರೆಗೂ ಸ್ಟೋರೇಜ್ ಸಾಮರ್ಥ್ಯ ಹೆಚ್ಚಿಸಬಹುದು.

6

6


* 'ಪ್ಯಾನಾಸಾನಿಕ್‌ ಪಿ75' 9.65mm ದಪ್ಪ ಮತ್ತು 157 ಗ್ರಾಂ ತೂಕವಿದೆ.
* ವೈಫೈ, ಬ್ಲೂಟೂತ್‌ 4.0, ಮೈಕ್ರೋUSB ಸಪೋರ್ಟ್ ಮಾಡುತ್ತದೆ.
* 3G, 2G ನೆಟ್‌ವರ್ಕ್‌ ಸಪೋರ್ಟ್‌ ಜೊತೆಗೆ ಜಿಪಿಎಸ್‌ ನಾವಿಗೇಷನ್‌ ಸಪೋರ್ಟ್‌ ಮಾಡುತ್ತದೆ.

7

7

'ಪ್ಯಾನಾಸಾನಿಕ್‌ ಪಿ75' ಅತಿಯಾದ ವೇಗೋತ್ಕರ್ಷಕ, ವ್ಯಾಪಕ ಬೆಳಕಿನ ಸೆನ್ಸಾರ್‌, ಸಾಮೀಪ್ಯ ಸೆನ್ಸಾರ್‌ ಹೊಂದಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

'ಫ್ಲೈಯಿಂಗ್ ಸಾಸರ್ ಸ್ಮಾರ್ಟ್‌ಫೋನ್‌' ಖರೀದಿಗೆ ರೆಡಿ!!'ಫ್ಲೈಯಿಂಗ್ ಸಾಸರ್ ಸ್ಮಾರ್ಟ್‌ಫೋನ್‌' ಖರೀದಿಗೆ ರೆಡಿ!!

ಪ್ರಪಂಚದಲ್ಲಿರುವ ಅತಿ ಹೆಚ್ಚು ಬೆಲೆಯ ಮೊಬೈಲ್‌ಗಳು ಯಾವುವು ಗೊತ್ತೇ? ಪ್ರಪಂಚದಲ್ಲಿರುವ ಅತಿ ಹೆಚ್ಚು ಬೆಲೆಯ ಮೊಬೈಲ್‌ಗಳು ಯಾವುವು ಗೊತ್ತೇ?

ಗಿಜ್‌ಬಾಟ್‌

ಗಿಜ್‌ಬಾಟ್‌

ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Most Read Articles
Best Mobiles in India

English summary
Panasonic P75 With 5000mAh Battery Launched at Rs. 5,990. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X