ಐಫೋನ್ 13 ಮಿನಿ VS ಐಫೋನ್ 12 ಮಿನಿ: ಖರೀದಿಗೆ ಯಾವುದು ಉತ್ತಮ?

|

ಜನಪ್ರಿಯ ಆಪಲ್ ತನ್ನ ಬಹುನಿರೀಕ್ಷಿತ 'ಐಫೋನ್‌ 13' ಸರಣಿಯನ್ನು ಲಾಂಚ್ ಮಾಡಿದೆ. ಹಲವು ನೂತನ ಅಪ್‌ಡೇಟ್‌ ಫೀಚರ್ಸ್‌ಗಳೊಂದಿಗೆ ಲಗ್ಗೆ ಇಟ್ಟಿರುವ ಐಫೋನ್‌ 13 ಹೆಚ್ಚು ಈಗಾಗಲೇ ಗ್ರಾಹಕರನ್ನು ಆಕರ್ಷಿಸಿದೆ. ಐಫೋನ್ 13 ಲಾಂಚ್ ಖುಷಿ ಜೊತೆಗೆ ಐಫೋನ್‌ 12 ಮಿನಿ ಫೋನ್ ಭರ್ಜರಿ ಬೆಲೆ ಇಳಿಕೆಯ ಖುಷಿ ನೀಡಿದೆ. ಹೀಗಾಗಿ ಸದ್ಯ ಐಫೋನ್‌ 13 ಮಿನಿ ಮತ್ತು ಬೆಲೆ ಇಳಿಕೆ ಕಂಡ ಐಫೋನ್ 12 ಮಿನಿ ಇವೆರಡರಲ್ಲಿ ಖರೀದಿಗೆ ಯಾವುದು ಬೆಸ್ಟ್‌?..ಎನ್ನುವ ಗೊಂದಲ ನೂತನವಾಗಿ ಐಫೋನ್‌ ಖರೀದಿಸುವವರಲ್ಲಿ ಮೂಡಿರುತ್ತದೆ.

ಐಫೋನ್ 13 ಮಿನಿ VS ಐಫೋನ್ 12 ಮಿನಿ: ಖರೀದಿಗೆ ಯಾವುದು ಉತ್ತಮ?

ಇತ್ತೀಚಿಗಷ್ಟೆ ಲಾಂಚ್ ಆದ ಐಫೋನ್‌ 13 ಸರಣಿಯು ನಾಲ್ಕು ಐಫೋನ್‌ ಮಾಡೆಲ್‌ಗಳನ್ನು ಒಳಗೊಂಡಿದೆ. ಅವುಗಳು ಕ್ರಮವಾಗಿ ಐಫೋನ್‌ 13, ಐಫೋನ್‌ 13 ಮಿನಿ, ಐಫೋನ್‌ 13 ಪ್ರೊ ಮತ್ತು ಐಫೋನ್‌ 13 ಪ್ರೊ ಮ್ಯಾಕ್ಸ್‌ ಆಗಿವೆ. ಐಫೋನ್‌ 13 ಮಿನಿ ಫೋನ್ ಮತ್ತು ಈ ಹಿಂದಿನ ಸರಣಿಯ ಐಫೋನ್ 12 ಮಿನಿ ಫೋನ್‌ಗಳ ನಡುವಿನ ವ್ಯತ್ಯಾಸಗಳೆನು?..ಇವುಗಳ ಬೆಲೆ ಎಷ್ಟು?..ಸದ್ಯ ಐಫೋನ್‌ 13 ಮಿನಿ ಮತ್ತು ಐಫೋನ್ 12 ಮಿನಿ ಇವೆರಡರಲ್ಲಿ ಯಾವುದು ಖರರೀದಿಗೆ ಉತ್ತಮ ಆಯ್ಕೆ ಆಗಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಐಫೋನ್ 13 ಮಿನಿ vs ಐಫೋನ್ 12 ಮಿನಿ: ಬೆಲೆಯ ಲಿಸ್ಟ್‌
ಭಾರತದಲ್ಲಿ ಐಫೋನ್ 13 ಮಿನಿ 128 ಜಿಬಿ ವೇರಿಯಂಟ್ ಬೆಲೆ 69,900 ರೂ. ಗಳಾದರೆ, 256GB ವೇರಿಯಂಟ್ ಬೆಲೆ 79.900 ರೂ, ಮತ್ತು 512GB ವೇರಿಯಂಟ್ ಬೆಲೆ 99,900 ರೂ.ಗಳಾಗಿವೆ. ಹಾಗೆಯೇ ಐಫೋನ್‌ 12 ಮಿನಿ 128GB ವೇರಿಯಂಟ್ 64,900ರೂ. ಆಗಿದೆ. ಐಫೋನ್‌ 12 ಮಿನಿ 256GB ವೇರಿಯಂಟ್ 74,900ರೂ. ಆಗಿದೆ.

ಐಫೋನ್ 13 ಮಿನಿ VS ಐಫೋನ್ 12 ಮಿನಿ: ಖರೀದಿಗೆ ಯಾವುದು ಉತ್ತಮ?

ಐಫೋನ್ 13 ಮಿನಿ vs ಐಫೋನ್ 12 ಮಿನಿ: ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಐಫೋನ್ 13 ಮಿನಿ ಫೋನ್‌ 5.8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. . 800nits ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. ಅದೇ ರೀತಿ ಐಫೋನ್ 12 ಮಿನಿ 5.4-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಸೂಪರ್ ರೆಟಿನಾ XRD ಡಿಸ್‌ಪ್ಲೇ ಮಾದರಿಯಲ್ಲಿದೆ.

ಐಫೋನ್ 13 ಮಿನಿ VS ಐಫೋನ್ 12 ಮಿನಿ: ಖರೀದಿಗೆ ಯಾವುದು ಉತ್ತಮ?

ಐಫೋನ್ 13 ಮಿನಿ vs ಐಫೋನ್ 12 ಮಿನಿ: ಕ್ಯಾಮೆರಾ ಸೆಟ್‌ಅಪ್‌
ಐಫೋನ್ 13 ಮಿನಿ ಫೋನ್ ಸಹ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ.
ಹಾಗೆಯೇ ಐಫೋನ್ 12 ಮಿನಿ ಸಹ ಅತ್ಯುತ್ತಮ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.

ಐಫೋನ್ 13 ಮಿನಿ vs ಐಫೋನ್ 12 ಮಿನಿ: ಪ್ರೊಸೆಸರ್ ಮತ್ತು ಬ್ಯಾಟರಿ ಪವರ್
ಐಫೋನ್ 13 ಮಿನಿ ಫೋನ್ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. 5G ಸಪೋರ್ಟ್‌ ಪಡೆದಿದ್ದು, ಈ ಪ್ರೊಸೆಸರ್ 50% ವೇಗದ ಗ್ರಾಫಿಕ್ಸ್‌ ಸೌಲಭ್ಯ ಪಡೆದಿದೆ. ಹಾಗೆಯೇ ಐಫೋನ್ 12 ಮಿನಿ ಫೋನ್ A14 ಬಯೋನಿಕ್ ಎಸ್‌ಒಸಿ ಹಾಗೂ, 5G ಸಪೋರ್ಟ್ ಪಡೆದಿದೆ.

ಐಫೋನ್ 13 ಮಿನಿ ಫೋನ್‌ ಫೀಚರ್ಸ್‌
ಐಫೋನ್ 13 ಮಿನಿ ಫೋನ್‌ 5.8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. 800nits ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಪ್ರೊಸೆಸರ್ ಪಡೆದಿದೆ. 5G ಸಪೋರ್ಟ್‌ ಪಡೆದಿದ್ದು, ಈ ಪ್ರೊಸೆಸರ್ 50% ವೇಗದ ಗ್ರಾಫಿಕ್ಸ್‌ ಸೌಲಭ್ಯ ಪಡೆದಿದೆ. ಐಫೋನ್ 13 ಮಿನಿ ಫೋನ್ ಸಹ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ. ಇನ್ನು ಈ ಫೋನ್ ಪಿಂಕ್, ರೆಡ್, ಬ್ಲ್ಯಾಕ್, ಸೇರಿದಂತೆ ಐದು ಬಣ್ಣಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
iphone 13 Mini VS iphone 12 Mini Differences: Which Is Best To Buy.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X