1499 ರೂ.ಗೆ 17 ದಿನಗಳ ಬ್ಯಾಟರಿ ನೀಡುವ 'ಲಾವ' ಫೀಚರ್ ಫೋನ್!!

Written By:

ಭಾರತೀಯ ಮೊಬೈಲ್ ತಯಾರಕ ಸಂಸ್ಥೆ ಲಾವಾ 'ಡಿಸೈನ್ ಇನ್ ಇಂಡಿಯಾ' ಯೋಜನೆ ಅಡಿಯಲ್ಲಿ ಹೊಸ ಫೀಚರ್ ಮೊಬೈಲ್ ಫೋನ್ ಅನ್ನು ಪರಿಚಯಿಸುತ್ತಿದೆ.! ಲಾವ ''ಪ್ರೈಮ್ ಎಕ್ಸ್'' ಎಂಬ ನೂತನ ಬ್ಯಾಟರಿ ವಿಶೇಷ ಫೀಚರ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಲಾವ ಸಂಸ್ಥೆ ಹೇಳಿಕಪಂಡಿದೆ.!!

ಆಕರ್ಷಕ ಬೆಲೆ ಮತ್ತು ಬ್ಯಾಟರಿ ಬ್ಯಾಕಪ್ ಕಾರಣದಿಂದಾಗಿ ಲಾವ ''ಪ್ರೈಮ್ ಎಕ್ಸ್'' ಗ್ರಾಹಕರನ್ನು ಆಕರ್ಷಿಸುತ್ತದೆ ಎಂದು ಲಾವಾ ಸಂಸ್ಥೆ ಹೇಳಿದ್ದು, ಈ ಫೋನಿನ ಬ್ಯಾಟರಿ ಬ್ಯಾಕಪ್ 17 ದಿನಗಳು ಎಂದು ತಿಳಿಸಿದೆ.! ಈ ಫೋನ್ ನಮ್ಮ 'ಡಿಸೈನ್ ಇನ್ ಇಂಡಿಯಾ' ಯೋಜನೆಯನ್ನು ಯಶಸ್ವಿಯಾಗಿಸಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.!!

 1499 ರೂ.ಗೆ 17 ದಿನಗಳ ಬ್ಯಾಟರಿ ನೀಡುವ 'ಲಾವ' ಫೀಚರ್ ಫೋನ್!!

2018 ರ ಅಕ್ಟೋಬರ್ ತಿಂಗಳ ವೇಳೆಗೆ ಲಾವ ''ಪ್ರೈಮ್ ಎಕ್ಸ್'' ಫೋನ್ ಗ್ರಾಹಕರ ಕೈಸೇರಲಿದ್ದು, ಎರಡು ವರ್ಷ ಬದಲಿ ವಾರಂಟಿಯೊಂದಿಗೆ ಕೇವಲ 1499 ರೂಪಾಯಿಗಳ ಬೆಲೆಯಲ್ಲಿ ಫೋನ್ ಮಾರಾಟ ಮಾಡಲು ಲಾವ ಕಂಪೆನಿ ನಿರ್ಧರಿಸಿದೆ.! ತನ್ನ ಎಲ್ಲಾ ಪ್ರತಿಸ್ಪರ್ಧಿಗಳನ್ನು ಈ ಫೋನ್ ಸೋಲಿಸುತ್ತದೆ ಎಂದು ಲಾವಾ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.!!

 1499 ರೂ.ಗೆ 17 ದಿನಗಳ ಬ್ಯಾಟರಿ ನೀಡುವ 'ಲಾವ' ಫೀಚರ್ ಫೋನ್!!
ಹೇಗಿದೆ Jio Phone : ಕನ್ನಡದಲ್ಲೇ ಮೊದಲ ವಿಡಿಯೋ..!

ಕೇವಲ 1500 ರೂಪಾಯಿಗಳಿಗೆ ಜಿಯೋ 4G ಫಿಚರ್ ಫೋನ್ ಬಿಡುಗಡೆ ಮಾಡಿರುವ ಸಮಯದಲ್ಲಿ ಲಾವ ಸಂಸ್ಥೆ ಸಾಮಾನ್ಯ ಫೀಚರ್ ಫೋನ್ ಬಿಡುಗಡೆ ಮಾಡಿರುವುದು ಎಲ್ಲರಿಗೂ ಕುತೋಹಲವನ್ನು ಉಂಟುಮಾಡಿದೆ.! 17 ದಿನಗಳ ಬ್ಯಾಟರಿ ಬ್ಯಾಕಪ್ ಇದೆ ಎನ್ನಲಾದ ಈ ಮೊಬೈಲ್ ಖರೀದಿ ಹೇಗಿರುತ್ತದೆ ಎನ್ನುವ ಕುತೋಹಲ ನಮಗೂ ಇದೆ.!!

ಓದಿರಿ: ಗೂಗಲ್' ಎಂದರೇನು?..ಈ ಹೆಸರು ಬಂದಿದ್ದು ಹೇಗೆ?!..ಗೂಗಲ್ ಅನ್ನೆ ಗೂಗಲ್ ಮಾಡೋಣವೇ?!

English summary
The first phone under the initiative will launch in October. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot