Subscribe to Gizbot

ಮೈಕ್ರೋಮ್ಯಾಕ್ಸ್‌ನಿಂದ ಬಜೆಟ್ ಫೋನ್ಸ್ ಲಾಂಚ್

Written By:

ಬಜೆಟ್ ಫೋನ್‌ಗಳೆಂದರೆ ಬಳಕೆದಾರರಿಗೆ ಎಲ್ಲಿಲ್ಲದ ಆಸಕ್ತಿ ಮತ್ತು ಖರೀದಿಸುವ ಹುರಪು ಎಂದಿಗೂ ಬತ್ತದು. ಅದಕ್ಕೆ ತಕ್ಕಂತೆ ಹೆಚ್ಚಿನ ಮೊಬೈಲ್ ಫೋನ್ ಕಂಪೆನಿಗಳು ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರಾಟವನ್ನು ಮಾಡುತ್ತಿದ್ದು ಕಂಪೆನಿಗೆ ಲಾಭವನ್ನು ತರುವುದರ ಜೊತೆಗೆ ಬಳಕೆದಾರರಿಗೂ ಇದು ಬಂಪರ್ ಕೊಡುಗೆಯನ್ನು ನೀಡುತ್ತದೆ.

ಓದಿರಿ: ಮಂಗಳನಲ್ಲಿ ಬದುಕಲು ಹೀಗಿದ್ದರೆ ಹೇಗಿರುತ್ತದೆ?

ಸ್ಥಳೀಯ ಹ್ಯಾಂಡ್‌ಸೆಟ್ ತಯಾ ರಕ ಕಂಪೆನಿ ಮೈಕ್ರೋಮ್ಯಾಕ್ಸ್ ಬೋಲ್ಟ್ ಸೀರೀಸ್ ಅಡಿಯಲ್ಲಿ ಎರಡು ಬಜೆಟ್ ಫೋನ್‌ಗಳನ್ನು ಹೊರತಂದಿದೆ. ಬೋಲ್ಟ್ Q331, ಮತ್ತು ಬೋಲ್ಟ್ S302 ಎಂಬುದು ಡಿವೈಸ್‌ಗಳ ಹೆಸರಾಗಿದೆ. ಏರ್‌ಟೆಲ್ ನೆಟ್‌ವರ್ಕ್ ಬಳಕೆದಾರರಿಗೆ ಉಚಿತ ವಾಟ್ಸಾಪ್ ಡೇಟಾ ಪ್ಯಾಕ್‌ಗಳೊಂದಿಗೆ ಈ ಡಿವೈಸ್ ಬಂದಿದೆ.

ಓದಿರಿ: ಗೂಗಲ್‌ನಲ್ಲಿ ಉದ್ಯೋಗ ಎಂದರೇ ಜಾಕ್‌ಪಾಟ್‌ ಹೊಡೆದಂತೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಮ್ಯಾಕ್ಸ್ ಬೋಲ್ಟ್ Q331

ಮೈಕ್ರೋಮ್ಯಾಕ್ಸ್ ಬೋಲ್ಟ್ Q331

ಮೈಕ್ರೋಮ್ಯಾಕ್ಸ್ ಬೋಲ್ಟ್ Q331, 5 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು, ರೆಸಲ್ಯೂಶನ್ 480x854 ಪಿಕ್ಸೆಲ್‌ಗಳಾಗಿದೆ. 1.2GHz Spreadtrum (SC7731G)ಪ್ರೊಸೆಸರ್ ಇದರಲ್ಲಿದ್ದು 512 ಎಮ್‌ಬಿ RAM ಡಿವೈಸ್‌ನಲ್ಲಿದೆ.

ಕ್ಯಾಮೆರಾ

ಕ್ಯಾಮೆರಾ

ಫೋನ್ 5 ಎಮ್‌ಪಿ ಆಟೊಫೋಕಸ್ ರಿಯರ್ ಕ್ಯಾಮೆರಾದೊಂದಿಗೆ ಬಂದಿದ್ದು ಮುಂಭಾಗ ಕ್ಯಾಮೆರಾ 2 ಎಮ್‌ಪಿಯಾಗಿದೆ.

ಸಂಗ್ರಹಣಾ ಸಾಮರ್ಥ್ಯ

ಸಂಗ್ರಹಣಾ ಸಾಮರ್ಥ್ಯ

ಆಂತರಿಕ ಸಂಗ್ರಹಣಾ ಸಾಮರ್ಥ್ಯ 4 ಜಿಬಿಯಾಗಿದ್ದು, ಇದನ್ನು ಎಸ್‌ಡಿ ಕಾರ್ಡ್ ಬಳಸಿ 32ಜಿಬಿಗೆ ವಿಸ್ತರಿಸಬಹುದು.

ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್

ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್

ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಡಿವೈಸ್‌ನಲ್ಲಿದ್ದು, ಕನೆಕ್ಟಿವಿಟಿ ಆಯ್ಕೆಗಳಾದ GPRS/ EDGE, 3G, ವೈ-ಫೈ, ಬ್ಲ್ಯೂಟೂತ್, GPS, ಹಾಗೂ Micro-USB ಸಂಪರ್ಕವನ್ನು ಒದಗಿಸುತ್ತದೆ. ಫೋನ್ ಬ್ಯಾಟರಿ 2000mAh ಆಗಿದ್ದು ಆರು ಗಂಟೆಗಳ ಟಾಕ್ ಟೈಮ್ ಅನ್ನು ಒದಗಿಸುತ್ತದೆ ಮತ್ತು 200 ಗಂಟೆಗಳ ಸ್ಟ್ಯಾಂಡ್‌ಬೈ ಸಮಯ ಇದರಲ್ಲಿದೆ.

ಮೈಕ್ರೋಮ್ಯಾಕ್ಸ್ ಬೋಲ್ಟ್ S302

ಮೈಕ್ರೋಮ್ಯಾಕ್ಸ್ ಬೋಲ್ಟ್ S302

ಮೈಕ್ರೋಮ್ಯಾಕ್ಸ್ ಬೋಲ್ಟ್ S302 4 ಇಂಚಿನ WVGA TFT ಡಿಸ್‌ಪ್ಲೇಯೊಂದಿಗೆ 480x800 ಪಿಕ್ಸೆಲ್‌ಗಳ ರೆಸಲ್ಯೂಶನ್‌ನಲ್ಲಿ ಬಂದಿದೆ. 1GHz single-core Spreadtrum (SC7715) ಪ್ರೊಸೆಸರ್ ಡಿವೈಸ್‌ನಲ್ಲಿದ್ದು, 512 ಎಮ್‌ಬಿ RAM ಫೋನ್‌ನಲ್ಲಿದೆ.

ಆಂತರಿಕ ಮೆಮೊರಿ

ಆಂತರಿಕ ಮೆಮೊರಿ

ಆಂತರಿಕ ಮೆಮೊರಿ 4ಜಿಬಿಯಾಗಿದ್ದು, ಆಂಡ್ರಾಯ್ಡ್ 4.4.3 ಕಿಟ್‌ಕ್ಯಾಟ್ ಓಎಸ್ ಹ್ಯಾಂಡ್‌ಸೆಟ್‌ನಲ್ಲಿದೆ.

ಕ್ಯಾಮೆರಾ

ಕ್ಯಾಮೆರಾ

ಫೋನ್ ರಿಯರ್ ಕ್ಯಾಮೆರಾ 2ಎಮ್‌ಪಿಯಾಗಿದ್ದು, ಮುಂಭಾಗ ಕ್ಯಾಮೆರಾ 1.3 ಎಮ್‌ಪಿಯಾಗಿದೆ. 1450mAh ಬ್ಯಾಟರಿ 3ಜಿ ಇದರಲ್ಲಿದೆ.

ಫೋನ್ ಬೆಲೆ ಮತ್ತು ಬಿಡುಗಡೆ ದಿನಾಂಕ

ಫೋನ್ ಬೆಲೆ ಮತ್ತು ಬಿಡುಗಡೆ ದಿನಾಂಕ

ಮುಂಬರುವ ದಿನಗಳಲ್ಲಿ ಫೋನ್ ಬೆಲೆ ಮತ್ತು ಬಿಡುಗಡೆ ದಿನಾಂಕವನ್ನು ನಾವು ನಿರೀಕ್ಷಿಸುತ್ತಿದ್ದು ಬೆಲೆ ರೂ 4,000 ಮತ್ತು ರೂ 5,000 ಎಂದು ಅಂದಾಜಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Desi handset maker, Micromax has listed two budget smartphone under the Bolt series on the official site without any details about the pricing and availability. Dubbed as Bolt Q331 and Bolt S302, this device comes with free Whatsapp data packs for Airtel networl users.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot