ನೋಕಿಯಾ ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿ
ಇದೇ ವರ್ಷದ ಅಂತ್ಯಕ್ಕೆ ಈ ಆಪ್‌ಡೇಟ್ ದೊರೆಯಲಿದ್ದು, ಈಗಾಗಲೇ ನೋಕಿಯಾ ಬಳಕೆದಾರರಿಗೆ ಮಾಹಿತಿ ನೀಡಲಾಗಿದೆ. ಒಟ್ಟು ಎರಡು ವರ್ಷಗಳ ಕಾಲ ದೊರೆಯುವ ಆಂಡ್ರಾಯ್ಡ್ ಆಪ್‌ಡೇಟ್ ನೋಕಿಯಾ ಬಳಕೆದಾರರಿಗೆ ನೀಡಲಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ನೋಕಿಯಾ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಆಪ್‌ಡೇಟ್ ಪಡೆದುಕೊಳ್ಳಲಿದೆ ಎನ್ನುವ ಮಾತು ಈ ಹಿಂದೆಯೇ ಕೇಳಿ ಬಂದಿತ್ತು. ಆದರೆ ಸದ್ಯ ಈ ಸ್ಮಾರ್ಟ್‌ಫೋನ್‌ಗಳು ಮೊದಲಿಗೆ ಆಂಡ್ರಾಯ್ಡ್ ಓರಿಯೋ ಆಪ್‌ಡೇಟ್ ಪಡೆದುಕೊಳ್ಳುವುದು ಖಾತರಿಯಾಗಿದೆ.

ಓದಿರಿ: ಜಿಯೋದಲ್ಲಿ ಕರೆ ಮಾಡುವ ಮುನ್ನ ಎಚ್ಚರ: ಅನ್‌ಲಿಮಿಟೆಡ್ ಉಚಿತ ಕರೆ ಈಗ ಇಲ್ಲ
ಈ ಬಗ್ಗೆ ಮಾಹಿತಿ ನೀಡಿರುವ HDM ಗ್ಲೊಬಲ್ ಸಂಸ್ಥೆಯೂ ನೋಕಿಯಾ 3, ನೋಕಿಯಾ 5 ಮತ್ತು ನೋಕಿಯಾ 6 ಸ್ಮಾರ್ಟ್‌ಫೋನ್‌ಗಳು ಈಗಾಗಲೇ 7.1.1 ಆಪ್‌ಡೇಟ್ ಪಡೆದುಕೊಂಡಿದ್ದು, ಇದೇ ಮಾದರಿಯಲ್ಲಿ ಈ ಫೋನ್‌ಗಳು ಶೀಘ್ರವೇ ಆಂಡ್ರಾಯ್ಡ್ ಓರಿಯೋ ಆಪ್‌ಡೇಟ್ ಪಡೆದುಕೊಳ್ಳಿದೆ.
ಇದೇ ವರ್ಷದ ಅಂತ್ಯಕ್ಕೆ ಈ ಆಪ್‌ಡೇಟ್ ದೊರೆಯಲಿದ್ದು, ಈಗಾಗಲೇ ನೋಕಿಯಾ ಬಳಕೆದಾರರಿಗೆ ಮಾಹಿತಿ ನೀಡಲಾಗಿದೆ. ಒಟ್ಟು ಎರಡು ವರ್ಷಗಳ ಕಾಲ ದೊರೆಯುವ ಆಂಡ್ರಾಯ್ಡ್ ಆಪ್‌ಡೇಟ್ ನೋಕಿಯಾ ಬಳಕೆದಾರರಿಗೆ ನೀಡಲಿದೆ.

ಓದಿರಿ: ವೈದ್ಯಲೋಕದ ಆಚ್ಚರಿ: ಸೆಲ್ಫಿ ಮೂಲಕ ಕ್ಯಾನ್ಸರ್ ಕಂಡು ಹಿಡಿಯುವ ಆಪ್

ಒಟ್ಟಿನಲ್ಲಿ ಸ್ಟಾಕ್ ಆಂಡ್ರಾಯ್ಡ್ ಬಳಕೆದಾರರಲ್ಲಿ ನೋಕಿಯಾ ಫೋನ್‌ಗಳು ಮೊದಲಾಗಿ ಈ ಆಪ್‌ಡೇಟ್ ದೊರೆಯಲಿದೆ. ಇದಾದ ನಂತರ ಬೇರೆ ಫೋನ್‌ಗಳಿಗೆ ಈ ಆಪ್‌ಡೇಟ್ ಲಭ್ಯವಿರಲಿದೆ ಎನ್ನಲಾಗಿದೆ.


Click it and Unblock the Notifications








