Subscribe to Gizbot

24 MP ಕ್ಯಾಮೆರಾ ಹೊಂದಿರುವ ನೋಕಿಯಾ 8 ಫೆಬ್ರವರಿ 26ಕ್ಕೆ ಲಾಂಚ್

Written By:

ಮತ್ತೆ ಸ್ಮಾರ್ಟ್‌ಪೋನ್ ಲೋಕದಲ್ಲಿ ಹೊಸ ಆಲೆಯನ್ನು ಸೃಷ್ಟಿನಲ್ಲೂ ನೋಕಿಯಾ ಸಿದ್ಧತೆ ನಡೆಸಿದ್ದು, ಮೊನ್ನೆ ತಾನೇ ನೋಕಿಯಾ 6 ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡಿದ್ದ ನೋಕಿಯಾ, ಈಗ ಫೆಬ್ರವರಿ 26ಕ್ಕೆ ನೋಕಿಯಾ 8 ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಬರ್ಸಲೋನದಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಈ ಪೋನು ಬಿಡುಗಡೆಯಾಗಲಿದೆ.

24 MP ಕ್ಯಾಮೆರಾ ಹೊಂದಿರುವ ನೋಕಿಯಾ 8 ಫೆಬ್ರವರಿ 26ಕ್ಕೆ ಲಾಂಚ್

ರೂ.8490ಕ್ಕೆ 4G ಸಪೋರ್ಟ್ ಮಾಡುವ ಸ್ಯಾಮ್‌ಸಂಗ್ ಗ್ಯಾಲಕ್ಸಿ J2 Ace

ಈಗಾಗಲೇ ನೋಕಿಯಾ ಪೋನುಗಳು ಗ್ರಾಹಕರಲ್ಲಿ ಕುತೂಹಲವನ್ನು ಹೆಚ್ಚಿಸಿದ್ದು, ಈ ವರ್ಷವೇ 7ಕ್ಕೂ ಹೆಚ್ಚಿನ ಪೋನುಗಳನ್ನು ಲಾಂಚ್ ಮಾಡುವುದಾಗಿ ತಿಳಿಸಿದೆ. ಈ ಹಿನ್ನಲೆಯಲ್ಲಿ ನೋಕಿಯಾ 8 ಕುರಿತ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೇಗಕ್ಕಾಗಿ 6GB RAM:

ವೇಗಕ್ಕಾಗಿ 6GB RAM:

ಈ ಪೋನು ಮಧ್ಯಮ ಬೆಲೆಯ ಸ್ಮಾರ್ಟ್‌ಪೋನ್ ಆಗಿರಲಿದ್ದು, ಕ್ವಾಲ್‌ಕಮ್ ಸ್ನಾಪ್‌ಡ್ರಾಗ್ 835 ಪ್ರೋಸೆಸರ್ ಜೊತೆಯಲಿ 6GB RAM ಈ ಪೋನಿನಲ್ಲಿ ಅಡಕವಾಗಿದೆ. ಈ ಕಾರಣಕ್ಕಾಗಿ ಈ ಪೋನ್ ವೇಗದ ಕಾರ್ಯಚರಣೆಗೆ ಸಾಕ್ಷಿಯಾಗಿರಲಿದೆ. ಹೆಚ್ಚು ಗುಣಮಟ್ಟದ ಗೇಮ್ ಗಳನ್ನು ಆಡಲು ಸುಲಭವಾಗಿರಲಿದೆ.

24 ಮೆಗಾ ಪಿಕ್ಸಲ್ ಕ್ಯಾಮೆರಾ:

24 ಮೆಗಾ ಪಿಕ್ಸಲ್ ಕ್ಯಾಮೆರಾ:

ನೋಕಿಯ ಈ ಹಿಂದಿನಂತೆ ಈ ಬಾರಿಯೂ ತನ್ನ ಪೋನಿನಲ್ಲಿ ಗುಣಮಟ್ಟದ ಕ್ಯಾಮೆರಾವನ್ನು ಕೊಡುವುದನ್ನು ಮರೆತಿಲ್ಲ. ಈ ನೋಕಿಯಾ 8 ಸ್ಮಾರ್ಟ್‌ಪೋನಿನ ಹಿಂಭಾಗದಲ್ಲಿ 24 MP ಜಿಜ್ಸಾ ಲೇನ್ಸ್ ಕ್ಯಾಮೆರಾ ನೀಡಲಾಗಿದ್ದು, ಮುಂಭಾಗದಲ್ಲಿ ಒಳ್ಳೆಯ ಸೆಲ್ಫಿ ತೆಗೆಯುವ ಸಲುವಾಗಿ 12 MP ಕ್ಯಾಮೆರಾವನ್ನು ನೀಡಲಾಗಿದೆ. ಇದು ಸಹ ಪೋನಿನ ಪ್ಲೇಸ್ ಪಾಯಿಂಟ್‌ಗಳಲ್ಲಿ ಒಂದು ಎಂದರೆ ತಪ್ಪಾಗಲಾರದು.

5.7 ಇಂಚಿನ HD ಡಿಸ್‌ಪ್ಲೇ

5.7 ಇಂಚಿನ HD ಡಿಸ್‌ಪ್ಲೇ

ಸ್ಮಾರ್ಟ್‌ಪೋನಿನ ಪರದೆಯೂ ಸ್ವಲ್ಪ ದೊಡ್ಡದಾಗಿದ್ದು, 5.7 ಇಂಚಿನ HD ಡಿಸ್‌ಪ್ಲೇ ಈ ಪೋನಿಲ್ಲಿದ್ದು, ಗೇಮ್ ಆಡಲು ಮತ್ತು ವಿಡಿಯೋ ನೋಡಲು ಹೇಳಿ ಮಾಡಿಸಿದಂತೆ ಇದೆ. ಅಲ್ಲದೇ 128GB ಇಂಟರ್ನೆಲ್ ಮೆಮೊರಿಯೂ ಈ ಪೋನಿನಲ್ಲಿದ್ದು, ಜೊತೆಗೆ ಎಸ್‌ಡಿ ಕಾರ್ಡ್‌ ಹಾಕಿಕೊಳ್ಳುವ ಆಯ್ಕೆ ನೀಡಲಾಗಿದ್ದು, ಈ ಮೂಲಕ ಮತಷ್ಟು ಮೆಮೊರಿ ವಿಸ್ತರಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Nokia is back. And it is already creating a ton of buzz. Earlier we saw the company launching the Nokia 6, a mid-range phone, in China. Now there is new about theAndroid Nokia 8 to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot