ಒಪ್ಪೋ F21 ಪ್ರೊ ಫೋನ್‌ ವಿಮರ್ಶೆ: ಮೀಡ್‌ರೇಂಜ್‌ನಲ್ಲಿ ಪವರ್‌ಫುಲ್‌ ಕ್ಯಾಮೆರಾ ಫೋನ್!

|

ಮೊಬೈಲ್‌ ವಲಯದಲ್ಲಿ ಒಪ್ಪೋ ಸಂಸ್ಥೆಯು ತನ್ನದೇ ಶೈಲಿಯಿಂದ ಗುರುತಿಸಿಕೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳು ಮತ್ತು ಇತರೆ ಸ್ಮಾರ್ಟ್‌ ಡಿವೈಸ್ ಬಿಡುಗಡೆ ಗಮನ ಸೆಳೆದಿದೆ. ಒಪ್ಪೋ ತನ್ನ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ಗೆ ನೂತನವಾಗಿ ಒಪ್ಪೋ F21 ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಸೇರ್ಪಡೆ ಮಾಡಿದೆ. ಈ ಫೋನ್ ಅತ್ಯುತ್ತಮ ಸೆಲ್ಫಿ ಸೆರೆಹಿಡಿಯಲು ಇತ್ತೀಚಿನ ತಂತ್ರಜ್ಞಾನ ಒಳಗೊಂಡಿದೆ.

ಪ್ರೊಸೆಸರ್

ಒಪ್ಪೋ F21 ಪ್ರೊ ಸ್ಮಾರ್ಟ್‌ಫೋನ್‌ ಮೀಡ್‌ರೇಂಜ್ ಮಾದರಿಯಲ್ಲಿ ಕಾಣಿಸಿಕೊಂಡಿದ್ದು, ಆಕರ್ಷಕ ಫೀಚರ್ಸ್‌ಗಳಿಂದ ಭರ್ತಿ ಆಗಿದೆ. ಒಪ್ಪೋ F21 ಪ್ರೊ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 680 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, 4,500 mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದೆ. ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದ್ದು, ಕ್ಯಾಮೆರಾ ಪ್ರಿಯರನ್ನು ಸೆಳೆಯುವಂತಿದೆ.

ಒಪ್ಪೋ F21 ಪ್ರೊ ಕೀ ಫೀಚರ್ಸ್‌

ಒಪ್ಪೋ F21 ಪ್ರೊ ಕೀ ಫೀಚರ್ಸ್‌

ಒಪ್ಪೋ F21 ಪ್ರೊ ಫೋನ್‌ 6.4 ಇಂಚಿನ AMOLED ಡಿಸ್‌ಪ್ಲೇ ಪಡೆದಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 680 ಪ್ರೊಸೆಸರ್ ಪವರ್ ಒಳಗೊಂಡಿದೆ. 8GB RAM ಮತ್ತು 128GB ಸ್ಟೋರೇಜ್ ಪಡೆದಿದೆ. ಹಾಗೆಯೇ ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ ಹಾಗೂ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸೆಲ್ ಆಗಿದೆ. ಆಂಡ್ರಾಯ್ಡ್ 12 ಓಎಸ್‌ ನ ಸಪೋರ್ಟ್‌ ಅನ್ನು ಇದು ಒಳಗೊಂಡಿದೆ. ಇನ್ನುಳಿದಂತೆ ಈ ಫೋನಿನ ಇತರೆ ಫೀಚರ್ಸ್‌ಗಳ ಕಾರ್ಯವೈಖರಿಯ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ ಹೇಗಿದೆ?

ಡಿಸ್‌ಪ್ಲೇ ಮತ್ತು ವಿನ್ಯಾಸ ಹೇಗಿದೆ?

ಒಪ್ಪೋ F21 ಪ್ರೊ ಫೋನ್‌ ಫೈಬರ್ ಗ್ಲಾಸ್‌ ಹಾಗೂ ಲೆದರ್ ಡಿಸೈನ್ ಅನ್ನು ಪಡೆದಿದೆ. ಇದರ ರಚನೆಯು ಸ್ಕ್ರಾಚ್ ಪ್ರೋಫ್‌ ಆಗಿದ್ದು, ಕಠಿಣ ಬಳಕೆಗೆ ಪೂರಕ ಆಗಿದೆ. ಇನ್ನು ಒಪ್ಪೋ F21 ಪ್ರೊ ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಹೊಂದಿದೆ. ಡಿಸ್‌ಪ್ಲೇಯು ಗೇಮಿಂಗ್, ವಿಡಿಯೋ ವೀಕ್ಷಣೆಗೆ ಪೂರಕ ಎನಿಸುತ್ತದೆ. 90Hz ರಿಫ್ರೆಶ್ ರೇಟ್ ಇದ್ದು, ಸ್ಕ್ರೀನ್ ಆಪರೇಟಿಂಗ್ ನಯವಾಗಿದೆ.

ಪ್ರೊಸೆಸರ್ ಕಾರ್ಯ ವೈಖರಿ ಹೇಗೆ?

ಪ್ರೊಸೆಸರ್ ಕಾರ್ಯ ವೈಖರಿ ಹೇಗೆ?

ಒಪ್ಪೋ F21 ಪ್ರೊ ಫೋನ್‌ ಆಕ್ಟಾ ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 680 SoC ಪ್ರೊಸೆಸರ್‌ ಹೊಂದಿದ್ದು, ಇದು ಶಕ್ತಿಯುತ ಕಾರ್ಯ ವೈಖರಿಗೆ ಸಹಾಯಕ ಎನಿಸಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ನಲ್ಲಿ ಕಲರ್‌OS 12.1 ಬೆಂಬಲ ಪಡೆದಿದ್ದು, ಫೋನಿನ ದಕ್ಷತೆ ಹೆಚ್ಚಿಸಿದೆ. ಹಾಗೆಯೇ 8GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದ್ದು, ಎಸ್‌ಡಿ ಕಾರ್ಡ್‌ ಮೂಲಕ 1 TB ವರೆಗೆ ಮೆಮೊರಿ ವಿಸ್ತರಿಸಬಹುದು. ಸ್ನಾಪ್‌ಡ್ರಾಗನ್‌ 680 ಚಿಪ್ ಪ್ರೊಸೆಸರ್‌ 5G ಅನ್ನು ಬೆಂಬಲಿಸುವುದಿಲ್ಲ. ಹೀಗಾಗಿ ಒಪ್ಪೋ F21 ಪ್ರೊ ಫೋನ್‌ 4G ಸಪೋರ್ಟ್‌ ಪಡೆದಿದೆ.

ಕ್ಯಾಮೆರಾ ರಚನೆ ಮತ್ತು ಸೆನ್ಸಾರ್ ಎಷ್ಟಿದೆ?

ಕ್ಯಾಮೆರಾ ರಚನೆ ಮತ್ತು ಸೆನ್ಸಾರ್ ಎಷ್ಟಿದೆ?

ಒಪ್ಪೋ F21 ಪ್ರೊ ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆಯನ್ನು ಹೊಂದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇನ್ನುಳಿದಂತೆ ಇತರೆ ಎರಡು ಕ್ಯಾಮೆರಾಗಳು ಕ್ರಮವಾಗಿ 2 ಮೆಗಾ ಪಿಕ್ಸೆಲ್ ಮೈಕ್ರೋ ಕ್ಯಾಮೆರಾ ಮತ್ತು 2 ಡೆಪ್ತ್ ಮೆಗಾ ಪಿಕ್ಸೆಲ್ ಸೆನ್ಸರ್ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ Sony IMX709 ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಹೆಚ್ಚು ಬೆಳಕನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಪಡೆದಿದ್ದು, ಜೊತೆಗೆ ಪೋರ್ಟ್ರೇಟ್, AI ಪೋರ್ಟ್ರೇಟ್ ವರ್ಧನೆ ಮತ್ತು ಸೆಲ್ಫಿ HDR ನಂತಹ ವೈಶಿಷ್ಟ್ಯಗಳಿಂದ ಮತ್ತಷ್ಟು ವರ್ಧಿಸುತ್ತದೆ. ಫೋನಿನ ಡೆಪ್ತ್ ಹಾಗೂ ಮೈಕ್ರೋ ಸೆನ್ಸಾರ್ ಉತ್ತಮ ಆಗಿವೆ. ನೈಟ್ ಮೋಡ್ ಅಷ್ಟೊಂದು ಪರಿಣಾಮಕಾರಿ ಎನಿಸದು.

ಬ್ಯಾಟರಿ ಪವರ್ ಎಷ್ಟು ಮತ್ತು ಬ್ಯಾಕ್‌ಅಪ್‌ ಸಾಮರ್ಥ್ಯ ಎಷ್ಟು?

ಬ್ಯಾಟರಿ ಪವರ್ ಎಷ್ಟು ಮತ್ತು ಬ್ಯಾಕ್‌ಅಪ್‌ ಸಾಮರ್ಥ್ಯ ಎಷ್ಟು?

ಒಪ್ಪೋ F21 ಪ್ರೊ ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಸ್ವಲ್ಪ ನಿರಾಶಾದಾಯಕ ಎನಿಸುತ್ತದೆ. ಏಕೆಂದರೇ ಸದ್ಯ ಬಹುತೇಕ ಫೋನ್‌ಗಳು 5,000mAh ಸಾಮರ್ಥ್ಯದ ಬ್ಯಾಟರಿ ಬಲದೊಂದಿಗೆ ಬರುತ್ತವೆ. ಆದರೆ ಒಪ್ಪೋ F21 ಪ್ರೊ ಫೋನ್‌ ಬ್ಯಾಟರಿ ಒಂದು ದಿನ ಬ್ಯಾಕ್‌ಅಪ್‌ ಒದಗಿಸುವ ಶಕ್ತಿ ಹೊಂದಿದೆ. ಹಾಗೆಯೇ ಇದು 33W ಸೂಪರ್ VOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್, GPS- AGPS ಮತ್ತು USB ಟೈಪ್-C ಪೋರ್ಟ್ ಸೇರಿವೆ. ಒಟ್ಟಾರೆಯಾಗಿ, ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬ್ಯಾಟರಿ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲಾಗಿದೆ.

ಕೊನೆಯ ಮಾತು

ಕೊನೆಯ ಮಾತು

ಒಪ್ಪೋ F21 ಪ್ರೊ ಫೋನ್‌ ಅತ್ಯುತ್ತಮ ಡಿಸ್‌ಪ್ಲೇ, ಕ್ಯಾಮೆರಾ ಫೀಚರ್ಸ್‌ಗಳಿಂದ ಗಮನ ಸೆಳೆದಿದ್ದರೂ, ಇದು 25,000ರೂ. ಒಳಗೆ ಫೋನ್ ಖರೀದಿಸುವ ಗ್ರಾಹಕರನ್ನು ಸೆಳೆಯುವಲ್ಲಿ ಹಿನ್ನಡೆ ಎದುರಿಸಬಹುದು. ಏಕೆಂದರೇ ಈ ವರ್ಗದಲ್ಲಿ ಒಪ್ಪೋ F21 ಪ್ರೊ ಫೋನ್‌ 5G ಸಫೋರ್ಟ್‌ ಪಡೆದಿಲ್ಲ. ಒಂದು ವೇಳೆ 5G ಬೆಂಬಲ ಇದ್ದರೆ ಇದು ಈ ಫೋನಿಗೆ ಪ್ಲಸ್ ಪಾಯಿಂಟ್ ಆಗುತ್ತಿತ್ತು. ಜೊತೆಗೆ ಈ ವರ್ಗದಲ್ಲಿ ಈ ಫೋನಿನ ಬ್ಯಾಟರಿ ಬ್ಯಾಕ್‌ಅಪ್‌ ಕಡಿಮೆ ಎನಿಸುತ್ತದೆ. ಬ್ಯಾಟರಿ ಮತ್ತು 5G ಅಂಶಗಳನ್ನು ಹೆಚ್ಚಾಗಿ ಪರಿಗಣಿಸದಿದ್ದರೇ, ಒಪ್ಪೋ F21 ಪ್ರೊ ಫೋನ್‌ ಅತ್ಯುತ್ತಮ ಎನ್ನಬಹುದು.

Most Read Articles
Best Mobiles in India

English summary
Oppo F21 Pro Review: Powerful Camera Phone at Mid range Price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X