ಒಪ್ಪೋ ರೆನೊ 7 ಪ್ರೊ ಫಸ್ಟ್‌ ಲುಕ್: ಫಾಸ್ಟ್‌ ಚಾರ್ಜಿಂಗ್ ಜೊತೆ ಬೆಸ್ಟ್‌ ಕ್ಯಾಮೆರಾ!

|

ಒಪ್ಪೋ ಸಂಸ್ಥೆಯು ಭಾರತದಲ್ಲಿ ಹೊಸದಾಗಿ ಪರಿಚಯಿಸಿರುವ 'ಒಪ್ಪೋ ರೆನೊ 7' ಸ್ಮಾರ್ಟ್‌ಫೋನ್‌ ಸರಣಿಯು ಒಪ್ಪೋ ರೆನೊ 7 ಮತ್ತು ಒಪ್ಪೋ ರೆನೊ 7 ಪ್ರೊ ಹೆಸರಿನ ಎರಡು ಮಾಡೆಲ್‌ಗಳನ್ನು ಒಳಗೊಂಡಿದೆ. ಆ ಪೈಕಿ ಒಪ್ಪೋ ರೆನೊ 7 ಪ್ರೊ ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಇಂದಿನ ಅಗತ್ಯ ಫೀಚರ್ಸ್‌ಗಳನ್ನು ಹೊಂದಿದೆ. ಮುಖ್ಯವಾಗಿ 50 ಎಂಪಿ ಸೆನ್ಸಾರ್ ಕ್ಯಾಮೆರಾ, 12 GB RAM ಮತ್ತು ಮೀಡಿಯಾಟೆಕ್‌ ಡೈಮೆನ್ಸಿಟಿ 1200 SoC ಪ್ರೊಸೆಸರ್ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಆಗಿ ಕಾಣಿಸಿಕೊಂಡಿದೆ.

ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ ಫ್ಲ್ಯಾಗ್‌ಶಿಪ್‌ ಮಾದರಿಯಲ್ಲಿ ಗುರುತಿಸಿಕೊಂಡಿದ್ದು, ಹಲವು ಹೈ ಎಂಡ್ ಫೀಚರ್ಸ್‌ಗಳನ್ನು ಪಡೆದಿದೆ. 12 GB RAM ಮತ್ತು 256GB ಆಂತರೀಕ ಸ್ಟೋರೇಜ್ ವೇರಿಯಂಟ್‌ ಹೊಂದಿದ್ದು, ಚುರುಕಾದ ಕಾರ್ಯವೈಖರಿ ಕಾಣಬಹುದಾಗಿದೆ. ಜೊತೆಗೆ 4500mAh ಬ್ಯಾಟರಿ ಸಪೋರ್ಟ್‌ಗೆ 65W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಇದರೊಂದಿಗೆ ಡಿವೈಸ್‌ ಸಹ ಗ್ರಾಹಕರ ಕಣ್ಮನ ಸೆಳೆಯುವಂತಿದೆ. ಹಾಗಾದರೆ ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳ ಕಾರ್ಯವೈಖರಿ ಹೇಗಿವೆ ಎನ್ನುವ ಕುರಿತು ಫಸ್ಟ್‌ ಲುಕ್ ಮಾಹಿತಿ ಇಲ್ಲಿದೆ. ಮುಂದೆ ಓದಿರಿ.

ಒಪ್ಪೋ ರೆನೊ 7 ಪ್ರೊ ಫಸ್ಟ್‌ ಲುಕ್: ಫಾಸ್ಟ್‌ ಚಾರ್ಜಿಂಗ್ ಜೊತೆ ಬೆಸ್ಟ್‌ ಕ್ಯಾಮೆರಾ

ಡಿಸ್‌ಪ್ಲೇ ರಚನೆ ಮತ್ತು ಪ್ರೊಸೆಸರ್ ಬಲ
ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ 6.55 ಇಂಚಿನ ಫುಲ್‌ ಹೆಚ್‌ಡಿ + ಸೂಪರ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90hz ರಿಫ್ರೆಶ್ ರೇಟ್‌ ಮತ್ತು 180Hz ಟಚ್ ರೆಸ್ಪಾನ್ಸ್‌ ರೇಟ್‌ ಅನ್ನು ಹೊಂದಿದೆ. ಈ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 5ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 1200 SoC ಮ್ಯಾಕ್ಸ್ ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 1 ಆಧಾರಿತ ಕಲರ್‌ ಒಎಸ್‌ 12 ನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 12 GB RAM + 256 GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ.

ಒಪ್ಪೋ ರೆನೊ 7 ಪ್ರೊ ಫಸ್ಟ್‌ ಲುಕ್: ಫಾಸ್ಟ್‌ ಚಾರ್ಜಿಂಗ್ ಜೊತೆ ಬೆಸ್ಟ್‌ ಕ್ಯಾಮೆರಾ

ಕ್ಯಾಮೆರಾ ಸೆನ್ಸಾರ್ ಮತ್ತು ಬ್ಯಾಟರಿ ಪವರ್
ಒಪ್ಪೋ ರೆನೊ 7 ಪ್ರೊ ಸ್ಮಾರ್ಟ್‌ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ imx766 ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೋನಿ imx709 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದರೊಂದಿಗೆ ಈ ಫೋನ್ 4500 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 65W ಫಾಸ್ಟ್ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ.

ಬೆಲೆ ಎಷ್ಟು ಮತ್ತು ಕೊನೆಯ ಮಾತು
ಒಪ್ಪೋ ರೆನೋ 7 ಪ್ರೊ ಸ್ಮಾರ್ಟ್‌ಫೋನ್‌ 12 GB RAM ಮತ್ತು 256 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು 39,999ರೂ. ಬೆಲೆಯನ್ನು ಹೊಂದಿದೆ. ಇನ್ನು ಈ ಫೋನ್ ಸ್ಟಾರ್ಟ್ರೈಲ್ಸ್ ಬ್ಲೂ ಮತ್ತು ಸ್ಟಾರ್ಲೈಟ್ ಬ್ಲ್ಯಾಕ್‌ ಕಲರ್‌ ಆಯ್ಕೆಯಲ್ಲಿ ಬರುತ್ತದೆ. ಇನ್ನು ಒಪ್ಪೋ ರೆನೋ 7 ಸ್ಮಾರ್ಟ್‌ಫೋನ್‌ 28,999ರೂ. ಬೆಲೆಯನ್ನು ಹೊಂದಿದೆ. ಇದು ಫೆಬ್ರವರಿ 17 ರಿಂದ ಫ್ಲಿಪ್‌ಕಾರ್ಟ್, ಒಪ್ಪೋ ಆನ್‌ಲೈನ್ ​​ಸ್ಟೋರ್, ಮತ್ತು ರಿಟೇಲ್‌ ಸ್ಟೋರ್‌ ನಲ್ಲಿ ಖರೀದಿಗೆ ಲಭ್ಯವಾಗಲಿದೆ.

Most Read Articles
Best Mobiles in India

English summary
Oppo Reno 7 Pro First Look: Best Camera With Powerful Fast Charging Support.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X