Subscribe to Gizbot

ಹೊಸ ವರ್ಷಕ್ಕೆ ಹೊಸ ಕೊಡುಗೆ: ಅಮೆಜಾನ್‌ನಲ್ಲಿ ಜಿಯೋ ಫೋನ್‌ ಮೇಲೆ ಆಫರ್..!

Written By:

ದೇಶಿಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ನಡುಕವನ್ನು ಹುಟ್ಟಿಸಿದ್ದ ರಿಲಯನ್ಸ್ ಜಿಯೋ ಫೋನ್, ಫೀಚರ್ ಫೋನ್‌ಗಿಂತಲೂ ಹೆಚ್ಚಿನ ಆಯ್ಕೆಗಳನ್ನು ಹೊಂದುವ ಮೂಲಕ ಭಾರತದ ಸ್ಮಾರ್ಟ್‌ ಫೀಚರ್ ಫೋನ್ ಎನ್ನುವ ಖ್ಯಾತಿ ಪಾತ್ರವಾಗಿತ್ತು. ಈಗಾಗಲೇ ಮೊದಲ ಹಂತದಲ್ಲಿ ಬಿಡುಗಡೆಗೊಂಡಿದ್ದ ಜಿಯೋ ಫೋನ್ ಸುಮಾರು 50 ಮಿಲಿಯನ್ ಸಂಖ್ಯೆಯಲ್ಲಿ ಮಾರಾಟವಾಗಿದೆ.

ಹೊಸ ವರ್ಷಕ್ಕೆ ಹೊಸ ಕೊಡುಗೆ: ಅಮೆಜಾನ್‌ನಲ್ಲಿ ಜಿಯೋ ಫೋನ್‌ ಮೇಲೆ ಆಫರ್..!

ಓದಿರಿ: ಹೊಸ ವರ್ಷಕ್ಕೆ ಶಾಕಿಂಗ್ ಗಿಫ್ಟ್: ಸಾವಿರಾರು ಫೋನ್‌ಗಳಲ್ಲಿ ಇಂದಿನಿಂದ ವಾಟ್ಸ್‌ಆಪ್ ವರ್ಕ್ ಆಗಲ್ಲ

ಗುಣಮಟ್ಟ ಹಾಗೂ ಉತ್ತಮ ಸೇವೆಯನ್ನು ನೀಡುತ್ತಿದ್ದ ಜಿಯೋ ಫೋನ್ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಬಹುಬೇಡಿಕೆಯನ್ನು ಉಳಿಸಿಕೊಂಡಿದೆ. ಈಗಾಗಲೇ ಎರಡನೇ ಹಂತದಲ್ಲಿ ಜಿಯೋ ಫೋನ್ ಬಿಡುಗಡೆಗೆ ಸಿದ್ಧವಾಗಿದ್ದು, ಗ್ರಾಹಕರಿಗೆ ಸುಲಭವಾಗಿ ದೊರೆಯುವ ಸಲುವಾಗಿ ಅಮೆಜಾನ್‌ನಲ್ಲಿ ಈ ಫೋನ್ ಸದ್ಯ ಸೇಲಿಗಿದೆ.

ಓದಿರಿ: ಬಾಂಡ್ ತರ ನೀವು ಕಾರಿನಲ್ಲಿ ಹಾರಿ: ಬೆಲೆ ಕೇಳಿ ಶಾಕ್ ಆಗಬೇಡಿ ಅಷ್ಟೆ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಮೆಜಾನ್‌ನಲ್ಲಿ ಬೆಲೆ:

ಅಮೆಜಾನ್‌ನಲ್ಲಿ ಬೆಲೆ:

ಅಮೆಜಾನ್ ನಲ್ಲಿ ಲಭ್ಯವಿರುವ ಜಿಯೋ ಫೋನ್ ರೂ. 1500ಕ್ಕೆ ಬದಲಾಗಿದೆ ರೂ. 1745ಕ್ಕೆ ಮಾರಾಟವಾಗುತ್ತಿದ್ದು, ಇದರೊಂದಿಗೆ ಡೆಲಿವರಿ ಚಾರ್ಜ್ ಸಹ ಸೇರಿ ರೂ. 1794 ಕ್ಕೆ ಜಿಯೋ ಫೋನ್ ಲಭ್ಯವಿದೆ. ಅಮೆಜಾನ್‌ನಲ್ಲಿ ಈ ಫೋನ್ ಖರೀದಿಸಿದರೆ ರೂ.294 ಅಧಿಕವಾಗಲಿದೆ.

ಹೊಸ ವರ್ಷಕ್ಕೆ ಮತ್ತೊಂದು Jio Surprise Cashback ಆಫರ್!!
ಶೂನ್ಯ ಬೆಲೆ:

ಶೂನ್ಯ ಬೆಲೆ:

ಅಮೆಜಾನ್‌ನಲ್ಲಿ ಜಿಯೋ ಫೋನ್ ಖರೀದಿ ಮಾಡಿದರೂ ಸಹ ಗ್ರಾಹಕರು ಶೂನ್ಯ ಬೆಲೆಗೆ ಈ ಫೋನ್ ದೊರೆಯಲಿದೆ ಎನ್ನಲಾಗಿದೆ. ಅಂದರೆ ಮೂರು ವರ್ಷದ ನಂತರ ಗ್ರಾಹಕರು ಈ ಫೋನ್ ಹಿಂದಿರುಗಿಸುವ ಮೂಲಕ ತಮ್ಮ ಹಣವನ್ನು ಹಿಂದಕ್ಕೆ ಪಡೆಯಬಹುದಾಗಿದೆ.

ಜಿಯೋ ಪೋನ್ ಹೇಗಿದೆ ವಿಡಿಯೋ ನೋಡಿ:

ಜಿಯೋ ಫೋನ್ ಹೇಗಿದೆ ಎಂಬುದನ್ನು ಕನ್ನಡದಲ್ಲಿ ತಿಳಿಯಿರಿ.

ಜಿಯೋ ಸ್ಟೋರ್‌ಗಳಲ್ಲಿಯೂ ಲಭ್ಯ:

ಜಿಯೋ ಸ್ಟೋರ್‌ಗಳಲ್ಲಿಯೂ ಲಭ್ಯ:

ಮೊದಲಿಗೆ ಕೇವಲ ರಿಜಿಸ್ಟರ್ ಆದವರಿಗೆ ಮಾತ್ರವೇ ಫೋನ್ ನೀಡಿದ್ದ ಜಿಯೋ, ಎರಡನೇ ಹಂತದಲ್ಲಿ ಜಿಯೋ ಸ್ಟೋರ್ ಗಳಲ್ಲಿಯೂ ಈ ಫೋನ್ ಮಾರಾಟಕ್ಕೆ ಇಟ್ಟಿದೆ. ನಿಮ್ಮ ಹತ್ತಿರದ ಜಿಯೋ ಸ್ಟೋರಿನಲ್ಲಿಯೂ ನೀವು ಜಿಯೋ ಫೋನ್‌ಗಳನ್ನು ಪಡೆಯಬಹುದಾಗಿದೆ.

ಜಿಯೋ ಫೋನ್ ವಿಶೇಷತೆ:

ಜಿಯೋ ಫೋನ್ ವಿಶೇಷತೆ:

ಜಿಯೋ ಫೋನಿನಲ್ಲಿ 2.4 ಇಂಚಿನ QVGA ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದರಲ್ಲಿ 512MB RAM ಜೊತೆಗೆ 4GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಫೋನ್ ಹಿಂಭಾಗದಲ್ಲಿ 2MP ಕ್ಯಾಮೆರಾ ಮುಂಭಾಗದಲ್ಲಿ VGA ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance JioPhone Now Available on Amazon India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot