ಗ್ಯಾಲ್ಯಾಕ್ಸಿ ಎ10, ಎ20 ಮತ್ತು ಎ30 ಫೋನ್‌ ಖರೀದಿಸಬೇಕೆ?.ಹಾಗಾದ್ರೆ ತಡ ಮಾಡ್ಬೇಡಿ!

|

ಸ್ಯಾಮ್‌ಸಂಗ್‌ ಇತ್ತೀಚಿಗೆ ಗ್ಯಾಲ್ಯಾಕ್ಸಿ ಎ ಸರಣಿಯಲ್ಲಿ ಹಲವು ಹೊಸ ಸ್ಮಾರ್ಟ್‌ಪೋನ್‌ಗಳನ್ನು ಪರಿಚಯಿಸಿದ್ದು, ಅವುಗಳಲ್ಲಿ ಎಂಟ್ರಿ ಲವೆಲ್ ಬಜೆಟ್‌ ಫೋನ್‌ನಿಂದ ಹೈ ಎಂಡ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳು ಸಹ ಇವೆ. ಸದ್ಯ ಗ್ಯಾಲ್ಯಾಕ್ಸಿ ಎ ಸರಣಿಯ ಫೋನ್‌ಗಳು ಗ್ರಾಹಕರನ್ನು ಆಕರ್ಷಿಸಿದ್ದು, ಇದೀಗ ಕಂಪನಿಯು ಗ್ರಾಹಕರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಅದೆನೆಂದರೇ ಗ್ಯಾಲ್ಯಾಕ್ಸಿ ಎ ಸರಣಿಯ ಆರಂಭಿಕ ಮೂರು ಸ್ಮಾರ್ಟ್‌ಫೋನ್‌ ಮಾದರಿಗಳ ಬೆಲೆ ಇಳಿಕೆ ಆಗಿದೆ.

ಗ್ಯಾಲ್ಯಾಕ್ಸಿ ಎ10, ಎ20 ಮತ್ತು ಎ30 ಫೋನ್‌ ಖರೀದಿಸಬೇಕೆ?ಹಾಗಾದ್ರೆ ತಡ ಮಾಡ್ಬೇಡಿ!

ಹೌದು, ಸ್ಯಾಮ್‌ಸಂಗ್ ಕಂಪನಿಯು ಗ್ಯಾಲ್ಯಾಕ್ಸಿ ಎ10, ಎ20 ಮತ್ತು ಎ30 ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಇಳಿಕೆ ಮಾಡಿದ್ದು, ಖರೀದಿಗೆ ಒಳ್ಳೆಯ ಸಮಯ ಒದಗಿಸಿಕೊಟ್ಟಿದೆ. ಗ್ಯಾಲ್ಯಾಕ್ಸಿ ಎ10 ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್ ಆಗಿದ್ದು, ಹಾಗೇ ಗ್ಯಾಲ್ಯಾಕ್ಸಿ ಎ20 ಮತ್ತು ಎ30 ಮಿಡ್‌ರೇಂಜ್‌ ಬೆಲೆಯಲ್ಲಿ ಗುರುತಿಸಿಕೊಂಡಿವೆ. ಹಾಗಾದರೇ ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಎ10, ಎ20 ಮತ್ತು ಎ30 ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಎಷ್ಟು ಇಳಿಕೆ ಕಂಡಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಗ್ಯಾಲ್ಯಾಕ್ಸಿ ಎ10

ಗ್ಯಾಲ್ಯಾಕ್ಸಿ ಎ10

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ10 ಆರಂಭಿಕ ಸ್ಮಾರ್ಟ್‌ಫೋನ್‌ ಆಗಿದ್ದು, 6.2 ಇಂಚಿನ ವಿ ಇನ್‌ಫಿನಿಟಿ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. 3400mAh ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಉತ್ತಮ 13ಎಂಪಿ ಕ್ಯಾಮೆರಾ ಆಯ್ಕೆಯನ್ನು ಹೊಂದಿದೆ. 2GB RAM ಮತ್ತು 32 GB ಸ್ಟೋರೇಜ್‌ ಆಯ್ಕೆಯನ್ನು ಒಳಗೊಂಡಿದೆ. ಇದರ ಬೆಲೆಯು 8,490ರೂ ಆಗಿದ್ದು, ಬೆಲೆ ಇಳಿಕೆಯಿಂದ 7,990ರೂ.ಗಳಿಗೆ ದೊರೆಯಲಿದೆ.

ಗ್ಯಾಲ್ಯಾಕ್ಸಿ ಎ20

ಗ್ಯಾಲ್ಯಾಕ್ಸಿ ಎ20

ಗ್ಯಾಲ್ಯಾಕ್ಸಿ ಎ20 ಸ್ಮಾರ್ಟ್‌ಫೋನ್ 6.4 ಇಂಚಿನ ಸೂಪರ್‌ AMOLED ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 13ಎಂಪಿ + 5ಎಂಪಿ ಡ್ಯುಯಲ್‌ ಕ್ಯಾಮೆರಾಗಳನ್ನು ಹೊಂದಿದೆ. 4000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಸಹ ಇದೆ. 3GB RAM ಫೋನಿಗೆ ಕಾರ್ಯವೈಖರಿಗೆ ಬಲ ನೀಡಲಿದೆ. 12,490ರೂ.ಗೆ ಲಭ್ಯವಿದ್ದ ಈ ಫೋನ್‌ ಈಗ 11,490ರೂ.ಗಳಿಗೆ ಸೀಗಲಿದೆ.

ಗ್ಯಾಲ್ಯಾಕ್ಸಿ ಎ30

ಗ್ಯಾಲ್ಯಾಕ್ಸಿ ಎ30

ಮಿಡ್‌ರೇಂಜ್‌ ಮಾದರಿಯಲ್ಲಿರುವ ಈ ಸ್ಮಾರ್ಟ್‌ಫೋನ್‌ 6.4 ಇಂಚಿನ ಸೂಪರ್‌ AMOLED ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರುವ ಜೊತೆಗೆ ಡ್ಯುಯಲ್ ಕ್ಯಾಮೆರಾಗಳನ್ನು ಹೊಂದಿದೆ. ಫೋನಿನ್ ವೇಗಕ್ಕೆ 3GB RAM ಒದಗಿಸಲಾಗಿದ್ದು, 4000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಸದ್ಯ ಈ ಫೋನ್‌ 15,490ರೂ.ಗಳಿಗೆ ಲಭ್ಯವಿದ್ದು, ಈ ಮೊದಲು 16,990ರೂ.ಗಳಿಗೆ ದೊರೆಯುತ್ತಿತ್ತು.

ಲಭ್ಯತೆ

ಲಭ್ಯತೆ

ಬೆಲೆ ಇಳಿಕೆ ಕಂಡಿರುವ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ10, ಎ20 ಮತ್ತು ಎ30 ಈ ಮೂರು ಸ್ಮಾರ್ಟ್‌ಫೋನ್‌ಗಳು ಇದೀಗ ಖರೀದಿಗೆ ಲಭ್ಯವಿದ್ದು, ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಸಬಹುದಾಗಿದೆ. ಹಾಗೇ ಪ್ರಮುಖ ಇ ಕಾಮರ್ಸ್‌ ಜಾಲತಾಣಗಳಲ್ಲಿಯೂ ಸಹ ದೊರೆಯಲಿದೆ.

Best Mobiles in India

English summary
Samsung Galaxy A10, A20 and A30 get price cuts in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X