ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30 ವಿಮರ್ಶೆ : ಕೊಟ್ಟ ಹಣಕ್ಕೆ ಮೋಸವಿಲ್ಲ.!

|

ಸ್ಯಾಮ್‌ಸಂಗ್‌ ಕಂಪನಿಯು ಇತ್ತೀಚಿಗೆ ಗ್ಯಾಲ್ಯಾಕ್ಸಿ ಎಂ ಸರಣಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದ್ದು, ಅವುಗಳಲ್ಲಿ ಗ್ಯಾಲ್ಯಾಕ್ಸಿ ಎಂ30 ಎರಡು ಕಾರಣಗಳಿಂದ ಭಿನ್ನವಾಗಿ ಗುರುತಿಸಿಕೊಂಡಿದೆ. ಈ ಫೋನ್‌ ಬಜೆಟ್‌ ಬೆಲೆಯ ಪ್ರೈಸ್‌ಟ್ಯಾಗ್‌ ಹೊಂದಿರುವುದು ಒಂದೆಡೆಯಾದರೇ, ಇದರಲ್ಲಿರುವ ಅತ್ಯುತ್ತಮ ಫೀಚರ್ಸ್‌ಗಳು ಸ್ಮಾರ್ಟ್‌ಫೋನಿನತ್ತ ಗ್ರಾಹಕರು ತಿರುಗಿ ನೋಡುವಂತೆ ಮಾಡಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30 ವಿಮರ್ಶೆ : ಕೊಟ್ಟ ಹಣಕ್ಕೆ ಮೋಸವಿಲ್ಲ.!

ಸ್ಯಾಮ್‌ಸಂಗ್‌ ಕಂಪನಿಯಿಂದ ಅತ್ಯುತ್ತಮ ಬಜೆಟ್‌ ಫೋನ್‌ ನಿರೀಕ್ಷಿಸುವ ಗ್ರಾಹಕರಿಗೆ ಕಂಪನಿಯು ಗ್ಯಾಲ್ಯಾಕ್ಸಿ ಎಂ30 ಸ್ಮಾರ್ಟ್‌ಫೋನ್‌ ಮೂಲಕ ಕೊಡುಗೆಯನ್ನು ನೀಡಿದೆ ಎನ್ನಬಹುದು. ಏಕೆಂದರೇ ಗ್ಯಾಲ್ಯಾಕ್ಸಿ ಎಂ30 ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ, ಕಡಿಮೆ ಅಂಚಿನ ಡಿಸ್‌ಪ್ಲೇ, ನೂತನ ಬಾಹ್ಯ ಡಿಸೈನ್ ಮತ್ತು ಬೆಸ್ಟ್ ಬ್ಯಾಟರಿ ಬ್ಯಾಕ್‌ಅಪ್‌ ಸೇರಿದಂತೆ ಮತ್ತಷ್ಟು ವಿಶೇಷತೆಗಳನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30 ವಿಮರ್ಶೆ : ಕೊಟ್ಟ ಹಣಕ್ಕೆ ಮೋಸವಿಲ್ಲ.!

ಬಜೆಟ್‌ ಬೆಲೆಯ ಗ್ಯಾಲ್ಯಾಕ್ಸಿ ಎಂ30 ಸ್ಮಾರ್ಟ್‌ಫೋನಿನಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಆಯ್ಕೆ, ಹೈ ರೆಸಲ್ಯೂಶನ್‌ ಡಿಸ್‌ಪ್ಲೇ, ಪವರ್‌ಫುಲ್‌ ಬ್ಯಾಟರಿ ಬಾಳಿಕೆ ಫೀಚರ್ಸ್‌ಗಳನ್ನು ನೀಡಿರುವುದು ಆಕರ್ಷಣೆಯ ಪ್ಲಸ್‌ ಪಾಯಿಂಟ್ ಆಗಿದ್ದು, ಗ್ರಾಹಕರಿಗೆ ಕೈಗೆಟುವ ಬೆಸ್ಟ್ ಸ್ಮಾರ್ಟ್‌ಫೋನ್‌ ಎನಿಸುವಂತಿದೆ. ಹಾಗಾದರೇ ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಎಂ30 ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳ ಕಾರ್ಯವೈಖರಿಯ ಬಗ್ಗೆ ನೋಡೋಣ ಬನ್ನಿರಿ.

ಡಿಸೈನ್‌

ಡಿಸೈನ್‌

ಗ್ಯಾಲ್ಯಾಕ್ಸಿ ಎಂ30 ಸ್ಮಾರ್ಟ್‌ಫೋನಿನ ಡಿಸ್‌ಪ್ಲೇಯಲ್ಲಿ ಅತೀ ಕಡಿಮೆ ಬೆಜಲ್‌ ಹೊಂದಿದ್ದು, ನೋಡಲು ಸುಂದರವಾಗಿ ಕಾಣುತ್ತದೆ ಮತ್ತು ವಿಡಿಯೊ ವೀಕ್ಷಣೆಗೆ ಪೂರ್ಣ ಡಿಸ್‌ಪ್ಲೇಯ ಅನುಭವ ನೀಡಲಿದೆ. ಪ್ಲಾಸ್ಟಿಕ್ ಯೂನಿಬಾಡಿಯ ರಚನೆಯನ್ನು ಪಡೆದಿರುವ ಈ ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ನೀಡಲಾಗಿದ್ದು, ಅಲ್ಲಿಯೇ ಫಿಂಗರ್‌ ಸೆನ್ಸಾರ್‌ ಸಹ ನೀಡಲಾಗಿದೆ. ಫೋನಿನ ಬಲಗಡೆ ಪವರ್‌ ಬಟನ್‌, ಹಾಗೇ ಎಡಗಡೆ ಸಿಮ್ ಸ್ಲಾಟ್‌, ಮತ್ತು ಸೌಂಡ್‌ ನಿಯಂತ್ರಣ ಬಟಣ ನೀಡಲಾಗಿದೆ. ಫೋನ್‌ ಸುತ್ತಳತೆಯು 15.9 x 0.9 x 7.5 ಸೆ,ಮೀ ಆಗಿದ್ದು, 172 ಗ್ರಾಂ ತೂಕ ಹೊಂದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಈ ಫೋನಿನ ಡಿಸ್‌ಪ್ಲೇಯು ಹೆಚ್ಚು ಪ್ರಖರವಾಗಿದ್ದು, 1080 * 2340 ಪಿಕ್ಸಲ್‌ ರೆಸಲ್ಯೂಶನ್‌ ಹೊಂದಿದೆ. 6.4 ಇಂಚಿನ ಫುಲ್‌ ಹೆಚ್‌ಡಿ ಸೂಪರ್‌ AMOLED ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಹಳೆಯ ಸ್ಯಾಮ್‌ಸಂಗ್‌ ಸ್ಮಾರ್ಟ್‌ಪೋನ್‌ಗಳಿಗಿಂತ ಅತ್ಯುತ್ತಮ ಡಿಸ್‌ಪ್ಲೇ ಎನಿಸಲಿದೆ. ಡಿಸ್‌ಪ್ಲೇಯ ಸುತ್ತಲೂ ಕಡಿಮೆ ಅಂಚನ್ನು ನೀಡಲಾಗಿದ್ದು, ಹಾಗೇ ಡಿಸ್‌ಪ್ಲೇ ಅಂಚಿನ ಸುತ್ತಲೂ ತಿಳುವಾದ ಬ್ಲ್ಯಾಕ್‌ ಬಾರ್ಡರ್ ಲೈನ್‌ ಕಾಣಬಹುದಾಗಿದೆ. ಡಿಸ್‌ಪ್ಲೇಯಲ್ಲಿ ಹಲವು ಸೆಟ್ಟಿಂಗ್ ಆಯ್ಕೆಗಳನ್ನು ಒಳಗೊಂಡಿದ್ದು, ವೀಕ್ಷಣೆಯ ಅನುಭವ ಉತ್ತಮವೆನಿಸಲಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಗ್ಯಾಲ್ಯಾಕ್ಸಿ ಎಂ30 ಸ್ಮಾರ್ಟ್‌ಫೋನ್‌ನಲ್ಲಿ 14nm ಆಕ್ಟಾ ಕೋರ್‌ Exynos 7904 SoC ಪ್ರೊಸೆಸರ್‌ ನೀಡಲಾಗಿದ್ದು, ಸ್ಮಾರ್ಟ್‌ಫೋನ್‌ ಮಲ್ಟಿಟಾಸ್ಕ್‌ ಕೆಲಸಗಳನ್ನು ತುಂಬಾ ಸಲಿಸಾಗಿ ನಿರ್ವಹಿಸುವ ಬಲವನ್ನು ಒಳಗೊಂಡಿದೆ. ಹಾಗೇ ಪಬ್‌ಜಿ ಮತ್ತು ಇತರೆ ಹೈ ಡೇಟಾ ಬೇಡುವ ಗೇಮ್‌ಗಳ ಆಟಕ್ಕೆ ಪೂರ್ಣ ಬೆಂಬಲವನ್ನು ನೀಡುತ್ತದೆ. ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಅವು ಕ್ರಮವಾಗಿ 4GB/6GB RAM ಮತ್ತು 64/ 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿವೆ.

ಕ್ಯಾಮೆರಾ

ಕ್ಯಾಮೆರಾ

ಹಿಂಬದಿಯಲ್ಲಿ ತ್ರಿವಳಿ ರೇರ್‌ ಕ್ಯಾಮೆರಾ ಆಯ್ಕೆಗಳನ್ನು ಹೊಂದಿದೆ. ಪ್ರಾಥಮಿಕ ಕ್ಯಾಮೆರಾವು 13 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಒಳಗೊಂಡಿದ್ದು, f/1.9 ಸೆನ್ಸಾರ್‌ ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 5ಮೆಗಾಪಿಕ್ಸಲ್ ಅಲ್ಟ್ರಾವೈಡ್‌ ಲೆನ್ಸ್‌ನಲ್ಲಿದ್ದು, ಹಾಗೂ ಮೂರನೇ ಕ್ಯಾಮೆರಾವು ಸಹ 5 ಮೆಗಾಪಿಕ್ಸಲ್ ಸಾಮರ್ಥ್ಯದೊಂದಿಗೆ ಡೆಪ್ತ್‌ ಸೆನ್ಸಾರ್‌ನಲ್ಲಿದೆ. ಕ್ಯಾಮೆರಾದಲ್ಲಿ ಬ್ಯೂಟಿಮೋಡ್, ಮನೋರಮಾ, ಎಚ್‌ಆರ್‌ಡಿ ಆಯ್ಕೆಗಳು ಸೇರಿದಂತೆ ಹಲವು ಅತ್ಯುತ್ತಮ ಆಯ್ಕೆಗಳನ್ನು ಒಳಗೊಂಡಿದೆ. ಸೆಲ್ಫಿಗಾಗಿ 16ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದ್ದು, f/2.0 ಅಪರ್ಚರ್ ಹೊಂದಿದೆ. ಸೆಲ್ಫಿ ಕ್ಯಾಮೆರಾ ಸಹ ಉತ್ತಮವಾಗಿದೆ.

ಬ್ಯಾಟರಿ

ಬ್ಯಾಟರಿ

ಗ್ಯಾಲ್ಯಾಕ್ಸಿ ಎಂ30 ಸ್ಮಾರ್ಟ್‌ಫೋನಿನ ಪ್ರಮುಖ ಆಕರ್ಷಣೆಯ ಶಕ್ತಿ ಅದರ ಬ್ಯಾಟರಿ ಆಗಿದ್ದು, 5,000 mAh ಸಾಮರ್ಥ್ಯದ ಪವರ್‌ಫುಲ್‌ ಬ್ಯಾಟರಿಯನ್ನು ಹೊಂದಿದೆ. 15ವ್ಯಾಟ್‌ ಬಲದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದ್ದು, ಇದರೊಂದಿಗೆ ಚಾರ್ಜಿಂಗ್‌ಗಾಗಿ ಟೈಪ್‌-ಸಿ ಚಾರ್ಜರ್‌ ಸಹ ನೀಡಲಾಗಿದೆ. ಸುಮಾರು ಎರಡು ದಿನದ ಮಟ್ಟಿಗೆ ಬ್ಯಾಟರಿ ಬಾಳಿಕೆಯನ್ನು ನಿರೀಕ್ಷಿಸಬಹುದಾಗಿದೆ. ಫಾಸ್ಟ್ ಚಾರ್ಜರ್‌ ನೆರವಿನಿಂದ ಸ್ಮಾರ್ಟ್‌ಫೋನ್‌ ಬಹುಬೇಗನೆ ಚಾರ್ಜ್‌ ಪಡೆದುಕೊಳ್ಳುತ್ತದೆ.

ಬೆಲೆ

ಬೆಲೆ

ಗ್ಯಾಲ್ಯಾಕ್ಸಿ ಎಂ30 ಸ್ಮಾರ್ಟ್‌ಫೋನ್‌ ಗ್ರಾಡಿಯೇಶನ್ ಬ್ಲ್ಯಾಕ್‌ ಮತ್ತು ಗ್ರಾಡಿಯೇಶನ್ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ. ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ಫೋನಿನ 4GB RAM + 64GB ಆಂತರಿಕ ಸ್ಟೋರೇಜ್‌ ಸಾಮರ್ಥ್ಯದ ವೇರಿಯಂಟ್ ಬೆಲೆಯು 14,999ರೂ.ಗಳು ಆಗಿದೆ.

Best Mobiles in India

English summary
Samsung Galaxy M30 review: Best display, decent camera and average performance for a sub Rs 15,000 phone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X