ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಎಕ್ಸ್' ಪೋಲ್ಡೆಬಲ್ ಸ್ಮಾರ್ಟ್‌ಫೋನ್ ಬರುವುದು ಪಕ್ಕಾ!..ಬೆಲೆ ಮಾತ್ರ ಕೇಳ್ಬೇಡಿ!!

|

ಆಪಲ್ 'ಐಫೋನ್ ಎಕ್ಸ್' ಸ್ಮಾರ್ಟ್‌ಫೋನಿಗೆ ಸೆಡ್ಡು ಹೊಡೆಯಲು ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಎಕ್ಸ್' ಸ್ಮಾರ್ಟ್‌ಫೋನ್ ಬರುತ್ತಿದೆ ಎನ್ನುವ ಸುದ್ದಿ ನಿಜವಾದಂತಿದೆ. ದಕ್ಷಿಣ ಕೋರಿಯಾದಿಂದ ಮೂಲಗಳಿಂದ ಸ್ಯಾಮ್‌ಸಂಗ್ ಕಂಪೆನಿ 'ಗ್ಯಾಲಾಕ್ಸಿ ಎಕ್ಸ್' ಸ್ಮಾರ್ಟ್‌ಫೋನ್ ಅನ್ನು ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ ಎನ್ನುವ ಸುದ್ದಿ ಪ್ರಕಟವಾಗಿದೆ.

'ಐಫೋನ್ ಎಕ್ಸ್' ಬಿಡುಗಡೆಯಾದ ಸಮಯದಿಂದಲೂ ಚರ್ಚಾ ವಿಷಯವಾಗಿರುವ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಎಕ್ಸ್' ಸ್ಮಾರ್ಟ್‌ಫೋನ್ ಬಗ್ಗೆ ಇದೇ ಮೊದಲ ಬಾರಿಗೆ ಸುದ್ದಿ ಲೀಕ್ ಆಗಿದ್ದು, ಈ ಸ್ಮಾರ್ಟ್‌ಪೋನ್ ಪೋಲ್ಡೆಬಲ್ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಇನ್ನು ಈ ಫೋನಿನ ಬೆಲೆ ಕೇಳಿದ ನಂತರ ನೀವು ತಲೆ ತಿರುಗಿ ಬೀಳದಿದ್ದರೆ ಸಾಕು ಎನ್ನುವಂತಿದೆ.

ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಎಕ್ಸ್' ಪೋಲ್ಡೆಬಲ್ ಸ್ಮಾರ್ಟ್‌ಫೋನ್ ಬರುವುದು ಪಕ್ಕಾ!

ಪ್ರಮುಖ ಟೆಕ್ ವೆಬ್‌ಸೈಟ್‌ಗಳು ವರದಿ ಮಾಡಿರುವಂತೆ, 'ಐಫೋನ್ ಎಕ್ಸ್'ಗೆ ಸೆಡ್ಡುಹೊಡೆದಿರುವ ಸ್ಯಾಮ್ಸಂಗ್ ಕಂಪೆನಿಯ ಮೊದಲ ಪೋಲ್ಡೆಬಲ್ ಸ್ಮಾರ್ಟ್ಫೋನ್ ಬೆಲೆ 2 ಮಿಲಿಯನ್ ಕೊರಿಯನ್ ವಾಂಗ್ ಅಂತೆ. ಅಂದರೆ, ಅಮೆರಿಕನ್ ಡಾಲರ್ ಬೆಲೆಯಲ್ಲಿ 1850 ಡಾಲರ್ ಆದರೆ, ಭಾರತದ ರೂಪಾಯಿಗಳ ಲೆಕ್ಕದಲ್ಲ ಸುಮಾರು 1,25,000 ರೂಪಾಯಿಯಾಗಲಿದೆ.

'ಗ್ಯಾಲಕ್ಸಿ ಎಕ್ಸ್' ಸ್ಮಾರ್ಟ್‌ಫೋನ್ 7.3 ಇಂಚಿನ OLED ಸ್ಕ್ರೀನ್ ಹೊಂದಲಿದ್ದು ಪೋಲ್ಡ್ಸ್ ಮೇಲೆ 4.5 ಇಂಚುಗಳು ಇರಲಿದೆ ಎಂದು ಹೇಳಲಾಗಿದೆ.ಈ ವರದಿ ಪ್ರಕಾರ, ಸ್ಯಾಮ್ಸಂಗ್ ಗ್ಯಾಲಕ್ಸಿ ಎಕ್ಸ್ ವಿಶ್ವದ ಅತ್ಯಂತ ದುಬಾರಿ ಸಾರ್ವಜನಿಕ ಸ್ಮಾರ್ಟ್‌ಫೋನ್ ಆಗಲಿರುವುದರಿಂದ, ಸ್ಮಾರ್ಟ್‌ಫೋನ್ ಫೀಚರ್ಸ್ ಕೂಡ ಮೊಬೈಲ್ ತಜ್ಞರ ಊಹಿಗೆ ನಿಲುಕದು ಎಂದು ಅಂದಾಜಿಸಲಾಗಿದೆ.

ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಎಕ್ಸ್' ಪೋಲ್ಡೆಬಲ್ ಸ್ಮಾರ್ಟ್‌ಫೋನ್ ಬರುವುದು ಪಕ್ಕಾ!

ಇನ್ನು 'ಗ್ಯಾಲಾಕ್ಸಿ ಎಕ್ಸ್' ಸ್ಮಾರ್ಟ್‌ಫೋನ್ ತಯಾರಿಕೆಗೆ ಸ್ಯಾಮ್ಸಂಗ್ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡಿರುವ ಇತರೆ ಕಂಪನಿಗಳು ಬಿಡಿಭಾಗಗಳನ್ನು ಈಗಾಗಲೇ ಪೂರೈಸಿವೆಯಂತೆ. ಹಾಗಾಗಿ ,ಗ್ಯಾಲಾಕ್ಸಿ ಎಕ್ಸ್ ಸ್ಮಾರ್ಟ್‌ಫೋನ್ ತಯಾರಿಕೆ ಈ ವರ್ಷದಲ್ಲಿಯೇ ಪ್ರಾರಂಭವಾಗಿ, 2019ರ ವಿಶ್ವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.

ಓದಿರಿ: 10 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿವೆ ಈ ಬೆಸ್ಟ್ ಡ್ಯುಯಲ್ ಕ್ಯಾಮೆರಾ ಫೋನ್‌ಗಳು!!

Best Mobiles in India

English summary
According to analysts in Korea, Samsung’s foldable Galaxy X smartphone could cost as much as $2,000 when it launches in 2019.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X