ಗ್ಯಾಲಾಕ್ಸಿ ವೈ ಡ್ಯುಯೋಸ್‌ ಲೈಟ್‌ VS ಮೈಕ್ರೋಮ್ಯಾಕ್ಸ್‌ ಎ25 ಸ್ಮಾರ್ಟಿ

By Vijeth Kumar Dn
|

ಗ್ಯಾಲಾಕ್ಸಿ ವೈ ಡ್ಯುಯೋಸ್‌ ಲೈಟ್‌ VS ಮೈಕ್ರೋಮ್ಯಾಕ್ಸ್‌ ಎ25 ಸ್ಮಾರ್ಟಿ

ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯು 2011 ರಿಂದ 2015 ರ ಅವಧಿಯಲ್ಲಿ ಶೇಕಡ 116 ರಷ್ಟು ಪ್ರಗತಿ ಕಾಣಲಿದೆ ಎಂದು ವಿಶ್ಲೇಷಕರುಗಳು ಭವಿಷ್ಯ ನುಡಿದಿದ್ದಾರೆ. ಅದರಲ್ಲಿಯೂ ಕಡಿಮೆ ಬೆಲೆಯಲ್ಲಿನ ಬಜೆಟ್‌ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ದುಪ್ಪಟ್ಟು ಪ್ರಮಾಣದಲ್ಲಿ ಏರಿಕೆಯಾಗಲಿದ್ದು ಸ್ಮಾರ್ಟ್‌ಫೋನ್‌ಗಳ ಒಟ್ಟಾರೆ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಲಿದೆ.

ಅಂದಹಾಗೆ ಇಂದು ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ನೋಕಿಯಾ, ಸ್ಯಾಮ್ಸಂಗ್‌, ಹೆಚ್‌ಟಿಸಿ ಯಂತಹ ದಿಗ್ಗಜ ಸಂಸ್ಥೆಗಳೊಂದಿಗೆ ಸ್ಥಳೀಯ ಸಂಸ್ಥೆಗಳಾದ ಕಾರ್ಬನ್‌, ಮೈಕ್ರೋಮ್ಯಾಕ್ಸ್‌, ಸ್ಪೈಸ್‌, ಝೆನ್‌ ನಂತಹ ಸಂಸ್ಥೆಗಳು ತೀವ್ರ ಪೈಪೊಟಿಯೊಂದಿಗೆ ಒಂದರ ನಂತರ ಒಂದರಂತೆ ಕೈಗೆಟಕುವ ದರದಲ್ಲಿ ನೂತನ ಮಾದರಿಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿವೆ.

ಕೈಗೆಟಕುವ ದರದಲ್ಲಿನ ಸ್ಮಾರ್ಟ್‌ಫೋನ್‌ಗಳು ಹೆಚ್ಚಾಗಿ ಗ್ರಾಹಕರನ್ನು ಸೆಳೆಯುತ್ತದೆ. ಅದರಲ್ಲಿಯೂ ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳಿಗೆ ಗ್ರಾಹಕರು ಮೊದಲ ಆದ್ಯತೆ ನೀಡುತ್ತಾರೆ. ಆದ್ದರಿಂದಲೇ ಗಿಜ್ಬಾಟ್‌ ಇಂದು ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಆಕರ್ಷಕ ಫೀಚರ್ಸ್‌ ಹೊಂದಿರುವ ಬಜೆಟ್‌ ಸ್ಮಾರ್ಟ್‌ಫೋನ್‌ಗಳಾದ ಸ್ಯಾಮ್ಸಂಗ್‌ ಗ್ಯಾಲಾಕ್ಸಿ ವೈ ಡ್ಯುಯೋಸ್‌ ಹಾಗೂ ಮೈಕ್ರೋಮ್ಯಾಕ್ಸ್‌ನ ಎ25 ಸ್ಮಾರ್ಟಿ ನಡುವಿನ ಹೋಲಿಕೆಯನ್ನು ತಂದಿದೆ ಒಮ್ಮೆ ಓದಿ ನೋಡಿ.

ತೂಕ ಹಾಗೂ ಸುತ್ತಳತೆ: ಗ್ಯಾಲಾಕ್ಸಿ ವೈ ಡ್ಯುಯೋಸ್‌ ಲೈಟ್‌ ಸ್ಮಾರ್ಟ್‌ಫೋನ್‌ 103.7×57.5×11.9 mm ಸುತ್ತಳತೆಯೊಂದಿಗೆ 97 ಗ್ರಾಂ ತೂಕ ದೊಂದಿಗೆ ಕೊಂಚ ತೆಳು ಹಾಗೂ ಹಗುರವೆನಿಸುತ್ತದೆ, ಮತ್ತೊಂದೆಡೆ ಎ25 ಸ್ಮಾರ್ಟಿ 104.5 x 56 x 13 mm ಸುತ್ತಳತೆಯೊಂದಿಗೆ 102 ಗ್ರಾಂ ತೂಕ ಹೊಂದಿದೆ.

ದರ್ಶಕ: ಈ ವಿಚಾರದಲ್ಲಿ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ 2.8 ಇಂಚಿನ ಕೆಪಾಸಿಟೀವ್‌ ಟಚ್‌ಸ್ಕ್ರೀನ್‌ ನೀಡಲಾಗಿದ್ದು 240 x 320 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿವೆ.

ಪ್ರೊಸೆಸರ್‌: ಗ್ಯಾಲಾಕ್ಸಿ ವೈ ಡ್ಯುಯೋಸ್‌ ಲೈಟ್‌ನಲ್ಲಿ 832MHz ಪ್ರೊಸೆಸರ್‌ ನೀಡಲಾಗಿದ್ದರೆ. ಎ25 ಸ್ಮಾರ್ಟಿಯಲ್ಲಿ ಕೊಂಚ ಉತ್ತಮವಾದ 1GHz ಪ್ರೊಸೆಸರ್‌ ನೀಡಲಗಿದೆ.

ಆಪರೇಟಿಂಗ್‌ ಸಿಸ್ಟಂ: ಎರಡೂ ಕೂಡಾ ಬಜೆಟ್‌ ಸ್ಮಾರ್ಟ್‌ಫೋನ್‌ ಆದ್ದರಿಂದ ಆಂಡ್ರಾಯ್ಡ್‌ 2.3 ಜಿಂಜರ್ಬೆಡ್‌ ಆಪರೇಟಿಂಗ್‌ ಸಿಸ್ಟಂ ನೀಡಲಾಗಿದೆ. ಅಂದಹಾಗೆ ಈ ಆಪರೇಟಿಂಗ್‌ ಸಿಸ್ಟಂ ಈಗ ಕೊಂಚ ಹಳೆಯದಾಗಿದೆ.

ಕ್ಯಾಮೆರಾ: ಗ್ಯಾಲಾಕ್ಸಿ ವೈ ಡ್ಯುಯೋಸ್‌ ಲೈಟ್‌ನಲ್ಲಿ 2ಎಂಪಿ ಸಾಮರ್ತ್ಯದ ಹಿಂಬದಿಯ ಕ್ಯಾಮೆರಾ ನೀಡಲಾಗಿದ್ದರೆ, ಮತ್ತೊಂದೆಡೆ ಎ25 ಸ್ಮಾರ್ಟಿ 1.3ಎಂಪಿ ಕ್ಯಾಮೆರಾ ಹೊಂದಿದೆ. ಅಂದಹಾಗೆ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ವಿಡಿಯೋ ಕರೆಗಾಗಿ ಮುಂಬದಿಯ ವಿಜಿಎ ಕ್ಯಾಮೆರಾ ನೀಡಲಾಗಿಲ್ಲ.

ಸ್ಟೋರೇಜ್‌: ಗ್ಯಾಲಾಕ್ಸಿ ವೈ ಡ್ಯುಯೋಸ್‌ ಲೈಟ್‌ ಸ್ಮಾರ್ಟ್‌ಫೋನ್‌ನಲ್ಲಿ 4ಜಿಬಿ ಆಂತರಿಕ ಸ್ಟೋರೇಜ್‌ ನೊಂದಿಗೆ 512ಎಂಬಿ RAM ನೀಡಲಾಗಿದ್ದು, ಎ25 ಸ್ಮಾರ್ಟಿಯ 120ಎಂಬಿ ಆಂತರಿಕ ಮೆಮೊರಿ ಹಾಗೂ 256ಎಂಬಿ ಸಾಮರ್ತ್ಯದ RAM ಗಿಂತಲೂ ಉತ್ತಮವಾಗಿದೆ.

ಅಂದಹಾಗೆ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ನೀಡಲಾಗಿದ್ದು 32ಜಿಬಿ ವರೆಗೆ ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ.

ಕನೆಕ್ಟಿವಿಟಿ: ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಲೂಟೂತ್‌, ವೈ-ಫೈ ಹಾಗೂ ಮೈಕ್ರೋ ಯುಎಸ್‌ಬಿ 2.0 ಫೀಚರ್ಸ್‌ ನೀಡಲಾಗಿದೆ.

ಬ್ಯಾಟರಿ: ಗ್ಯಾಲಾಕ್ಸಿ ವೈ ಡ್ಯುಯೋಸ್‌ ಲೈಟ್‌ನಲ್ಲಿ 1,200 mAh ಲಿ-ಇಯಾನ್‌ ಬ್ಯಾಟರಿ ನೀಡಲಾಗಿದ್ದು 15 ಗಂಟೆಗಳ ಟಾಕ್‌ಟೈಮ್‌ ಅಥವಾ 410 ಗಂಟೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ. ಆದರೆ ಮೈಕ್ರೋಮ್ಯಾಕ್ಸ್‌ನ ಎ25 ಸ್ಮಾರ್ಟಿಯಲ್ಲಿ 1,280 mAh ಲಿ-ಇಯಾನ್‌ ಬ್ಯಾಟರಿ ನೀಡಲಾಗಿದ್ದು 4 ಗಂಡೆಗಳ ಟಾಕ್‌ ಟೈಮ್‌ ಹಾಗೂ 180 ಸ್ಟ್ಯಾಂಡ್‌ ಬೈ ಮಾತ್ರ ನೀಡುತ್ತದೆ..

ಬೆಲೆ: ಖರೀದಿಸುವುದಾದರೆ ಸ್ಯಾಮ್ಸಂಗ್‌ ಗ್ಯಾಲಾಕ್ಸಿ ವೈ ಡ್ಯುಯೋಸ್‌ ರೂ. 6,299 ದರದಲ್ಲಿ ಹಾಗೂ ಮೈಕ್ರೋಮ್ಯಾಕ್ಸ್‌ ಎ25 ಸ್ಮಾರ್ಟಿ ರೂ 3,999 ದರದಲ್ಲಿ ಲಭ್ಯವಿದೆ.

Read In English...

<strong>ಮೈಕ್ರೋಮ್ಯಾಕ್ಸ್‌ನ ನೂತನ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು</strong>ಮೈಕ್ರೋಮ್ಯಾಕ್ಸ್‌ನ ನೂತನ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು

ಟಾಪ್‌ 5 ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಸ್ಮಾರ್ಟ್‌ಫೋನ್ಸ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X