ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್‌ 3 ಫಸ್ಟ್‌ ಲುಕ್; ದೈತ್ಯ ಫೀಚರ್ಸ್‌ಗಳ ಖಡಕ್‌ ಫೋನ್‌!

|

ಸ್ಯಾಮ್‌ಸಂಗ್ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಹೈ ಎಂಡ್‌ ಫೀಚರ್ಸ್‌ಗಳ ಗ್ಯಾಲಕ್ಸಿ ಫೋಲ್ಡ್‌ 3 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಮೂರು ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಹಾಗೆಯೇ ಫೋಲ್ಡೆಬಲ್ ಮಾದರಿಯ ಜೊತೆಗೆ 4,400mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿರುವುದು ಪ್ರಮುಖ ಹೈಲೈಟ್‌ ಆಗಿದೆ. ಇದರೊಂದಿಗೆ ಸ್ಪೀಡ್‌ ಪ್ರೊಸೆಸರ್‌ ಮತ್ತು ಡಿಸೈನ್‌ನಂತಹ ಫೀಚರ್ಸ್‌ಗಳಿಂದಲೂ ಈ ಫೋನ್ ಮತ್ತಷ್ಟು ಟ್ರೆಂಡಿ ಲುಕ್ ಪಡೆದಿದೆ. ಹಾಗೆಯೇ ಬೆಲೆಯಿಂದಲೂ ಗ್ರಾಹಕರಿಗೆ ಅಚ್ಚರಿ ಮೂಡಿಸುತ್ತದೆ.

ವೇರಿಯಂಟ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡ್‌ 3 ಸ್ಮಾರ್ಟ್‌ಫೋನ್‌ ಆಂತರಿಕ ಸ್ಟೋರೇಜ್‌ಗೂ ಪ್ರಾಮುಖ್ಯತೆ ನೀಡಿದ್ದು, 12GB + 256GB ಮತ್ತು 12GB + 512GB ಸಾಮರ್ಥ್ಯದ ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ. ಅಂಡರ್‌ ಡಿಸ್‌ಪ್ಲೇ ಕ್ಯಾಮೆರಾ ರಚನೆಯನ್ನು ಇದು ಪಡೆದಿದ್ದು, ಹಿಂಬದಿಯ ಟ್ರಿಪಲ್ ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿವೆ. ಹಾಗೆಯೇ ಸ್ಕ್ರೀನ್ ರೆಸಲ್ಯೂಶನ್ ಸಹ ಅತ್ಯುತ್ತಮವಾಗಿದೆ. ಈ ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಕಾರ್ಯವೈಖರಿಯ ಬಗ್ಗೆ ಹಾಗೂ ಲುಕ್ ಹೇಗಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳನ್ನು ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ಡಿಸೈನ್

ಡಿಸ್‌ಪ್ಲೇ ರಚನೆ ಮತ್ತು ಡಿಸೈನ್

ಗ್ಯಾಲಕ್ಸಿ ಫೋಲ್ಡ್‌ 3 ಸ್ಮಾರ್ಟ್‌ಫೋನ್ ಡ್ಯುಯಲ್ ಡಿಸ್‌ಪ್ಲೇ ರಚನೆಯನ್ನು ಹೊಂದಿದೆ. 7.6 ಇಂಚಿನ ಡೈನಾಮಿಕ್ AMOLED 2X ಇನ್ಫಿನಿಟಿ ಫ್ಲೆಕ್ಸ್ ಡಿಸ್ಪ್ಲೇ ಪಡೆದಿದ್ದು, 120Hz ರೀಫ್ರೇಶ್ ರೇಟ್ ಪಡೆದಿದೆ. ಡಿಸ್‌ಪ್ಲೇ ಅನುಪಾತವು 22.5:18 ಆಗಿದೆ. ಹಾಗೆಯೇ ಫೋನಿನ ಕವರ್‌ ಸ್ಕ್ರೀನ್ 6.2-ಇಂಚಿನ HD+ (832x2,268 ಪಿಕ್ಸೆಲ್‌ಗಳು) ಡೈನಾಮಿಕ್ AMOLED 2X ಡಿಸ್‌ಪ್ಲೇ 120Hz ರಿಫ್ರೆಶ್ ದರದಲ್ಲಿದೆ. ಸ್ಕ್ರೀನ್ ಟಚ್‌ ಬಹಳ ನಯವಾಗಿದೆ. ಹಾಗೆಯೇ ಕವರ್ ಡಿಸ್‌ಪ್ಲೇ ಸಹ ಹೆಚ್ಚು ಅನುಕೂಲಕರ ಎನಿಸಲಿದ್ದು, ನಂಬರ್ ಡೈಯಲ್ ಮಾಡುವ ಜೊತೆಗೆ ಸಾಮಾಜಿಕ ಮಾಧ್ಯಮ ಟೈಮ್‌ಲೈನ್‌ಗಳು, ವೆಬ್ ಬ್ರೌಸಿಂಗ್ ಮತ್ತು ಗೇಮಿಂಗ್‌ಗಾಗಿ ಕೂಡಾ ಸಾಧ್ಯವಿದೆ. ಮಂದ ಬೆಳಕಿನಲ್ಲಿ ಫೋನ್ ಬಳಸುವಾಗ ಯಾವುದು ಸಮಸ್ಯೆ ಎನಿಸದು.

ಪ್ರೊಸೆಸರ್ ಬಲವೇನು

ಪ್ರೊಸೆಸರ್ ಬಲವೇನು

ಗ್ಯಾಲಕ್ಸಿ ಫೋಲ್ಡ್‌ 3 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888 ಪ್ರೊಸೆಸರ್ ಹೊಂದಿದ್ದು, ಅದಕ್ಕೆ ಪೂರಕವಾಗಿ ಒನ್ UI ಬೆಂಬಲಿತ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್ ಇದೆ. ಇನ್ನು ಈ ಫೋನ್ 12GB + 256GB ಮತ್ತು 12GB + 512GB ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದೆ. ಹಾಗೆಯೇ ಇದು Adreno 660 GPU ಹೊಂದಿದೆ. ವೇಗದ ಗೇಮಿಂಗ್‌ ಆಟಗಳಿಗೆ, ಮಲ್ಟಿ ಟಾಸ್ಕ್ ಕೆಲಸಗಳಿಗೆ ಈ ಪ್ರೊಸೆಸರ್ ಪೂರಕ ಬೆಂಬಲ ನೀಡಲಿದೆ.

ಸ್ಪೆಷಲ್ ಕ್ಯಾಮೆರಾ ಸೆನ್ಸಾರ್

ಸ್ಪೆಷಲ್ ಕ್ಯಾಮೆರಾ ಸೆನ್ಸಾರ್

ಗ್ಯಾಲಕ್ಸಿ ಫೋಲ್ಡ್‌ 3 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಒಟ್ಟು ಮೂರು ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಮೂರು ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸಲ್ ಸೆನ್ಸಾರ್‌ ಪಡೆದಿವೆ. ಇನ್ನು ಸೆಲ್ಫಿ ಕ್ಯಾಮೆರಾ (ಕವರ್‌ ಕ್ಯಾಮೆರಾ) 10 ಎಂಪಿ ಸೆನ್ಸಾರ್‌ನಲ್ಲಿದೆ. 4K@60fps/30ps ಮತ್ತು 1080p@60fps ನಲ್ಲಿ ವಿಡಿಯೋಗಳು ಅತ್ಯುತ್ತಮ ಕ್ವಾಲಿಟಿಯಲ್ಲಿ ಮೂಡಿಬರುತ್ತವೆ. ರಾತ್ರಿ/ಮಂದ ಬೆಳಕಿನಲ್ಲಿಯೂ ಫೋಟೊಗಳು ಉತ್ತಮವಾಗಿ ಬರುತ್ತವೆ.

ಬ್ಯಾಟರಿ ಲೈಫ್ ಹೇಗಿದೆ

ಬ್ಯಾಟರಿ ಲೈಫ್ ಹೇಗಿದೆ

ಗ್ಯಾಲಕ್ಸಿ ಫೋಲ್ಡ್‌ 3 ಸ್ಮಾರ್ಟ್‌ಫೋನ್ 4,400mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ 25W ಫಾಸ್ಟ್‌ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದೆ. ಹಾಗೆಯೇ ಈ ಫೋನ್ ಸೈಡ್‌ ಮೌಂಟೆಡ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಸೌಲಭ್ಯವನ್ನು ಪಡೆದಿದೆ. ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 5.2, (aptX HD), NFC, ಒಂದು ನ್ಯಾನೋ-ಸಿಮ್ ಕಾರ್ಡ್ ಜೊತೆಗೆ ಇ-ಸಿಮ್ ಅನ್ನು ಬೆಂಬಲಿಸುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡ್‌ 3 ಸ್ಮಾರ್ಟ್‌ಫೋನ್ 12GB + 256GB ವೇರಿಯಂಟ್‌ ಬೆಲೆಯು 1,49,999ರೂ. ಆಗಿದೆ. ಅದೇ ರೀತಿ 12GB + 512GB ಸ್ಟೋರೇಜ್‌ನ ವೇರಿಯಂಟ್‌ ಬೆಲೆಯು 1,57,999ರೂ.ಗಳಾಗಿದೆ. ಇನ್ನು ಈ ಫೋನ್ ಫ್ಯಾಂಟಮ್ ಬ್ಲಾಕ್, ಫ್ಯಾಂಟಮ್ ಗ್ರೀನ್ ಮತ್ತು ಫ್ಯಾಂಟಮ್ ಸಿಲ್ವರ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

Best Mobiles in India

English summary
Samsung Galaxy Z Fold 3 First Look: Amazing Display And Camera Phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X