Just In
- 15 hrs ago
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- 15 hrs ago
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
- 16 hrs ago
ಫೈರ್-ಬೋಲ್ಟ್ನ ಈ ಸ್ಮಾರ್ಟ್ವಾಚ್ ಖರೀದಿಗೆ ಲಭ್ಯ!..ಇದರ ಲುಕ್ಗೆ ನೀವು ಕ್ಲೀನ್ ಬೋಲ್ಡ್!
- 17 hrs ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
Don't Miss
- News
ಪಂಚಮಸಾಲಿ ಮೀಸಲಾತಿ; ಫೆ.3ಕ್ಕೆ ಕೋರ್ಟ್ಗೆ ಆಯೋಗದ ವರದಿ ಸಲ್ಲಿಕೆ
- Automobiles
ಅತಿಹೆಚ್ಚು ಮೈಲೇಜ್ ನೀಡುವ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಸಿಎನ್ಜಿ ಲಾಂಚ್
- Sports
ಆಧ್ಯಾತ್ಮದತ್ತ ವಿರಾಟ್ ಕೊಹ್ಲಿ ಒಲವು: ಟೆಸ್ಟ್ ಸರಣಿಗೆ ಮುನ್ನ ಅನುಷ್ಕಾ ಶರ್ಮಾ ಜೊತೆ ರಿಷಿಕೇಶಕ್ಕೆ ಭೇಟಿ
- Movies
ಕೆಜಿಎಫ್ to ಕಾಂತಾರ: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 100 ಕೋಟಿ ಕ್ಲಬ್ ಸೇರಿರುವ 7 ಚಿತ್ರಗಳಿವು!
- Lifestyle
Horoscope Today 31 Jan 2023: ಮಂಗಳವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
Budget 2023 Live: ಕೇಂದ್ರ ಬಜೆಟ್ನ ಲೈವ್ ಅಪ್ಡೇಟ್ಸ್ ಇಲ್ಲಿದೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ ಆರು ಸ್ಮಾರ್ಟ್ ಫೋನ್ ತಂತ್ರಜ್ಞಾನಕ್ಕೆ ನೀವು ಕೃತಜ್ಞತೆ ಹೇಳಲೇಬೇಕು!
ಈಗಂತೂ ಸ್ಮಾರ್ಟ್ ಫೋನುಗಳು ಹಿಂದೆಂದಿಗಿಂತಲೂ ಸ್ಮಾರ್ಟ್ ಆಗಿಬಿಟ್ಟಿವೆ. ನಿರಂತರವಾಗಿ ಹೊಸ ಹೊಸ ತಂತ್ರಜ್ಞಾನಗಳು ಬರುತ್ತಲೇ ಇವೆ. ಕಡಿಮೆ ಸಂಗ್ರಹ ಸಾಮರ್ಥ್ಯ, ಕೆಟ್ಟ ಬ್ಯಾಟರಿ ಹೊಂದಿದ್ದ ಕಡಿಮೆ ಬೆಲೆಯ ಸ್ಮಾರ್ಟ್ ಫೋನುಗಳ ದಿನಗಳು ಈಗಿಲ್ಲ. ಈಗ ಬಜೆಟ್ ಸ್ಮಾರ್ಟ್ ಫೋನುಗಳಲ್ಲೂ ಬೆರಳಚ್ಚು ಸಂವೇದಕ, ಮುಂಬದಿಯ ಫ್ಲ್ಯಾಷ್ ಹಾಗೂ ಇನ್ನೂ ಅನೇಕ ವಿಶೇಷತೆಗಳು ಲಭ್ಯವಿದೆ.

ಈ ಎಲ್ಲಾ ಬೆಳವಣಿಗೆಯ ನಡುವೆಯೂ ಬಳಕೆದಾರರಿಗೆ ಸ್ಮಾರ್ಟ್ ಫೋನ್ ಲೋಕದಲ್ಲಿ ಹೊಸತನದ ಕೊರತೆ ಕಾಣಿಸುತ್ತಿದೆ. ಕೆಲವೊಂದು ಉತ್ತಮ ಗುಣಗಳು ಸ್ಮಾರ್ಟ್ ಫೋನುಗಳಿಗೆ ಸೇರಿದೆ ಎನ್ನುವುದನ್ನಂತೂ ನಾವು ಅಲ್ಲಗೆಳೆಯುವುದಿಕ್ಕಾಗುವುದಿಲ್ಲ ಅನ್ನುವುದೂ ಸತ್ಯ.
ಓದಿರಿ: ಸಾಮಾನ್ಯ ಸ್ಮಾರ್ಟ್‌ಪೋನಲ್ಲಿ ಸ್ಲೋ ಮೋಷನ್ ವಿಡಿಯೋ ರೆಕಾರ್ಡ್ ಮಾಡುವುದು ಹೇಗೆ....?
ಮರಣ ಹೊಂದಿಬಿಟ್ಟಿರುವ ಅಥವಾ ಮರಣದ ಅಂಚಿನಲ್ಲಿರುವ ಐದು ಹಾರ್ಡ್ ವೇರ್ ವಿಶೇಷತೆಗಳನ್ನು ಇಲ್ಲಿ ಪಟ್ಟಿ ಮಾಡಿದ್ದೀವಿ. ಒಮ್ಮೆ ಗಮನಿಸಿ.

ಮೈಕ್ರೋ ಯು.ಎಸ್.ಬಿ ಪೋರ್ಟ್.
ಯು.ಎಸ್.ಬಿ ಟೈಪ್ ಸಿ ಪೋರ್ಟ್ ನ ಪರಿಚಯದೊಂದಿಗೆ ಹಳೆಯ ಮೈಕ್ರೋ ಯು.ಎಸ್.ಬಿ ಪೋರ್ಟ್ ತನ್ನ ವೈಭವವನ್ನು ಕಳೆದುಕೊಳ್ಳಲಾರಂಭಿಸಿದೆ. ಯು.ಎಸ್.ಬಿ ಟೈಪ್ ಸಿ ಪೋರ್ಟ್ ನ ಅನುಕೂಲತೆಯೆಂದರೆ ತಿರುಗಿಸಿ ಮುರುಗಿಸಿ ಹಾಕಿದರೂ ಇದು ಸೇರಿಕೊಳ್ಳುತ್ತದೆ. ಹಳೆಯ ಮೈಕ್ರೋ ಯು.ಎಸ್.ಬಿ ಪೋರ್ಟ್ ನಲ್ಲಿದ್ದ ಬದಿ ಹುಡುಕುವ ಸಮಸ್ಯೆ ಇದರಲ್ಲಿಲ್ಲ. ರಾತ್ರಿ ಹೊತ್ತು ಹಳೆಯ ಯು.ಎಸ್.ಬಿ ಪೋರ್ಟ್ ಎಷ್ಟೊಂದು ತೊಂದರೆ ಕೊಡುತ್ತಿತ್ತಲ್ಲವೇ? ಬಹಳಷ್ಟು ಸ್ಮಾರ್ಟ್ ಫೋನ್ ತಯಾರಕರು ತಮ್ಮ ಫೋನುಗಳಲ್ಲಿ ಹಳೆಯ ಮೈಕ್ರೋ ಯು.ಎಸ್.ಬಿ ಪೋರ್ಟ್ ಅನ್ನು ಉಪಯೋಗಿಸುತ್ತಿಲ್ಲ.

ಐ.ಆರ್ ಬ್ಲ್ಯಾಸ್ಟರ್.
2016ರಲ್ಲಿ ಬಿಡುಗಡೆಗೊಂಡ ಫ್ಲಾಗ್ ಶಿಪ್ ಸ್ಮಾರ್ಟ್ ಫೋನುಗಳಾದ ಶಿಯೋಮಿ ಎಂಐ5, ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7ನಂತಹ ಫೋನುಗಳಲ್ಲಿ ಐ.ಆರ್ ಬ್ಲ್ಯಾಸ್ಟರ್ ಇರಲಿಲ್ಲ. ಐ.ಆರ್ ಬ್ಲ್ಯಾಸ್ಟರ್ ನ ಸಹಾಯದಿಂದ ನೀವು ಟಿವಿ, ಎಸಿ, ಮ್ಯೂಸಿಕ್ ಪ್ಲೇಯರ್ ಅನ್ನು ನಿಯಂತ್ರಿಸಬಹುದು. ರಿಮೋಟಿನಂತೆ ಇದು ಕಾರ್ಯನಿರ್ವಹಿಸುತ್ತದೆ. ನಿಮ್ಮ ಫೋನೇ ರಿಮೋಟ್ ಆಗಿ ಪರಿವರ್ತನೆಯಾಗುತ್ತದೆ. ಈಚಿನ ದಿನಗಳಲ್ಲಿನ ಸ್ಮಾರ್ಟ್ ಫೋನುಗಳಲ್ಲಿ ಅದರಲ್ಲೂ ದುಬಾರಿ ಫೋನುಗಳಲ್ಲಿ ಐ.ಆರ್ ಬ್ಲ್ಯಾಸ್ಟರ್ ಅಳವಡಿಕೆಯಾಗುತ್ತಿಲ್ಲ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಝೆನಾನ್ ಫ್ಲ್ಯಾಷ್.
ಉತ್ತಮ ಕ್ಯಾಮೆರಾ ಹೊಂದಿದ ಸ್ಮಾರ್ಟ್ ಫೋನುಗಳಲ್ಲಿ ಝೆನಾನ್ ಫ್ಲ್ಯಾಷ್ ಸಾಮಾನ್ಯವಾಗಿರುತ್ತಿತ್ತು. ಮೊದಮೊದಲು ಉತ್ತಮ ಫೋನುಗಳಲ್ಲೆಲ್ಲ ಇರುತ್ತಿದ್ದ ಈ ಫ್ಲ್ಯಾಷಿನ ಬಗ್ಗೆ ತಯಾರಕರು ಅಷ್ಟಾಗಿ ಪ್ರಾಮುಖ್ಯತೆ ಕೊಡದ ಕಾರಣ ಈಗಿನ ಫೋನುಗಳಲ್ಲಿ ಝೆನಾನ್ ಫ್ಲ್ಯಾಷ್ ಅಷ್ಟಾಗಿ ಕಂಡುಬರುತ್ತಿಲ್ಲ. ಎಲ್.ಇ.ಡಿ ಫ್ಲ್ಯಾಷ್ ಗೆ ಹೋಲಿಸಿದರೆ ಝೆನಾನ್ ಫ್ಲ್ಯಾಷ್ ಹೆಚ್ಚಿನ ಬ್ಯಾಟರಿ ಉಪಯೋಗಿಸುತ್ತಿದ್ದುದೇ ಇದಕ್ಕೆ ಕಾರಣವಿರಬಹುದು.

ಮೈಕ್ರೋ ಎಸ್.ಡಿ ಕಾರ್ಡ್ ಸ್ಲಾಟ್.
ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮೈಕ್ರೋ ಎಸ್.ಡಿ ಕಾರ್ಡ್ ಬಳಸುವ ಸೌಕರ್ಯ ಈ ಮುಂಚಿನ ಫೋನುಗಳಲ್ಲಿ ಸಾಮಾನ್ಯವಾಗಿರುತ್ತಿತ್ತು. ಆದರೆ ಇತ್ತೀಚಿನ ಫೋನುಗಳಲ್ಲಿ ಇದು ನಿಧಾನಕ್ಕೆ ಮರೆಯಾಗುತ್ತಿದೆ. ವಿವಿಧ ಸಾಮರ್ಥ್ಯದ ಫೋನುಗಳನ್ನು ಮಾರುಕಟ್ಟೆಗೆ ಬಿಟ್ಟರೆ ಹೆಚ್ಚು ಲಾಭ ಎಂಬುದನ್ನು ಕಂಡುಕೊಂಡಿರುವ ಸ್ಮಾರ್ಟ್ ಫೋನ್ ತಯಾರಕರು ಮೈಕ್ರೋ ಎಸ್.ಡಿ ಕಾರ್ಡ್ ಹಾರ್ಡ್ ವೇರ್ ಅನ್ನು ಉಪಯೋಗಿಸುವುದನ್ನು ಕಡಿಮೆ ಮಾಡುತ್ತಿದ್ದಾರೆ. ಮೈಕ್ರೋ ಎಸ್.ಡಿ ಕಾರ್ಡ್ ಇಲ್ಲದಿದ್ದರೆ ಫೋನ್ ಮತ್ತಷ್ಟು ತೆಳುವಾಗುತ್ತದೆ ಎನ್ನುವುದೂ ಇದಕ್ಕಿರುವ ಮತ್ತೊಂದು ಕಾರಣ. ಆದರೂ ಈ ವಿಶೇಷತೆಯು ಇನ್ನೂ ಅನೇಕ ಫೋನುಗಳಲ್ಲಿ ಇದೆ.

ಎಫ್.ಎಂ ಟ್ರಾನ್ಸ್ ಮಿಟರ್.
ಫೀಚರ್ ಫೋನುಗಳಲ್ಲಿ ಸಾಮಾನ್ಯವಾಗಿ ಕಾಣುವ ವಿಶೇಷತೆಯೆಂದರೆ ಎಫ್.ಎಂ ಟ್ರಾನ್ಸ್ ಮಿಟರ್. ಈ ಹಾರ್ಡ್ ವೇರ್ ನಿಮ್ಮ ಮೊಬೈಲಿನಲ್ಲಿದ್ದರೆ ನಿಮ್ಮ ಮೊಬೈಲಿನಲ್ಲಿರುವ ಹಾಡುಗಳನ್ನು ಯಾವುದೇ ಎಫ್.ಎಂ ರಿಸೀವರ್ ಗೆ ಕಳುಹಿಸಬಹುದಾಗಿತ್ತು. ಇದು ತುಂಬಾ ಸರಳವಾಗಿತ್ತು. ನಿಮ್ಮ ಮೊಬೈಲಿನ ಫ್ರೀಕ್ವೆನ್ಸಿಯನ್ನು ನಿರ್ಧರಿಸಿ ಮೊಬೈಲನ್ನು ಆ್ಯಂಟೆನಾ ಅಥವಾ ರಿಸೀವರ್ ಬಳಿ ಇಟ್ಟರೆ ಆಯಿತು.

ಥರ್ಮಾಮೀಟರ್.
2000ಇಸವಿಯಲ್ಲಿ ಬಿಡುಗಡೆಗೊಂಡ ನೋಕಿಯಾ 5210 ಫೋನುಗಳಲ್ಲಿದ್ದ ಥರ್ಮಾಮೀಟರ್ ವಾತಾವರಣದ ಉಷ್ಣಾಂಶವನ್ನು ತಿಳಿಸುತ್ತಿತ್ತು. ನಂತರದ ದಿನಗಳಲ್ಲಿ ಗ್ಯಾಲಕ್ಸಿ ಎಸ್4ನಲ್ಲೂ ಥರ್ಮಾಮೀಟರ್ ಸಂವೇದಕವಿತ್ತು. ಆದರೆ ಕಳೆದ ಮೂರು ವರುಷಗಳಿಂದ ಯಾವ ಫೋನಿನಲ್ಲೂ ಇದನ್ನು ಅಳವಡಿಸಲಾಗಿಲ್ಲ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470