ಒರ್ಕುಟ್ ಸಂಸ್ಥಾಪಕ ಸಾಮಾಜಿಕ ತಾಣದ ಜಗತ್ತಿಗೆ ಪುನಃ ಹೆಲೊ ಹೇಳಲಿದ್ದಾರೆ: ಇಲ್ಲಿದೆ ಹೆಚ್ಚಿನ ಮಾಹಿತಿ

By Prateeksha
|

ನೀವು ಒರ್ಕುಟ್ ಬಗ್ಗೆ ಕೇಳಿದ್ದೀರಾ ? ಫೇಸ್ಬುಕ್ ಬರುವ ಸ್ವಲ್ಪ ಮುಂಚೆ ಸಾಮಾಜಿಕ ಜಾಲತಾಣದಲ್ಲಿ ಜನಪ್ರೀಯತೆಯನ್ನು ಹೊಂದಿದ ಎಲ್ಲೆಡೆಯು ಮೆರೆದ ಮತ್ತೊಂದು ತಾಣವೆಂದರೆ ಒರ್ಕುಟ್. 5-6 ವರ್ಷಗಳ ವರೆಗೆ ಹಲವರ ಹೃದಯ ಗೆದ್ದಿತ್ತು ಒರ್ಕುಟ್ ಎನ್ನುವ ಸಾಮಾಜಿಕ ಜಾಲತಾಣ.

ಒರ್ಕುಟ್ ಸಂಸ್ಥಾಪಕ ಸಾಮಾಜಿಕ ತಾಣದ ಜಗತ್ತಿಗೆ ಪುನಃ ಹೆಲೊ ಹೇಳಲಿದ್ದಾರೆ: ಇಲ್ಲಿದೆ

ಬಿಡುವಿಲ್ಲದ ದಿನಗಳಲ್ಲಿ ಇದು 300 ಮಿಲಿಯನ್ ಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುತ್ತಿತ್ತು. ಆದರೆ ಫೇಸ್ಬುಕ್ ನ ಹೊಳಪಿನಲ್ಲಿ ಮಸಕಾಗಿ ಹೋಯಿತು. ಇದರ ಪರಿಣಾಮವಾಗಿ 2014ರಲ್ಲಿ ಮುಚ್ಚಲಾಯಿತು. ಅದೇನಿದ್ದರೂ, ಒರ್ಕುಟ್ ಕಂಪನಿಯ ಸಂಸ್ಥಾಪಕ ಒರ್ಕುಟ್ ಬಯುಕ್ಕೊಟೆನ್ ತಮ್ಮ ದೊಡ್ದ ಯೋಜನೆಯನ್ನು ಹೊಂದಿದ್ದರಿಂದ ಸೋತಂತಿಲ್ಲಾ.

ಬಯುಕ್ಕೊಟೆನ್ ಮತ್ತೊಂದು ಹೆಲೊ ಎನ್ನುವ ಸಾಮಾಜಿಕ ಜಾಲತಾಣ ದೊಂದಿಗೆ ಬಂದಿದ್ದಾರೆ ಫೇಸ್ಬುಕ್ ಪ್ರೀಯತೆಯನ್ನು ತಮ್ಮಡೆಗೆ ತಿರುಗಿಸಲು. ಈ ಜಾಲತಾಣದಲ್ಲಿ ಬಳಕೆದಾರರು ತಮ್ಮ ಇಚ್ಛಾಸಕ್ತಿಗಳ ಆಧಾರದ ಮೇಲೆ ಕ್ಷೇತ್ರಗಳನ್ನು ಆಯ್ಕೆ ಮಾಡುವ ಗುರಿ ಹೊಂದಿದೆ. ವಿವಿಧ ಕ್ಷೇತ್ರಗಳ ಅಡಿಯಲ್ಲಿ ತಮ್ಮ ಆಸಕ್ತಿಗೆ ಅನುಗುಣವಾದ ಗುಂಪನ್ನು ಆಯ್ಕೆ ಮಾಡಬಹುದು.

ಓದಿರಿ: ಟ್ರೂಕಾಲರ್‌ ಆಪ್‌ನ ಟಾಪ್‌ 7 ಫೀಚರ್‌ಗಳು

ಬಯುಕ್ಕೊಟೆನ್ ತಮ್ಮ ಬ್ಲೊಗ್‍ನಲ್ಲಿ ಬರೆಯುತ್ತಾರೆ " ಕಳೆದ 16 ವರ್ಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಗಿರುವ ಪ್ರಗತಿಯನ್ನು ಕಂಡು, ಒರ್ಕುಟ್(ಬಯುಕ್ಕೊಟೆನ್) ಗೆ ಒಂದೇ ರೀತಿಯ ಆಸಕ್ತಿಯುಳ್ಳ ಜನರನ್ನು ಒಂದು ಮಾಡಲು ಸ್ಪೂರ್ತಿ ಬಂದಿತು. ಜಗತ್ತು ಸಮಾಜವನ್ನು ನೋಡುವ ರೀತಿಯನ್ನು ಬದಲಿಸುವಂತಹ ದೃಷ್ಟಿ. ಕೃತಜ್ಞತೆಯನ್ನು ಸಲ್ಲಿಸಲು ನಾನು ಈ ಹೊಸ ಸಾಮಾಜಿಕ ಸಾಮಾಜಿಕ ತಾಣವನ್ನು ಮಾಡುತ್ತಿದ್ದೇನೆ ಕೇವಲ ನಿಮಗಾಗಿ.

ನನಗೆ ಬಾಯ್ ಹೇಳಲು ಸರಿ ಬರುವುದಿಲ್ಲಾ ಅದಕ್ಕಾಗಿ ನಾನು ಇದನ್ನು ಹೆಲೊ ಎಂದು ಹೆಸರಿಟ್ಟಿದ್ದೇನೆ. ಇಷ್ಟದ ಮೇಲಲ್ಲಾ ಪ್ರೀತಿಯ ಮೇಲೆ ಕಟ್ಟಿರುವಂತಹ ಮೊದಲ ಸಾಮಾಜಿಕ ತಾಣ ಈ ಹೆಲೊ. ಒರ್ಕುಟ್ ನ ಮುಂದಿನ ಪೀಳಿಗೆ ಈ ಹೆಲೊ. ನೀವು ನಿಮ್ಮ ಆಸಕ್ತಿಗನುಸಾರವಾಗಿ ಜನರೊಂದಿಗೆ ಬೆರೆಯಲು ಸಹಾಯವಾಗುವಂತೆ ಇದನ್ನು ಮಾಡಿದ್ದಾನೆ. ಹೆಲೊ ನಮ್ಮೆಲ್ಲರನ್ನು ಒಂದು ಮಾಡುತ್ತದೆ. ಯೋಚಿಸಿ. ನೀವು ಯಾವ ಭಾಷೆಯಲ್ಲಾದರು ಹೆಲೊ ಹೇಳಬಹುದು ಮತ್ತು ಜನರು ಅದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಬಹುಶಃ 'ಓಕೆ' ನಂತರ' ಹೆಲೊ' ವಿಶ್ವವ್ಯಾಪ್ತಿಯಾಗಿ ಎಲ್ಲೆಡೆ ಉಚ್ಛರಿಸುವ ಶಬ್ದ. ಅಲೊ, ಹೆಲೊ, ಅಲ್ಲೊ, ಎಲೊ, ಎಲ್ಲೊ, ಹ್ಯಾಲೊ,ಹೆಲ್ಲೊ . ದ್ವೇಷ ಹಾಗು ಹೆದರಿಕೆಗೆ ಜಾಗವೇ ಇರುವುದಿಲ್ಲಾ ನೀವು ಈ ರೀತಿಯ ಸರಳವಾದ ಸ್ನೇಹಯುತವಾದ ಸಹ್ನೆ ಮಾಡಿದಾಗ. ಹೀಗಾಗಿ ಬಂದು ಸೇರಿರಿ ಮತ್ತು ಕೆಲ ಹೊಸ ಸ್ನೇಹಿತರನ್ನು ಮಾಡಿಕೊಳ್ಳಿ. ಹೆಲೊ ಹೇಳಿ ಮತ್ತು ಜಗತ್ತನ್ನು ಪ್ರೀತಿಸಿ"

ಒರ್ಕುಟ್ ಸಂಸ್ಥಾಪಕ ಸಾಮಾಜಿಕ ತಾಣದ ಜಗತ್ತಿಗೆ ಪುನಃ ಹೆಲೊ ಹೇಳಲಿದ್ದಾರೆ: ಇಲ್ಲಿದೆ

ಹೇಗೆ ಸೇರುವುದು ?

ಈ ತಾಣದ ಬಗ್ಗೆ ತಿಳಿದ ನಂತರ, ನಿಮ್ಮಲ್ಲಿ ಕೆಲವರು ಈ ಹೆಲೊ ಆಪ್ ನಲ್ಲಿ ಸೇರಿಕೊಳ್ಳಲು ಆಸಕ್ತಿ ತೋರಬಹುದು. ಇದು ಬೇರೆ ಸಾಮಾಜಿಕ ಜಾಲತಾಣಗಳಂತೆ ಕೆಲಸ ಮಾಡುತ್ತದೆ. ನಿಮ್ಮ ಈ-ಮೇಲ್ ವಿಳಾಸ ಉಪಯೋಗಿಸಿ ನೊಂದಾಯಿಸಬೇಕು.

ಓದಿರಿ:ಲೀಕೊ ಲೀ ಮಾಲ್: ಗ್ಯಾಜೆಟ್ ಪ್ರಿಯರಿಗೆ ಹಬ್ಬ

ಈ ತಾಣ ಬೇರೆಯವರೊಂದಿಗೆ ನಿಮ್ಮ ಆಸಕ್ತಿದಾಯಕ ವಿಷಯದ ಮೇಲೆ ಹಂಚಿಕೊಳ್ಳುವುದಾಗಿರುವುದರಿಂದ ಇದು ನಿಮಗೆ ಕ್ಷೇತ್ರಗಳ ಪಟ್ಟಿಯನ್ನು ತೋರಿಸುತ್ತದೆ, ಅzರಲ್ಲಿ ನೀವು ಐದು ನಿಮ್ಮ ಆಸಕ್ತಿಗೆ ಹೊಂದಿಕೆಯಾಗುವ ವಿಷಯಗಳನ್ನು ಆಯ್ಕೆ ಮಾಡಬೇಕು.ಬೇಕಿದ್ದರೆ, ಆ ನಂತರ ನೀವು ಆಸಕ್ತಿ ಕ್ಷೇತ್ರಗಳನ್ನು ಬದಲಿಸಬಹುದು. ನೀವು ಆಯ್ಕೆ ಮಾಡಿದ ಕ್ಷೇತ್ರಗಳ ಆಧಾರದ ಮೇರೆಗೆ ನೀವು ಹಲವು ಜನರನ್ನು ಭೇಟಿ ಆಗಬಹುದು.

ಒರ್ಕುಟ್ ಸಂಸ್ಥಾಪಕ ಸಾಮಾಜಿಕ ತಾಣದ ಜಗತ್ತಿಗೆ ಪುನಃ ಹೆಲೊ ಹೇಳಲಿದ್ದಾರೆ: ಇಲ್ಲಿದೆ

ಲಭ್ಯತೆ:

ಹೆಲೊ ಮೂರು ಭಾಷೆಯಲ್ಲಿ ಲಭ್ಯವಿದೆ. ಸಧ್ಯಕ್ಕೆ ಇಂಗ್ಲಿಷ್, ಫ್ರೆಂಚ್ ಹಾಗು ಪೊರ್ಚುಗೀಸ್ ಭಾಷೆಯಲ್ಲಿ ಲಭ್ಯವಿದೆ ಮತ್ತು ಈ ಆಪ್ ಅನ್ನು ಕಂಪನಿಯು ಆಂಡ್ರೊಯಿಡ್ ಹಾಗು ಐಒಎಸ್ ತಂತ್ರಜ್ಞಾನದಲ್ಲಿ ಬಿಡುಗಡೆ ಮಾಡಿದೆ. ಯುಎಸ್, ಕೆನಡಾ, ಫ್ರಾನ್ಸ್, ಯುಕೆ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಐರ್‍ಲ್ಯಾಂಡ್ ಮತ್ತು ಬ್ರೆಜಿಲ್ ದೇಶಗಳಲ್ಲಿ ಲಭ್ಯ. ಭಾರತದಲ್ಲಿ ಬಿಡುಗಡೆ ಬಗ್ಗೆ ಹೇಳುವುದಾದರೆ ಈ ತಿಂಗಳ ಸುಮಾರಿನಲ್ಲಿ ಭಾರತದೊಂದಿಗೆ ಜರ್ಮನಿ ಮತ್ತು ಮೆಕ್ಸಿಕೊ ದಲ್ಲಿ ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ.

Most Read Articles
Best Mobiles in India

English summary
Have you heard of Orkut? A little before Facebook gained popularity as a social networking site, there was another site called Orkut that had ruled the roost. Orkut was a social media platform that won many hearts for 5-6 years. During its peak days, it had over 300million subscribers, but it soon faded out with Facebook gaining limelight, resulting in

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more