ಹತ್ತರಿಂದ ಇಪ್ಪತ್ತು ಸಾವಿರದೊಳಗಿನ ಸ್ಮಾರ್ಟ್‌ಫೋನ್‌ಗಳಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು.!

|

ಗ್ರಾಹಕರು ಸ್ಮಾರ್ಟ್‌ಫೋನ್‌ ಖರೀದಿಸುವಾಗ ಬಜೆಟ್ ದರದ ಫೋನ್‌ಗಳನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ನೀವು ಯೋಚಿಸುತ್ತಿದ್ದರೆ ಅದು ಖಂಡಿತಾ ತಪ್ಪು.! ಏಕೆಂದರೆ ಸ್ಮಾರ್ಟ್‌ಫೋನ್ ಖರೀದಿಸುವವರು ಬಜೆಟ್ ದರದ ಸ್ಮಾರ್ಟ್‌ಫೋನ್‌ಗಳತ್ತ ಚಿತ್ತ ಹರಿಸುವುದನ್ನು ಬಿಟ್ಟಿದ್ದಾರೆ. ಹೌದು, ಭಾರತದಲ್ಲಿ ಹತ್ತು ಸಾವಿರದೊಳಗಿನ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ಗ್ರಾಹಕರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ ಎಂದು 91ಮೊಬೈಲ್ಸ್ ವೆಬ್‌ಸೈಟ್‌ ತಿಳಿಸಿದೆ.

ಇಪ್ಪತ್ತು ಸಾವಿರದೊಳಗಿನ ಸ್ಮಾರ್ಟ್‌ಫೋನ್‌ಗಳಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು!

ಈ ಮೊದಲು ಹತ್ತು ಸಾವಿರದೊಳಗಿನ ಉತ್ತಮ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಶೇ. 34% ಗ್ರಾಹಕರು ಸರ್ಚ್ ಮಾಡಿದ್ದರು.ಆದರೆ, ಇತ್ತೀಚಿನ ವರದಿ ಪ್ರಕಾರ ಕೆವಲ ಶೇ. 23% ಗ್ರಾಹಕರು ಮಾತ್ರ ಹತ್ತು ಸಾವಿರದೊಳಗಿನ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಆಸಕ್ತಿ ತೊರಿಸಿರುವುದು ವರದಿಯಿಂದ ತಿಳಿದು ಬಂದಿದೆ. ಅದೇ ರೀತಿ ಹತ್ತು ಸಾವಿರದಿಂದ ಇಪ್ಪತ್ತು ಸಾವಿರದೊಳಗಿನ ಸ್ಮಾರ್ಟ್‌ಫೋನ್‌ ಸೆಗ್ಮೆಂಟ್ ದರದಲ್ಲಿ ಗ್ರಾಹಕರು ಸಂಖ್ಯೆ ಶೇ.8% ಏರಿಕೆ ಆಗಿರುವುದು ವರದಿಯಿಂದ ತಿಳಿದುಬಂದಿದೆ.

ಇಪ್ಪತ್ತು ಸಾವಿರದೊಳಗಿನ ಸ್ಮಾರ್ಟ್‌ಫೋನ್‌ಗಳಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು!

ಇದನ್ನು ನೋಡಿದರೆ ಭಾರತೀಯ ಗ್ರಾಹಕರು ಹೈ ಎಂಡ್ ಸ್ಮಾರ್ಟ್‌ಫೋನ್‌ಗಳ ಖರೀದಿಯತ್ತ ಹೆಚ್ಚು ಆಸಕ್ತಿದಾಯಕರಾಗಿರುವುದು ತಿಳಿಯುತ್ತದೆ. ಬಹುಶಃ ಮೊಬೈಲ್ ಮಾರುಕಟ್ಟೆಗೆಯಲ್ಲಿಗ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳ ಅಬ್ಬರ್ ಜೋರಾಗಿದುವುದು ಕಾರಣ ಎನ್ನಬಹದು ಮತ್ತು ಇಪ್ಪತ್ತು ಸಾವಿರದೊಳಗಿನ ಸ್ಮಾರ್ಟ್‌ಫೋನ್‌ಗಳಲ್ಲಿಗ ಅತ್ಯುತ್ತಮ ಫೀಚರ್ಸ್‌ಗಳನ್ನು ನೀಡುತ್ತಿರುವುದು ಗ್ರಾಹಕರನ್ನು ಆಕರ್ಷಿಸಿದೆ ಎಂದು ಹೇಳಬಹುದು. ಹಾಗಾದರೇ ಹತ್ತು ಸಾವಿರದಿಂದ ಇಪ್ಪತ್ತು ಸಾವಿರದೊಳಗೆ ಲಭ್ಯವಿರುವ ಕೆಲವು ಸ್ಮಾರ್ಟ್‌ಫೋನ್‌ಗಳ ಕಿರು ಪರಿಚಯ ತಿಳಿಯಲು ಸ್ಕ್ರೋಲ್ ಮಾಡಿ ಓದಿರಿ.

ಶಿಯೋಮಿ ರೆಡ್ಮಿ ನೋಟ್ 6 ಪ್ರೋ

ಶಿಯೋಮಿ ರೆಡ್ಮಿ ನೋಟ್ 6 ಪ್ರೋ

ಚೀನಾ ಮೂಲದ ಶಿಯೋಮಿ ಕಂಪನಿಯ ರೆಡ್‌ಮಿ ನೋಟ್ 6 ಪ್ರೋ ಸ್ಮಾರ್ಟ್‌ಫೋನ್ ಸದ್ಯ ಭಾರಿ ಟ್ರೆಂಡ್ ನಲ್ಲಿರುವ ಫೋನ್‌ ಆಗಿದೆ, 6.2 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ, 6GB/4GB RAM ಸಾಮರ್ಥ್ಯ ಇದೆ. ಹಿಂಬದಿಯಲ್ಲಿ 12+5 ಮೆಗಾಪಿಕ್ಸಲ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 20+2 ಮೆಗಾಪಿಕ್ಸಲ್ ಕ್ಯಾಮೆರಾ ಲಭ್ಯ. 4000mAh ಸಾಮರ್ಥ್ಯದ ದೀಘ್ರ ಬಾಳಿಕೆಯ ಬ್ಯಾಟರಿ ಕ್ವಿಕ್ ಚಾರ್ಜಿಂಗ್ ಸೌಲಭ್ಯ ಇದೆ.

ಸ್ಯಾಮ್ಸಂಗ್ ಗ್ಯಾಲ್ಯಾಕ್ಸಿ A7

ಸ್ಯಾಮ್ಸಂಗ್ ಗ್ಯಾಲ್ಯಾಕ್ಸಿ A7

ಗುಣಮಟ್ಟದ ಉತ್ಪನ್ನಗಳಿಂದ ಹೆಸರಾಗಿರುವ ಸ್ಯಾಮ್ಸಂಗ್‌ನ ಗ್ಯಾಲ್ಯಾಕ್ಸಿ ಎ7 ಸ್ಮಾರ್ಟ್‌ಫೋನ್ 6 ಇಂಚಿನ ಸೂಪರ್ AMOLED ಡಿಸ್‌ಪ್ಲೇ ಇದ್ದು, 6GB RAM ಸಾಮರ್ಥ್ಯ ಹೊಂದಿದೆ. ಇನ್ನೂ ಕ್ಯಾಮೆರಾವೇ ಇದರ ಸ್ಪೆಷಲ್ ಒಟ್ಟು ಮೂರು ಹಿಂಬದಿ ಕ್ಯಾಮೆರಾ ನೀಡಿದ್ದು, 24+5+8 ಮೆಗಾಪಿಕ್ಸಲ್ ಮತ್ತು 24ಮೆಗಾಪಿಕ್ಸಲ್ ಸೆಲ್ಫೀ ಕ್ಯಾಮೆರಾ ಹೊಂದಿವೆ. ಇದರ ಬ್ಯಾಟರಿ ಸಾಮರ್ಥ್ಯ 3300mAh ಆಗಿದ್ದು, ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದೆ.

ಮೊಟೊರೊಲಾ ಒನ್ ಪವರ್

ಮೊಟೊರೊಲಾ ಒನ್ ಪವರ್

ಮೊಟೊ ಎಂದೇ ಜನಪ್ರಿಯವಾಗಿರುವ ಮೊಟೊರೊಲಾ ಕಂಪನಿಯ ಒನ್ ಪವರ್ 6.2 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದರೊಂದಿಗೆ 4GB RAM ನೀಡಲಾಗಿದೆ. ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳನ್ನು ನೀಡಿದ್ದು, 16+5 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಕ್ಯಾಮೆರಾ ಹೊಂದಿವೆ. ಸೆಲ್ಫೀಗಾಗಿ 12 ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ. 5000mAh ಸಾಮರ್ಥ್ಯದ ಪವರ್ ಫುಲ್ ಬ್ಯಾಟರಿ ಹೊಂದಿರುವುದು ಇದರ ಮುಖ್ಯ ಹೈ ಲೈಟ್.

ಹಾನರ್ 10 ಲೈಟ್

ಹಾನರ್ 10 ಲೈಟ್

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪನಿ ಹಾನರ್‌ನ 10 ಲೈಟ್ 6.2 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಈ ಸ್ಮಾರ್ಟ್‌ಫೋನ್ 4GB RAM ಅನ್ನು ಹೊಂದಿದೆ. 13+2ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿ ಎರಡು ಹಿಂಬದಿ ಕ್ಯಾಮೆರಾ ನೀಡಲಾಗಿದೆ ಮತ್ತು ಸೆಲ್ಫೀ ಕ್ಯಾಮೆರಾಗಾಗಿ 24 ಮೆಗಾಪಿಕ್ಸಲ್ ನೀಡಿಲಾಗಿದೆ. 3400mAh ಸಾಮರ್ಥ್ಯದ ಉತ್ತಮ ಬ್ಯಾಟರಿ ಬಾಳಿಕೆ ಹೊಂದಿದೆ.

ಒಪ್ಪೊ F9 ಪ್ರೋ

ಒಪ್ಪೊ F9 ಪ್ರೋ

ಒಪ್ಪೊ ಎಫ್ 9 ಪ್ರೋ ಸ್ಮಾರ್ಟ್‌ಫೋನ್ 6.3 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಹಿಂಬಾಗದಲ್ಲಿ ಎರಡು ಕ್ಯಾಮೆರಾ ನೀಡಲಾಗಿದ್ದು ಅವು ಕ್ರಮವಾಗಿ 16+5 ಮೆಗಾಪಿಕ್ಸಲ್ ಸಾಮರ್ಥ್ಯ ಹೊಂದಿವೆ, ಇನ್ನೂ ಮುಂಬಾಗದಲ್ಲಿ ಸೆಲ್ಫೀಗಾಗಿ 25 ಮೆಗಾಪಿಕ್ಸಲ್ ಸಾಮರ್ಥ್ಯ ಹೊಂದಿರುವ ಕ್ಯಾಮೆರಾ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 3500mAh ಸಾಮರ್ಥ್ಯದ ಉತ್ತಮ ಬ್ಯಾಟರಿ ಬಾಳಿಕೆ ಹೊಂದಿದೆ.

Best Mobiles in India

English summary
Demand for smartphones in the under Rs 10,000 segment—once the most popular—seems to be on the wane.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X