ಇಲ್ಲಿವೇ ನೋಡಿ ಇತ್ತೀಚಿನ 5 ಬೆಸ್ಟ್‌ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳು!

|

ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯುತ್ತಮ ಕ್ಯಾಮೆರಾ ಫೀಚರ್‌ ನೀಡಲಾಗುತ್ತಿದೆ. ಹಾಗಂತ ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳೊಂದಿಗೆ ಹೋಲಿಕೆ ಮಾಡಲಾಗುವುದಿಲ್ಲ. ಏಕೆಂದರೇ ಸ್ಮಾರ್ಟ್‌ಫೋನ್‌ನಲ್ಲಿ ಸೆರೆಹಿಡಿದ ಫೋಟೊಗಳಿಗೂ ಮತ್ತು ಡಿಎಸ್‌ಎಲ್‌ಆರ್ ಕ್ಯಾಮೆರಾದಲ್ಲಿ ಸೆರೆಹಿಡಿದ ಫೋಟೊಗಳ ಕ್ವಾಲಿಟಿಯಲ್ಲಿ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಆದರೂ ಇತ್ತೀಚಿನ ಕೆಲವು ಫ್ಲ್ಯಾಗ್‌ಶಿಫ್ ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿನ ಉನ್ನತ ಪಿಕ್ಸಲ್ ಕ್ಯಾಮೆರಾಗಳು ಡಿಎಸ್‌ಎಲ್‌ಆರ್‌ ಕ್ಯಾಮೆರಾದ ಫೋಟೊಗಳಿಗೆ ಪೈಪೋಟಿ ನೀಡುವಂತಿವೆ.

ಸ್ಮಾರ್ಟ್‌ಫೋನ್‌ಗಳು

ಹೌದು, ಸದ್ಯ ಮಾರುಕಟ್ಟೆಗೆ ಅತ್ಯುತ್ತಮ ಕ್ಯಾಮೆರಾ ಫೀಚರ್‌ವುಳ್ಳ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಡುತ್ತಿದ್ದು, ಅಧಿಕ ಫೋಟೊ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿರುತ್ತವೆ. ಅವುಗಳಲ್ಲಿ ಆಪಲ್, ಹುವಾವೆ, ಗೂಗಲ್ ಮತ್ತು ಸ್ಯಾಮ್‌ಸಂಗ್ ಸಂಸ್ಥೆಗಳ ಇತ್ತೀಚಿನ ಕೆಲವು ಫೋನ್‌ಗಳು ಬೆಸ್ಟ್‌ ಕ್ಯಾಮೆರಾ ಫೀಚರ್‌ ಸೌಲಭ್ಯ ಹೊಂದಿವೆ. ಆರಂಭಿಕ ಫೋಟೊಗ್ರಾಫಿ ಉತ್ತಮ ಫ್ಲಾಟ್‌ಫಾರ್ಮ್ ಸಿಗಲಿದೆ. ಹಾಗಾದರೇ ಫೋಟೊಗ್ರಾಫಿಗೆ (2019) ಪ್ರಸ್ತುತ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಹುವಾವೆ ಪಿ30 ಪ್ರೊ

ಹುವಾವೆ ಪಿ30 ಪ್ರೊ

ಮಾರ್ಚ್ 2019ರಲ್ಲಿ ಬಿಡುಗಡೆ ಆಗಿರುವ 'ಹುವಾವೆ ಪಿ90 ಪ್ರೊ' ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಮೂರು ಕ್ಯಾಮೆರಾ ಸೌಲಭ್ಯವನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು f/1.6 ಅಪರ್ಚರ್‌ನೊಂದಿಗೆ 40ಎಂಪಿ ಸೆನ್ಸಾರ್‌ನಲ್ಲಿದೆ. ದ್ವಿತೀಯ ಕ್ಯಾಮೆರಾವು f/2.2 ಅಪರ್ಚರ್‌ನೊಂದಿಗೆ 20ಎಂಪಿ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ತೃತೀಯ ಕ್ಯಾಮೆರಾವು f/3.4 ಅಪರ್ಚರ್‌ನೊಂದಿಗೆ 8ಎಂಪಿಯ ಸೆನ್ಸಾರ್ ಪಡೆದಿದೆ. ಇದರೊಂದಿಗೆ ToF 3D ಫೋಟೊ ಸೌಲಭ್ಯವನ್ನು ಒಳಗೊಂಡಿದೆ. ಸೆಲ್ಫಿಗಾಗಿ 32ಎಂಪಿ ಸೆನ್ಸಾರ್ ಹೊಂದಿದೆ.

ಐಫೋನ್ 11 ಪ್ರೊ

ಐಫೋನ್ 11 ಪ್ರೊ

ಸೆಪ್ಟೆಂಬರ್ 2019ರಲ್ಲಿ ಲಾಂಚ್ ಆಗಿರುವ ಬಹುನಿರೀಕ್ಷಿತ ಆಪಲ್ 'ಐಫೋನ್ 11 ಪ್ರೊ' ಫೋನ್‌ ತ್ರಿವಳಿ ಕ್ಯಾಮೆರಾದಿಂದ ಗಮನ ಸೆಳೆದಿದೆ. ಮೂರು ಕ್ಯಾಮೆರಾಗಳು 12ಎಂಪಿ ಸೆನ್ಸಾರ್‌ ಸಾಮರ್ಥ್ಯವನ್ನು ಒಳಗೊಂಡಿದ್ದು, ಆಪ್ಟಿಕಲ್ ಜೂಮ್ ಸೌಲಭ್ಯವನ್ನು ಹೊಂದಿವೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು ಸಹ 12ಎಂಪಿ ಸೆನ್ಸಾರ್‌ನಲ್ಲಿದ್ದು, ಅತ್ಯುತ್ತಮ ಫೋಟೊ ಮೂಡಿಬರುವ ಆಯ್ಕೆಗಳನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್‌10 ಪ್ಲಸ್

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್‌10 ಪ್ಲಸ್

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್‌10 ಪ್ಲಸ್ ಸ್ಮಾರ್ಟ್‌ಫೋನ್ ಮಾರ್ಚ್ 2019ರಲ್ಲಿ ಬಿಡುಗಡೆ ಆಗಿದ್ದು, ಉತ್ತಮ ಕ್ಯಾಮೆರಾ ಫೀಚರ್‌ನಿಂದ ಗುರುತಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಮೂರು ರಿಯರ್‌ ಕ್ಯಾಮೆರಾ ಹೊಂದಿದ್ದು, ಅವುಗಳು 12ಎಂಪಿ + 12ಎಂಪಿ + 16ಎಂಪಿ ಸೆನ್ಸಾರ್‌ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಅವುಗಳ ಅಪರ್ಚರ್ ಕ್ರಮವಾಗಿ f/1.5, f/2.4, f/2.2 ಆಗಿದೆ. ಸೆಲ್ಫಿಗಾಗಿ ಡ್ಯುಯಲ್‌ ಕ್ಯಾಮೆರಾ ನೀಡಿದ್ದು, 10ಎಂಪಿ + 8ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿವೆ.

ಒನ್‌ಪ್ಲಸ್‌ 7 ಪ್ರೊ

ಒನ್‌ಪ್ಲಸ್‌ 7 ಪ್ರೊ

ಇತ್ತೀಚಿಗೆ ಬಿಡುಗಡೆ ಆಗಿರುವ 'ಒನ್‌ಪ್ಲಸ್‌ 7 ಪ್ರೊ' ಸ್ಮಾರ್ಟ್‌ಫೋನ್ ಕ್ಯಾಮೆರಾ ಫೀಚರ್‌ನಿಂದ ಸದ್ದು ಮಾಡಿದ್ದು, ಈ ಫೋನ್ ಸಹ ಮೂರು ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಪ್ರಾಥಮಿಕ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು 16ಎಂಪಿ ಸೆನ್ಸಾರ್‌ ಅನ್ನು ಪಡೆದುಕೊಂಡಿದೆ. ಹಾಗೆಯೇ ತೃತೀಯ ಕ್ಯಾಮೆರಾವು 8ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದ್ದರೇ ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್‌ನಲ್ಲಿದೆ.

ಗೂಗಲ್ ಪಿಕ್ಸಲ್ 3

ಗೂಗಲ್ ಪಿಕ್ಸಲ್ 3

ಗೂಗಲ್‌ ಸಂಸ್ಥೆಯು 2018ರ ಅಂತ್ಯದ ವೇಳೆ ಬಿಡುಗಡೆ ಮಾಡಿರುವ 'ಗೂಗಲ್ ಪಿಕ್ಸಲ್ 3' ಸ್ಮಾರ್ಟ್‌ಫೋನ್ ಕ್ಯಾಮೆರಾ ವಿಶೇಷತೆ ಪಡೆದಿದೆ. ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಸಿಂಗಲ್ ರಿಯರ್‌ ಕ್ಯಾಮೆರಾ ಹೊಂದಿದ್ದು, 12.2ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಸೆಲ್ಫಿಗಾಗಿ ಡ್ಯುಯಲ್‌ ಕ್ಯಾಮೆರಾ ನೀಡಲಾಗಿದ್ದು, ಅವುಗಳು ಕ್ರಮವಾಗಿ 8ಎಂಪಿ + 8ಎಂಪಿ ಸೆನ್ಸಾರ್‌ನಲ್ಲಿವೆ. ಹಾಗೆಯೇ ಇದೇ ಅಕ್ಟೋಬರ್‌ನಲ್ಲಿ ಲಾಂಚ್ ಮಾಡಿರುವ ಗೂಗಲ್ ಪಿಕ್ಸಲ್ 4 ಸರಣಿ ಸ್ಮಾರ್ಟ್‌ಫೋನ್‌ ಕ್ಯಾಮೆರಾಗಳು ಅತ್ಯುತ್ತಮ ಫೀಚರ್‌ಗಳನ್ನು ಹೊಂದಿವೆ.

Best Mobiles in India

English summary
Here are some best camera phone of 2019. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X