ಶ್ಯೋಮಿ ಎಮ್ಐ 4i ಬಜೆಟ್ ಬೆಲೆಯಲ್ಲಿ ಉತ್ತಮ ಫೋನ್

Written By:

ಚೀನಾದ ಸ್ಮಾರ್ಟ್‌ಫೋನ್ ತಯಾರಕ ಶ್ಯೋಮಿ, ಇತ್ತೀಚೆಗೆ ತಾನೇ ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ ಅದುವೇ ಶ್ಯೋಮಿ ಎಮ್ಐ 4i ಆಗಿದೆ. ಉತ್ತಮ ಫೀಚರ್‌ಗಳನ್ನು ಒಳಗೊಂಡು ನಿಮ್ಮ ಬಜೆಟ್‌ಗೆ ತಕ್ಕುದಾದ ಬೆಲೆಯಲ್ಲಿ ಬಂದಿರುವ ಫೋನ್ ಇದಾಗಿದೆ.

ಓದಿರಿ: ಸದ್ದಿಲ್ಲದೆ ಸುದ್ದಿ ಮಾಡುತ್ತಿರುವ ಆಪಲ್ ಉತ್ಪನ್ನಗಳಾವುವು?

ಆಂಡ್ರಾಯ್ಡ್ ಲಾಲಿಪಪ್ 5.0 ಚಾಲನೆ ಮಾಡುತ್ತಿರುವ ಭಾರತದಲ್ಲಿ ಲಭ್ಯವಿರುವ ಪ್ರಥಮ ಸ್ಮಾರ್ಟ್‌ಫೋನ್ ಶ್ಯೋಮಿ ಎಮ್ಐ 4i ಆಗಿದ್ದು MIUI ಯೂಸರ್ ಇಂಟರ್ಫೇಸ್ 6 ಅನ್ನು ಮೇಲ್ಭಾಗದಲ್ಲಿ ಹೊಂದಿದೆ. ಹಲವಾರು ಕಾರಣಗಳಿಗಾಗಿ ಆಂಡ್ರಾಯ್ಡ್‌ನಲ್ಲಿ MIUI ಉತ್ತಮ ಯೂಸರ್ ಇಂಟರ್ಫೇಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉತ್ತಮ ಬಣ್ಣ ಕಾಂಬಿನೇಶನ್, ಆಕರ್ಷಕ ಫಾಂಟ್‌ಗಳು, ಸನ್ನೆಗಳು ಮತ್ತು ಅನಿಮೇಶನ್‌ಗಳನ್ನು ಹೊಂದಿವೆ.

ಓದಿರಿ: ಎಚ್ಚರ: ಹೆಚ್ಚು ಮೊಬೈಲ್ ಬಳಕೆ ಪ್ರಾಣಕ್ಕೆ ಮಾರಕ

ಇಂದಿನ ಲೇಖನದಲ್ಲಿ ಫೋನ್ ಕುರಿತಾದ ಕೆಲವೊಂದು ಅಂಶಗಳನ್ನು ನಾವು ಹಂಚಿಕೊಳ್ಳುತ್ತಿದ್ದು ನಿಮ್ಮ ಶ್ಯೋಮಿ ಎಮ್ಐ 4i ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ತಿಳಿದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫಿಂಗರ್ ಪಿಂಚ್

ಫಿಂಗರ್ ಪಿಂಚ್

ಮೂರು ಫಿಂಗರ್ ಪಿಂಚ್

ಅಪ್ಲಿಕೇಶನ್ ಡ್ರಾವರ್‌ನೊಂದಿಗೆ ಶ್ಯೋಮಿ ಎಮ್ಐ 4i ಬಂದಿಲ್ಲ ಏಕೆಂದರೆ MIUI 6 ಎಲ್ಲಾ ಅಪ್ಲಿಕೇಶನ್‌ಗಳು ಮತ್ತು ವಿಜೆಟ್‌ಗಳನ್ನು ಮುಖ್ಯ ಪರದೆಯಲ್ಲಿ ನೇರವಾಗಿರಿಸಿದೆ. ಅಪ್ಲಿಕೇಶನ್ ಮತ್ತು ವಿಜೆಟ್‌ಗಳಿಗಾಗಿ ನೀವು ಪ್ರತ್ಯೇಕ ಸ್ಕ್ರೀನ್ ಅನ್ನು ಹೊಂದಬೇಕು ಎಂದಾದಲ್ಲಿ ಹೆಚ್ಚಿನ ಮುಖ್ಯ ಪರದೆಗಳನ್ನು ಸೇರಿಸಿ.

ಶಾರ್ಟ್‌ಕಟ್‌ಗಳು

ಶಾರ್ಟ್‌ಕಟ್‌ಗಳು

ಕ್ಯಾಮೆರಾ ಶಾರ್ಟ್‌ಕಟ್‌ಗಳು

ಲಾಕ್ ಸ್ಕ್ರೀನ್‌ನ ಬಲಭಾಗದಲ್ಲಿ ಸ್ವೈಪ್ ಮಾಡುವುದು ಕ್ಯಾಮೆರಾವನ್ನು ಲಾಂಚ್ ಮಾಡುತ್ತದೆ. ಕ್ಯಾಮೆರಾ ಬಳಕೆಯಲ್ಲಿರುವಾಗ ಕೆಳಕ್ಕೆ ಸ್ವೈಪ್ ಮಾಡುವುದು ಮುಂಭಾಗ ಕ್ಯಾಮೆರಾವನ್ನಾಗಿ ಬದಲಾಯಿಸುತ್ತದೆ.

ಬಿಲ್ಟ್ ಇನ್ ಸ್ಕ್ರೀನ್ ಕ್ಯಾಪ್ಚರ್

ಬಿಲ್ಟ್ ಇನ್ ಸ್ಕ್ರೀನ್ ಕ್ಯಾಪ್ಚರ್

ಸ್ಕ್ರೀನ್‌ಶಾಟ್ ತೆಗೆಯುವುದು

ತನ್ನ ಬಿಲ್ಟ್ ಇನ್ ಸ್ಕ್ರೀನ್ ಕ್ಯಾಪ್ಚರ್ ಫೀಚರ್‌ನೊಂದಿಗೆ ಸ್ಕ್ರೀನ್ ಶಾಟ್‌ಗಳನ್ನು ಸೆರೆಹಿಡಿಯುವುದನ್ನು ಶ್ಯೋಮಿ ಎಮ್ಐ 4i ಇದೀಗ ಸರಳವಾಗಿಸಿದೆ. ಮೆನು ಮತ್ತು ವಾಲ್ಯುಮ್ ಡೌನ್ ಅನ್ನು ಒತ್ತಿರಿ ಇಮೇಜ್ ಡೈರೆಕ್ಟರಿಯಲ್ಲಿ ಇದು ನೇರವಾಗಿ ಉಳಿಯುತ್ತದೆ.

ಎಲ್‌ಇಡಿ ಲೈಟ್‌

ಎಲ್‌ಇಡಿ ಲೈಟ್‌

ಎಲ್‌ಇಡಿ ಲೈಟ್‌ಗಳನ್ನು ಆನ್ ಮಾಡುವುದು

ಶ್ಯೋಮಿ ಎಮ್ಐ 4i ಬಿಲ್ಟ್ ಇನ್ ಟಚ್ ಫೀಚರ್‌ನೊಂದಿಗೆ ಬಂದಿದ್ದು, ಅಗತ್ಯವಿದ್ದಾಗ ಲಾಕ್ ಸ್ಕ್ರೀನ್‌ನಿಂದ ಆಕ್ಟಿವೇಟ್ ಮಾಡುವುದನ್ನು ಇದು ಸುಲಭಗೊಳಿಸುತ್ತದೆ.

ಖಾಸಗಿ ಸಂದೇಶ

ಖಾಸಗಿ ಸಂದೇಶ

ಖಾಸಗಿ ಸಂದೇಶ ಫೀಚರ್

ಪ್ರೈವೇಟ್ ಮೆಸೇಜ್ ಫೀಚರ್ ಎಂಬ ಅದ್ಭುತ ಅಂಶದೊಂದಿಗೆ ಇದು ಬಂದಿದ್ದು ಸಂದೇಶ ವಿಂಡೋಸ್ ಅನ್ನು ಕೆಳಕ್ಕೆ ಎಳೆಯಿರಿ ಮತ್ತು ಪರದೆಯಲ್ಲಿ ಖಾಸಗಿ ಸಂದೇಶ ವಿಂಡೋಗಳನ್ನು ನೀವು ಕಾಣುತ್ತೀರಿ.

ವೈಯಕ್ತಿಕ ಡೇಟಾ ಮರೆಮಾಡಬಹುದು

ವೈಯಕ್ತಿಕ ಡೇಟಾ ಮರೆಮಾಡಬಹುದು

ಗೆಸ್ಟ್ ಮೋಡ್

ಗೆಸ್ಟ್ ಮೋಡ್ ಫೀಚರ್‌ನೊಂದಿಗೆ ಶ್ಯೋಮಿ ಎಮ್ಐ 4i ಅನ್ನು ಹೆಚ್ಚು ಸುಭದ್ರವಾಗಿಸಿದೆ ಇಲ್ಲಿ ನಿಮ್ಮೆಲ್ಲಾ ವೈಯಕ್ತಿಕ ಡೇಟಾವನ್ನು ನಿಮಗೆ ಮರೆಮಾಡಬಹುದು. ಸೆಟ್ಟಿಂಗ್ಸ್ > ಪ್ರೈವಸಿ > ಪ್ರೈವಸಿ ಪ್ರೊಟೆಕ್ಶನ್ ನಂತರ ಗೆಸ್ಟ್ ಮೋಡ್ ಸ್ಪರ್ಶಿಸಿ.

ಮಲ್ಟಿ ಟಾಸ್ಕಿಂಗ್

ಮಲ್ಟಿ ಟಾಸ್ಕಿಂಗ್

ಮಲ್ಟಿ ಟಾಸ್ಕಿಂಗ್ ಅಪ್ಲಿಕೇಶನ್ ಪರದೆ

ಶ್ಯೋಮಿ ಎಮ್ಐ 4i ನ ಮೆನು ಕೀ ಎರಡು ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಹೇಗೆಂದರೆ ಬಟನ್ ಅನ್ನು ಟ್ಯಾಪ್ ಮಾಡುವುದು ಅಪ್ಲಿಕೇಶನ್, ವಿಜೆಟ್ಸ್, ವಾಲ್‌ಪೇಪರ್ ಅಥವಾ ಹೋಮ್ ಸ್ಕ್ರೀನ್ ಬದಲಾಯಿಸುವುದು ಕೆಲಸಗಳನ್ನು ನಿರ್ವಹಿಸುತ್ತದೆ.

ಸಂಪರ್ಕ ವೇಗ

ಸಂಪರ್ಕ ವೇಗ

ಸಂಪರ್ಕ ವೇಗ ಇಂಡಿಕೇಟರ್

ಡಿವೈಸ್‌ನ ನೆಟ್‌ವರ್ಕ್ ವೇಗವನ್ನು ಪರಿಶೀಲಿಸಲು ನಾವು ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗಳನ್ನು ಬಳಸುತ್ತಿರುತ್ತೇವೆ. ಆದರೆ ಎಮ್ಐ 4i ಸಂಪರ್ಕ ವೇಗ ಇಂಡಿಕೇಟರ್‌ನೊಂದಿಗೆ ಬಂದಿದ್ದು ಸ್ಟೇಟಸ್ ಬಾರ್‌ನಲ್ಲಿ ನೆಟ್‌ವರ್ಕ್ ವೇಗವನ್ನು ಇದು ಸೂಚಿಸುತ್ತದೆ. ಇದನ್ನು ಆಕ್ಟಿವೇಟ್ ಮಾಡಲು ಸೆಟ್ಟಿಂಗ್ಸ್ > ನೋಟಿಫಿಕೇಶನ್ಸ್ > ಶೋ ಕನೆಕ್ಶನ್ ಸ್ಪೀಡ್ ಆನ್ ಮಾಡಿ.

ಬ್ಯಾಟರಿ ಜೀವನವನ್ನು ವರ್ಧಿಸಲು

ಬ್ಯಾಟರಿ ಜೀವನವನ್ನು ವರ್ಧಿಸಲು

ಬೂಸ್ಟ್ ಬ್ಯಾಟರಿ

ಶ್ಯೋಮಿ ಎಮ್ಐ 4i ಪೂರ್ವ ಇನ್‌ಸ್ಟಾಲ್ ಮಾಡಿರುವ ಭದ್ರತಾ ಅಪ್ಲಿಕೇಶನ್‌ಗಳೊಂದಿಗೆ ಬಂದಿದ್ದು ಸ್ಮಾರ್ಟ್‌ಫೋನ್‌ನ ಬ್ಯಾಟರಿ ಜೀವನವನ್ನು ವರ್ಧಿಸಲು ಇದು ನೆರವನ್ನು ನೀಡುತ್ತದೆ.

ಯೂಸೇಜ್ ಫೀಚರ್

ಯೂಸೇಜ್ ಫೀಚರ್

ಡೇಟಾ ಯೂಸೇಜ್ ಫೀಚರ್

ಸ್ಮಾರ್ಟ್‌ಫೋನ್‌ನ ಬ್ಯಾಟರಿಯನ್ನು ಮುಗಿಸುವಲ್ಲಿ ಹಿನ್ನಲೆಯ ಚಾಲನೆ ಅಪ್ಲಿಕೇಶನ್‌ಗಳು ಕಾರಣವಾಗಿವೆ. ಆದರೆ ಶ್ಯೋಮಿ ಡೇಟಾ ಬಳಕೆ ಫೀಚರ್‌ನೊಂದಿಗೆ ಬಂದಿದ್ದು, ಹಿನ್ನಲೆಯಲ್ಲಿ ಯಾವ ಅಪ್ಲಿಕೇಶನ್ ಹೆಚ್ಚು ಡೇಟಾವನ್ನು ಮುಗಿಸುತ್ತದೆ ಎಂಬುದನ್ನು ಬಳಕೆದಾರರು ಆರಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Chinese smartphone maker, Xiaomi has recently released its latest budget smartphone, the Xiaomi Mi 4i in India. The news smartphone packs an array of great features at a pocket-friendly price.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot