ಟಿಪ್ಸ್: ವಾಟ್ಸಾಪ್‌ನಲ್ಲಿ ಯಾವುದೇ ಗಾತ್ರದ ಫೈಲ್‌ಗಳನ್ನು ಕಳುಹಿಸುವುದು ಹೇಗೆ?

By Shwetha
|

ವಾಟ್ಸಾಪ್‌ನಲ್ಲಿ 1ಜಿಬಿಯಂತಹ ದೊಡ್ಡ ಫೈಲ್ ಅಥವಾ ಚಲನ ಚಿತ್ರಗಳನ್ನು ಕಳುಹಿಸುವುದು ಕಷ್ಟಾಸಾಧ್ಯವಲ್ಲವೇ? ಇಂತಹ ದೊಡ್ಡ ಫೈಲ್‌ಗಳನ್ನು ನಿಮಗೆ ಕಳುಹಿಸಬೇಕು ಎಂದಾದಲ್ಲಿ ನೀವು ಅತ್ಯದ್ಭುತ ಇಂಟರ್ನೆಟ್ ವೇಗವನ್ನು ಪಡೆದುಕೊಂಡಿರಬೇಕು ಮತ್ತು ಸಾಕಷ್ಟು ಸಮಯವನ್ನೂ ನೀವು ಹೊಂದಿರಬೇಕು.

ಓದಿರಿ: ವೊಡಾಫೋನ್ ನೆಟ್‌ವರ್ಕ್ ಸಮಸ್ಯೆಗೆ ಪರಿಹಾರ ಹೇಗೆ?

16 ಎಮ್‌ಬಿಯಂತಹ ಗರಿಷ್ಟ ಫೈಲ್‌ಗಳನ್ನು ವಾಟ್ಸಾಪ್ ಮೂಲಕ ಕಳುಹಿಸಲಾಗುತ್ತದೆ ಎಂಬುದು ನಮಗೆಲ್ಲಾ ತಿಳಿದಿರುವ ವಿಷಯವೇ ಆಗಿದೆ. ಹಾಗಿದ್ದರೆ ದೊಡ್ಡ ಗಾತ್ರದ ಫೈಲ್‌ಗಳನ್ನು ಕಳುಹಿಸುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಲಿದ್ದೇವೆ. ದೊಡ್ಡ ಗಾತ್ರದ ಫೈಲ್‌ಗಳನ್ನು 16 ಜಿಬಿಯಂತೆ ನೀವು ವಿಭಜನೆ ಮಾಡಿಕೊಂಡು ವಾಟ್ಸಾಪ್‌ನಲ್ಲಿ ಕಳುಹಿಸಬಹುದಾಗಿದೆ. ಉಚಿತ ಫೈಲ್ ಸ್ಪ್ಲಿಟ್ಟರ್ ಟೂಲ್ ಅನ್ನು ಬಳಸಿಕೊಂಡು ಇದನ್ನು ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ಓದಿರಿ: ಉಚಿತ ಕರೆ, ಡೇಟಾ ಹೊಂದಿರುವ ಬಿಎಸ್‌ಎನ್‌ಎಲ್ ಟಾಪ್ ಪ್ಲಾನ್ಸ್

ಹಂತ: 1

ಹಂತ: 1

ಫ್ರಿ ಫೈಲ್ ಸ್ಪ್ಲಿಟ್ಟರ್ ಪ್ರೊಗ್ರಾಮ್ ಅನ್ನು ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಿ. ಇಲ್ಲಿ ಕ್ಲಿಕ್ ಮಾಡಿ ಅದನ್ನು ಪಡೆದುಕೊಳ್ಳಿ.

ಹಂತ:2

ಹಂತ:2

ಪ್ರೊಗ್ರಾಮ್ ಅನ್ನು ಯಶಸ್ವಿಯಾಗಿ ಇನ್‌ಸ್ಟಾಲ್ ಮಾಡಿಕೊಂಡ ನಂತರ, ಸೋರ್ಸ್ ಚಂಕ್ ಎಂಬ ಆಪ್ಶನ್ ಅನ್ನು ನೀವು ಕಂಡುಕೊಳ್ಳುತ್ತೀರಿ. ವಾಟ್ಸಾಪ್ ಮೂಲಕ ಟ್ರಾನ್ಸ್‌ಫರ್ ಮಾಡಬೇಕಾಗಿರುವ ದೊಡ್ಡ ಫೈಲ್ ಅನ್ನು ಆಯ್ಕೆಮಾಡಲು ಬ್ರೌಸ್ ಬಟನ್ ಕ್ಲಿಕ್ ಮಾಡಿ.

ಹಂತ: 3

ಹಂತ: 3

ಡೆಸ್ಟಿನೇಶನ್ ಫೋಲ್ಡರ್‌ನಲ್ಲಿ, ಒಂದೇ ಸ್ಥಳದಲ್ಲಿ ಎಲ್ಲಾ ಸ್ಪ್ಲಿಟ್ ಫೈಲ್‌ಗಳನ್ನು ಉಳಿಸಲು ಫೋಲ್ಡರ್ ಅನ್ನು ಬ್ರೌಸ್ ಮಾಡಿ ಆಯ್ಕೆಮಾಡಿ

ಹಂತ: 4

ಹಂತ: 4

ಚಂಕ್ ಗಾತ್ರದಲ್ಲಿ ನೀವು ಇನ್‌ಪುಟ್ ಮಾಡಬೇಕು. ಇದು 16 ಎಮ್‌ಬಿಯಾಗಿರಬೇಕು.

ಹಂತ: 5

ಹಂತ: 5

ಈಗ 'ಸ್ಪ್ಲಿಟ್' ಆಪ್ಶನ್ ಎಂಬ ಆಪ್ಶನ್ ಮೇಲೆ ಕ್ಲಿಕ್ ಮಾಡಿ.

ಹಂತ 6:

ಹಂತ 6:

ಎಲ್ಲಾ ಫೈಲ್‌ಗಳನ್ನು ಒಮ್ಮೆ ಸ್ಪ್ಲಿಟ್ ಮಾಡಿಕೊಂಡ ನಂತರ, ಅದನ್ನು ನಿಮ್ಮ ವಾಟ್ಸಾಪ್ ಮೂಲಕ ಕಳುಹಿಸಿಕೊಡಿ

ಹಂತ 7:

ಹಂತ 7:

ಇದು ಹೆಚ್ಚು ಮುಖ್ಯವಾದ ಹಂತವಾಗಿದೆ. ನಿಮ್ಮ ಸ್ನೇಹಿತರನ್ನು ಇದೇ ಪ್ರೊಗ್ರಾಮ್ ಬಳಸಿಕೊಳ್ಳುವಂತೆ ನೀವು ಕೇಳಿಕೊಳ್ಳಬೇಕಾಗುತ್ತದೆ. ಜಾಯಿನ್ ಫೈಲ್ ಆಪ್ಶನ್ ಅನ್ನು ಕ್ಲಿಕ್ ಮಾಡುವ ಮೂಲಕ ಆ ಕಡೆಯಿಂದ ಸ್ವೀಕರಿಸುವ ವ್ಯಕ್ತಿಯು ಫೈಲ್‌ಗಳನ್ನು ಪಡೆದುಕೊಳ್ಳುತ್ತಾರೆ.

Best Mobiles in India

English summary
It will be possible to send files of any size via WhatsApp. In order to split the file, we recommend you to use a free file splitter tool. Here is a trick to do so. Its simple and very fast. Let's get started.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X