Subscribe to Gizbot

ಸ್ಯಾಮ್‌ಸಂಗ್ ಫೋನ್‌ಗಳ ಸ್ಫೋಟ, ಅನುಸರಿಸಬೇಕಾದ ಕ್ರಮಗಳೇನು?

Written By:

ಇತ್ತೀಚೆಗಂತೂ ಹೆಚ್ಚುವರಿ ಸಂಖ್ಯೆಯಲ್ಲಿ ಸ್ಯಾಮ್‌ಸಂಗ್ ಫೋನ್‌ಗಳು ಸ್ಫೋಟಗೊಳ್ಳುತ್ತಿದ್ದು ಎಲ್ಲಾ ಬಳಕೆದಾರರು ಇದರ ಬಗ್ಗೆ ತೀವ್ರ ನಿಗಾವಹಿಸಿಕೊಳ್ಳಬೇಕಾಗಿದೆ. ಮೊಬೈಲ್ ಬ್ಯಾಟರಿಗಳ ಸ್ಫೋಟ ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ತೀರಾ ಸಾಮಾನ್ಯ ಸಂಗತಿ ಎಂದೆನಿಸಿದ್ದು, ವಿಶೇಷವಾಗಿ ಸ್ಯಾಮ್‌ಸಂಗ್ ಫೋನ್ ಬಳಕೆದಾರರಲ್ಲಿ ಇದು ತೀರಾ ನಡೆಯುತ್ತಿದೆ.

ಓದಿರಿ: ರಿಲಾಯನ್ಸ್ ಎಲ್‌ವೈಎಫ್ ಸ್ಮಾರ್ಟ್‌ಫೋನ್ ಖರೀದಿ ಮಾಡುತ್ತಿದ್ದೀರಾ? ಕೊಂಚ ಯೋಚಿಸಿ

ಸ್ಯಾಮ್‌ಸಂಗ್ ಬ್ಯಾಟರಿ ಸ್ಫೋಟಗೊಂಡಿರುವ ಅನೇಕ ಪ್ರಕರಣಗಳು ಇತ್ತೀಚೆಗೆ ದಾಖಲೆಯಾಗುತ್ತಿದ್ದು ನಿಜಕ್ಕೂ ಇದು ಜೀವ ಹಾನಿಯನ್ನುಂಟು ಮಾಡುವುದು ಖಂಡಿತ. ಹಾಗಿದ್ದರೆ ಇಂತಹ ಘಟನೆಗಳಿಗಾಗಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ಓದಿರಿ: ಫೋನ್ ಚಾರ್ಜಿಂಗ್: ಬೆನ್ನು ಬಿಡದ ತಪ್ಪು ತಿಳುವಳಿಕೆಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೋನ್ ಓವರ್ ಹೀಟಿಂಗ್

ಫೋನ್ ಓವರ್ ಹೀಟಿಂಗ್

ಲಿಥಿಯಮ್ ಐಯಾನ್ ಬ್ಯಾಟರಿಗಳು ಹೀಟ್ ಅನ್ನು ಉತ್ಪಾದಿಸುತ್ತವೆ ಚಾರ್ಜಿಂಗ್ ಸಮಯದಲ್ಲಿ ಶಾಖವನ್ನು ನಿಯಂತ್ರದಲ್ಲಿಟ್ಟುಕೊಳ್ಳುವ ಸಾಮರ್ಥ್ಯವನ್ನು ಈ ಬ್ಯಾಟರಿಗಳು ಪಡೆದುಕೊಂಡಿವೆ. ಅದಾಗ್ಯೂ ನಿಮ್ಮ ಫೋನ್ ಬ್ಯಾಟರಿ ತೀರಾ ಬಿಸಿಯಾಗುತ್ತಿದೆ ಎಂದಾದಲ್ಲಿ ಬ್ಯಾಟರಿಯನ್ನು ಬದಲಾಯಿಸಿಕೊಳ್ಳಿ

ಉಬ್ಬಿರುವ ಮೊಬೈಲ್ ಬ್ಯಾಟರಿಗಳು

ಉಬ್ಬಿರುವ ಮೊಬೈಲ್ ಬ್ಯಾಟರಿಗಳು

ನಿಮ್ಮ ಫೋನ್ ಬ್ಯಾಟರಿ ಉಬ್ಬಿಕೊಳ್ಳುತ್ತಿದೆ ಎಂದಾದಲ್ಲಿ ಸ್ಮಾರ್ಟ್‌ಫೋನ್‌ನಿಂದ ಬ್ಯಾಟರಿಯನ್ನು ಹೊರತೆಗೆಯಿರಿ ಮತ್ತು ಸ್ಫೋಟಗೊಳ್ಳುವುದರಿಂದ ಅದನ್ನು ತಡೆಗಟ್ಟಿ.

ಪರಿಶೀಲನೆ ಮಾಡಿಕೊಳ್ಳಿ

ಪರಿಶೀಲನೆ ಮಾಡಿಕೊಳ್ಳಿ

ನೀವು ಫೋನ್ ಬಳಸುತ್ತಿರುವಾಗ ಇದು ತೀರಾ ಬಿಸಿಯಾಗುತ್ತಿದೆ ಎಂದಾದಲ್ಲಿ ಬ್ಯಾಟರಿಯನ್ನು ಬದಲಾಯಿಸಬೇಕು ಇಲ್ಲವೇ ಸ್ಪಿನ್ ಟೆಸ್ಟ್ ಮಾಡಿಸಿ. ಬ್ಯಾಟರಿಯನ್ನು ಮೇಜು ಅಥವಾ ನೆಲದ ಮೇಲೆ ಇರಿಸಿ. ನಂತರ ಅದನ್ನು ತಿರುಗಿಸಿ. ಬ್ಯಾಟರಿ ತಿರುಗಿದಲ್ಲಿ, ಬ್ಯಾಟರಿಯಲ್ಲಿ ದೋಷ ಇದೆ ಎಂದರ್ಥವಾಗಿದೆ. ಕೂಡಲೇ ಅದನ್ನು ಬದಲಾಯಿಸಿಕೊಳ್ಳಿ.

ನಿಮ್ಮ ಸ್ಮಾರ್ಟ್‌ಫೋನ್‌ಗೆ ಹಾನಿ ಮಾಡಿಕೊಳ್ಳಬೇಡಿ

ನಿಮ್ಮ ಸ್ಮಾರ್ಟ್‌ಫೋನ್‌ಗೆ ಹಾನಿ ಮಾಡಿಕೊಳ್ಳಬೇಡಿ

ಕೆಲವರು ಫೋನ್ ಅನ್ನು ಆಗಾಗ್ಗೆ ಬೀಳಿಸಿಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಆದರೆ ಇದರಿಂದ ಅಪಾಯ ನಿಮಗೆ ಉಂಟಾಗಲಿದೆ ಎಂಬುದನ್ನು ಮಾತ್ರ ಮರೆಯಬೇಡಿ. ಫೋನ್ ಅನ್ನು ಆಗಾಗ್ಗೆ ಬೀಳಿಸಿಕೊಳ್ಳುವುದು ಕೂಡ ಫೋನ್‌ಗೆ ಅಂತೆಯೇ ಬ್ಯಾಟರಿಗೆ ತೀವ್ರವಾದ ಹಾನಿಯನ್ನುಂಟು ಮಾಡಲಿದೆ.

ಕಡಿಮೆ ತಾಪಮಾನದಲ್ಲಿ ಸ್ಮಾರ್ಟ್‌ಫೋನ್ ರಿಚಾರ್ಜ್

ಕಡಿಮೆ ತಾಪಮಾನದಲ್ಲಿ ಸ್ಮಾರ್ಟ್‌ಫೋನ್ ರಿಚಾರ್ಜ್

ಕಡಿಮೆ ತಾಪಮಾನ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಜನರು ಹೆಚ್ಚಿನ ಮೊಬೈಲ್ ಸ್ಫೋಟದಂತಹ ಪ್ರಕರಣಕ್ಕೆ ತುತ್ತಾಗುತ್ತಿದ್ದಾರೆ. ಇಂತಹ ಸ್ಥಳದಲ್ಲಿ ಲಿಥಿಯಮ್ ಐಯಾನ್ ಬ್ಯಾಟರಿಗಳನ್ನು ಚಾರ್ಜ್ ಮಾಡುವುದನ್ನು ನಿಷೇಧಿಸಲಾಗಿದೆ.

ಜನಪ್ರಿಯವಲ್ಲದ ತಯಾರಕರಿಂದ ಬ್ಯಾಟರಿ ಖರೀದಿಸಬೇಡಿ

ಜನಪ್ರಿಯವಲ್ಲದ ತಯಾರಕರಿಂದ ಬ್ಯಾಟರಿ ಖರೀದಿಸಬೇಡಿ

ಕೆಲವೊಂದು ಸ್ಮಾರ್ಟ್‌ಫೋನ್ ಬಳಕೆದಾರರು ಹೆಚ್ಚು ಬ್ರ್ಯಾಂಡ್ ಕಾನ್ಶಿಯಸ್ ಆಗಿರುತ್ತಾರೆ ಆದರೆ ಹೆಚ್ಚಿನವರು ಕಡಿಮೆ ಗುಣಮಟ್ಟದ ಬ್ಯಾಟರಿ ಉತ್ಪನ್ನಗಳಿಗೂ ಆದ್ಯತೆಯನ್ನು ನೀಡುತ್ತಿರುವುದರಿಂದ ಕಡಿಮೆ ದುಡ್ಡಿನಲ್ಲಿ ಉತ್ಪನ್ನಗಳನ್ನು ಮಾರುತ್ತಿರುವವರ ಸಂಖ್ಯೆ ಮಾರುಕಟ್ಟೆಯಲ್ಲಿ ಈಗ ಹೆಚ್ಚಿದೆ. ಇದರಿಂದ ಕೂಡ ಫೋನ್ ಬಳಕೆದಾರರು ಬ್ಯಾಟರಿ ಸ್ಫೋಟದಂತಹ ಅಪಾಯಗಳಿಗೆ ಸಿಲುಕಿಕೊಳ್ಳುತ್ತಿದ್ದಾರೆ.

ದಿಂಬಿನಡಿಯಲ್ಲಿ ಫೋನ್ ಇರಿಸುವುದು

ದಿಂಬಿನಡಿಯಲ್ಲಿ ಫೋನ್ ಇರಿಸುವುದು

ಫೋನ್ ಚಾರ್ಜ್‌ ಮಾಡುತ್ತಾ ಫೋನ್ ಅನ್ನು ದಿಂಬಿನಡಿಯಲ್ಲಿಟ್ಟು ಮಲಗುವುದು ಕೂಡ ಫೋನ್ ಅನ್ನು ಬಿಸಿ ಮಾಡಲು ಕಾರಣವಾಗಿರುತ್ತದೆ.

ನೀರಿಗೆ ಬಿದ್ದ ಫೋನ್ ಅನ್ನು ಪರಿಶೀಲಿಸದೇ ಬಳಸದಿರಿ

ನೀರಿಗೆ ಬಿದ್ದ ಫೋನ್ ಅನ್ನು ಪರಿಶೀಲಿಸದೇ ಬಳಸದಿರಿ

ನೀರಿಗೆ ನಿಮ್ಮ ಫೋನ್ ಬಿದ್ದಿದೆ ಎಂದಾದಲ್ಲಿ ಅದನ್ನು ಅಧಿಕೃತ ಪರಿಣಿತರಲ್ಲಿಗೆ ತೆಗೆದುಕೊಂಡು ಹೋಗಿ ಪರಿಶೀಲಿಸಿಕೊಳ್ಳಿ. ಇದನ್ನು ಸರಿಯಾಗಿ ಪರಿಶೀಲಿಸದೇ ಬಳಸುವುದರಿಂದ ಫೋನ್ ಸ್ಫೋಟ ಉಂಟಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
We at GIZBOT have earlier talked about the exploding batteries and the reason behind it. However, here's how to find out whether your mobile will blast or not, before it can affect your life in anyway.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot