ಇ-ಇಂಕ್ ಪರದೆಯಿರುವ ಶಿಯೋಮಿ ಎಂಐ 5ಸಿಯಲ್ಲಿ ಏನೇನನ್ನು ನಿರೀಕ್ಷಿಸಬಹುದು?

Written By:

ಈ ವರುಷ ಶಿಯೋಮಿಗೆ ಖುಷಿ ತಂದಿದೆ ಮತ್ತು ಕಂಪನಿಯು ತನ್ನ ಯಶಸ್ಸಿನಿಂದ ವಿರಾಮ ಪಡೆಯುವ ಯಾವುದೇ ಲಕ್ಷಣಗಳಿಲ್ಲ!

ಇ-ಇಂಕ್ ಪರದೆಯಿರುವ ಶಿಯೋಮಿ ಎಂಐ 5ಸಿಯಲ್ಲಿ ಏನೇನನ್ನು ನಿರೀಕ್ಷಿಸಬಹುದು?

ಚೀನಾದ ಉತ್ಪಾದಕ ಈಗಾಗಲೇ ಶಿಯೋಮಿ ಎಂಐ ನೋಟ್2 ವಿಷಯವಾಗಿ ಸುದ್ದಿಯಲ್ಲಿದೆ. ಜೊತೆಜೊತೆಯಲ್ಲೇ ಮತ್ತೊಂದು ಹೊಸ ಸ್ಮಾರ್ಟ್ ಫೋನ್ ತಯಾರಿಸುವುದರಲ್ಲೂ ಶಿಯೋಮಿ ತೊಡಗಿದಂತಿದೆ.

ಓದಿರಿ: ಜಿಯೋ ಸಿಮ್‌ನಲ್ಲಿರುವ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ

ಭಾರತದಲ್ಲಿ ಇನ್ನೂ ಬಿಡುಗಡೆಗೊಳ್ಳಬೇಕಿರುವ ಶಿಯೋಮಿ ಎಂಐ5ಎಸ್ ಮತ್ತು ಎಂಐ5ಎಸ್ ಪ್ಲಸ್ ಅನ್ನು ಕಂಪನಿಯು ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿತು. ಈಗ ಶಿಯೋಮಿ ಎಂಐ5ಸಿ ಉತ್ಪಾದನಾ ಹಂತದಲ್ಲಿದೆ. ಚೀನಾದ ವೆಬ್ ಪುಟಗಳಲ್ಲಿ ಈ ಫೋನಿನ ಕೆಲ ಚಿತ್ರಗಳು ಸೋರಿಕೆಯಾಗಿದ್ದವು.

ಓದಿರಿ: ಜಿಮೇಲ್‌ನಲ್ಲಿ ಜಂಕ್ ಇಮೇಲ್‌ಗಳ ನಿವಾರಣೆ ಹೇಗೆ?

ಶಿಯೋಮಿ ಅಭಿಮಾನಿಗಳಿಗಾಗಿ ಈ ಹೊಸ ಫೋನಿನ ಕೆಲವು ವಿಶಿಷ್ಟತೆಗಳನ್ನು ಇಲ್ಲಿ ಪಟ್ಟಿ ಮಾಡಿದ್ದೀವಿ. ಒಮ್ಮೆ ಓದಿ ನೋಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಿಯೋಮಿ ಎಂಐ5ಸಿ ಯ ಸೋರಿಕೆಯಾದ ಫೋಟೋಗಳು.

ಶಿಯೋಮಿ ಎಂಐ5ಸಿ ಯ ಸೋರಿಕೆಯಾದ ಫೋಟೋಗಳು.

ವೆಬ್ ಪುಟವು ಶಿಯೋಮಿ ಎಂಐ5ಸಿ ಫೋನಿನ ನಾಲ್ಕು ಫೋಟೋಗಳನ್ನು ಸೋರಿಕೆ ಮಾಡಿದೆ. ಇದರ ರಹಸ್ಯ ನಾಮ ಮೇರಿ. ಈ ಚಿತ್ರಗಳಲ್ಲಿ ಫೋನಿನ ಮುಂಬದಿ ಮತ್ತು ಹಿಂಬದಿ ಹಾಗೂ ಪರದೆಯನ್ನು ಕಾಣಬಹುದಾಗಿದೆ.

ಶಿಯೋಮಿ ಎಂಐ5ಸಿಯ ಗುಣವಿಶೇಷತೆಗಳು.

ಶಿಯೋಮಿ ಎಂಐ5ಸಿಯ ಗುಣವಿಶೇಷತೆಗಳು.

ಸೋರಿಕೆಯಾದ ಶಿಯೋಮಿ ಎಂಐ5ಸಿಯ ಚಿತ್ರಗಳಲ್ಲಿ ಫೋನಿನ ಕೆಲ ಗುಣ ವಿಶೇಷತೆಗಳೂ ಕಾಣಿಸಿದೆ. ಈ ಫೋನಿನಲ್ಲಿ 2.2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್; ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೋ ಆಧಾರಿತ ಎಂಐಯುಐ 8.6.9 ಇರಲಿದೆ. 64 ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯವಿರಲಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

2.5ಡಿ ಗಾಜಿನ ಪರದೆಯನ್ನು ನಿರೀಕ್ಷಿಸಬಹುದು.

2.5ಡಿ ಗಾಜಿನ ಪರದೆಯನ್ನು ನಿರೀಕ್ಷಿಸಬಹುದು.

ಶಿಯೋಮಿ ಎಂಐ5ಸಿಯ ಸೋರಿಕೆಯಾದ ಚಿತ್ರಗಳಲ್ಲಿ 5.5 ಇಂಚಿನ ಪರದೆಯಿದೆ, 2.5ಡಿ ಗಾಜಿನ ಪರದೆ. ಜೊತೆಗೆ 4ಜಿ ವೋಲ್ಟೇ ಇದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇ-ಇಂಕ್ ಪರದೆ ಇರುವ ಸಾಧ್ಯತೆ.

ಇ-ಇಂಕ್ ಪರದೆ ಇರುವ ಸಾಧ್ಯತೆ.

ಚಿತ್ರಗಳು ಸೋರಿಕೆಯಾದ ಬೆನ್ನಲ್ಲೇ ವ್ಯೀಬೋದಲ್ಲಿ ಒಂದು ಟೀಸರ್ ಕಾಣಿಸಿಕೊಂಡಿತು, ಇದರ ಪ್ರಕಾರ ಶಿಯೋಮಿಯ ಹೊಸ ಸ್ಮಾರ್ಟ್ ಫೋನಿನಲ್ಲಿ ಇ-ಇಂಕ್ ಪರದೆ ಇರಲಿದೆ. ಇ-ಇಂಕ್ ಹಾಳೆಯ ರೀತಿಯಲ್ಲಿರುತ್ತದೆ, ಉತ್ತಮ ಕಾಂಟ್ರಾಸ್ಟ್ ಮತ್ತು ಬ್ರೈಟ್ ನೆಸ್ ಇರುತ್ತದೆ, ಕಡಿಮೆ ಶಕ್ತಿ ಮತ್ತು ಉತ್ತಮ ವ್ಯೀವಿಂಗ್ ಆ್ಯಂಗಲ್ ಇರುತ್ತದೆ. ಅಮೆಜಾನ್ ಕಿಂಡಲ್ ಇ-ಇಂಕ್ ಪರದೆಯ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಂಡಿದೆ.

ಟೀಸರ್ ಪ್ರಕಾರ ಇನ್ನೂ ಕಾಯಬೇಕು!

ಟೀಸರ್ ಪ್ರಕಾರ ಇನ್ನೂ ಕಾಯಬೇಕು!

ಸೋರಿಕೆಯಾಗಿರುವ ಟೀಸರಿನಲ್ಲಿ ಹಿಂಬದಿಯ ಕ್ಯಾಮೆರಾದ ಕೆಳಗೆ ಶಿಯೋಮಿ ಲೋಗೋ ಅನ್ನು ಕಾಣಬಹುದು. ಸ್ಮಾರ್ಟ್ ಫೋನಿನ ಹಿಂಬದಿಯಲ್ಲಿ ಕ್ಯಾಮೆರಾದ ಕೆಳಗೆ ಇ-ಇಂಕ್ ಪರದೆಯಿರುವುದನ್ನೂ ದೃಡಪಡಿಸುತ್ತದೆ. ಈ ಫೋನ್ ಕೈಗೆ ಬರಲು ತುಂಬಾ ಕಾಯಬೇಕು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Xiaomi Mi 5c seems to be the new phone in the making. The device has leaked via photos showing its possible specs. It might come with an E-Ink display.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot