ಶಿಯೋಮಿ ಎಂಐ 5ಎಸ್ vs ಗೂಗಲ್ ಪಿಕ್ಸೆಲ್ ಎಕ್ಸ್.ಎಲ್: ಎರಡರಲ್ಲಿ ಯಾವುದು ಉತ್ತಮ?

|

ಈ ತಿಂಗಳ ಪ್ರಾರಂಭದಲ್ಲಿ ಆ್ಯಪಲ್ ಐಫೋನ್ 7 ಮತ್ತು 7 ಪ್ಲಸ್ ಅನ್ನು ಬಿಡುಗಡೆಗೊಳಿಸಿತು; ಈಗ ಎಲ್ಲರ ಗಮನ ಗೂಗಲ್ ಅಕ್ಟೋಬರ್ 4ರಂದು ಬಿಡುಗಡೆಗೊಳಿಸುವ ಸ್ಮಾರ್ಟ್ ಫೋನಿನ ಮೇಲೆ.

ಶಿಯೋಮಿ ಎಂಐ 5ಎಸ್ vs ಗೂಗಲ್ ಪಿಕ್ಸೆಲ್ ಎಕ್ಸ್.ಎಲ್: ಎರಡರಲ್ಲಿ ಯಾವುದು ಉತ್ತಮ?

ಇತ್ತೀಚೆಗೆ, ಶಿಯೋಮಿ ಕಂಪನಿಯು ಹಲವು ಸ್ಮಾರ್ಟ್ ಫೋನುಗಳನ್ನು ಬಿಡುಗಡೆಗೊಳಿಸಿದೆ - ಕಡಿಮೆ ಬೆಲೆಯ ಸ್ಮಾರ್ಟ್ ಫೋನುಗಳಿಂದ ಹಿಡಿದು ದುಬಾರಿ ಬೆಲೆಯ ಫ್ಲಾಗ್ ಶಿಪ್ ಫೋನುಗಳನ್ನು ಬಿಡುಗಡೆಗೊಳಿಸುತ್ತಿದೆ. ಈಗ ಕಂಪನಿಯು ಸೆಪ್ಟೆಂಬರ್ 27ರಂದು ಕಾರ್ಯಕ್ರಮ ಆಯೋಜಿಸಿದೆ, ಅಲ್ಲಿ ಎಂಐ 5ಎಸ್ ಮತ್ತು ಎಂಐ ನೋಟ್ 2 ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ.

ಓದಿರಿ: ಅಮೆಜಾನ್ ಇಂಡಿಯಾ: ಟಾಪ್ 10 ಡೀಲ್ಸ್, ಕೊಡುಗೆ ಮತ್ತು ರಿಯಾಯಿತಿ.

ಗೂಗಲ್ ಎರಡು ಸ್ಮಾರ್ಟ್ ಫೋನುಗಳನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ - ಪಿಕ್ಸೆಲ್ ಎಕ್ಸ್.ಎಲ್ ಮತ್ತು ಪಿಕ್ಸೆಲ್. ಇವೆರಡರಲ್ಲಿ ಪಿಕ್ಸೆಲ್ ಎಕ್ಸ್.ಎಲ್ ದುಬಾರಿ ಫೋನಾಗಿದ್ದರೆ ಪಿಕ್ಸೆಲ್ ಅಗ್ಗದ ಸ್ಮಾರ್ಟ್ ಫೋನ್. ಫ್ಲಾಗ್ ಶಿಪ್ ಪಿಕ್ಸೆಲ್ ಎಕ್ಸ್.ಎಲ್ ಫೋನು ಕಳೆದ ವರುಷ ಬಿಡುಗಡೆಯಾದ ನೆಕ್ಸಸ್ 6ಪಿ ರೀತಿಯಲ್ಲೇ ಪ್ರೀಮಿಯಂ ಫೋನ್ ಆಗಿರುತ್ತದೆ.

ಓದಿರಿ: ಏರ್‌ಸೆಲ್ V/S ಬಿಎಸ್‌ಎನ್‌ಎಲ್ V/S ಟಾಟಾ ಡೊಕೊಮೊ ಟಾರಿಫ್ ಸ್ಪರ್ಧೆ: ಯಾವುದು ಉತ್ತಮ
ಈಗಾಗಲೇ, ಅಂತರ್ಜಾಲದಲ್ಲಿ ಶಿಯೋಮಿ ಎಂಐ 5ಎಸ್ ಮತ್ತು ಗೂಗಲ್ ಪಿಕ್ಸೆಲ್ ಎಕ್ಸ್.ಎಲ್ ಬಗ್ಗೆ ಹಲವಾರು ಗಾಳಿ ಸುದ್ದಿಗಳು ಹಬ್ಬಿವೆ. ಇಲ್ಲಿ, ಸೋರಿಕೆಯಾದ ಮಾಹಿತಿಗಳ ಆಧಾರದ ಮೇಲೆ ಬಿಡುಗಡೆಗೊಳ್ಳಲಿರುವ ಈ ಎರಡೂ ಸ್ಮಾರ್ಟ್ ಫೋನುಗಳನ್ನು ಹೋಲಿಕೆ ಮಾಡಿದ್ದೇವೆ. ಒಮ್ಮೆ ಗಮನಿಸಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಕ್ತಿಯುತ ಹಾರ್ಡ್ ವೇರ್.

ಶಕ್ತಿಯುತ ಹಾರ್ಡ್ ವೇರ್.

ಫ್ಲಾಗ್ ಶಿಪ್ ಫೋನುಗಳಾದ ಎರಡರಲ್ಲೂ ಉತ್ತಮ ಶಕ್ತಿಯುತ ಹಾರ್ಡ್ ವೇರ್ ಇರಲಿದೆ. ಶಿಯೋಮಿ ಎಂಐ 5ಎಸ್ ನಲ್ಲಿ ಅಂಟುಟು ಸ್ಕೋರ್ ಹುಚ್ಚು ಹಿಡಿಸುವಷ್ಟಿದೆ - 164119! ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ ಸ್ನಾಪ್ ಡ್ರಾಗನ್ 621 ಚಿಪ್ ಇರಲಿದೆ, 6ಜಿಬಿ ರ್ಯಾಮ್ ನೊಂದಿಗೆ. 4ಜಿಬಿಯ ಫೋನು ಕೂಡ ಲಭ್ಯವಾಗಲಿದೆ.

ಗೂಗಲ್ ಪಿಕ್ಸೆಲ್ ಹೆಚ್ಚೇನು ಹಿಂದುಳಿದಿಲ್ಲ. ಇದರಲ್ಲೂ ಸ್ನಾಪ್ ಡ್ರಾಗನ್ 821 ಪ್ರೊಸೆಸರ್, 4ಜಿಬಿ ರ್ಯಾಮ್ ಇದೆ. ಆದರೆ ಗೂಗಲ್ ಪಿಕ್ಸೆಲ್ ನಲ್ಲೂ 4ಜಿಬಿ ರ್ಯಾಮ್ ಇರಲಿದೆ. ಗೂಗಲ್ ಪಿಕ್ಸೆಲ್ ಎಕ್ಸ್.ಎಲ್ ನ ರ್ಯಾಮ್ ಅನ್ನು 6ಜಿಬಿಗೆ ಏರಿಸಬಹುದು, ಆದರೆ ಇದರ ಬಗ್ಗೆ ಸದ್ಯಕ್ಕೆ ಮಾಹಿತಿಯಿಲ್ಲ.

ಪರದೆ.

ಪರದೆ.

ಸೋರಿಕೆಯಾದ ಮಾಹಿತಿಯ ಪ್ರಕಾರ ಶಿಯೋಮಿ ಎಂಐ 5ಎಸ್ ನಲ್ಲಿ 5.15ಇಂಚಿನ ಕ್ವಾಡ್ ಹೆಚ್.ಡಿ ಪರದೆಯಿರಲಿದೆ. ಮತ್ತೊಂದೆಡೆ ಗೂಗಲ್ ಪಿಕ್ಸೆಲ್ ಎಕ್ಸ್.ಎಲ್ ನಲ್ಲಿ 5.5 ಇಂಚಿನ ದೊಡ್ಡ ಪರದೆ ಇರಲಿದೆ, ಇದೂ ಕ್ವಾಡ್ ಹೆಚ್.ಡಿ ಪರದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎರಡರಲ್ಲೂ ಒಂದೇ ಬ್ಯಾಟರಿ.

ಎರಡರಲ್ಲೂ ಒಂದೇ ಬ್ಯಾಟರಿ.

ಎರಡೂ ಸ್ಮಾರ್ಟ್ ಫೋನುಗಳಲ್ಲಿ3,490 ಎಂ.ಎ.ಹೆಚ್ ಬ್ಯಾಟರಿ ಇರಲಿದೆಯೆಂದು ನಿರೀಕ್ಷಿಸಲಾಗಿದೆ. ಶಿಯೋಮಿಯ ಕಳೆದ ವರುಷದ ಫೋನ್ ಎಂಐ 5ನಲ್ಲಿ ಬ್ಯಾಟರಿಯ ಸಮಸ್ಯೆಯಿತ್ತು, ಹೊಸ ಫೋನಿನಲ್ಲಿ ಈ ಸಮಸ್ಯೆ ಇರದಂತೆ ನೋಡಿಕೊಳ್ಳುತ್ತದೆ. ಗೂಗಲ್ಲಿನ ಕಳೆದ ವರ್ಷದ ಫೋನಾದ ನೆಕ್ಸಸ್ 6ಪಿಯ ಬ್ಯಾಟರಿ ಬಾಳಿಕೆ ಚೆನ್ನಾಗಿತ್ತು.

ಪಿಕ್ಸೆಲ್ ಎಕ್ಸ್.ಎಲ್ ನಲ್ಲಿ ಉತ್ತಮ ಬ್ಯಾಟರಿ.

ಪಿಕ್ಸೆಲ್ ಎಕ್ಸ್.ಎಲ್ ನಲ್ಲಿ ಉತ್ತಮ ಬ್ಯಾಟರಿ.

ಈ ವಿಷಯದಲ್ಲಿ ಗೂಗಲ್ ತನ್ನ ಎದುರಾಳಿ ಎಂಐ 5ಎಸ್ ಅನ್ನು ಮೀರಿಸುತ್ತದೆ. ಪಿಕ್ಸೆಲ್ ಎಕ್ಸ್.ಎಲ್ ನಲ್ಲಿ ಆ್ಯಂಡ್ರಾಯ್ಡ್ 7.1 ಇರಲಿದೆ, ಈ ಬಾರಿ ಗೂಗಲ್ ಪಿಕ್ಸೆಲ್ ಫೋನುಗಳಿಗಾಗಿಯೇ ಒ.ಎಸ್ ನಲ್ಲಿ ಕೊಂಚ ಬದಲಾವಣೆಗಳನ್ನು ಮಾಡಲಿದೆ.

ಶಿಯೋಮಿ ಎಂಐ 5ಎಸ್ ನಲ್ಲಿ, ಆ್ಯಂಡ್ರಾಯ್ಡ್ ಮಾರ್ಷ್ ಮೆಲ್ಲೊ ಆಧರಿತ ಹೊಸ ಎಂಐಯುಐ 8 ಇರಲಿದೆ. ಶಿಯೋಮಿ ಕೂಡ ಆ್ಯಂಡ್ರಾಯ್ಡ್ ನ್ಯೂಗಾಟ್ ಅನ್ನು ಬಳಸುತ್ತದೆ ಎನ್ನುವ ಗಾಳಿ ಸುದ್ದಿಗಳಿದ್ದರೂ ಮಾರ್ಷ್ ಮೆಲ್ಲೋ ಇರುವ ಸಾಧ್ಯತೆಗಳೇ ಅಧಿಕ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕ್ಯಾಮೆರ.

ಕ್ಯಾಮೆರ.

ಕಳೆದ ಬಾರಿಯ ನೆಕ್ಸಸ್ ಫೋನಿನಲ್ಲಿ ಗೂಗಲ್ ಕ್ಯಾಮೆರಾದ ಸಮಸ್ಯೆಯನ್ನು ಸರಿಪಡಿಸಿತ್ತು, ಕ್ಯಾಮೆರಾ ಚೆನ್ನಾಗಿ ಕಾರ್ಯನಿರ್ವಹಿಸುತ್ತಿತ್ತು, ಈ ವರುಷವೂ ಇದು ಮುಂದುವರೆಯುತ್ತದೆ ಎನ್ನುವುದು ನಮ್ಮ ನಿರೀಕ್ಷೆ. ಪಿಕ್ಸೆಲ್ ಎಕ್ಸ್ ಎಲ್ ನಲ್ಲಿ 12 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ ಇರಲಿದೆ.

ಶಿಯೋಮಿ ಎಂಐ 5ಎಸ್ ನಲ್ಲಿ, ಕಂಪನಿಯು ತಿಳಿಸಿರುವಂತೆ 16 ಮೆಗಾಪಿಕ್ಸೆಲ್ಲಿನ ಎರಡು ಹಿಂಬದಿಯ ಕ್ಯಾಮೆರಾಗಳಿರಲಿವೆ, ಇದು ಹುವಾಯಿ ಮತ್ತು ಎಲ್.ಜಿ ಕಂಪನಿಯ ಫೋನುಗಳಿಗೆ ಸೆಡ್ಡು ಹೊಡೆಯುತ್ತದೆ. ಕ್ಯಾಮೆರಾ ವಿಷಯದಲ್ಲಿ ಎಂಐ 5ಎಸ್ ಗೂಗಲ್ ಫೋನನ್ನು ಸೋಲಿಸುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Apple released the iPhone 7 and 7 Plus earlier this month and the focus will be now on the Google smartphones which are to be released on October 4 as confirmed by Google.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X