Just In
- 1 hr ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್‌ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 1 hr ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
- 2 hrs ago
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- 18 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
Don't Miss
- News
ಸನಾತನ ಧರ್ಮ ಭಾರತದ ರಾಷ್ಟ್ರೀಯ ಧರ್ಮ: ಯೋಗಿ ಆದಿತ್ಯನಾಥ್ ಮತ್ತೆ ವಿವಾದ
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Movies
ಕ್ರಾಂತಿಗೆ ಸಿಕ್ಕಾಪಟ್ಟೆ ನೆಗೆಟಿವ್ ವಿಮರ್ಶೆ; ಚಿತ್ರ ನೋಡಿ ಕಿಡಿಕಾರಿದ ನಟ ಪ್ರಮೋದ್!
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶಿಯೋಮಿ ಎಂ.ಐ ಮತ್ತು ರೆಡ್ ಮಿ ಸ್ಮಾರ್ಟ್ ಫೋನುಗಳ ನಡುವಿರುವ 4 ವ್ಯತ್ಯಾಸಗಳು.
ಶಿಯೋಮಿ ಮೊದಲು ಶುರುವಾಗಿದ್ದು ಸ್ಮಾರ್ಟ್ ಫೋನ್ ಕಂಪನಿಯಾಗಿ ಎನ್ನುವುದು ಎಷ್ಟು ಜನಕ್ಕೆ ತಿಳಿದಿದೆ? ಹೌದು, ಚೀನಾದ ಈ ಮೊಬೈಲ್ ತಯಾರಕ ಕಂಪನಿಯು ಮೊದಲು ಆ್ಯಂಡ್ರಾಯ್ಡ್ ಫೋನುಗಳಿಗೆ ಯೂಸರ್ ಇಂಟರ್ ಫೇಸ್ (ಎಂ.ಐ ಯೂಸರ್ ಇಂಟರ್ ಫೇಸ್) ತಯಾರಿಸುವ ಸಾಫ್ಟ್ ವೇರ್ ಕಂಪನಿಯಾಗಿತ್ತು.

ನಂತರ, ಬಳಕೆದಾರ ಸ್ನೇಹಿಯಾಗುವ ನಿಟ್ಟಿನಲ್ಲಿ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗಳೆರಡನ್ನೂ ಸ್ವತಃ ತಯಾರಿಸಿ ಎಂ.ಐ ಫೋನುಗಳಿಗೆ ರೂಪ ಕೊಟ್ಟಿತು. ಮತ್ತೊಂದೆಡೆ, ಕಡಿಮೆ ಬೆಲೆಯ, ಗ್ರಾಹಕರು ಅಚ್ಚರಿ ಪಡುವಂತಹ ರೆಡ್ ಮಿ ಫೋನುಗಳನ್ನೂ ಮಾರುಕಟ್ಟೆಗೆ ಬಿಟ್ಟಿತು.
ಓದಿರಿ: ಸ್ಮಾರ್ಟ್ ಫೋನಿನ ಎಲ್.ಇ.ಡಿ ಲೈಟನ್ನು ಕ್ರಿಯಾತ್ಮಕವಾಗಿ ಉಪಯೋಗಿಸಲು ಏಳು ಸಲಹೆಗಳು.
ಒಂಚೂರು ಇತಿಹಾಸ.
ಉಳಿದ ಫೋನ್ ತಯಾರಕರಿಗೆ ಹೋಲಿಸಿದರೆ ಈ ಚೀನಾದ ಕಂಪನಿ ಶುರುವಾಗಿದ್ದೇ ವಿಭಿನ್ನವಾಗಿ. ಜೊತೆಗೆ, ಶಿಯೋಮಿ ಕಂಪನಿಯು ಎಲ್ಲಿಯೂ ರೀಟೇಲ್ ಅಂಗಡಿಯನ್ನು ಹೊಂದಿಲ್ಲ, ಅದರ ವ್ಯಾಪಾರ ವಹಿವಾಟುಗಳೆಲ್ಲವೂ ಸಂಪೂರ್ಣವಾಗಿ ಆನ್ ಲೈನ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ. ಈ ತಂತ್ರದಿಂದಾಗಿ ಕಂಪನಿಯು ಉತ್ತಮ ಗುಣಮಟ್ಟದ ಕಡಿಮೆ ಬೆಲೆಯ ಸ್ಮಾರ್ಟ್ ಫೋನುಗಳನ್ನು ತಯಾರಿಸುತ್ತಿದೆ.

ಎರಡು ವರ್ಷದ ಹಿಂದೆ ಫ್ಲಿಪ್ ಕಾರ್ಟ್ ಮೂಲಕ ಶಿಯೋಮಿ ಎಂ.ಐ 3 ಫೋನಿನ ಮಾರಾಟದೊಂದಿಗೆ ಶಿಯೋಮಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. ಮೊದಲಿಗೆ ಕಂಪನಿ ಫ್ಲಾಷ್ ಸೇಲ್ ಮೂಲಕ ಫೋನನ್ನು ಮಾರಾಟ ಮಾಡಿತು. ಮೊದಲ ಫ್ಲಾಷ್ ಸೇಲ್ ನಲ್ಲಿ ಒಂದು ಲಕ್ಷ ಜನರು ನೋಂದಾಯಿಸಿಕೊಂಡಿದ್ದರು.

ಸ್ಮಾರ್ಟ್ಫೋನ್ ಬಂಡವಾಳ!
ಫ್ಲಾಷ್ ಸೇಲ್ ಮೂಲಕ ಫೋನು ಮಾರುವುದು ಒಂದು ನಿಯಮದಂತೆಯೇ ಆಗಿಹೋಯಿತು. ಹೀಗೆ ಶಿಯೋಮಿ ಭಾರತದ ಪ್ರಖ್ಯಾತ ಬ್ರ್ಯಾಮಡ್ ಆಯಿತು.
ಬೀಜಿಂಗಿನ ಈ ಶಿಯೋಮಿ ಕಂಪನಿಯು ತನ್ನ ಸ್ಮಾರ್ಟ್ ಫೋನುಗಳನ್ನು ಎರಡು ವಿಧದಲ್ಲಿ ಮಾರುಕಟ್ಟೆಗೆ ಬಿಟ್ಟಿತು - - ಎಂಐ ಹಾಗೂ ರೆಡ್ ಮಿ. ಎಂಐ ಮತ್ತು ರೆಡ್ ಮಿ ನಡುವಿನ ವ್ಯತ್ಯಾಸಗಳು ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ ಸರಣಿ ಮತ್ತು ಎಸ್ ಸರಣಿಯ ನಡುವಿರುವ ವ್ಯತ್ಯಾಸದಂತೆಯೇ ಇದೆ.

ಎಂಐ ಸರಣಿಯ ಕೆಲವು ಖ್ಯಾತ ಫೋನುಗಳೆಂದರೆ - - ಎಂಐ3, ಎಂಐ4, ಎಂಐ4 ಐ, ಎಂಐ5, ಎಂಐ ಮ್ಯಾಕ್ಸ್; ರೆಡ್ ಮಿ ಸರಣಿಯಲ್ಲಿ -- ರೆಡ್ ಮಿ1/1ಎಸ್, ರೆಡ್ ಮಿ2, ರೆಡ್ ಮಿ3, ಪ್ರೈಮ್/3ಎಸ್ ಫೋನುಗಳು ಬಿಡುಗಡೆಯಾಗಿವೆ.
ಎಂಐ ಸರಣಿ: ಜಾಸ್ತಿ ಉಪಯೋಗಿಸುವವರಿಗಾಗಿ.
ಎಂಐ ಸ್ಮಾರ್ಟ್ ಫೋನುಗಳ ಬಗ್ಗೆ ಹೇಳುವುದಾದರೆ, ಇದು ಜಾಸ್ತಿ ಉಪಯೋಗಿಸುವವರಿಗಾಗಿ ತಯಾರಿಸಲಾಗಿರುವ ಫೋನ್. ಉತ್ತಮ ವೇಗ ಮತ್ತು ದಕ್ಷ ಪ್ರೊಸೆಸರ್ ಇದರಲ್ಲಿದೆ. ಶಿಯೋಮಿಯ ಉನ್ನತ ಹಂತದ ಸ್ಮಾರ್ಟ್ ಫೋನುಗಳಾದ ಎಂಐ ಫೋನುಗಳಲ್ಲಿ ಉತ್ತಮ ಪ್ರೊಸೆಸರ್ ಗಳಿವೆ.
ಓದಿರಿ: ಜಿಯೋಗೆ ಸ್ಪರ್ಧಿಯಾಗಿ ಆಫರ್‌ಗಳ ಪೂರ ಹರಿಸಲಿರುವ ಏರ್‌ಟೆಲ್, ವೊಡಾಫೋನ್
ಎಂಐ ಸರಣಿ: ಉತ್ತಮ ಗುಣಮಟ್ಟ, ಮೆಟಲ್ ದೇಹದ ವಿನ್ಯಾಸ.

ಬಹಳಷ್ಟು ಎಂಐ ಸರಣಿಯ ಸ್ಮಾರ್ಟ್ ಫೋನುಗಳಲ್ಲಿ ಮೆಟಲ್ ದೇಹವಿದೆ, ಮೇಲಿನಿಂದ ಬಿದ್ದರೂ ತಡೆದುಕೊಳ್ಳುತ್ತದೆ. ಪ್ರತಿಯೊಂದು ಎಂಐ ಸ್ಮಾರ್ಟ್ ಫೋನಿನಲ್ಲೂ ವಿನ್ಯಾಸದ ಚಿಂತನೆಗಳು ಬಹಳಷ್ಟಿವೆ.
ಎಂಐ ಸರಣಿ: ಉತ್ತಮ ಕ್ಯಾಮೆರ.
ಎಂಐ ಸ್ಮಾರ್ಟ್ ಫೋನುಗಳಲ್ಲಿ ಉತ್ತಮ ಕ್ಯಾಮೆರ ಇದೆ; ಹೈಫೈ, ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಷನ್, ಡುಯಲ್ ಟೋನ್ ಫ್ಲಾಷ್ ಹಾಗು ಮ್ಯಾನುಯಲ್ ಮೋಡ್ ಆಯ್ಕೆಗಳಿವೆ.
ಎಂಐ ಸರಣಿ: ಶೀಘ್ರ ಸಾಫ್ಟ್ ವೇರ್ ಅಪ್ ಡೇಟ್

ಇತರೆ ಕಂಪನಿಗಳಂತೆಯೇ, ಸಿಯೋಮಿ ಎಂಐ ಸ್ಮಾರ್ಟ್ ಫೋನುಗಳಿಗೆ ಶೀಘ್ರವಾಗಿ ಅಪ್ ಡೇಟ್ ಗಳನ್ನು ನೀಡುತ್ತದೆ. (ಎಂಐಯುಐ8ರ ವಿಷಯವನ್ನು ಹೊರತುಪಡಿಸಿ).
ರೆಡ್ ಮಿ: ಸಾಮಾನ್ಯ ಬಳಕೆದಾರರಿಗೆ.

ರೆಡ್ ಮಿ ಸ್ಮಾರ್ಟ್ ಫೋನುಗಳು ದಿನನಿತ್ಯದ ಬಳಕೆಗೆ ಸೂಕ್ತವಾದುದು. ತುಂಬಾ ಬಳಸುವವರಿಗೆ ಇದು ಸೂಕ್ತವಲ್ಲ.
ರೆಡ್ ಮಿ: ಮಧ್ಯಮ ಹಂತದ ಚಿಪ್ ಸೆಟ್ಟುಗಳು.
ಇದರಲ್ಲಿ ಕಡಿಮೆ ವೆಚ್ಚದ ಚಿಪ್ ಸೆಟ್ಟುಗಳಿವೆ ಮತ್ತು ಗ್ರಾಹಕ ಸ್ನೇಹಿ ಫೋನುಗಳಿವು.
ರೆಡ್ ಮಿ: ವಿನ್ಯಾಸ.

ರೆಡ್ ಮಿಯ ವಿಷಯದಲ್ಲಿ ಕಂಪನಿಯು ವಿನ್ಯಾಸದಲ್ಲಿ ಕನಿಷ್ಟತೆಯನ್ನು ಕಾಪಾಡಿಕೊಂಡಿದೆ, ದುಬಾರಿ ಕಚ್ಚಾ ವಸ್ತುಗಳನ್ನು ಉಪಯೋಗಿಸುವುದಿಲ್ಲ.
ರೆಡ್ ಮಿ: ಗ್ರಾಹಕ ಸ್ನೇಹಿ.

ಸೆಲ್ಫಿ ವಿಶೇಷತೆ, ಪಿಡಿಎಎಫ್ ಇತ್ಯಾದಿ ಗ್ರಾಹಕ ಸ್ನೇಹಿ ತಂತ್ರಜ್ಞಾನವನ್ನು ಜನರಿಗೆ ನೀಡುವಲ್ಲಿ ರೆಡ್ ಮಿ ಹೆಸರುವಾಸಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470