ಓಎಸ್‌ ಅಪ್‌ಡೇಟ್‌ ನಂತರ 'ಗ್ಯಾಲ್ಯಾಕ್ಸಿ ಎಸ್‌10' ಸೇರಲಿವೆ ಹೊಸ ಆಯ್ಕೆಗಳು!

|

ಪ್ರಸ್ತುತ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಆಂಡ್ರಾಯ್ಡ್‌ 9 ಪೈ ಓಎಸ್‌ ಕಾರ್ಯನಿರ್ವಹಿಸುತ್ತಿದ್ದು, ಆದರೆ ಇದೀಗ ಹೊಸದಾಗಿ ಆಂಡ್ರಾಯ್ಡ್‌ Q ಓಎಸ್‌ ಎಂಟ್ರಿ ಆಗಿದೆ. ಮುಂಬರುವ ಹೊಸ ಸ್ಮಾರ್ಟ್‌ಫೋನ್‌ಗಳು ಹೊಸ ಓಎಸ್‌ ಆವೃತ್ತಿಯಲ್ಲಿ ಲಾಂಚ್ ಆಗಲಿದ್ದು, ಹಾಗೇ ಈಗಿರುವ ಕೆಲವು ಸ್ಮಾರ್ಟ್‌ಫೋನ್‌ಗಳನ್ನು ಆಂಡ್ರಾಯ್ಡ್‌ Q ಓಎಸ್‌ ಗೆ ಬಡ್ತಿ ನೀಡಬಹುದಾದ ಅವಕಾಶಗಳು ಸಹ ಇವೆ.

ಓಎಸ್‌ ಅಪ್‌ಡೇಟ್‌ ನಂತರ 'ಗ್ಯಾಲ್ಯಾಕ್ಸಿ ಎಸ್‌10' ಸೇರಲಿವೆ ಹೊಸ ಆಯ್ಕೆಗಳು!

ಈಗಾಗಲೇ ಹಲವು ಸ್ಮಾರ್ಟ್‌ಫೋನ್‌ ಅಪ್‌ಡೇಟ್‌ ಲಿಸ್ಟ್‌ನಲ್ಲಿದ್ದು, ಅವುಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್‌10 ಸಹ ಒಂದಾಗಿದೆ. ಹೊಸ ಅಂಡ್ರಾಯ್ಡ್‌ Q ಓಎಸ್‌ ಗೆ ಅಪ್‌ಡೇಟ್‌ ಆದರೆ ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಎಸ್‌10 ಸ್ಮಾರ್ಟ್‌ಫೋನ್‌ನ ಓಎಸ್‌ನಲ್ಲಿ ಪ್ರಮುಖ ಬದಲಾವಣೆಗಳು ಕಂಡುಬರಲಿದ್ದು, ಸ್ಮಾರ್ಟ್‌ಫೋನ್‌ ಬಳಕೆಗೆ ಹೊಸ ಆಯ್ಕೆಗಳನ್ನು ಒದಗಿಸಲಿದೆ. ಹಾಗಾದರೇ ಗ್ಯಾಲ್ಯಾಕ್ಸಿ ಎಸ್‌10 ಅಪ್‌ಡೇಟ್ ಆದ ನಂತರ ನಿರೀಕ್ಷಿಸಬಹುದಾದ ಆಯ್ಕೆಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಕ್ಯಾಮೆರಾದಲ್ಲಿ 'ಮೋಷನ್‌ ಬ್ಲರ್‌' ಫೋಟೊ ಹೀಗೆ ಕ್ಲಿಕ್ಕ್ ಮಾಡಿ!ಓದಿರಿ : ಕ್ಯಾಮೆರಾದಲ್ಲಿ 'ಮೋಷನ್‌ ಬ್ಲರ್‌' ಫೋಟೊ ಹೀಗೆ ಕ್ಲಿಕ್ಕ್ ಮಾಡಿ!

ಸೇಫ್‌ ಮೋಡ್ ಆಯ್ಕೆ

ಸೇಫ್‌ ಮೋಡ್ ಆಯ್ಕೆ

ಗ್ಯಾಲ್ಯಾಕ್ಸಿ ಎಸ್‌ 10 ಸ್ಮಾರ್ಟ್‌ಫೋನ್‌ನಲ್ಲಿ ಹೊಸ ಅಂಡ್ರಾಯ್ಡ್‌ ಓಎಸ್‌ ಅಪ್‌ಡೇಟ್‌ ಆದ ನಂತರ ಅನ್‌ಇಂಟೆನಶನಲ್ ಸ್ವಿಚಿಂಗ್ ಆನ್‌ ಸೇಫ್‌ ಮೋಡ್‌ ಆಯ್ಕೆ ಸೇರಿಕೊಳ್ಳಲಿದ್ದು, ಗ್ರಾಹಕರಿಗೆ ಈ ಆಯ್ಕೆ ಅನುಕೂಲಕರವಾಗಲಿದೆ.

ಬ್ಯಾಟರಿ ಲೈಫ್‌

ಬ್ಯಾಟರಿ ಲೈಫ್‌

ಅಪ್‌ಡೇಟ್‌ ನಂತರ ಹೊಸ ಓಎಸ್‌ ಬ್ಯಾಟರಿ ಉಳಿಕೆಗೆ ಬೆಂಬಲ ಒದಗಿಸಲಿದ್ದು, ಸ್ಮಾರ್ಟ್‌ಫೋನ್‌ ಬಲ ನೀಡಲಿದೆ. VoIP ಕರೆಗಳ ನಂತರ ಸಾಮಾನ್ಯವಾಗಿ ಬ್ಯಾಟರಿ ಹೆಚ್ಚು ಬಳಕೆಯಾಗುತ್ತದೆ. ಆದರೆ ಹೊಸ ಓಸ್‌ ಬ್ಯಾಟರಿ ಉಳಿಕೆಗೆ ಪೂರಕವಾಗಿ ಇರಲಿದೆ.

ಕ್ಯಾಮೆರಾ ಆಯ್ಕೆಗಳು

ಕ್ಯಾಮೆರಾ ಆಯ್ಕೆಗಳು

ಕ್ಯಾಮೆರಾ ಆಪ್‌ನಲ್ಲಿ ಸಾಕಷ್ಟು ಬದಲಾವಣೆಗಳು ಸಹ ಕಾಣಲಿದ್ದು, ಹೊಸ ಆಯ್ಕೆಗಳು ಸೇರಿಕೊಳ್ಳಲಿವೆ. ಮಂದಬೆಳಕಿನಲ್ಲೂ ಉತ್ತಮ ಫೋಟೊ ಸೆರೆಹಿಡಿಯಲು ಪೂರಕವಾದ ಆಯ್ಕೆಗಳು ಇರಲಿದ್ದು, ಎಚ್‌ಆರ್‌ಡಿ ಮೋಡ್ ಆಯ್ಕೆಯು ಹೆಚ್ಚು ಪ್ರಖರವಾಗುವುದರೊಂದಿಗೆ ಮತ್ತಷ್ಟು ಗುಣಮಟ್ಟದಲ್ಲಿರಲಿದೆ.

ಮ್ಯೂಸಿಕ್‌ ಆಯ್ಕೆ

ಮ್ಯೂಸಿಕ್‌ ಆಯ್ಕೆ

ಸ್ಯಾಮ್‌ಸಂಗ್ ಮ್ಯೂಸಿಕ್‌ ಆಪ್‌ಗಳಲ್ಲಿ ಸೌಂಡ್‌ ನಿಯಂತ್ರಿಸುವ ಆಯ್ಕೆಗಳು ಹೊಸ ರೂಪ ಪಡೆದುಕೊಳ್ಳಲಿವೆ. ಬಳಕೆದಾರರಿಗೆ ಸುಲಭವಾಗಿ ನಿಯಂತ್ರಿಸಲು ಅನುಕೂಲಕರವಾಗುವಂತೆ ಇರಲಿವೆ ಎನ್ನಲಾಗಿದೆ.

ಪ್ರೊಕ್ಸಿಮಿಟಿ ಸೆನ್ಸಾರ್‌(proximity sensor)

ಪ್ರೊಕ್ಸಿಮಿಟಿ ಸೆನ್ಸಾರ್‌(proximity sensor)

ಗ್ಯಾಲ್ಯಾಕ್ಸಿ ಎಸ್‌10 ಸ್ಮಾರ್ಟ್‌ಫೋನ್‌ನಲ್ಲಿ ಪ್ರೊಕ್ಸಿಮಿಟಿ ಸೆನ್ಸಾರ್‌ ಆಯ್ಕೆಯು ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ. ಕಾಲಿಂಗ್ ಸಮಯದಲ್ಲಿ ಫಿಂಗರ್‌ ಸಮೀಪಿಸಿದಾಗ ಬ್ಯಾಟರಿ ಬಳಿ ಸೆನ್ಸಾರ್‌ ಲೈಟ್‌ ಬ್ಲಿಂಕ್‌ ಆಗಲಿದ್ದು, ಸೆನ್ಸಾರ್‌ ಪ್ರಬಲವಾಗಿರಲಿದೆ.

Best Mobiles in India

English summary
You can now see what to expect from future Galaxy S10 updates.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X