ಆಪಲ್‌ ಮ್ಯೂಸಿಕ್‌ನ ಚಂದಾದಾರಿಕೆಯ ಶುಲ್ಕ ಕೇವಲ 99 ರೂಪಾಯಿ.!

|

ಇತ್ತೀಚಿಗೆ ಜನಪ್ರಿಯ 'ಸ್ಪಾಟಿಫೈ ಮ್ಯೂಸಿಕ್' ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ಕಡಿಮೆ ದರದಲ್ಲಿ ಮ್ಯೂಸಿಕ್ ಪ್ಲಾನ್ ಕೊಡುಗೆಯನ್ನು ನೀಡಿತ್ತು. ಅದರ ಬೆನ್ನಹಿಂದೆಯೇ ಗೂಗಲ್ ಒಡೆತನದ ಯೂಬ್ಯೂಬ್ ಮ್ಯೂಸಿಕ್ ಸಹ ಅಗ್ಗದ ಬೆಲೆಯಲ್ಲಿ ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾನ್‌ಗಳನ್ನು ಪರಿಚಯಿಸುವುದಾಗಿ ಘೋಷಿಸಿತ್ತು. ಅದೇ ಹಾದಿಯಲ್ಲಿ ಇದೀಗ ಆಪಲ್ ಸಂಸ್ಥೆ ಮುಂದುವರೆದಿದ್ದು, ತನ್ನ 'ಆಪಲ್ ಮ್ಯೂಸಿಕ್' ಬಳಕೆದಾರರಿಗೆ ಇದೇ ಮೊದಲ ಭಾರಿಗೆ ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ.

 ಆಪಲ್‌ ಮ್ಯೂಸಿಕ್‌ನ ಚಂದಾದಾರಿಕೆಯ ಶುಲ್ಕ ಕೇವಲ 99 ರೂಪಾಯಿ.!

ಹೌದು, ಆಪಲ್ ಕಂಪನಿ ತನ್ನ 'ಆಪಲ್ ಮ್ಯೂಸಿಕ್' ಚಂದಾದಾರಿಕೆಯ ಶುಲ್ಕವನ್ನು ಕಡಿತಗೊಳಿಸಿದೆ. ಆಪಲ್ ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆಯು 2015ರಲ್ಲಿ ಆರಂಭವಾಗಿದ್ದು, ಆದರೆ ಇದೇ ಮೊದಲ ಭಾರಿಕೆ ಕಂಪನಿಯು ದರ ಕಡಿತವನ್ನು ಘೋಷಿಸಿದ್ದು, ಬಳಕೆದಾರರಿಗೆ ಖುಷಿಗೆ ಕಾರಣವಾಗಿದೆ. ಆಪಲ್ ಮ್ಯೂಸಿಕ್‌ ಚಂದಾದಾರಿಕೆಯ ಒಂದು ತಿಂಗಳ ವ್ಯಾಲಿಡಿಟಿಯ ಶುಲ್ಕ 99ರೂ.ಗಳು ಆಗಿದ್ದು, ಸ್ಟೂಡೆಂಟ್‌ ಪ್ಲಾನ್ ಮತ್ತು ಫ್ಯಾಮಿಲಿ ಪ್ಲಾನ್‌ಗಳಲ್ಲಿಯೂ ಸಹ ಬೆಲೆ ಇಳಿಸಿದೆ.

 ಆಪಲ್‌ ಮ್ಯೂಸಿಕ್‌ನ ಚಂದಾದಾರಿಕೆಯ ಶುಲ್ಕ ಕೇವಲ 99 ರೂಪಾಯಿ.!

ಪ್ರಸ್ತುತ 56 ಮಿಲಿಯನ್ ಚಂದಾದಾರರನ್ನು ಹೊಂದಿರುವ ಆಪಲ್ ಮ್ಯೂಸಿಕ್‌ನಲ್ಲಿ ಬಳಕೆದಾರರು ಎಲ್ಲ ಬಗೆಯ ಹಾಡುಗಳನ್ನು ಕೇಳಬಹುದಾಗಿದ್ದು, ಆಫ್‌ಲೈನ್‌ ಮೋಡ್‌ನಲ್ಲಿ ಕೇಳಲು ಹಾಡುಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಆಯ್ಕೆ ಸಹ ದೊರೆಯಲಿದೆ. ಹಾಗಾದರೇ ಆಪಲ್ ಮ್ಯೂಸಿಕ್ ಚಂದಾದಾರಿಕೆ ಪ್ಲಾನ್‌ಗಳ ಬೆಲೆಯ ಇಳಿಕೆಯ ಬಗ್ಗೆ ತಿಳಿಯಲು ಮುಂದೆ ಓದಿರಿ.

ಸ್ಟೂಡೆಂಟ್‌ ಪ್ಲಾನ್ @49

ಸ್ಟೂಡೆಂಟ್‌ ಪ್ಲಾನ್ @49

ಆಪಲ್‌ ಮ್ಯೂಸಿಕ್ ಸ್ಟೂಡೆಂಟ್‌ಗಳಿಗಾಗಿ ಚಂದಾದಾರಿಕೆಯ ದರದಲ್ಲಿ ರಿಯಾಯಿತಿ ನೀಡಿದೆ. ಈ ಮೊದಲು 60ರೂ.ಗಳಿಗೆ ಲಭ್ಯವಿದ್ದ ಆಪಲ್‌ ಮ್ಯೂಸಿಕ್ ಸ್ಟೂಡೆಂಟ್ ಪ್ಲಾನ್ ಚಂದಾದಾರಿಕೆಯು ಇದೀಗ ಬೆಲೆ ಕಡಿತದಿಂದ ಕೇವಲ 49 ರೂ.ಗಳಿಗೆ ದೊರೆಯಲಿದೆ. ಈ ಪ್ಲಾನಿನ ಚಂದಾದಾರಿಕೆಯ ಅವಧಿಯು ಒಂದು ತಿಂಗಳು ಮಾತ್ರ.

ವೈಯಕ್ತಿಕ ಪ್ಲಾನ್ @99

ವೈಯಕ್ತಿಕ ಪ್ಲಾನ್ @99

ಪ್ರಸ್ತುತ ಆಪಲ್ ಮ್ಯೂಸಿಕ್‌ನ ವೈಯಕ್ತಿಕ ಪ್ಲಾನಿನ ಚಂದಾದಾರಿಕೆಯ ಶುಲ್ಕವು 99ರೂ.ಗಳು ಆಗಿದ್ದು, ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿರಲಿದೆ. ಈ ಹಿಂದೆ ಒಂದು ತಿಂಗಳ ಅವಧಿಯ ವೈಯಕ್ತಿಕ ಪ್ಲಾನ್‌ಗೆ 120ರೂ.ಗಳನ್ನು ಪಾವತಿಸಬೇಕಾಗಿತ್ತು. ಐಫೋನ್‌ ಬಳಕೆದಾರರು ಈ ಯೋಜನೆಯನ್ನು ಚಂದಾದಾರರಾಗಬಹುದು.

ಫ್ಯಾಮಿಲಿ ಪ್ಲಾನ್ @149

ಫ್ಯಾಮಿಲಿ ಪ್ಲಾನ್ @149

ಆಪಲ್‌ ಮ್ಯೂಸಿಕ್ ಫ್ಯಾಮಿಲಿ ಚಂದಾದಾರಿಕೆಯ ಬೆಲೆಯಲ್ಲಿಯೂ 45ರೂಗಳನ್ನು ಕಡಿತ ಮಾಡಿದ್ದು, ಪ್ರಸ್ತುತ 149ರೂ. ಶುಲ್ಕ ನೀಡಿ ಬಳಕೆದಾರರು ಫ್ಯಾಮಿಲಿ ಪ್ಲಾನಿನ ಚಂದಾದಾರರಾಗಬಹುದು. ಈ ಮೊದಲು ಆಪಲ್‌ ಮ್ಯೂಸಿಕ್ ಫ್ಯಾಮಿಲಿ ಪ್ಲಾನಿನ ಚಂದಾದಾರರಾಗಲು 199ರೂ. ಶುಲ್ಕವನ್ನು ಪಾವತಿಸಬೇಕಾಗಿತ್ತು.

ಚಂದಾದಾರಿಕೆಯ ಅವಧಿ

ಚಂದಾದಾರಿಕೆಯ ಅವಧಿ

ಆಪಲ್ ಮ್ಯೂಸಿಕ್ ತನ್ನ ಚಂದಾದಾರಿಕೆಯಲ್ಲಿ ಬೆಲೆ ಇಳಿಸಿದ್ದು, ಬಳಕೆದಾರರಿಗೆ ಭಾರಿ ಖುಷಿ ನೀಡಿದೆ. ಇದೀಗ ಬೆಲೆ ಇಳಿಕೆ ಕಂಡಿರುವ ಸ್ಟೂಡೆಂಟ್‌ ಪ್ಲಾನ್, ವೈಯಕ್ತಿಕ ಪ್ಲಾನ್, ಫ್ಯಾಮಿಲಿ ಪ್ಲಾನ್ ಈ ಮೂರು ಪ್ಲಾನಗಳ ಚಂದಾದಾರಿಕೆಯ ಅವಧಿಯು ಒಂದು ತಿಂಗಳ ಮಾತ್ರ.

Best Mobiles in India

English summary
Apple Music monthly subscription plans have received a price cut in India and now start at Rs. 99 for a month. The student plan starts at Rs. 49 for a month while the family plan starts at Rs. 149.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X