Subscribe to Gizbot

ಪಾಕಿಸ್ತಾನದಲ್ಲಿ ನಿಷೇಧವಾಗಲಿದೆ ಫೇಸ್‌ಬುಕ್!? ಕಾರಣ ಏನು ಗೊತ್ತಾ?

Written By:

ಬಹುತೇಕ ಧರ್ಮದ ಆಧಾರದ ಮೇಲೆ ಆಡಳಿತ ನಡೆಸುತ್ತಿರವ ಪಾಕಿಸ್ತಾನದಲ್ಲಿ ಫೇಸ್‌ಬುಕ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸುವ ಮುನ್ಸೂಚನೆ ದೊರೆತಿದೆ.! ಹೌದು, ಪಾಕಿಸ್ತಾನದ ಇಸ್ಲಾಮಾಬಾದ್ ಹೈ ಕೋರ್ಟ್ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಲು ನಿರ್ಧರಿಸಿದ್ದು, ಮಾರ್ಚ್ 27 ಕ್ಕೆ ಈ ಬಗ್ಗೆ ನಿರ್ಧಾರ ಹೊರಬೀಳಲಿದೆ.!

ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಂ ಧರ್ಮದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದು, ಇದನ್ನು ತಡೆಯುವ ಸಲುವಾಗಿ ಇಸ್ಲಾಮಾಬಾದ್ ಹೈ ಕೋರ್ಟ್ ಈ ರೀತಿಯ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಮಾತನಾಡಿರುವ ಮುಖ್ಯ ನ್ಯಾಯಾಧೀಶ ಶೌಕತ್ ಆಜಿ ಸಿದ್ದಿಕಿ " ಧರ್ಮದ ಬಗ್ಗೆ ಅಪಪ್ರಚಾರ ತಡೆಯದ  ಸಾಮಾಜಿಕ ಜಾಲತಾಣದ ಅವಶ್ಯಕತೆ ನಮಗೆ ಇಲ್ಲ" ಎಂದು ಹೇಳಿದ್ದಾರೆ.

 ಪಾಕಿಸ್ತಾನದಲ್ಲಿ ನಿಷೇಧವಾಗಲಿದೆ ಫೇಸ್‌ಬುಕ್!? ಕಾರಣ ಏನು ಗೊತ್ತಾ?

ಓದಿರಿ:ಸರ್ಕಾರದ ಎಲ್ಲಾ ಇ-ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡೊದು ಹೇಗೆ?

ಸರಿಸುಮಾರು 70 ಜನರು ವಿವಾದಾತ್ಮಕ ಫೆಸ್‌ಬುಕ್ ಪುಟಗಳನ್ನು ನಡೆಸುತ್ತಿದ್ದು, ಅವರೆಲ್ಲರೂ ವಿದೇಶದಲ್ಲಿ ನೆಲೆಸಿದ್ದಾರೆ ಇದರಿಂದ ಧರ್ಮ ವಿರೋಧಿ ಚಟುವಟಿಕೆಗಳನ್ನು ತಡೆಯುವುದು ಕಷ್ಟವಾಗಿದೆ ಎಂದು ಶೌಕತ್ ಆಜಿ ಸಿದ್ದಿಕಿ ಹೇಳಿದ್ದಾರೆ.

 ಪಾಕಿಸ್ತಾನದಲ್ಲಿ ನಿಷೇಧವಾಗಲಿದೆ ಫೇಸ್‌ಬುಕ್!? ಕಾರಣ ಏನು ಗೊತ್ತಾ?

ಈಗಾಗಲೇ ಉತ್ತರ ಕೋರಿಯಾದಂಹ ಹಲವು ದೇಶಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಬ್ಯಾನ್ ಮಾಡಲಾಗಿದ್ದು, ದೇಶ ಮತ್ತು ಧರ್ಮ ವಿರೋಧಿ ಚಟುವಟಿಗೆಗಳನ್ನು ತಡೆಯುವುದೇ ಆ ದೇಶಗಳ ಉದ್ದೇಶವಾಗಿದೆ. ಆ ಸಾಲಿನಲ್ಲಿ ಪಾಕಿಸ್ತಾನ ಸೇರಿಕೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

ಓದಿರಿ:ಜಿಯೋ ಪ್ರೈಮ್ ಸಂಪೂರ್ಣ ಉಚಿತ!...ಆದ್ರೆ ಅದಕ್ಕೊಂದು ಟ್ರಿಕ್ ಇದೆ!!

ಓದಿರಿ: 15,000 ರೂ. ಒಳಗಿನ ಟಾಪ್ 10 ಸ್ಮಾರ್ಟ್‌ಫೋನ್ ಲೀಸ್ಟ್!! ಯಾವುದು ನಿಮ್ಮ ಬೆಸ್ಟ್?

English summary
The Islamabad high court is considering blocking social media sites. to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot