Subscribe to Gizbot

ಫೋನ್ ಕುರಿತ ದುರಂತ ಕಥೆಗಳು! ನೀವು ಅನುಭವಿಸಿರುವಿರಾ?

Written By:

ನೀವು ಎಷ್ಟೇ ದುಬಾರಿ ಫೋನ್ ಖರೀದಿಸಿದ್ದರೂ ಫೋನ್ ಕೆಳಗೆ ಬೀಳುವುದು, ಕೆಳಕ್ಕೆ ಬಿದ್ದು ಸ್ಕ್ರೀನ್‌ಗೆ ಏನಾದರೂ ಪೆಟ್ಟಾಗುವುದು ಇಲ್ಲವೇ ಫೋನ್ ಬ್ಯಾಟರಿ ಪೂರ್ತಿಯಾಗಿದ್ದರೂ ನಿಮಗಿದರ ನೆನಪು ಇಲ್ಲದೇ ಇರುವುದು ಇಂತಹ ಹಲವಾರು ಘಟನೆಗಳು ನಿಮ್ಮೊಂದಿಗೆ ನಡೆಯುತ್ತಲೇ ಇರುತ್ತವೆ.

ಓದಿರಿ: ಮೈಕ್ರೋಸಾಫ್ಟ್ ಕೋರ್ಟಾನಾ: ತಿಳಿದುಕೊಳ್ಳಬೇಕಾದ ಅಂಶಗಳೇನು?

ದುಬಾರಿ ಫೋನ್ ಖರೀದಿಸಿ ಆಘಾತಕಾರಿ ಸಂಗತಿಗಳನ್ನು ಎದುರಿಸುವಂತಹ ಸನ್ನಿವೇಶ ತುಂಬಾ ಯಾತನಾಮಯವಾದುದು. ಇಂದಿನ ಲೇಖನದಲ್ಲಿ ಇಂತಹುದೇ ಕೆಲವೊಂದು ಆಕಸ್ಮಿಕ ಘಟನೆಗಳನ್ನು ನಿಮ್ಮ ಮುಂದೆ ನಾವು ಇಡುತ್ತಿದ್ದು ಇದರಲ್ಲಿ ಕೆಲವೊಂದು ಮನರಂಜನೀಯವಾಗಿದ್ದರೂ ಇನ್ನು ಕೆಲವು ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ.

ಓದಿರಿ: ನಿಮ್ಮ ಫೋನ್ ಜಗತ್ತಿನ ಸಂರಕ್ಷಕ ಇಲ್ಲಿದೆ ಕಾರಣ

ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೈಫೈ ಆನ್‌ಮಾಡದೇ ಇರುವುದು
  

ಫೋನ್‌ನ ಎಲ್ಲಾ ಡೇಟಾ ಮುಗಿದ ನಂತರ ವೈಫೈ ಆನ್ ಮಾಡಲು ನೆನಪಾಗುವುದು ಎಷ್ಟು ಶೋಚನೀಯ ಸಂದರ್ಭ ಅಲ್ಲವೇ?

ಫೋನ್ ಚಾರ್ಜ್ ಮಾಡಲು ಮರೆಯುವುದು
  

ಫೋನ್‌ ಅನ್ನು ಚಾರ್ಜ್‌ನಲ್ಲಿಟ್ಟು ಸ್ವಿಚ್ ಆನ್ ಮಾಡಿಲ್ಲ ಎಂಬುದು ನಂತರ ನೆನಪಿಗೆ ಬರುವುದು

ಮುಂದಿನ ದಿನ ನೆನಪಿಗೆ ಬರುವುದು
  

ಇನ್ನು ಫೋನ್ ಚಾರ್ಜ್‌ನಲ್ಲಿಟ್ಟು ಸ್ವಿಚ್ ಆನ್ ಮಾಡಿಲ್ಲ ಎಂಬ ಮಾತು ಮುಂದಿನ ದಿನ ನೆನಪಿಗೆ ಬರುವುದು

ಫೋನ್ ಹುಡುಕಾಡುವುದು
  

ಫೋನ್ ಎಲ್ಲಿ ಇಟ್ಟಿದ್ದೇನೆ ಎಂದು ದಿನವಿಡೀ ಹುಡುಕುವುದು

ಅಕಸ್ಮಾತ್ತಾಗಿ ಫೋನ್ ಬೀಳುವುದು
  

ನಮಗೆ ತಿಳಿಯದೆಯೇ ನಮ್ಮ ಕೈಯಲ್ಲಿರುವ ಫೋನ್ ಕೆಳಕ್ಕೆ ಬೀಳುವುದು

ಫೋನ್‌ಗೆ ಹಾನಿ
  

ನೀರಿನಿಂದ ತುಂಬಿರುವ ಲೋಟ ತಾಗಿ ಫೋನ್‌ಗೆ ಹಾನಿಯಾಗುವುದು

ಟಾಯ್ಲೆಟ್‌ಗೆ ಫೋನ್ ಬೀಳುವುದು
  

ನಮಗೆ ತಿಳಿಯದೆಯೇ ಟಾಯ್ಲೆಟ್‌ನೊಳಗೆ ಫೋನ್ ಬೀಳುವುದು

ಅಗತ್ಯ ಕರೆ ಬಂದಾಗ ಲೋ ಬ್ಯಾಟರಿ
  

ಯಾರದ್ದಾದರೂ ತುರ್ತು ಕರೆ ಬಂದ ಸಂದರ್ಭದಲ್ಲಿ ಫೋನ್ ಲೋ ಬ್ಯಾಟರಿ ಚಿಹ್ನೆ ತೋರಿಸುವುದು

ಮನೆಯಿಂದ ಹೊರಬಿದ್ದಾಗ ಫೋನ್ ಬ್ಯಾಟರಿ ಕಡಿಮೆ ಇರುವುದು
  

ಮನೆಯಿಂದ ಹೊರಬಿದ್ದ ಸಂದರ್ಭದಲ್ಲಿ ಫೋನ್‌ನಲ್ಲಿ ಬ್ಯಾಟರಿ ಇಲ್ಲ ಎಂಬ ಅಂಶ ನೆನಪಾಗುವುದು

ತಪ್ಪಾಗಿ ಸಂದೇಶ ಕಳುಹಿಸುವುದು
  

ಯಾರಿಗಾದರೂ ತಪ್ಪಿ ಸಂದೇಶ ಕಳುಹಿಸುವುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
You get up early in the morning thinking that today is a new day. It’s fresh start and nothing, absolutely NOTHING is going to ruin it. But then suddenly, the universe conspires against you and your smartphone tags along.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot