ಆಧುನಿಕ ಜೀವನಕ್ಕಾಗಿ ಹೇಳಿಮಾಡಿಸಿರುವ ಗ್ಯಾಜೆಟ್‌ಗಳು

Written By:

ನಮ್ಮ ಜೀವನವನ್ನು ಇನ್ನಷ್ಟು ಸೊಗಸುಗೊಳಿಸುವುದು ನಮ್ಮೆಲ್ಲರ ಲಕ್ಷ್ಯವಾಗಿದೆ. ಇನ್ನು ತಂತ್ರಜ್ಞಾನ ಕೂಡ ಈ ಅಂಶಕ್ಕೆ ಪುಷ್ಟಿಯನ್ನು ನೀಡುತ್ತಾ ನಮ್ಮ ದೈನಂದಿನ ಜೀವನವನ್ನು ಇನ್ನಷ್ಟು ಆಕರ್ಷಣೀಯವನ್ನಾಗಿಸುವ ಕಾರ್ಯದಲ್ಲಿ ತೊಡಗಿದೆ. ಇಂದಿನ ಲೇಖನದಲ್ಲಿ ನಿಮಗೆ ಹೆಚ್ಚು ಉಪಕಾರಿ ಎಂದೆನಿಸಿರುವ ಟಾಪ್ ಗ್ಯಾಜೆಟ್‌ಗಳ ಪಟ್ಟಿಯನ್ನು ನೋಡೋಣ. [ಓದಿರಿ : ಐಫೋನ್‌ನಲ್ಲಿ ಸೆರೆಹಿಡಿದಿರುವ ಅದ್ಭುತ ಚಿತ್ರಗಳು]

ಈ ಗ್ಯಾಜೆಟ್‌ಗಳು ನಿಮ್ಮ ದೈನಂದಿನ ಬದುಕನ್ನೇ ಬದಲಾಯಿಸುವ ಸಾಮರ್ಥ್ಯವನ್ನು ಪಡೆದೆಕೊಂಡಿದ್ದು ಅದರ ಮಹತ್ವಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಅರಿತುಕೊಳ್ಳಿ. [ಓದಿರಿ : ಬೆಚ್ಚಿಬೀಳಿಸುವ ರೊಬೋಟ್ ಆಧಾರಿತ ಸಿನಿಮಾಗಳು]

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಿಂಗ್

ರಿಂಗ್

ಲಾಗ್‌ ಬಾರ್ ರಿಂಗ್

ಟಿವಿ ಆನ್ ಮಾಡಲು, ಲೈಟ್ ಆಫ್ ಮಾಡಲು ಅಥವಾ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್‌ಗಳನ್ನು ಲಾಂಚ್ ಮಾಡಲು ಸಹಕಾರಿಯಾಗಿದೆ.

ಪಾದದ ಉಷ್ಣತೆ

ಪಾದದ ಉಷ್ಣತೆ

ಸ್ಮಾರ್ಟ್ ಇನ್‌ಸೋಲ್ಸ್

ನಿಮ್ಮ ಪಾದದ ಉಷ್ಣತೆಯನ್ನು ತಿಳಿದುಕೊಳ್ಳಲು ಸಹಕಾರಿಯಾಗಿರುವ ಸ್ಮಾರ್ಟ್ ಇನ್‌ಸೋಲ್ಸ್ ಬ್ಲ್ಯೂಟೂತ್ ಇಲ್ಲವೇ ಆಂಡ್ರಾಯ್ಡ್ ಐಓಎಸ್ ಮೂಲಕ ನಿಮ್ಮ ಪಾದದ ಉಷ್ಟತೆಯ ಮಾಹಿತಿಯನ್ನು ನಿಮಗೆ ತಿಳಿಸುತ್ತದೆ.

ಎಲ್‌ಇಡಿ ಬಲ್ಬ್

ಎಲ್‌ಇಡಿ ಬಲ್ಬ್

ಸೋನಿ ಸಿಂಪೋನಿಕ್ ಲೈಟ್

ಹಳೆಯ ಲ್ಯಾಂಟಾನಾದ ನೆನಪನ್ನು ಉಂಟುಮಾಡುವ ಸೋನಿಯ ಈ ಲ್ಯಾಂಪ್ ಎಲ್‌ಇಡಿ ಬಲ್ಬ್ ಅನ್ನು ಒಳಗೊಂಡಿದೆ. ಇದರಲ್ಲಿ ಸ್ಪೀಕರ್ ಕೂಡ ಇದ್ದು ನಿಮಗೆ ಸಂಗೀತವನ್ನು ಸ್ಟ್ರೀಮ್ ಮಾಡಬಹುದು.

ಬೆಲ್ಟಿ

ಬೆಲ್ಟಿ

ಬೆಲ್ಟಿ

ನಿಮ್ಮ ಸೊಂಟವನ್ನು ಟ್ರ್ಯಾಕ್ ಮಾಡುತ್ತಾ ನಿಮ್ಮ ಚಟುವಟಿಕೆಯ ಮೇಲೆಇದು ಗಮನವನ್ನೀಯುತ್ತದೆ. ನೀವು ಕುಳಿತಾಗ ನಿಮ್ಮ ದೇಹವನ್ನು ಸರಿಹೊಂದುವಂತೆ ಇದು ಮಾಡುತ್ತದೆ.

ಬ್ಲ್ಯೂಟೂತ್ ಸ್ಪೀಕರ್

ಬ್ಲ್ಯೂಟೂತ್ ಸ್ಪೀಕರ್

ಬ್ಲ್ಯೂಟೂತ್ ಸ್ಪೀಕರ್

ನೋಡಲು ಅತ್ಯಾಕರ್ಷವಾಗಿರುವ ಈ ಬ್ಲ್ಯೂಟೂತ್ ಸ್ಪೀಕರ್ ಅಯಸ್ಕಾಂತಗಳನ್ನು ಹೊಂದಿದೆ. ಸ್ಪೀಕರ್‌ನ ಮೇಲ್ಭಾಗದಲ್ಲಿ ಅಯಸ್ಕಾಂತವನ್ನು ನಿಮಗೆ ಕಾಣಬಹುದಾಗಿದೆ.

ಸ್ಲೀಪಲ್ ಕ್ಯು ಕಿಟ್ಸ್ ಬೆಡ್

ಸ್ಲೀಪಲ್ ಕ್ಯು ಕಿಟ್ಸ್ ಬೆಡ್

ಸ್ಲೀಪಲ್ ಕ್ಯು ಕಿಟ್ಸ್ ಬೆಡ್

ಈ ಹಾಸಿಗೆ ನಿಮ್ಮ ಮಗುವಿನ ಚಟುವಟಿಕೆಯ ಮೇಲೆ ನಿಗಾಇರಿಸುವಂತಿದ್ದು ಅವರ ನಿದ್ದೆ ಕ್ರೀಡೆಗಳ ಮೇಲೆ ಗಮನವನ್ನು ನೀಡುತ್ತದೆ.

ಬಯೋನಿಕ್ ಬರ್ಡ್

ಬಯೋನಿಕ್ ಬರ್ಡ್

ಬಯೋನಿಕ್ ಬರ್ಡ್

ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಯಂತ್ರಿಸಬಹುದಾದ ಈ ಹಕ್ಕಿಗೆ ಕಾರ್ಬನ್ ಫೈಬರ್ ಬಾಲ ಮತ್ತು ರೆಕ್ಕೆಯಿದೆ.

ಪೆಟ್ ಕ್ಯೂಬ್

ಪೆಟ್ ಕ್ಯೂಬ್

ಪೆಟ್ ಕ್ಯೂಬ್

ನೀವು ಕಚೇರಿಯಲ್ಲಿರುವಾಗ ನಿಮ್ಮ ಸಾಕುಪ್ರಾಣಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಾ? ಇದೊಂದು ಕ್ಯಾಮೆರಾ ಆಗಿದ್ದು, ಆಡಿಯೊ ಇದರಲ್ಲಿದೆ. ನಿಮ್ಮ ಮನೆಯ ವೈಫೈಯ ಸಂಪರ್ಕವನ್ನು ಪಡೆದುಕೊಂಡು ಐಓಎಸ್ ಅಥವಾ ಆಂಡ್ರಾಯ್ಡ್ ಮೂಲಕ ಕಾರ್ಯನಿರ್ವಹಿಸುತ್ತದೆ. ಇದನ್ನು ಬಳಸಿ ನಿಮ್ಮ ಸಾಕುಪ್ರಾಣಿಯೊಂದಿಗೆ ಸಂವಹನವನ್ನು ನಡೆಸಬಹುದಾಗಿದೆ.

ಬಡ್ಗೀ ರೊಬೋಟ್

ಬಡ್ಗೀ ರೊಬೋಟ್

ಬಡ್ಗೀ ರೊಬೋಟ್

ನಿಮ್ಮ ಬ್ಯಾಗ್ ಅನ್ನು ಹೊತ್ತುಕೊಳ್ಳುವ ಸಾಮರ್ಥ್ಯವನ್ನು ಈ ರೊಬೋಟ್ ಪಡೆದಿದ್ದು ನಿಮ್ಮನ್ನು ಹಿಂಬಾಲಿಸುತ್ತದೆ. ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಬಳಸಿ ಇದನ್ನು ನಿಯಂತ್ರಿಸಲೂಬಹುದು.

ಟ್ವಿನ್ ಟಬ್ ವಾಶಿಂಗ್ ಮೆಶಿನ್

ಟ್ವಿನ್ ಟಬ್ ವಾಶಿಂಗ್ ಮೆಶಿನ್

ಟ್ವಿನ್ ಟಬ್ ವಾಶಿಂಗ್ ಮೆಶಿನ್

ಒಮ್ಮೆಗೆ ಎರಡು ಬಗೆಯ ಹೊರೆಯನ್ನು ತಾಳಿಕೊಳ್ಳುವ ಶಕ್ತಿ ಈ ವಾಶಿಂಗ್ ಮೆಶಿನ್‌ಗಿದೆ. ಎಲ್‌ಜಿಯ ಈ ಟ್ವಿನ್ ವಾಶಿಂಗ್ ಮೆಶಿನ್ ನಿಯಮಿತ ಲೋಡ್ ಅನ್ನು ತಾಳಿಕೊಳ್ಳುತ್ತದೆ.

ಬೇಬಿ Glgl

ಬೇಬಿ Glgl

ಬೇಬಿ Glgl

ನಿಮ್ಮ ಮಗು ಎಷ್ಟು ಹಾಲನ್ನು ಕುಡಿದಿದೆ ಎಂಬುದನ್ನು ಈ ಬಾಟಲ್ ತಿಳಿಸುತ್ತದೆ.

ಪ್ಯಾರಟ್ ಪಾಟ್

ಪ್ಯಾರಟ್ ಪಾಟ್

ಪ್ಯಾರಟ್ ಪಾಟ್

ಈ ಪ್ಯಾರಟ್ ಪಾಟ್ ಮಣ್ಣು, ಗೊಬ್ಬರ, ಸೂರ್ಯನ ಬೆಳಕು ಹವಾಮಾನವನ್ನು ನಿಯಂತ್ರಿಸಿ ಗಿಡದ ಉಳಿವಿಗೆ ಸಹಕಾರವನ್ನೀಯುತ್ತದೆ. ಐಓಎಸ್ ಇಲ್ಲವೇ ಆಂಡ್ರಾಯ್ಡ್ ಬಳಸಿ ಈ ಪಾಟ್‌ಗೆ ಸಂಯೋಜನೆಯನ್ನು ನೀಡುತ್ತದೆ.

ಕ್ವಿಟ್‌ಬಿಟ್ ಲೈಟರ್

ಕ್ವಿಟ್‌ಬಿಟ್ ಲೈಟರ್

ಕ್ವಿಟ್‌ಬಿಟ್ ಲೈಟರ್

ಈ ಕ್ವಿಟ್‌ಬಿಟ್ ಒಳಭಾಗದಲ್ಲಿ ಕಾಯಿಲ್ ಅನ್ನು ಹೊಂದಿದ್ದು ವಾರಕ್ಕೊಮ್ಮೆ ಚಾರ್ಜ್ ಮಾಡಿದರೆ ಸಾಕು. ನೀವು ಮಾಡುವ ಧೂಮಪಾನದ ಮೇಲೆ ಕೇಂದ್ರೀಕರಿಸಿ ನಿಮ್ಮ ಧೂಮಪಾನದ ಬೆಳವಣಿಗೆಯನ್ನು ಕುರಿತು ಮಾಹಿತಿಯನ್ನು ನೀಡುತ್ತದೆ. ನೀವು ಮಿತಿಯನ್ನು ಮೀರಿದಿರಿ ಎಂದಾದಲ್ಲಿ ನಿಮ್ಮನ್ನು ಎಚ್ಚರಿಸುತ್ತದೆ ಕೂಡ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We love tech here at DT and we believe in its ability to enrich our lives.They say there’s a fine line between genius and insanity. These gadgets challenge you to define it.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot