ಸ್ಮಾರ್ಟ್‌ಫೋನಿನಲ್ಲಿ ಯೂಟ್ಯೂಬ್ ವಿಡಿಯೋ ನೋಡುವ ಭಾರತೀಯರ ಸಂಖ್ಯೆ 180 ಮಿಲಿಯನ್..!!

ಯೂಟ್ಯೂಬ್ ವಿಡಿಯೋ ನೋಡುವವರ ಸಂಖ್ಯೆಯೂ ಒಂದೇ ಸಮನೇ ಏರಿಕೆಯಾಗಿದ್ದು, ದೇಶದಲ್ಲಿ 180 ಮಿಲಿಯನ್ ಜನರು ತಮ್ಮ ಮೊಬೈಲ್ ಫೋನಿನಲ್ಲಿ ಯೂಟ್ಯೂಬ್ ವಿಡಿಯೋಗಳನ್ನು ನೋಡುತ್ತಿದ್ದಾರೆ ಎನ್ನಲಾಗಿದೆ.

|

ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಸುವವರ ಸಂಖ್ಯೆಯೂ 300 ಮಿಲಿಯನ್ ದಾಟಿದೆ. ಇತ್ತೀಚಿನ ದಿನದಲ್ಲಿ ಉತ್ತಮ ಗುಣಮಟ್ಟದ ಇಂಟರ್‌ನೆಟ್ ಸೇವೆ ಮತ್ತು ಸ್ಪರ್ಧಾತ್ಮಕ ಬೆಲೆಯಲ್ಲಿ ಡೇಟಾ ದೊರೆಯುತ್ತಿರುವುವರಿಂದ ಯೂಟ್ಯೂಬ್ ವಿಡಿಯೋ ನೋಡುವವರ ಸಂಖ್ಯೆಯೂ ಒಂದೇ ಸಮನೇ ಏರಿಕೆಯಾಗಿದ್ದು, ದೇಶದಲ್ಲಿ 180 ಮಿಲಿಯನ್ ಜನರು ತಮ್ಮ ಮೊಬೈಲ್ ಫೋನಿನಲ್ಲಿ ಯೂಟ್ಯೂಬ್ ವಿಡಿಯೋಗಳನ್ನು ನೋಡುತ್ತಿದ್ದಾರೆ ಎನ್ನಲಾಗಿದೆ.

ಸ್ಮಾರ್ಟ್‌ಫೋನಿನಲ್ಲಿ ಯೂಟ್ಯೂಬ್ ವಿಡಿಯೋ ನೋಡುವ ಭಾರತೀಯರ ಸಂಖ್ಯೆ 180 ಮಿಲಿಯನ್..!

ಓದಿರಿ: ಸ್ಮಾರ್ಟ್‌ಫೋನ್ ಬ್ಯಾಟರಿ ದಾಹ ತೀರಿಸುವ ಸಾವಿರ ರೂ. ಒಳಗಿನ ಟಾಪ್ 10 ಪವರ್‌ಬ್ಯಾಂಕ್‌

ಕಳೆದ ವರ್ಷ ಶೇ.80 ರಷ್ಟು ಏರಿಕೆ ಕಂಡಿದ್ದ ಯೂಟ್ಯೂಬ್ ಬಳಕೆದಾರ ಸಂಖ್ಯೆ ಈ ವರ್ಷದಲ್ಲಿ ಶೇ.400 ರಷ್ಟು ಹೆಚ್ಚಳ ಕಂಡಿದ್ದು, ಅದಲ್ಲಿಯೂ ಹೆಚ್ಚಿನ ಪಾಲು ಮೊಬೈಲ್ ಬಳಕೆದಾರದ್ದು ಎಂದು ಯೂಟ್ಯೂಬ್ ತಿಳಿಸಿದೆ. ಅದರಲ್ಲಿಯೂ ಮುಂಬೈನಲ್ಲಿ ಯೂಟ್ಯೂಬ್ ಬಳಕೆದಾರರ ಸಂಖ್ಯೆ ಜಾಸ್ತಿ ಇದ್ದು, ವಿಡಿಯೋ ನೋಡುವ ಅವಧಿಯೂ ಮುಂಬೈನಲ್ಲೇ ಅಧಿಕ ಎನ್ನಲಾಗಿದೆ.

ಸ್ಮಾರ್ಟ್‌ಫೋನಿನಲ್ಲಿ ಯೂಟ್ಯೂಬ್ ವಿಡಿಯೋ ನೋಡುವ ಭಾರತೀಯರ ಸಂಖ್ಯೆ 180 ಮಿಲಿಯನ್..!

ಓದಿರಿ: ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಲಂಚ ನೀಡಬೇಕಾಗಿಲ್ಲ: ಅದಕ್ಕಾಗಿ ಇಲ್ಲಿದೇ ಸುಲಭ ಉಪಾಯ..!!

ಜಿಯೋ ಆರಂಭವಾದ ನಂತರ ಸ್ಮಾರ್ಟ್‌ಫೋನುಗಳಿಗೆ ಉಚಿತ ಇಂಟರ್ನೆಟ್ ದೊರೆತ ಕಾರಣದಿಂದ ಯೂಟ್ಯೂಬ್ ವಿಡಿಯೋ ನೋಡುವವ ಸಂಖ್ಯೆಯೂ ಶೇ.400 ರಷ್ಟು ಅಧಿಕವಾಗಿದೆ. 2016ರಲ್ಲಿ ಸುಮಾರು 500 ಹೆಚ್ಚು ಚಾನಲ್ ಗಳು ಒಂದು ಲಕ್ಷಕ್ಕೂ ಹೆಚ್ಚಿನ ಸಬ್‌ಸ್ಕ್ರೈಬರ್ಸ್ ಅನ್ನು ಪಡೆದುಕೊಂಡಿದ್ದಾರೆ ಎಂದು ಯೂಟ್ಯೂಬ್ ತಿಳಿಸಿದೆ.

ಓದಿರಿ: ಜಿಯೋದಿಂದ 120 GB 4G ಡೇಟಾ ಉಚಿತ: ಪಡೆದುಕೊಳ್ಳುವುದು ಹೇಗೆ..?

ದಿನದಿಂದ ದಿನಕ್ಕೆ ಯೂಟ್ಯೂಬ್ ಖ್ಯಾತಿಯೂ ದೇಶದಲ್ಲಿ ಹೆಚ್ಚಾಗುತ್ತಿದ್ದು, ವಿಡಿಯೋ ನೋಡುವವರ ಸಂಖ್ಯೆಯೊಂದಿಗೆ ಯೂಟ್ಯೂಬ್ ಗೆ ವಿಡಿಯೋಗಳನ್ನು ಅಪ್‌ಲೋಡ್ ಮಾಡುವವ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಏಷ್ಯಾದಲ್ಲೇ ಕ್ರಿಯೆಟೀವ್ ಕಂಟೆಂಟ್ ಗಳನ್ನು ಆಪ್‌ಲೋಡ್ ಮಾಡುವುದರಲ್ಲಿ ಭಾರತವೇ ಮುಂದಿದೆ ಎಂದು ಯೂಟ್ಯೂಬ್ ಹೇಳಿದೆ.

ಸ್ಮಾರ್ಟ್‌ಫೋನಿನಲ್ಲಿ ಯೂಟ್ಯೂಬ್ ವಿಡಿಯೋ ನೋಡುವ ಭಾರತೀಯರ ಸಂಖ್ಯೆ 180 ಮಿಲಿಯನ್..!

ಓದಿರಿ: ಜಿಯೋ ಪ್ರೈಮ್ ಸದಸ್ಯರಾಗಲಿಲ್ಲವೆಂದರೆ ಆಗುವುದೇನು..? ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ...!

ಕೇವಲ ಮಹಾನಗರಗಳು ಮಾತ್ರವಲ್ಲದೇ ಸಣ್ಣ ಪಟ್ಟಣಗಳು ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಯೂಟ್ಯೂಬ್ ವಿಡಿಯೋ ವೀಕ್ಷಣೆ ಹೆಚ್ಚಾಗುತ್ತಿರುವುದನ್ನು ಕಾಣಬಹುದು ಎಂದು ಯೂಟ್ಯೂಬ್ ತನ್ನ ವರದಿಯಲ್ಲಿ ತಿಳಿಸಿದೆ. ಈ ಸಂಖ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಿಲಿದೆ ಎಂದು ಉಲ್ಲೇಖಿಸಿದೆ.

Best Mobiles in India

Read more about:
English summary
YouTube said it has now reached 180 million Indians on mobile phones alone. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X