ಫೇಸ್‌ಬುಕ್ ಯಶಸ್ಸಿಗೆ ಈ ರಹಸ್ಯಗಳೇ ಕಾರಣ!!

By Shwetha
|

ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್ ಇಂದು ಹೆಚ್ಚು ಕಡಿಮೆ ಪ್ರಸಿದ್ಧಿಯ ತುತ್ತತುದಿಯಲ್ಲಿದೆ. ಇಂದು ಫೇಸ್‌ಬುಕ್ ತಾಣವನ್ನು ಬಳಸದವರ ಅತಿ ವಿರಳ. ಎಲ್ಲಾ ವಯಸ್ಸಿನವರಿಗೂ ಫೇಸ್‌ಬುಕ್ ಅಚ್ಚುಮೆಚ್ಚಾಗಿದ್ದು ಮನದೊಳಗಿನ ಭಾವನೆಯನ್ನು ಹೊರಹಾಕುವ ಸೂಕ್ತವೇದಿಕೆ ಎಂಬಂತಹ ಬಿರುದಿಗೆ ಈ ತಾಣ ಪ್ರಸಿದ್ಧವಾಗಿದೆ. ಫೇಸ್‌ಬುಕ್ ಖಾತೆ ಒಂದಿದ್ದರೆ ಸಾಕು ಎಂತಹ ವ್ಯವಹಾರವನ್ನು ಬೇಕಾದರೂ ಮಾಡಬಹುದು, ಪ್ರಸಿದ್ಧ ವ್ಯಕ್ತಿಯ ಸಂಪರ್ಕವನ್ನು ಕೂಡ ಗಳಿಸಿಕೊಳ್ಳಬಹುದು ಅಂತಹ ಬಿರುದಿಗೆ ಇಂದು ಫೇಸ್‌ಬುಕ್ ಪಾತ್ರವಾಗಿದೆ.

ಓದಿರಿ: ಅರಿತುಕೊಳ್ಳಲೇಬೇಕಾದ ಫೇಸ್‌ಬುಕ್ ಮೆಸೆಂಜರ್ 10 ಟ್ರಿಕ್ಸ್

ಇಂದಿನ ಲೇಖನದಲ್ಲಿ ಈ ತಾಣದ ಕೆಲವೊಂದು ವಿಶಿಷ್ಟ ವಿಶೇಷ ಅಂಶಗಳ ಬಗ್ಗೆ ಮಾಹಿತಿಗಳನ್ನು ನೀಡುತ್ತಿದ್ದು ಇದು ವಿಶ್ವದಲ್ಲೇ ಅನನ್ಯ ಎಂಬ ಬಿರುದನ್ನು ಏಕೆ ಪಡೆದುಕೊಂಡಿದೆ ಎಂಬುದನ್ನು ಅರಿತುಕೊಂಡರೆ ನಿಜಕ್ಕೂ ನಿಮಗೆ ಅಚ್ಚರಿಯಾಗುತ್ತದೆ. ಹಾಗಿದ್ದರೆ ಬನ್ನಿ ಇನ್ನೇಕೆ ತಡ ಈ ತಾಣದ ಅತಿ ವಿಶಿಷ್ಟ ಅಂಶಗಳನ್ನು ತಿಳಿದುಕೊಳ್ಳೋಣ.

ಫೇಸ್‌ಬುಕ್ ಮೆಸೆಂಜರ್

ಫೇಸ್‌ಬುಕ್ ಮೆಸೆಂಜರ್

ಚಾಟ್ ಪ್ಲಾಟ್‌ಫಾರ್ಮ್ ಆಗಿ ಮೆಸೆಂಜರ್ ಪ್ರಸಿದ್ಧಗೊಂಡಿದೆ. ಅಪ್ಲಿಕೇಶನ್ ಸ್ಟೋರ್‌ನಲ್ಲೇ ಹೆಚ್ಚು ಡೌನ್‌ಲೋಡ್ ಆಗಿರುವ 75 ಅಪ್ಲಿಕೇಶನ್‌ಗಳಲ್ಲಿ ಮೆಸೆಂಜರ್ ಕೂಡ ಒಂದು.

ರಿಲೇಶನ್‌ಶಿಪ್ ಸ್ಟೇಟಸ್

ರಿಲೇಶನ್‌ಶಿಪ್ ಸ್ಟೇಟಸ್

ಈ ಫೀಚರ್‌ನೊಂದಿಗೆ ನೀವು ಭೇಟಿಮಾಡಿರುವ ಹುಡುಗ ಅಥವಾ ಹುಡುಗಿ ವಿವಾಹಿತರೇ? ಅವಿವಾಹಿತರೇ ಎಂಬುದನ್ನು ಕಂಡುಕೊಳ್ಳಬಹುದಾಗಿದೆ. ಇದರ ನಂತರ ಅವರಿಗೆ ನೀವು ಸ್ನೇಹಿತರ ಕೋರಿಕೆಯನ್ನು ಕಳುಹಿಸಬಹುದಾಗಿದೆ.

ಪುಶ್ ನೋಟಿಫಿಕೇಶನ್ ಆಫ್ ಮಾಡುವುದು

ಪುಶ್ ನೋಟಿಫಿಕೇಶನ್ ಆಫ್ ಮಾಡುವುದು

ಸೆಟ್ಟಿಂಗ್ಸ್ ಟ್ಯಾಬ್‌ನಲ್ಲಿ ಸಣ್ಣ ಹೊಂದಾಣಿಕೆಗಳನ್ನು ಮಾಡುವ ಮೂಲಕ ಪುಶ್ ನೋಟಿಫಿಕೇಶನ್‌ಗಳನ್ನು ಆಫ್ ಮಾಡಿಟ್ಟುಕೊಳ್ಳಬಹುದಾಗಿದೆ. ಕ್ಯಾಂಡಿ ಕ್ರಶ್ ಆಹ್ವಾನವನ್ನು ಇಲ್ಲಿ ನಿಮಗೆ ಆಫ್ ಮಾಡಿಟ್ಟುಕೊಳ್ಳಬಹುದು.

ಎಂಬೆಡ್ ಇನ್ ಪೋಸ್ಟ್

ಎಂಬೆಡ್ ಇನ್ ಪೋಸ್ಟ್

ಟ್ವಿಟ್ಟರ್‌ ಮೇಲೆ ಫೇಸ್‌ಬುಕ್‌ನ ಗೆಲುವು ಎಂಬುದಾಗಿ ಇದನ್ನು ಕರೆಯಬಹುದಾಗಿದೆ. ನೀವು ಲೇಖನಗಳುಮ ವೀಡಿಯೊಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದಾಗ, ಲಿಂಕ್ ಮಾಡಿರುವ ವಿಷಯವು ಪೋಸ್ಟ್‌ನಲ್ಲಿ ಬಲಭಾಗದಲ್ಲಿ ಡೆಲಿವರಿಯಾಗುತ್ತದೆ. ಇದರಿಂದ ಇನ್ನೊಂದು ಲಿಂಕ್ ಅನ್ನು ಮಾಡಬೇಕಾಗಿಲ್ಲ.

ಸೋಶಿಯಲ್ ಪ್ಲಗ್ ಇನ್ಸ್

ಸೋಶಿಯಲ್ ಪ್ಲಗ್ ಇನ್ಸ್

ನೀವು ಓದಿರುವ ಲೇಖನಕ್ಕೆ ಕಮೆಂಟ್ ಮಾಡಲು ಬಯಸಿದ್ದೀರಾ? ಸೋಶಿಲ್ ಪ್ಲಗ್ ಇನ್ಸ್‌ನೊಂದಿಗೆ ಲೇಖನಗಳಿಗೂ ನೀವು ಕಾಮೆಂಟ್ ಮಾಡಬಹುದಾಗಿದೆ.

ಟೈಮ್‌ಲೈನ್

ಟೈಮ್‌ಲೈನ್

ಹೊಸ ಟೈಮ್‌ಲೈನ್ ಫೀಚರ್‌ನೊಂದಿಗೆ ಇದು ಬಂದಿದ್ದು ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.

ಈವೆಂಟ್‌ಗಳು

ಈವೆಂಟ್‌ಗಳು

ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸ್ನೇಹಿತರುಗಳು ಯಾರು ಎಂಬುದನ್ನು ತಿಳಿಯುವ ಕಾತರವೇ? ಇದಕ್ಕಾಗಿ ಈವೆಂಟ್ಸ್ ಹೇಳಿಮಾಡಿಸಿರುವಂಥದ್ದಾಗಿದೆ.

ಮಾರ್ಕ್ ಜುಕರ್‌ಬರ್ಗ್ ವಾಲ್ ನೋಡಬೇಕೇ?

ಮಾರ್ಕ್ ಜುಕರ್‌ಬರ್ಗ್ ವಾಲ್ ನೋಡಬೇಕೇ?

ಫೇಸ್‌ಬುಕ್ ಯುಆರ್‌ಎಲ್‌ ಕೊನೆಯಲ್ಲಿ ಸಂಖ್ಯೆ 4 ಅನ್ನು ಸೇರಿಸುವುದು ನಿಮ್ಮನ್ನು ಜುಕರ್‌ಬರ್ಗ್ ವಾಲ್‌ಗೆ ಕೊಂಡೊಯ್ಯುತ್ತದೆ.

ಫೇಸ್‌ಬುಕ್‌ನಲ್ಲಿ ಭಾಷೆ ಬದಲಾವಣೆ

ಫೇಸ್‌ಬುಕ್‌ನಲ್ಲಿ ಭಾಷೆ ಬದಲಾವಣೆ

ನೀವು ಖಾತೆ/ಲಾಂಗ್ವೇಜಸ್/ಇಂಗ್ಲೀಷ್ ಇಲ್ಲಿ ನಿಮ್ಮ ಮೆಚ್ಚಿನ ಭಾಷೆಯನ್ನು ಆಯ್ಕೆಮಾಡಬಹುದಾಗಿದೆ.

 ಫೇಸ್‌ಬುಕ್ ಅಭಿಮಾನ

ಫೇಸ್‌ಬುಕ್ ಅಭಿಮಾನ

ಚೀನಾದಲ್ಲಿ ಫೇಸ್‌ಬುಕ್ ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದಿದ್ದು ವಿಶ್ವದಲ್ಲೇ ಅತಿ ಹೆಚ್ಚು ಫೇಸ್‌ಬುಕ್ ಬಳಸುವವರು ಚೀನೀಯರಾಗಿದ್ದಾರೆ.

ಫೇಸ್‌ಬುಕ್ ಪೋಸ್ಟ್

ಫೇಸ್‌ಬುಕ್ ಪೋಸ್ಟ್

ಒಂದು ಟ್ರಿಲಿಯನ್‌ಗಿಂತಲೂ ಅಧಿಕ ಫೇಸ್‌ಬುಕ್ ಪೋಸ್ಟ್‌ಗಳಿವೆ ಎಂಬುದು ನಿಮಗೆ ಗೊತ್ತೇ?

ಫೇಸ್‌ಬುಕ್ ಹಿರಿಮೆ

ಫೇಸ್‌ಬುಕ್ ಹಿರಿಮೆ

ಫೇಸ್‌ಬುಕ್ ವಾಟ್ಸಾಪ್, ಟ್ವಿಟ್ಟರ್, ಮತ್ತು ಇನ್‌ಸ್ಟಾಗ್ರಾಮ್‌ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಈ ಸಾಮಾಜಿಕ ತಾಣ ದೈತ್ಯ $20 ಬಿಲಿಯನ್ ಅನ್ನು ಕಳೆದ ಎರಡು ವರ್ಷಗಳಲ್ಲಿ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಮೇಲೆ ಖರ್ಚು ಮಾಡಿದೆ

ಮೊಬೈಲ್‌ನಲ್ಲಿ ಫೇಸ್‌ಬುಕ್

ಮೊಬೈಲ್‌ನಲ್ಲಿ ಫೇಸ್‌ಬುಕ್

ತಿಂಗಳ ಲೆಕ್ಕದಲ್ಲಿ 1.1 ಬಿಲಿಯನ್‌ಗಿಂತಲೂ ಹೆಚ್ಚಿನ ಜನರು ತಮ್ಮ ಮೊಬೈಲ್‌ನಲ್ಲಿ ಫೇಸ್‌ಬುಕ್ ಅನ್ನು ಬಳಸುತ್ತಿದ್ದಾರೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ.

ಮಾರ್ಕ್ ಜುಕರ್‌ಬರ್ಗ್ ತಮ್ಮ ಮೊಬೈಲ್‌ನಲ್ಲಿ ಏನು ಹೊಂದಿದ್ದಾರೆ

ಮಾರ್ಕ್ ಜುಕರ್‌ಬರ್ಗ್ ತಮ್ಮ ಮೊಬೈಲ್‌ನಲ್ಲಿ ಏನು ಹೊಂದಿದ್ದಾರೆ

ಮಾರ್ಕ್ ತಮ್ಮ ಮೊಬೈಲ್‌ನಲ್ಲಿ ಹತ್ತು ಅಪ್ಲಿಕೇಶನ್‌ಗಳನ್ನು ಹೊಂದಿದ್ದಾರೆ ಅಂದರೆ ಫೇಸ್‌ಬುಕ್, ಫೇಸ್‌ಬುಕ್ ಮೆಸೆಂಜರ್, ಫೇಸ್‌ಬುಕ್ ಪೇಜಸ್ ಮ್ಯಾನೇಜರ್, ಪೇಪರ್, ಸ್ಲಿಂಗ್‌ಶಾಟ್, ಇನ್‌ಸ್ಟಾಗ್ರಾಮ್, ವಾಟ್ಸಾಪ್, ಬೋಲ್ಟ್, ರೂಮ್ಸ್ ಮತ್ತು ಮೂವ್ಸ್ ಎಂದಾಗಿದೆ.

ಟ್ವಿಟ್ಟರ್‌ಗಿಂತಲೂ ಫೇಸ್‌ಬುಕ್ ಹಿರಿದು

ಟ್ವಿಟ್ಟರ್‌ಗಿಂತಲೂ ಫೇಸ್‌ಬುಕ್ ಹಿರಿದು

ಟ್ವಿಟ್ಟರ್‌ಗಿಂತಲೂ ಫೇಸ್‌ಬುಕ್ 1 ಬಿಲಿಯನ್‌ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿದೆ.

ಫೇಸ್‌ಬುಕ್ ಖ್ಯಾತಿ

ಫೇಸ್‌ಬುಕ್ ಖ್ಯಾತಿ

ಆಪಲ್ ಬಳಿ $155 ಬಿಲಿಯನ್ ದುಡ್ಡಿದ್ದು ಇದು ಏಳು ವಾಟ್ಸಾಪ್‌ಗಳನ್ನು ಖರೀದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಆದರೆ ಫೇಸ್‌ಬುಕ್ ತನ್ನ ಹಿರಿಮೆಯಿಂದ ಈ ಸಂದೇಶ ಅಪ್ಲಿಕೇಶನ್ ಅನ್ನು $22 ಬಿಲಿಯನ್‌ಗೆ ಖರೀದಿಸಿದೆ.

ಜಾಹೀರಾತು ಖ್ಯಾತಿ

ಜಾಹೀರಾತು ಖ್ಯಾತಿ

ಫೇಸ್‌ಬುಕ್ 1.5 ಮಿಲಿಯನ್ ಸಕ್ರಿಯ ಜಾಹೀರಾತುದಾರರನ್ನು ಹೊಂದಿದೆ.

 ಫೋಟೋಸ್

ಫೋಟೋಸ್

ಫೇಸ್‌ಬುಕ್‌ನ ಹೆಚ್ಚು ಜನಪ್ರಿಯ ಫೀಚರ್ ಇದಾಗಿದೆ. ಅಕ್ಟೋಬರ್ 2005 ರಲ್ಲಿ ಇದನ್ನು ಲಾಂಚ್ ಮಾಡಲಾಗಿದ್ದು, ಸೀನ್ ಪೀಕರ್ ಇದರ ರುವಾರಿಯಾಗಿದ್ದಾರೆ.

ನ್ಯೂಸ್ ಫೀಡ್

ನ್ಯೂಸ್ ಫೀಡ್

ಸುದ್ದಿ ಮಾಹಿತಿಗಳನ್ನು ಬಿತ್ತಿರಿಸುವ ನ್ಯೂಸ್ ಫೀಡ್ ವಿರೋಧಿಗಳನ್ನು ಕಟ್ಟಿಕೊಂಡಿದೆ.

ಲೈಕ್ ಬಟನ್

ಲೈಕ್ ಬಟನ್

ನಿಮ್ಮ ಸ್ನೇಹಿತರು ಈಗಷ್ಟೇ ಪೋಸ್ಟ್ ಮಾಡಿರುವ ಫೋಟೋವನ್ನು ಲೈಕ್ ಮಾಡಿದ್ದೀರಾ? ಅದಕ್ಕಾಗಿ ನೀವು ಬಳಸಿರುವುದು ಲೈಕ್ ಬಟನ್ ಆಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

'<strong>ಆಲ್‌ ರೇಡಿಯೊ'ದಿಂದ ಮೊಬೈಲ್‌ ಆಪ್‌ ಆಧಾರಿತ 'ಕ್ಲಾಸಿಕ್‌ ಮ್ಯೂಸಿಕ್' ಚಾನೆಲ್‌</strong></a><br />ಓದಿರಿ:<strong><a href=ಸ್ಮಾರ್ಟ್‌ಫೋನ್‌ನಲ್ಲಿ ಡಿಲೀಟ್‌ ಮೆಸೇಜ್‌ ಹಿಂಪಡೆಯಲು 7 ಹಂತಗಳು
ಓದಿರಿ:ಏನಾಶ್ಚರ್ಯ!! 11 ವರ್ಷಗಳ ನಂತರ 5 ಗ್ರಹಗಳು ಒಟ್ಟಿಗೆ ಆಕಾಶದಲ್ಲಿ
ಓದಿರಿ:ಫೋನ್ ಸಂರಕ್ಷಣೆಗಾಗಿ 15 ವಿಧಾನಗಳು ಜಸ್ಟ್ ಟ್ರೈ ಮಾಡಿ!!!" title="'ಆಲ್‌ ರೇಡಿಯೊ'ದಿಂದ ಮೊಬೈಲ್‌ ಆಪ್‌ ಆಧಾರಿತ 'ಕ್ಲಾಸಿಕ್‌ ಮ್ಯೂಸಿಕ್' ಚಾನೆಲ್‌
ಓದಿರಿ:ಸ್ಮಾರ್ಟ್‌ಫೋನ್‌ನಲ್ಲಿ ಡಿಲೀಟ್‌ ಮೆಸೇಜ್‌ ಹಿಂಪಡೆಯಲು 7 ಹಂತಗಳು
ಓದಿರಿ:ಏನಾಶ್ಚರ್ಯ!! 11 ವರ್ಷಗಳ ನಂತರ 5 ಗ್ರಹಗಳು ಒಟ್ಟಿಗೆ ಆಕಾಶದಲ್ಲಿ
ಓದಿರಿ:ಫೋನ್ ಸಂರಕ್ಷಣೆಗಾಗಿ 15 ವಿಧಾನಗಳು ಜಸ್ಟ್ ಟ್ರೈ ಮಾಡಿ!!!" loading="lazy" width="100" height="56" />'ಆಲ್‌ ರೇಡಿಯೊ'ದಿಂದ ಮೊಬೈಲ್‌ ಆಪ್‌ ಆಧಾರಿತ 'ಕ್ಲಾಸಿಕ್‌ ಮ್ಯೂಸಿಕ್' ಚಾನೆಲ್‌
ಓದಿರಿ:ಸ್ಮಾರ್ಟ್‌ಫೋನ್‌ನಲ್ಲಿ ಡಿಲೀಟ್‌ ಮೆಸೇಜ್‌ ಹಿಂಪಡೆಯಲು 7 ಹಂತಗಳು
ಓದಿರಿ:ಏನಾಶ್ಚರ್ಯ!! 11 ವರ್ಷಗಳ ನಂತರ 5 ಗ್ರಹಗಳು ಒಟ್ಟಿಗೆ ಆಕಾಶದಲ್ಲಿ
ಓದಿರಿ:ಫೋನ್ ಸಂರಕ್ಷಣೆಗಾಗಿ 15 ವಿಧಾನಗಳು ಜಸ್ಟ್ ಟ್ರೈ ಮಾಡಿ!!!

Best Mobiles in India

English summary
Here we are giving top Facebook features you do not about that which makes Facebook more popular takes a look at the 10 of the best features of Facebook.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X