ನೋಟು ನಿಷೇಧದಿಂದಾಗಿ ಶೇ.30ರಷ್ಟು ಕುಸಿದ ಸ್ಮಾರ್ಟ್‌ಪೋನ್ ಮಾರಾಟ

ನೋಟು ನಿಷೇಧಕ್ಕಿಂತ ಮುಂಚೆ ಹೆಚ್ಚಿದ್ದ ಸ್ಮಾರ್ಟ್‌ಪೋನ್ ಮಾರಾಟ ನಿಷೇಧದ ನಂತರ ಕುಸಿತದ ಹಾದಿ ಹಿಡಿದಿದೆ

|

ದೇಶದಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳು ನಿ‍ಷೇಧಗೊಳಿಸಿದ ಕಾರಣದಿಂದ ಜನರ ಖರೀದಿಸುವ ಶಕ್ತಿಯೂ ಕಡಿಮೆಯಾಗಿದ್ದು, ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಪೋನು ಉದ್ಯಮವೂ ಹೊಡೆತ ತಿಂದಿದೆ. ಇದರಿಂದಾಗಿ ಸುಮಾರು ಶೇ. 30ರಷ್ಟು ಸ್ಮಾರ್ಟ್‌ಪೋನ್ ಮಾರಾಟ ಕುಸಿದಿದೆ ಎಂದು ವರದಿಯೊಂದು ಮಾಹಿತಿ ನೀಡಿದೆ.

ನೋಟು ನಿಷೇಧದಿಂದಾಗಿ ಶೇ.30ರಷ್ಟು ಕುಸಿದ ಸ್ಮಾರ್ಟ್‌ಪೋನ್ ಮಾರಾಟ

ಓದಿರಿ..: ಜಿಯೋಗೆ ಸೆಡ್ಡು ಹೊಡೆದ ಬಿಎಸ್ಎನ್ಎಲ್‌ನಿಂದ ಪ್ರತಿ ನಿತ್ಯ ಉಚಿತ ಕರೆ ಕೊಡುಗೆ

ನವೆಂಬರ್ ತಿಂಗಳು ಮತ್ತು ಡಿಸೆಂಬರ್ ತಿಂಗಳ ವಹಿವಾಟನ್ನು ನೋಡಿದ ಸಂದರ್ಭದಲ್ಲಿ ನೋಟು ನಿಷೇಧಕ್ಕಿಂತ ಮುಂಚೆ ಹೆಚ್ಚಿದ್ದ ಸ್ಮಾರ್ಟ್‌ಪೋನ್ ಮಾರಾಟ ನಿಷೇಧದ ನಂತರ ಕುಸಿತದ ಹಾದಿ ಹಿಡಿದಿದೆ ಎಂದು ಇಂಟರ್ನ್ಯಾಷಿನಲ್ ಡೇಟಾ ಕಾರ್ಪೋರೇಷನ್ ವರದಿ ಮಾಡಿದೆ.

ಭಾರತದ ಸುಮಾರು 50 ನಗರಗಳಲ್ಲಿ ಸರ್ವೆ ನಡೆಸಿರುವ ಐಡಿಸಿ, ನವೆಂಬರ್‌ನಲ್ಲಿ ನೋಟು ನಿಷೇಧವಾದ ನಂತರದಲ್ಲಿ ಶೇ.37.2 ರಷ್ಟು ಮೊಬೈಲ್ ಮಾರಾಟ ಕಡಿಮೆಯಾಗಿದೆ. ಖರೀದಿಗೆ ಜನರ ಬಳಿ ಹಣ ಇಲ್ಲದ ಕಾರಣ ಈ ಕುಸಿತ ಸಂಭವಿಸಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ನೋಟು ನಿಷೇಧದಿಂದಾಗಿ ಶೇ.30ರಷ್ಟು ಕುಸಿದ ಸ್ಮಾರ್ಟ್‌ಪೋನ್ ಮಾರಾಟ

ಓದಿರಿ..: ರೆಡ್‌ಮಿ ನೋಟ್ 4 ಸೋಲ್ಡ್ ಔಟ್..! ಇಲ್ಲಿದೆ ನೋಡಿ ಬೇರೆ ಫೋನುಗಳು..!

ಈ ಸಂದರ್ಭದಲ್ಲಿ ಚೀನಾ ಮೂಲದ ಕಂಪನಿಗಳು ಹೆಚ್ಚಿನ ನಷ್ಟ ಅನುಭವಿಸಿದ್ದು, ಉಳಿದ ಕಂಪನಿಗಳು ಕಡಿಮೆ ಮಟ್ಟದಲ್ಲಿ ನಷ್ಟ ಅನುಭವಿಸಿವೆ. ಕೇಲವು ನಗರಗಳಲ್ಲಿ ಈ ಪ್ರಮಾಣವೂ ಇನ್ನು ಹೆಚ್ಚಿದ್ದು, ಕೆಲವು ಕಡಿಮೆ ಇದೆ ಎಂದು ಐಡಿಸಿ ವರದಿ ನೀಡಿದೆ. ಒಟ್ಟಿನ್ಲಲಿ ನೋಟು ನಿಷೇಧದಿಂದ ಸ್ಮಾರ್ಟ್‌ಪೋನ್ ಉದ್ಯಮವೂ ಹೊಡೆತ ತಿಂದಿದೆ.

Best Mobiles in India

Read more about:
English summary
Owing to demonetisation and subsequent cash crunch, smartphone sales fell by a whopping 30.5 percent. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X