ಜಿಯೋಗೆ ಸೆಡ್ಡು ಹೊಡೆದ ಬಿಎಸ್ಎನ್ಎಲ್‌ನಿಂದ ಪ್ರತಿ ನಿತ್ಯ ಉಚಿತ ಕರೆ ಕೊಡುಗೆ

Written By:

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಟೆಲಿಕಾಂ ಕಂಪನಿಗಳ ನಡುವೆ ದರ ಸಮರ ನಡೆಯುತ್ತಿದ್ದು, ಜಿಯೋ ಆರಂಭವಾಗಿದ್ದೆ ಇತರೆ ಕಂಪನಿಗಳ ಬುಡ ಅಲ್ಲಾಡಲು ಶುರುವಾಗಿದೆ ಈ ಹಿನ್ನಲೆಯಲ್ಲಿ ಎಲ್ಲರು ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಉಚಿತ ಕೊಡುಗೆಗಳನ್ನು ನೀಡಲು ಶುರು ಮಾಡಿದ್ದಾರೆ. ಸರಕಾರಿ ಒಡೆತನದ ಬಿಎಸ್‌ಎನ್‌ಎಲ್ ಸಹ ಈ ಸ್ಪರ್ಧೇಯಿಂದ ಹಿಂದೆ ಬಿದ್ದಿಲ್ಲ.

ಜಿಯೋಗೆ ಸೆಡ್ಡು ಹೊಡೆದ ಬಿಎಸ್ಎನ್ಎಲ್‌ನಿಂದ ಪ್ರತಿ ನಿತ್ಯ ಉಚಿತ ಕರೆ ಕೊಡುಗೆ

ಓದಿರಿ..: ವಾಟ್ಸ್ಆಪ್ ಮೇಸೆಜ್ ಎಡಿಟ್ ಮಾಡಬಹುದು, ಸ್ಟೆಟಸ್ ಶೇರ್ ಮಾಡಬಹುದು...!

ಬಿಎಸ್ಎನ್ಎಲ್ ತನ್ನ ಗ್ರಾಹಕರನ್ನು ಬಿಟ್ಟುಕೊಡಲು ಸಿದ್ಧವಿಲ್ಲ, ಹಾಗೆಯೇ ಹೊಸ ಗ್ರಾಹಕರನ್ನು ತನ್ನ ಕಡೆಗೆ ಸೆಳೆಯುವ ಸಲುವಾಗಿ ಹೊಸ ಪ್ರಿಪೇಯ್ಡ್ ಕೊಡುಗೆಯೊಂದನ್ನು ಘೋಷಣೆ ಮಾಡಿದೆ. 149 ರೂ,ಗಳ ಪ್ಲಾನ್ ಬಿಡುಗಡೆ ಮಾಡಿರುವ ಬಿಎಸ್ಎನ್ಎಲ್ ಪ್ರತಿ ನಿತ್ಯ 30 ನಿಮಿಷಗಳ ಎಸ್‌ಟಿಡಿ ಮತ್ತು ಲೋಕಲ್ ಕಾಲ್ ಗಳನ್ನು ಉಚಿತವಾಗಿ ನೀಡಲಿದೆ. ಅಲ್ಲದೇ ಯಾವುದೇ ನೆಟ್‌ವರ್ಕ್‌ಗಾದರು ಈ ಕರೆ ಮಾಡಬಹುದಾಗಿದೆ,

ಅಲ್ಲದೇ ತನ್ನ ಗ್ರಾಹಕರಿಗೆ ಮತ್ತೊಂದು ಕೊಡುಗೆಯನ್ನು ನೀಡಿದರುವ ಬಿಎಸ್ಎನ್ಎಲ್, ತಿಂಗಳಿಗೆ 439 ರೂ.ಗಳನ್ನು ಪಾವತಿ ಮಾಡಿದರೆ ಅನ್‌ಲಿಮಿಟೆಡ್ ಉಚಿತ ಕರೆಗಳನ್ನು ಮಾಡಬಹುದಾಗಿದೆ, ಅಲ್ಲದೇ ಇದರೊಂದಿಗೆ 300 MB ಡೇಟಾ ಸಹ ದೊರೆಯಲಿದೆ.

ಜಿಯೋಗೆ ಸೆಡ್ಡು ಹೊಡೆದ ಬಿಎಸ್ಎನ್ಎಲ್‌ನಿಂದ ಪ್ರತಿ ನಿತ್ಯ ಉಚಿತ ಕರೆ ಕೊಡುಗೆ

ಓದಿರಿ..: ರೆಡ್‌ಮಿ ನೋಟ್ 4 ಸೋಲ್ಡ್ ಔಟ್..! ಇಲ್ಲಿದೆ ನೋಡಿ ಬೇರೆ ಫೋನುಗಳು..!

ಒಟ್ಟಿನಲ್ಲಿ ಖಾಸಗಿ ಕಂಪನಿಗಳ ಸ್ಪರ್ಧೆಯಲ್ಲಿ ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಹ ಭಾಗಿಯಾಗಿ ಉತ್ತಮ ಆಫರ್‌ಗಳನ್ನು ನೀಡುತ್ತಿರುವುದು ಉತ್ತಮ ವಿಚಾರವಾಗಿದೆ. ಇದಲ್ಲದೇ ಗ್ರಾಹಕರಿಗೂ ಇದು ಒಳ್ಳೆಯ ಸಮಯವಾಗಿದ್ದು, ಯಾವ ಆಫರ್ ಉತ್ತಮವೊ ಅದನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

Read more about:
English summary
SNL today came out with a pre-paid scheme under which new subscribers can make 30 minutes of free voice calls local and STD. to know visit kannda.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot