ಸ್ಮಾರ್ಟ್‌ಫೋನ್‌ ರಕ್ಷಣೆಗಾಗಿ ಡಿಲೀಟ್ ಮಾಡಬೇಕಾದ ಆಪ್‌ಗಳು

By Suneel
|

ಸ್ಮಾರ್ಟ್‌ಫೋನ್‌ ಆಗಾಗ ಹ್ಯಾಂಗ್‌ ಆಗುತ್ತೆ. ಕೆಲವೊಮ್ಮೆ ಸ್ವೈಪ್‌ ಮಾಡಿದರು ಸಹ ಓಪನ್‌ ಆಗೊಲ್ಲಾ. ಬ್ಯಾಟರಿ ಪವರ್‌ ಅಂತೂ ಬಹುಬೇಗ ಖಾಲಿಯಾಗುತ್ತೆ. ಇಂಟರ್ನೆಟ್‌ ಆನ್‌ ಮಾಡಿದ್ರೆ ವೆಬ್‌ ಫೇಜ್ ಓಪನ್ ಆಗೋಕೆ ಇಲ್ಲಾಂದ್ರು 5-10 ನಿಮಿಷ ಬೇಕು. ಪ್ರೀತಿಯಿಂದ ಹೆಚ್ಚು ಹಣ ಕೊಟ್ಟು ಖರೀದಿಸಿದ ಈ ಸ್ಮಾರ್ಟ್‌ಫೋನ್‌ ಇಷ್ಟೊಂದು ತೊಂದರೇನ ಬಹುಬೇಗ ನೀಡಲು ಪ್ರಾರಂಭಿಸಿದೆಯಲ್ಲಾ.. ಏನ್‌ ಮಾಡೋದು? ಅನ್ನೋ ಪ್ರಶ್ನೆ ದಿನನಿತ್ಯ ಇಂಟರ್ನೆಟ್‌ ಬಳಸುವವರನ್ನು ಕಾಡದೆ ಇರದು.

ನಾವು ಮೇಲೆ ಹೇಳಿದ ಸಮಸ್ಯೆಗಳನ್ನು ಎದುರಿಸುತ್ತಿರುವ ಎಲ್ಲರೂ ಶೀಘ್ರವಾಗಿ ನಾವು ಇಂದಿನ ಲೇಖನದಲ್ಲಿ ತಿಳಿಸಿರುವ ಆಪ್‌ಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ಅನ್‌ಇನ್‌ಸ್ಟಾಲ್‌ ಮಾಡಿ. ಅನ್‌ಇನ್‌ಸ್ಟಾಲ್‌ ಮಾಡಬೇಕಾದ ಆಪ್‌ಗಳು ಯಾವುವು ಎಂದು ತಿಳಿಯಲು ಮುಂದೆ ಓದಿರಿ.

1

1

ಸ್ಮಾರ್ಟ್‌ಫೋನ್‌ಗಳಲ್ಲಿರುವ ಫೇಸ್‌ಬುಕ್‌ ಆಪ್‌ ನಿಮ್ಮನ್ನು ಹೊರಜಗತ್ತಿನ ಎಲ್ಲರೊಂದಿಗೆ ಸಂಪರ್ಕ ಕಲ್ಪಿಸಬಹುದು. ಆದರೆ ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚು ಬ್ಯಾಟರಿ ಖಾಲಿಯಾಗಲು ಫೇಸ್‌ಬುಕ್‌ ಆಪ್‌ ಕಾರಣವಾಗಿದೆ. ನಿಮ್ಮ ಫೋನ್‌ ನಿಧಾನವಾಗಿ ಕಾರ್ಯ ನಿರ್ವಹಿಸಲಿಕ್ಕೂ ಸಹ ಫೇಸ್‌ಬುಕ್‌ ಆಪ್‌ ಕಾರಣವಾಗಿದೆ. ಆಪ್‌ ಬದಲಾಗಿ ನೀವು ನೇರವಾಗಿ ಬ್ರೌಸರ್‌ ಮೂಲಕ ಫೇಸ್‌ಬುಕ್‌ ಅನ್ನು ಬಳಸಿದರೆ ಉತ್ತಮ ಹಾಗೂ ಬ್ಯಾಟರಿಯು ಅಧಿಕವಾಗಿ ಬಾಳಿಕೆ ಬರುತ್ತದೆ. ಆದ್ದರಿಂದ ಫೇಸ್‌ಬುಕ್‌ ಆಪ್‌ ಅನ್ನು ಸ್ಮಾರ್ಟ್‌ಫೋನ್‌ನಿಂದ ಡಿಲೀಟ್‌ ಮಾಡಿದರೆ ಫೋನ್‌ ಸಹ ವೇಗವಾಗಿ ಕಾರ್ಯನಿರ್ವಹಿಸುತ್ತದೆ.

2

2

ವೆದರ್‌ ಆಪ್‌ ಬಹುಬೇಗ ಎಲ್ಲರಿಗೂ ಸಹ ವಾತಾವರಣದ ಮುನ್ಸೂಚನೆ ನೀಡುವಲ್ಲಿ ಸಂಶಯವಿಲ್ಲ. ಆದರೆ ನೆನಪಿರಲಿ ಬ್ಯಾಟರಿ ಶಕ್ತಿಯನ್ನು ಬಹುಬೇಗ ಖಾಲಿಮಾಡುತ್ತದೆ. ಆದ್ದರಿಂದ ಈ ಆಪ್‌ ಹೊಂದುವ ಬದಲಾಗಿ "ಗೂಗಲ್‌" ನಿಂದ ನೇರವಾಗಿ ವಾತಾವರಣ ಮುನ್ಸೂಚನೆ ತಿಳಿಯ ಬಳಸಬಹುದು.

3

3

ನಿಮ್ಮ ಮೊಬೈಲ್‌ ವೈರಸ್‌ಗಳಿಗೆ ತುತ್ತಾಗಿ ಹದಗೆಡುವ ಭಯವಿದೆಯೇ ? ಆಧುನಿಕ ಸ್ಮಾರ್ಟ್‌ಫೋನ್‌ಗಳು ಉತ್ತಮ ಮಾರ್ಗಗಳನ್ನು ಹೊಂದಿದ್ದು, ವೈರಸ್‌ಗಳಿಂದ ಸುರಕ್ಷಿತವಾಗಿರುವ ಹಲವು ಮಾರ್ಗಗಳನ್ನು ಹೊಂದಿವೆ. ಆಂಡ್ರಾಯ್ಡ್ ಫೋನ್‌ಗಳು ಹೆಚ್ಚು ಸುರಕ್ಷಿತ ಮಾರ್ಗಗಳನ್ನು ಹೊಂದಿವೆ. ಆದರೆ ನೀವು ಡೌನ್‌ಲೋಡ್‌ ಮಾಡುವ ವೇಳೆ ಮಾತ್ರ ಎಚ್ಚರವಹಿಸಿದರೆ ಸಾಕು. ಆಂಟಿವೈರಸ್‌ಗಳ ಅವಶ್ಯಕತೆ ಇರುವುದಿಲ್ಲಾ.

4

4

ಕ್ಲೀನಿಂಗ್ ಆಪ್‌ ಕ್ಯಾಶೆ ಡಾಟಾವನ್ನು ಕ್ಲಿಯರ್ ಮಾಡುವ ಮೂಲಕ ಸ್ಮಾರ್ಟ್‌ಫೋನ್‌ ಅನ್ನು ವೇಗಗೊಳಿಸುತ್ತದೆ. ಆದರೆ ಕೆಲವೊಮ್ಮೆ ಡಿಲೀಟ್‌ ಮಾಡಿದ ಆಪ್‌ಗಳ ಕ್ಯಾಶೆ ಡಾಟಾ ಫೋನ್‌ನಲ್ಲಿ ಉಳಿದಿರುತ್ತದೆ. ನೀವು ಈ ಆಪ್‌ ಅನ್ನು ಡೌನ್‌ಲೋಡ್‌ ಮಾಡುವ ಬದಲು ಕ್ಯಾಶೆ ಡಾಟಾ ಕ್ಲಿಯರ್‌ ಮಾಡಲು ಫೊನ್‌ನಲ್ಲಿ ಸೆಟ್ಟಿಂಗ್ಸ್‌>>ಸ್ಟೋರೇಜ್‌ >> ಕ್ಲಿಯರ್‌ ಕ್ಯಾಶೆ ಡಾಟಾ ಕ್ಲಿಕ್‌ ಮಾಡಿ. ಪ್ರತಿ ಆಪ್‌ ಅನ್ನು ವಯಕ್ತಿಕವಾಗಿ ಸಹ ಕ್ಯಾಶೆ ಡಾಟಾ ಕ್ಲಿಯರ್‌ ಮಾಡಬಹುದಾಗಿದೆ. ಸೆಟ್ಟಿಂಗ್ಸ್>>ಆಪ್ಸ್‌>> ಡೌನ್‌ಲೋಡೆಡ್‌ ಆಪ್‌ಗಳ ಮೇಲೆ ಕ್ಲಿಕ್‌ ಮಾಡಿ ಕ್ಲಿಯರ್‌ ಕ್ಯಾಶೆ ಅನ್ನು ಸೆಲೆಕ್ಟ್ ಮಾಡಿ.

5

5

ಬ್ಯಾಟರಿ ಉಳಿತಾಯಕ್ಕೆ ನಿಮ್ಮ ಸ್ಮಾರ್ಟ್‌ಫೋನ್‌ ನಲ್ಲಿನ, ನಿಮಗೆ ಇಷ್ಟವಾಗದ ಬ್ರೌಸರ್‌ಗಳನ್ನು ಡಿಫಾಲ್ಟ್ ಬ್ರೌಸರ್‌ಗಳಾಗಿ ಮಾಡುವುದು ಉತ್ತಮ ಕೆಲಸ. ನಂತರದಲ್ಲಿ ನಿಮಗೆ ಇಷ್ಟವಾದ ಬ್ರೌಸರ್‌ಗಳನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿ.

ಯೂಟ್ಯೂಬ್‌ನಲ್ಲಿ Age Restrict ವೀಡಿಯೊಗಳನ್ನು ನೋಡುವುದು ಹೇಗೆ?

Best Mobiles in India

English summary
5 Apps you should uninstall from your Smartphone for better Performance.read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X