ರಾತ್ರಿ ವೇಳೆ ಇಂಟರ್ನೆಟ್ ಕನೆಕ್ಷನ್‌ ಸ್ಲೋ ಆಗಲು 5 ಕಾರಣಗಳು, ಯಾವುವು ಗೊತ್ತೇ?

By Suneel
|

ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಸಮಸ್ಯೆಗೆ ಸಂಬಂಧಿಸಿದ ಕೆಲವೊಂದು ವಿಷಯಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬಹುದು. ಅಂತಹವುಗಳಲ್ಲಿ ಮಂದಗತಿಯ ಇಂಟರ್ನೆಟ್ ಸಂಪರ್ಕ ಆಗಿರಬಹುದು. ಇಂಟರ್ನೆಟ್ ಸಂಪರ್ಕದ ಸಮಸ್ಯೆ ಎಲ್ಲರಿಗೂ ಸಹ ತಲೆನೋವು. ವಿಶೇಷವಾಗಿ ರಾತ್ರಿ ವೇಳೆ ಟಿವಿ ಶೋಗಳನ್ನು ಮತ್ತು ಮ್ಯೂಸಿಕ್‌ಗಳನ್ನು ಸ್ಟ್ರೀಮ್‌ ಮಾಡುವ ವೇಳೆ ಮಂದಗತಿಯ ಇಂಟರ್ನೆಟ್‌ ಸಂಪರ್ಕ ಎಲ್ಲರಿಗೂ ಕೋಪ ತರಿಸುತ್ತದೆ.

ನಿಮ್ಮ ನಂಬರ್‌ ಕಾಣದಂತೆ ಇತರರಿಗೆ ಫೋನ್‌ ಕರೆ ಮಾಡುವುದು ಹೇಗೆ?

ಅಂದಹಾಗೆ ವಿಶೇಷವಾಗಿ ರಾತ್ರಿ ವೇಳೆ ಇಂಟರ್ನೆಟ್ ವೇಗ ಕಡಿಮೆ ಇರಲು ಹಲವು ಕಾರಣಗಳು ಇವೆ. ಅದು ಇಂಟರ್ನೆಟ್(Internet) ಸೇವೆ ನೀಡುವ ಆಪರೇಟರ್‌ಗಳಿಂದ ಆಗಿರಬಹುದು ಅಥವಾ ಬಳಕೆದಾರರಿಂದಲೂ ಆಗಿರಬಹುದು. ರಾತ್ರಿ ವೇಳೆ ಇಂಟರ್ನೆಟ್ ವೇಗ ಕಡಿಮೆ ಇರಲು ಕಾರಣಗಳೇನು ಮತ್ತು ಈ ಸಮಸ್ಯೆ ಬಗೆಹರಿಸುವುದು ಹೇಗೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ಏರ್‌ಟೆಲ್‌ನಿಂದ ಅತಿ ವೇಗದ ಉಚಿತ ಅನ್‌ಲಿಮಿಟೆಡ್‌ 4G ಡಾಟಾ ಪಡೆಯುವುದು ಹೇಗೆ?

ಇಂಟರ್ನೆಟ್‌ ಸಂಪರ್ಕ ದಟ್ಟಣೆ

ಇಂಟರ್ನೆಟ್‌ ಸಂಪರ್ಕ ದಟ್ಟಣೆ

ಸಾಮಾನ್ಯವಾಗಿ ನೀವು ಇಂಟರ್ನೆಟ್‌ ಸಂಪರ್ಕವನ್ನು ಇತರರಿಗೂ ಶೇರ್ ಮಾಡಿದ್ದಲ್ಲಿ ಸಮಸ್ಯೆ ಉಂಟಾಗುತ್ತದೆ. ಹಲವರು ಸಂಜೆ ವೇಳೆ ಮತ್ತು ರಾತ್ರಿ ವೇಳೆ ಫ್ರೀ ಟೈಮ್‌ನಲ್ಲಿ ಇಂಟರ್ನೆಟ್ ಬಳಕೆ ಮಾಡಲು ಆರಂಭಿಸುತ್ತಾರೆ. ಇದರಿಂದ ಇಂಟರ್ನೆಟ್ ಸಂಪರ್ಕ ದಟ್ಟಣೆ ಉಂಟಾಗಿ ಮಂದಗತಿಯ ಇಂಟರ್ನೆಟ್‌ ವೇಗ ಇರುತ್ತದೆ.

ಪ್ರಸ್ತುತ ಇರುವ ಆಪರೇಟರ್‌ನಿಂದ ಇಂಟರ್ನೆಟ್ ಸಂಪರ್ಕ ಉತ್ತಮವಾಗಿಲ್ಲದಿದ್ದಲ್ಲಿ, ಇತರೆ ನೆಟ್‌ವರ್ಕ್‌ಗೆ ಬದಲಾಗಿ.

ವಾತಾವರಣದಲ್ಲಿ ಬದಲಾವಣೆ( ಉಪಗ್ರಹ ಸಂಪರ್ಕ  )

ವಾತಾವರಣದಲ್ಲಿ ಬದಲಾವಣೆ( ಉಪಗ್ರಹ ಸಂಪರ್ಕ )

ಕೇಬಲ್‌ ಸಂಪರ್ಕದ ಬದಲು ನೀವು ಉಪಗ್ರಹ ಸಂಪರ್ಕವನ್ನು ಬಳಸುತ್ತಿದ್ದಲ್ಲಿ ವಾತಾವರಣ ಬದಲಾವಣೆಯಿಂದಾಗಿ ಮಂದಗತಿಯ ಇಂಟರ್ನೆಟ್ ಸಂಪರ್ಕ ಸಮಸ್ಯೆ ಎದುರಾಗುತ್ತದೆ. ವಾತಾವರಣ ಬದಲಾವಣೆಯಿಂದಾಗಿ ಆಂಟೆನಾ ಸಿಗ್ನಲ್‌ ಸ್ವೀಕರಿಸುವಲ್ಲಿ ಹಸ್ತಕ್ಷೇಪ ಉಂಟಾಗುತ್ತದೆ.

ನಿಮ್ಮ ರೂಟರ್ ಸ್ಥಳ ಬದಲಾವಣೆ ಮಾಡಿ

ನಿಮ್ಮ ರೂಟರ್ ಸ್ಥಳ ಬದಲಾವಣೆ ಮಾಡಿ

ಅಂದಹಾಗೆ ಹಲವರು ರೂಟರ್‌ನ ಸ್ಥಳದ ಬಗ್ಗೆ ಗಮನಹರಿಸುವುದಿಲ್ಲ. ಕೆಲವೊಮ್ಮೆ ಸ್ಥಳ ಬದಲಿಸಿ ಉತ್ತಮ ಸ್ಥಳದಲ್ಲಿ ಇಡುವುದರಿಂದ ಇಂಟರ್ನೆಟ್‌ ಸಿಗ್ನಲ್‌ ಸಾಮರ್ಥ್ಯ ಹೆಚ್ಚಾಗುತ್ತದೆ. ಆದ್ದರಿಂದ ಹೆಚ್ಚಾಗಿ ಕಂಪ್ಯೂಟರ್‌ಗೆ ಹತ್ತಿರವಾಗಿ ರೂಟರ್‌ ಇಡಬೇಕು. ಅಲ್ಲದೇ ಎಲೆಕ್ಟ್ರಾನಿಕ್‌ ಮತ್ತು ಮೆಟಲ್‌ ವಸ್ತುಗಳು ರೂಟರ್‌ಗೆ ಹತ್ತಿರವಾಗಿದ್ದಲ್ಲಿ ಇಂಟರ್ನೆಟ್ ಸಿಗ್ನಲ್‌ಗಳ ಹಸ್ತಕ್ಷೇಪಕ್ಕೆ ಕಾರಣವಾಗಬಹುದು.

ನಿಮ್ಮ ರೂಟರ್‌ ಅಪ್‌ಡೇಟ್‌ ಮಾಡಿ

ನಿಮ್ಮ ರೂಟರ್‌ ಅಪ್‌ಡೇಟ್‌ ಮಾಡಿ

ಒಂದೇ ರೂಟರ್‌ಗೆ ಹಲವು ಡಿವೈಸ್‌ಗಳು ಕನೆಕ್ಟ್‌ ಆಗುವುದರಿಂದ ಇಂಟರ್ನೆಟ್‌ ವೇಗ ಕುಸಿಯುತ್ತದೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಡಿವೈಸ್‌ಗಳನ್ನು ಇಂಟರ್ನೆಟ್‌ಗಾಗಿ ಸಂಪರ್ಕ ಹೊಂದಬಾರದು. ಆದ್ದರಿಂದ ಆಗಾಗ ಹೊಸ ರೂಟರ್‌ಗಳನ್ನು ಪಡೆಯಿರಿ.

 ಬ್ರೌಸರ್ ವಿಸ್ತರಣೆ

ಬ್ರೌಸರ್ ವಿಸ್ತರಣೆ

ಬ್ರೌಸರ್ ವಿಸ್ತರಣೆ ಅಥವಾ ಆಡ್‌ ಆನ್ಸ್ ಒಟ್ಟಾರೆ ಸರ್ಫಿಂಗ್‌ ಅನುಭವವನ್ನು ಅಭಿವೃದ್ದಿಗೊಳಿಸಬಹುದು, ಆದರೆ ಇದೇ ಬ್ರೌಸಿಂಗ್ ವೇಗವನ್ನು ಡಿಗ್ರೇಡ್‌ ಮಾಡುತ್ತದೆ. ಆದ್ದರಿಂದ ಅನಗತ್ಯ ಬ್ರೌಸರ್‌ ವಿಸ್ತರಣೆಗಳನ್ನು ಡಿಸೇಬಲ್‌ ಮಾಡಿ ಉತ್ತಮ ಇಂಟರ್ನೆಟ್‌ ವೇಗವನ್ನು ಎಂಜಾಯ್‌ ಮಾಡಿ.

Best Mobiles in India

English summary
5 Reasons Your Internet Connection Is Slower at Night. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X