53% ಭಾರತೀಯರು ಸ್ಮಾರ್ಟ್‌ಪೋನ್ ಖರೀದಿಸಿರುವುದು ಆನ್‌ಲೈನ್‌ನಲ್ಲಿ.....

|

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಪೋನ್ ಹಾವಳಿ ಹೆಚ್ಚಾಗಿದ್ದು, 4G ಗುಣಮಟ್ಟದ ಡೇಟಾ ಸೌಲಭ್ಯ ದೊರೆತಮೇಲೆ ಸ್ಮಾರ್ಟ್‌ಪೋನ್ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದೆ. ಅದರಲ್ಲಿಯೂ 39% ಭಾರತೀಯ ಸ್ಮಾರ್ಟ್‌ಪೋನ್ ಗಳನ್ನು ಅಂಗಡಿಯಲ್ಲಿ ಕೊಂಡರೆ 53 % ಭಾರತೀಯರು ತಮ್ಮ ನೂತನ ಸ್ಮಾರ್ಟ್‌ಪೋನ್ ಗಳನ್ನು ಆನ್‌ಲೈನ್ ನಲ್ಲೇ ಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ಮಾಹಿತಿ ಹೊರ ಹಾಕಿದೆ.

53% ಭಾರತೀಯರು ಸ್ಮಾರ್ಟ್‌ಪೋನ್ ಖರೀದಿಸಿರುವುದು ಆನ್‌ಲೈನ್‌ನಲ್ಲಿ.....

ಬರುತ್ತಿದೆ Redmi Note 4X: ಸ್ನಾಪ್‌ಡ್ರಾಗನ್ 653 ಮತ್ತು 4GB RAM

ಅಲ್ಲದೇ ಮುಂದಿನ 12 ತಿಂಗಳಿನಲ್ಲಿ 4G ಸ್ಮಾರ್ಟ್‌ಪೋನ್ ಬಳಕೆದಾರ ಸಂಖ್ಯೆ ಏರುಗತಿಯಲ್ಲಿ ಸಾಗಲಿದೆ ಎಂದು 'ಮೊಬೈಲ್ ಕನ್ಸ್ಯೂಮರ್ ಸರ್ವೆ-2016' ತಿಳಿಸಿದೆ, ಈ ಸಮೀಕ್ಷೆಯನ್ನು ಖಾಸಗಿ ಸಂಸ್ಥೆಯೊಂದು ನಡೆಸಿದ್ದು, ಮುಂದಿನ ದಿನ ಗಳಲ್ಲಿ ಭಾರತದಲ್ಲಿ ಡೇಟಾ ಹಸಿವು ಹೆಚ್ಚಾಗಲಿದೆ ಎಂದು ಈ ಸಮೀಕ್ಷೆ ವರದಿ ತಿಳಿಸಿದೆ.

ಸೋಷಿಯಲ್ ಮೀಡಿಯಾ ಬಳಕೆ ಅತಿಯಾಗಿದ್ದು, ಅದರಲ್ಲೂ ಸ್ಮಾರ್ಟ್‌ಪೋನ್ ನಲ್ಲಿ ಡೇಟಾ ಬಳಸುವವರ ಸಂಖ್ಯೆ ಮುಂದಿನ ದಿನದಲ್ಲಿ ಇನಷ್ಟು ಏರಿಕೆಯಾಗಲಿದ್ದು, ಡಿಜಿಟಲ್ ಇಂಡಿಯಾ ಕನಸನ್ನು ನೆರವೇರಿಸಲು ಈ ಬೆಳವಣಿಗೆ ಸಹಾಯಕಾರಿಯಾಗಲಿದೆಯಂತೆ.

53% ಭಾರತೀಯರು ಸ್ಮಾರ್ಟ್‌ಪೋನ್ ಖರೀದಿಸಿರುವುದು ಆನ್‌ಲೈನ್‌ನಲ್ಲಿ.....

1000 ರೂ ಒಳಗಿನ ಟಾಪ್ 5 ಉತ್ತಮ ಇಯರ್ ಪೋನ್ಸ್

ಈಗಾಗಲೇ ಸ್ಮಾರ್ಟ್‌ಪೋನ್ ಬಳಕೆದಾರರಲ್ಲಿ ಶೇ 54% ಮಂದಿ ಬ್ಯಾಂಕ್ ಬ್ಯಾಲೆನ್ ಅನ್ನು ತಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡುತ್ತಿದ್ದಾರೆ. ದೇಶದ ಒಳಗೆ ಹಣವನ್ನು ವರ್ಗಹಿಸಲು ಶೇ.38 ಮಂದಿ ತಮ್ಮ ಸ್ಮಾರ್ಟ್‌ಪೋನನ್ನೇ ಬಳಸುತ್ತಿದ್ದಾರೆ ಎಂದು ಈ ಸರ್ವೆ ತಿಳಿಸಿದ್ದು, ತಾವು ಪಡೆದ ಸೇವೆಗಳ ಬದಲಿಗೆ ಶೇ.54 ಸ್ಮಾರ್ಟ್‌ಪೋನ್ ಬಳಕೆದಾರರು ತಮ್ಮ ಪೋನ್ ನಿಂದಲೇ ಬಿಲ್ ಪಾವತಿ ಮಾಡುತ್ತಿದ್ದಾರೆ ಎಂದು ಈ ಸಮೀಕ್ಷೆ ತಿಳಿಸಿಸಿದೆ.

Best Mobiles in India

English summary
53 per cent of Indians bought their smartphones online while 39 percent of smartphone owners still preferred retail stores to buy a new device in 2016. to know more gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X