64 ಜಿಬಿ ಒನ್ ಪ್ಲಸ್ ಒನ್ ಫ್ಲಿಪ್‌ಕಾರ್ಟ್‌ನಲ್ಲಿ ಮಿತ ಬೆಲೆಗೆ

Written By:

ಒನ್ ಪ್ಲಸ್ ಒನ್‌ಗಾಗಿ ಅಮೆಜಾನ್‌ನ ಅತಿವಿಶೇಷ ಡೀಲ್ ಕೊನೆಗೂ ಅಂತ್ಯವಾಗಿದೆ. ಈ ಜನಪ್ರಿಯ ಸ್ಮಾರ್ಟ್‌ಫೋನ್ ಇದೀಗ ಫ್ಲಿಪ್‌ಕಾರ್ಟ್‌ನತ್ತ ಮುನ್ನುಗ್ಗುತ್ತಿದೆ. ಫ್ಲಿಪ್‌ಕಾರ್ಟ್ ಜೂನ್ 22 ಮತ್ತು 24 ರಂದು 64 ಜಿಬಿ ಆವೃತ್ತಿಯ ಫೋನ್ ಅನ್ನು ರೂ 19,998 ಕ್ಕೆ ಮಾರಾಟ ಮಾಡುತ್ತಿದ್ದು ಫೋನ್ ಮೂಲ ಬೆಲೆ ರೂ 21,998 ಆಗಿದೆ.

ಓದಿರಿ: ನಿಮ್ಮ ಬುದ್ಧಿವಂತಿಕೆಗೆ ಸವಾಲು ಹಾಕುವ ಜಿಮೇಲ್ ತಂತ್ರ

64 ಜಿಬಿ ಒನ್ ಪ್ಲಸ್ ಒನ್ ಫ್ಲಿಪ್‌ಕಾರ್ಟ್‌ನಲ್ಲಿ ಮಿತ ಬೆಲೆಗೆ

24 ಕ್ಕೆ ಆರಂಭವಾಗುತ್ತಿರುವ ಈ ಆಫರ್‌ನಲ್ಲಿ ಸ್ಮಾರ್ಟ್‌ಫೋನ್ ಅದರ ಪ್ರಮಾಣಿತ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಇನ್ನು 2,000 ರೂಪಾಯಿಗಳ ವಿನಾಯಿತಿ ಈ ಫೋನ್‌ಗೆ ದೊರಕಿದ್ದು, ಒನ್ ಪ್ಲಸ್ ಒನ್‌ಗಾಗಿ ಫ್ಲಿಪ್‌ಕಾರ್ಟ್ ಎಕ್ಸ್‌ಚೇಂಜ್ ಕೊಡುಗೆಯನ್ನು ಒದಗಿಸುತ್ತಿದೆ.

ಓದಿರಿ: ಟಿಮ್ ಕುಕ್‌ರನ್ನೇ ಬೆಸ್ತುಬೀಳಿಸುವ ಪ್ರಚಂಡ ವ್ಯಕ್ತಿಗಳು

64 ಜಿಬಿ ಒನ್ ಪ್ಲಸ್ ಒನ್ ಫ್ಲಿಪ್‌ಕಾರ್ಟ್‌ನಲ್ಲಿ ಮಿತ ಬೆಲೆಗೆ

ಜೂನ್ 18 ರಂದು ಅಮೆಜಾನ್ 64 ಜಿಬಿಯ ಒನ್ ಪ್ಲಸ್ ಒನ್ ಅನ್ನು ರೂ 19,998 ಕ್ಕೆ ಮಾರಾಟ ಮಾಡಿತ್ತು. ಪ್ರಸ್ತುತ ಫ್ಲಿಪ್‌ಕಾರ್ಟ್ 16 ಜಿಬಿ ಆವೃತ್ತಿಯನ್ನು ಮಾರಾಟ ಮಾಡುತ್ತಿಲ್ಲ. ಶ್ಯೋಮಿ ಎಮ್ಐ 4 ಮತ್ತು ಅಸೂಸ್ ಜೆನ್‌ಫೋನ್ 2 ಲಾಂಚ್ ಅಲ್ಲದೆ ಮಾರುಕಟ್ಟೆಯಲ್ಲಿ ರೂ 25,000 ದ ಒಳಗೆ ದೊರೆಯುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಒನ್ ಪ್ಲಸ್ ಜನಪ್ರಿಯವಾಗಿದೆ.

64 ಜಿಬಿ ಒನ್ ಪ್ಲಸ್ ಒನ್ ಫ್ಲಿಪ್‌ಕಾರ್ಟ್‌ನಲ್ಲಿ ಮಿತ ಬೆಲೆಗೆ

2.5GHZ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಸೇರಿದಂತೆ, 3ಜಿಬಿ RAM, 5.5 ಇಂಚಿನ 1080 ಪಿ ಡಿಸ್‌ಪ್ಲೇ, 13 ಎಮ್‌ಪಿ ರಿಯರ್ ಕ್ಯಾಮೆರಾ, ಸೋನಿ ಇಮೇಜ್ ಸೆನ್ಸಾರ್, 5 ಎಮ್‌ಪಿ ಮುಂಭಾಗ ಕ್ಯಾಮೆರಾ, 3,100mAh ಬ್ಯಾಟರಿ, 4ಜಿ ಬೆಂಬಲ ಮತ್ತು ಎನ್‌ಎಫ್‌ಸಿಯನ್ನು ಡಿವೈಸ್ ಒಳಗೊಂಡಿದೆ. ಆಂಡ್ರಾಯ್ಡ್ 5.0 ಲಾಲಿಪಪ್ ಇದರಲ್ಲಿದೆ.

English summary
Amazon's exclusive deal for OnePlus One has finally ended, with the popular smartphone finally hitting Flipkart.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot