ಆಂಡ್ರಾಯ್ಡ್ ಲಾಲಿಪಪ್ ಬಳಸಿ ಫೋನ್ ಬ್ಯಾಟರಿ ಉಳಿಸಿ

  By Shwetha
  |

  ಆಂಡ್ರಾಯ್ಡ್‌ನ ಅತ್ಯಾಧುನಿಕ ಕೊಡುಗೆ ಎಂದೇ ಲಾಲಿಪಪ್ ಅನ್ನು ಆಂಡ್ರಾಯ್ಡ್ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಆಪಲ್‌ಗೆ ಪ್ರತಿಸ್ಪರ್ಧಿಯಾಗಿ ಹೊಸ ಹೊಸ ಸವಾಲುಗಳನ್ನು ಸ್ವೀಕರಿಸುತ್ತಲೇ ವೈರಿಯ ಸೊಕ್ಕು ಅಡಗಿಸುತ್ತಿರುವ ಆಂಡ್ರಾಯ್ಡ್ ಲಾಲಿಪಪ್ ಅನ್ನು ಬಿಡುಗಡೆ ಮಾಡುವ ಮೂಲಕ ಫೋನ್ ಬಳಕೆದಾರರಿಗೆ ಹೊಸ ನಿಧಿಯನ್ನು ದಯಪಾಲಿಸಿದೆ.

  [ಓದಿರಿ: ನಿಮ್ಮದು ಲಾಲಿಪಪ್ ಫೋನಾ ಹಾಗಿದ್ರೆ ಚಿಂತೇನೇ ಬೇಡ]

  ಅತ್ಯಾಧುನಿಕ ಫೀಚರ್‌ಗಳು ಅಂತೆಯೇ ಬಳಸಲು ತಹತಹಿಸುವ ಕರಾಮತ್ತು ಆಂಡ್ರಾಯ್ಡ್‌ನ ಲಾಲಿಪಪ್‌ಗಿದ್ದು ತನ್ನ ಈ ಹಿಂದಿನ ಓಎಸ್‌ಗಳಲ್ಲಿ ಇಲ್ಲದ ಅದ್ಭುತ ಫೀಚರ್‌ಗಳನ್ನು ಈ ಮಹಾ ಮಾಂತ್ರಿಕ ಈ ಓಎಸ್‌ನಲ್ಲಿ ಅಳವಡಿಸಿದೆ. ಇನ್ನೇಕೆ ತಡ ಕೆಳಗಿನ ಫೀಚರ್‌ಗಳಲ್ಲಿ ಲಾಲಿಪಪ್‌ನ ಇನ್ನಷ್ಟು ಮಾಂತ್ರಿಕ ಫೀಚರ್‌ಗಳನ್ನು ನಿಮ್ಮ ಮುಂದೆ ಇರಿಸುತ್ತಾ ನೀವು ಲಾಲಿಪಪ್ ಫೋನ್ ಅನ್ನು ಖರೀದಿಸುವಂತೆ ಮಾಡಲಿರುವೆವು. [ಓದಿರಿ: ನೀವು ಕಂಡರಿಯದ ಲಾಲಿಪಪ್ ಮೋಡಿ ಇದು]

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ತಟ್ಟಿರಿ ಮುಂದುವರಿಯಿರಿ

  ನಿಮ್ಮ ಹಳೆಯ ಡಿವೈಸ್‌ನಿಂದ ವಾಲ್‌ಪೇಪರ್ ಅನ್ನು ವರ್ಗಾಯಿಸುವುದು ಅಂತೆಯೇ ಗೂಗಲ್ ಖಾತೆ ಸೆಟ್ಟಿಂಗ್‌ಗಳನ್ನು ಮತ್ತೆಡೆಗೆ ಕೊಂಡೊಯ್ಯುವುದು ಈಗ ಇನ್ನಷ್ಟು ಸರಳವಾಗಿದೆ. ನಿಮ್ಮ ಆಂಡ್ರಾಯ್ಡ್ 5.0 ಈ ಎಲ್ಲಾ ಕೆಲಸವನ್ನು ಚಕಚಕನೇ ಮುಗಿಸುತ್ತದೆ.

  ನಿಮ್ಮ ಆದ್ಯತೆಗಳನ್ನು ಆರಿಸಿ

  ನಿಮ್ಮ ಅಪ್ಲಿಕೇಶನ್ ಅಧಿಸೂಚನೆಗಳು ನಿಮ್ಮನ್ನು ಅಡ್ಡಿಪಡಿಸುತ್ತಿವೆಯೇ. ನಾಟ್ ಟು ಡಿಸ್ಟರ್ಬ್ ಎಂಬ ಫೀಚರ್ ಅನ್ನು ಲಾಲಿಪಪ್ ಓಎಸ್ ನಿಮಗೆ ಒದಗಿಸಿದ್ದು ಇದರ ಪ್ರಯೋಜನವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

  ಲಾಕ್ ಸ್ಕ್ರೀನ್ ಅಧಿಸೂಚನೆಗಳು

  ನಿಮ್ಮ ಫೋನ್ ಸ್ಕ್ರೀನ್ ಲಾಕ್ ಆಗಿದ್ದರೂ ಅಧಿಸೂಚನೆಗಳಿಗೆ ಉತ್ತರಿಸಬಹುದು ಅಥವಾ ಪಾಸ್‌ವರ್ಡ್ ಬಳಸದೆಯೇ ನಿಮ್ಮ ಫೋನ್‌ಗೆ ಬಂದಿರುವ ಅಧಿಸೂಚನೆಗಳನ್ನು ಓದಬಹುದು.

  ಗೆಸ್ಟ್ ಮೋಡ್

  ನಿಮ್ಮ ಫೋನ್‌ನಲ್ಲಿರುವ ಮಾಹಿತಿ ಅಳಿಸಿ ಹೋಗಬಹುದು ಎಂಬ ಚಿಂತೆ ಬೇಡ. ಗೆಸ್ಟ್ ಮೋಡ್ ಅನ್ನು ಬಳಸಿ ನಿರ್ಭಯವಾಗಿ ನಿಮ್ಮ ಮಕ್ಕಳಿಗೆ ಫೋನ್ ಅನ್ನು ನೀಡಬಹುದು.

  ಡು ನಾಟ್ ಡಿಸ್ಟರ್ಬ್

  ನಿಮಗೆ ರಾತ್ರಿ ವೇಳೆಯಲ್ಲಿ ಉಪದ್ರವಕಾರಿಯಾಗಿರುವ ಕರೆಗಳಿಗೆ ತಿಲಾಂಜಲಿ ಇಡಲು ಸಹಕಾರಿ ಡು ನಾಟ್ ಡಿಸ್ಟರ್ಬ್.

  ಬಹು ಡಿವೈಸ್‌ಗೆ ಸಂಯೋಜನೆ

  ಸ್ಮಾರ್ಟ್‌ವಾಚ್‌ಗಳಿಂದ ಹಿಡಿದು ಸ್ಮಾರ್ಟ್‌ಟಿವಿಯವರೆಗೆ, ನಿಮ್ಮ ಓಎಸ್ ಅನ್ನು ನವೀಕರಿಸುವುದು ಎಂದರೆ ಇನ್ನು ಸುಲಭದ ಮಾತಾಗಿದೆ. ಈಗ ಬಹು ಡಿವೈಸ್‌ಗಳಿಗೆ ಸಂಯೋಜನೆಯನ್ನು ಒದಗಿಸಲಿದೆ ಲಾಲಿಪಪ್ ಓಎಸ್.

  ಬ್ಯಾಟರಿ ಉಳಿಕೆ ಸಾಮರ್ಥ್ಯ

  ನಿಮ್ಮ ಫೋನ್‌ನ ಬಾಳ್ವಿಕೆಯನ್ನು ದೀರ್ಘಗೊಳಿಸುವ ಬ್ಯಾಟರಿ ಉಳಿಕೆ ಸಾಮರ್ಥ್ಯವನ್ನು ಲಾಲಿಪಪ್ ಒದಗಿಸುತ್ತಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Android’s latest sugar-coated gift to the world of tech is up and about and we’d be lying if we said that it isn’t sah-weet.Before all the Apple fanboys pounce, allow us to quickly run you through the seven things that any self-respecting Android fan must know about its latest OS.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more