CES 2023; ನವೀನ ತಂತ್ರಜ್ಞಾನಕ್ಕೆ ನಾಂದಿಹಾಡಿದ ನೂತನ ಡಿವೈಸ್‌ಗಳಿವು!

|

ತಂತ್ರಜ್ಞಾನವು ಇಂದು ಎಲ್ಲಾ ರಂಗದಲ್ಲೂ ತನ್ನದೇ ಆದ ಪಾರುಪತ್ಯ ಸಾಧಿಸುತ್ತಾ ಬರುತ್ತಿದೆ. ಇದರ ಭಾಗವಾಗಿಯೇ ಪ್ರತಿವರ್ಷ ಪ್ರತಿ ವರ್ಷ ಲಾಸ್ ವೇಗಾಸ್‌ನಲ್ಲಿನ ಗ್ರಾಹಕ ಎಲೆಕ್ಟ್ರಾನಿಕ್ಸ್ ಶೋ ನಲ್ಲಿ ಊಹೆ ಕೂಡ ಮಾಡಲಾಗಷ್ಟು ತಂತ್ರಜ್ಞಾನ ಇರುವ ಡಿವೈಸ್‌ಗಳನ್ನು ಪರಿಚಯಿಸಲಾಗಿದೆ. ಇದು ನವೀನ ತಂತ್ರಜ್ಞಾನಕ್ಕೆ ನಾಂದಿಹಾಡುವ ಕಾರ್ಯಕ್ರಮವಾಗಿದ್ದು, ಈ ಮೂಲಕ ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ವಿಶೇಷವಾದ ಡಿವೈಸ್‌ಗಳನ್ನು ಅನಾವರಣ ಮಾಡಲು ಮುಂದಾಗಿವೆ.

ಲೆನೊವೊ

ಹೌದು, ಲೆನೊವೊ , ಏಸರ್‌ ಹಾಗೂ ಸ್ಯಾಮ್‌ಸಂಗ್‌ ಮತ್ತು ಸೋನಿ ಕಂಪೆನಿಗಳು ಈ ವರ್ಷ ಲಾಂಚ್‌ ಮಾಡಲಿರುವ ವಿಶೇಷ ಡಿವೈಸ್‌ಗಳನ್ನು ಸಮಾರಂಭದಲ್ಲಿ ಅನಾವರಣ ಮಾಡಿವೆ. ಹಾಗೆಯೇ ಭಿನ್ನ ವಿಭಿನ್ನ ಶೈಲಿಯ ಹಾಗೂ ಅತ್ಯಾಕರ್ಷಕ ಫೀಚರ್ಸ್‌ ಇರುವ ಗ್ಯಾಜೆಟ್‌ಗಳು ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿವೆ. ಹಾಗಿದ್ರೆ, ಯಾವೆಲ್ಲಾ ವಿಶೇಷ ಡಿವೈಸ್‌ಗಳನ್ನು ಈ ಸಮಾರಂಭದಲ್ಲಿ ಅನಾವರಣ ಮಾಡಲಾಯಿತು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಸ್ಯಾಟಲೈಟ್

ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಸ್ಯಾಟಲೈಟ್

CES 2023 ರಲ್ಲಿ, ಕ್ವಾಲ್ಕಾಮ್ ತನ್ನದೇ ಆದ ಸ್ಯಾಟಲೈಟ್ ಆಧಾರಿತ ಫೀಚರ್ಸ್ ಅನ್ನು ಪರಿಚಯಿಸಿದೆ. ಅದರೆ ಈ ಹಿಂದೆ ಆಪಲ್‌ ಡಿವೈಸ್‌ಗಳಿಗೆ ಇದ್ದ ಫೀಚರ್ಸ್‌ ಇನ್ಮುಂದೆ ಆಂಟ್ರಾಯ್ಡ್‌ ಡಿವೈಸ್‌ಳಿಗೂ ಲಭ್ಯವಾಗಲಿದೆ. ಇದರಿಂದ ಫೋನ್‌ಗಳು ನೆಟ್‌ವರ್ಕ್‌ ಹೊರತುಪಡಿಸಿ ಸ್ಯಾಟಲೈಟ್ ಸಂಪರ್ಕದಿಂದ ಕೆಲಸ ಮಾಡಲಿವೆ.

Qi 2 ವಾಯರ್‌ಲೆಸ್‌ ಚಾರ್ಜಿಂಗ್ ಸ್ಟ್ಯಾಂಡರ್ಡ್

Qi 2 ವಾಯರ್‌ಲೆಸ್‌ ಚಾರ್ಜಿಂಗ್ ಸ್ಟ್ಯಾಂಡರ್ಡ್

Qi ತನ್ನ ಎರಡನೇ ತಲೆಮಾರಿನ ವಾಯರ್‌ಲೆಸ್‌ ಚಾರ್ಜಿಂಗ್ ಅನ್ನು ಘೋಷಣೆ ಮಾಡಲಾಗಿದೆ. ಇದು ಚಾರ್ಜಿಂಗ್ ವೇಗ ಮತ್ತು ಉತ್ತಮ ಉಷ್ಣ ನಿರ್ವಹಣೆಯನ್ನು ಕೇಂದ್ರೀಕರಿಸಿಕೊಂಡು ತಯಾರು ಮಾಡಲಾಗಿದೆ.

ಪ್ಲೇಸ್ಟೇಷನ್ ಕಂಟ್ರೋಲರ್‌

ಪ್ಲೇಸ್ಟೇಷನ್ ಕಂಟ್ರೋಲರ್‌

ಪ್ಲೇಸ್ಟೇಷನ್ ಕಂಟ್ರೋಲರ್‌ ವಿಕಲಾಂಗರನ್ನು ಕೇಂದ್ರೀಕರಿಸಿಕೊಂಡು ತಯಾರು ಮಾಡಲಾಗಿದ್ದು, ಇದು ವಿಕಲಾಂಗರು ಸುಲಭವಾಗಿ ಆಟಗಳನ್ನು ಆಡಬಹುದಾಗಿದೆ. ಇದು ಪ್ರಾಜೆಕ್ಟ್ ಲಿಯೊನಾರ್ಡೊ ಎಂಬ ಸಂಕೇತನಾಮವನ್ನು ಹೊಂದಿದ್ದು, ಸೀಮಿತ ಮೋಟಾರ್ ಕಂಟ್ರೋಲ್‌ ಹೊಂದಿರುವ ಜನರಿಗೆ ಪ್ಲೇಸ್ಟೇಷನ್‌ನಲ್ಲಿ ಆಟ ಆಡಲು ಸಹಾಯ ಮಾಡುತ್ತದೆ. ಹಾಗೆಯೇ ಇದನ್ನು ಕಸ್ಟಮೈಸ್ ಮಾಡಬಹುದು.

ಡ್ಯುಯಲ್ ಸ್ಕ್ರೀನ್ ಲ್ಯಾಪ್‌ಟಾಪ್

ಡ್ಯುಯಲ್ ಸ್ಕ್ರೀನ್ ಲ್ಯಾಪ್‌ಟಾಪ್

ಲೆನೊವೊ ತನ್ನ ಹೊಸ ಲ್ಯಾಪ್‌ಟಾಪ್ ಬಗ್ಗೆ ಈ ಸಮಾರಂಭದಲ್ಲಿ ಘೋಷಣೆ ಮಾಡಲಾಗಿದ್ದು, ಇದು ಕಾಂಪ್ಯಾಕ್ಟ್ ಬುಕ್‌ನಂತಹ ವಿನ್ಯಾಸದಲ್ಲಿ 13 ಇಂಚಿನ 2.8K OLED ಡಿಸ್‌ಪ್ಲೇ ಆಯ್ಕೆ ಹೊಂದಿದೆ. ಹಾಗೆಯೇ ಈ ಲ್ಯಾಪ್‌ಟಾಪ್ ಕೀಬೋರ್ಡ್‌ ಸನಿಹದಲ್ಲಿ ಚಿಕ್ಕ ಡಿಸ್‌ಪ್ಲೇ ಆಯ್ಕೆ ನೀಡಲಾಗಿದ್ದು, ತುಂಬಾ ಆಕರ್ಷಕವಾಗಿದೆ.

ಏಸರ್‌ನ ವರ್ಕ್ ಡೆಸ್ಕ್

ಏಸರ್‌ನ ವರ್ಕ್ ಡೆಸ್ಕ್

ಏಸರ್ eKinekt BD 3 ಎಂಬ ಹೊಸ ವರ್ಕ್ ಡೆಸ್ಕ್ ಅನ್ನು ಘೋಷಣೆ ಮಾಡಲಾಗಿದ್ದು, ಇದು ಸುಸ್ಥಿರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಸಶಕ್ತಗೊಳಿಸಲು ಸಹಾಯಕವಾಗಿದೆ. ಜೊತೆಗೆ ಡಿವೈಸ್‌ಗಳನ್ನು ಚಾರ್ಜ್ ಮಾಡಲು ರೈಡರ್‌ನ ಪೆಡಲಿಂಗ್‌ನಿಂದ ಚಲನ ಶಕ್ತಿಯನ್ನು ನೀಡಲಾಗಿದೆ.

ರಿಯಲ್‌ಮಿಯ ಹೊಸ 240W ಫಾಸ್ಟ್‌ ಚಾರ್ಜಿಂಗ್

ರಿಯಲ್‌ಮಿಯ ಹೊಸ 240W ಫಾಸ್ಟ್‌ ಚಾರ್ಜಿಂಗ್

ರಿಯಲ್‌ಮಿ ಅಂತಿಮವಾಗಿ ಈ ವರ್ಷ CES ನಲ್ಲಿ ತನ್ನ ಹೊಸ 240W ಸಾಮರ್ಥ್ಯದ ಚಾರ್ಜಿಂಗ್ ತಂತ್ರಜ್ಞಾನದ ಬಗ್ಗೆ ಘೋಷಣೆ ಮಾಡಿದೆ. ರಿಯಲ್‌ಮಿ ಕಂಪೆನಿಯಿಂದ ಮುಂಬರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಚಾರ್ಜರ್‌ ಅನ್ನು ಬಳಕೆ ಮಾಡಲಾಗುತ್ತದೆ.

ಸ್ಯಾಮ್‌ಸಂಗ್ ಫೋಲ್ಡಬಲ್ ಹಾಗೂ ಸ್ಲೈಡಿಂಗ್ ಟ್ಯಾಬ್ಲೆಟ್

ಸ್ಯಾಮ್‌ಸಂಗ್ ಫೋಲ್ಡಬಲ್ ಹಾಗೂ ಸ್ಲೈಡಿಂಗ್ ಟ್ಯಾಬ್ಲೆಟ್

ಸ್ಯಾಮ್‌ಸಂಗ್ ತನ್ನ ಫ್ಲೆಕ್ಸ್ ಹೈಬ್ರಿಡ್ ಪರಿಕಲ್ಪನೆಯನ್ನು ಪ್ರದರ್ಶಿಸಿದ್ದು, ಇದು ಮಡಚಬಹುದಾದ ಟ್ಯಾಬ್ಲೆಟ್ ಆಗಿದೆ. ಜೊತೆಗೆ ಡಿಸ್‌ಪ್ಲೇ ವಿಸ್ತರಿಸಲು ಬಲಭಾಗದಿಂದ ಸ್ವಲ್ಪ ಸ್ಲೈಡ್ ಮಾಡಿದರೆ ಸಾಕು.

ಬ್ಯಾಟರಿ ಚಾಲಿತ ಟಿವಿ

ಬ್ಯಾಟರಿ ಚಾಲಿತ ಟಿವಿ

ಡಿಸ್‌ಪ್ಲೇಸ್ ಹೆಸರಿನ ಕಂಪೆನಿಯು ಡಿಸ್‌ಪ್ಲೇಸ್ ಟಿವಿ ಎಂಬ ಹೊಸ ವಾಯರ್‌ಲೆಸ್‌ ಟಿವಿಯನ್ನು ಘೋಷಣೆ ಮಾಡಿದೆ. ಈ ಟಿವಿ ಬ್ಯಾಟರಿ ಆಯ್ಕೆ ಒಳಗೊಂಡಿದ್ದು, ಹೀಲಿಂಗ್‌ ಟೆಕ್ನಾಲಜಿ ಆಧಾರದ ಮೇಲೆ ಇಲ್ಲಿನ್ ಬ್ಯಾಟರಿ ಚಾರ್ಜ್‌ ಆಗುತ್ತವೆ. ಇನ್‌ಪುಟ್‌ಗಾಗಿ ಗೆಸ್ಚರ್ ಕಂಟ್ರೋಲ್‌ ಅನ್ನು ಸಹ ಅವಲಂಬಿಸಿದೆ.

500Hz ಗೇಮಿಂಗ್ ಮಾನಿಟರ್

500Hz ಗೇಮಿಂಗ್ ಮಾನಿಟರ್

ಅಲಿಎನ್ವಾರ್ ತನ್ನ ಹೊಸ ಗೇಮಿಂಗ್ ಮಾನಿಟರ್ ಅನ್ನು ಘೋಷಣೆ ಮಾಡಿದ್ದು, ಈ ಲ್ಯಾಪ್‌ಟಾಪ್‌ 500Hz ರಿಫ್ರೆಶ್ ರೇಟ್‌ ಆಯ್ಕೆ ಹೊಂದಿದೆ. ಅಲ್ಲದೆ, ಮಾನಿಟರ್ 0.5ms ನ ಪ್ರತಿಕ್ರಿಯೆ ಸಮಯವನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ.

Best Mobiles in India

English summary
9 biggest launches at the first big tech event of 2023.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X