Subscribe to Gizbot

ಜಿಯೋ DTHಗೂ ಮುನ್ನವೇ ಡಿಶ್ ಟಿವಿಯಿಂದ ಹೊಸ ಸೇವೆ.!

Written By:

ಏಷ್ಯಾದ ನಂ.01 DHT ಸೇವೆಯನ್ನು ನೀಡುತ್ತಿರುವ ಡಿಶ್ ಟಿವಿ ಸಹ ರಿಲಯನ್ಸ್ ಮಾಲೀಕತ್ವದ ಜಿಯೋ DTH ಸೇವೆ ಆರಂಭಕ್ಕೂ ಮುನ್ನದೇ ದರ ಸಮರದ ಮುನ್ಸೂಚನೆ ಅರಿತು ತನ್ನ ಗ್ರಾಹಕರಿಗೆ ಹೊಸದೊಂದು ಸೇವೆಯನ್ನು ನೀಡಲು ಮುಂದಾಗಿದೆ.

ಜಿಯೋ DTHಗೂ ಮುನ್ನವೇ ಡಿಶ್ ಟಿವಿಯಿಂದ ಹೊಸ ಸೇವೆ.!

ಓದಿರಿ: ಹೊಸ ಆಪಲ್ ವಾಚ್: ಐಫೋನ್ ಇಲ್ಲದೇ ಕರೆ ಮಾಡಬಹುದು

ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಆಡ್ವಾನ್ಸ್ ಡಿಶ್ ಟಿವಿ ಇನ್‌ಟರ್ಫೇಸ್ ಎನ್ನವ ಸೇವೆಯನ್ನು ಲಾಂಚ್ ಮಾಡಿದ್ದು, ಇದು ವಿಶ್ವದ ಮೊದಲ ಕೃತಕ ಬುದ್ದಿಮತ್ತೆ ಆಧಾರಿತ ಪ್ಲೇ ಟಿವಿ ಚಾಟ್ ಬೂಟ್ ಆಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಡ್ವಾನ್ಸ್ ಡಿಶ್ ಟಿವಿ ಇನ್‌ಟರ್ಫೇಸ್:

ಆಡ್ವಾನ್ಸ್ ಡಿಶ್ ಟಿವಿ ಇನ್‌ಟರ್ಫೇಸ್:

ಈ ಸೇವೆಯು ಕೃತಕ ಬುದ್ದಿಮತ್ತೆಯ ಸಹಾಯದಿಂದ ನಡೆಯಲಿದ್ದು, ಇಲ್ಲಿ ಗ್ರಾಹಕರು ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ವಿವಿಧ ಚಾನಲ್‌ಗಳ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ತಮ್ಮ DTH ಸಂಭಂದಿತ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯಬಹುದಾಗಿದೆ.

24x7 ಸೇವೆ:

24x7 ಸೇವೆ:

ಕೃತಕ ಬುದ್ಧಿಮತ್ತೆಯ ಸಹಾಯದಿಂದ ಕಾರ್ಯನಿರ್ವಹಿಸುವ ಈ ಆಡ್ವಾನ್ಸ್ ಡಿಶ್ ಟಿವಿ ಇನ್‌ಟರ್ಫೇಸ್ ಗ್ರಾಹಕರಿಗೆ ಕ್ಷಣ ಮಾತ್ರದಲ್ಲಿ ಉತ್ತರಿಸುವುದಲ್ಲದೇ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ.

ಆಯ್ಕೆ ಸುಲಭ:

ಆಯ್ಕೆ ಸುಲಭ:

ಗ್ರಾಹಕರು ಯಾವ ಸೇವೆಯನ್ನು ಪಡೆಯಬೇಕು, ರೀಚಾರ್ಜ್ ಎಷ್ಟಕ್ಕೆ ಮಾಡಿಸಬೇಕು, ಆಡ್ ಆನ್ ಪ್ಯಾಕ್‌ಗಳು ಯಾವುದಿದೆ? ಎಂಬ ಎಲ್ಲಾ ಮಾಹಿತಿಯೂ ಇಲ್ಲಿ ದೊರೆಯಲಿದ್ದು, ಗ್ರಾಹಕರು ಸುಲಭವಾಗಿ ಅವುಗಳನ್ನು ಬಳಸಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
DishTV, Asia’s largest DTH operator, with an objective to enhance customer experience and offer a user-friendly interface to its valuable customers today announced. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot